ಜನನ ಪ್ರಮಾಣ ಪತ್ರವನ್ನು ಪಡೆಯುವ ವಿಧಾನ ಹಾಗೂ ತಿದ್ದುಪಡಿ ಮಾಡಿಸುವುದು ಎಲ್ಲಿ.? ಇದಕ್ಕೆ ಯಾವ ದಾಖಲಾತಿಗಳು ಬೇಕು.? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.

 

WhatsApp Group Join Now
Telegram Group Join Now

ಈಗಿನ ಕಾಲದಲ್ಲಿ ಯಾವುದೇ ಮಗು ಹುಟ್ಟಿದ ತಕ್ಷಣ ಮೊದಲನೆಯ ದಾಗಿ ಮಾಡಿಸುವುದೇ ಜನನ ಪ್ರಮಾಣ ಪತ್ರ ಮುಂದಿನ ದಿನದಲ್ಲಿ ಆ ಮಗು ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೊಡಬೇಕು ಎಂದರೆ ಆ ಮಗುವಿನ ಜನನ ಪ್ರಮಾಣ ಪತ್ರ ಬಹಳ ಮುಖ್ಯವಾಗಿರುತ್ತದೆ ಅದರಲ್ಲೂ ಆ ಮಗುವಿನ ವಿದ್ಯಾಭ್ಯಾಸದ ಸಮಯದಲ್ಲಿ ಶಾಲೆಗಳಿಗೆ ಸೇರಿಸಲು ಅಥವಾ ಯಾವುದೇ ಒಂದು ಕೆಲಸಕ್ಕೆ ಸೇರುವುದಕ್ಕೂ ಕೂಡ ಅವರ ಜನನ ಪ್ರಮಾಣ ಪತ್ರ ಎನ್ನುವುದು ಬಹಳ ಮುಖ್ಯವಾಗಿ ಬೇಕಾಗಿರುವಂತಹ ದಾಖಲಾತಿ ಎಂದೇ ಹೇಳಬಹುದು.

ಅದಕ್ಕಾಗಿ ಎಲ್ಲರೂ ಕೂಡ ಮಗು ಹುಟ್ಟಿದ ತಕ್ಷಣ ಜನನ ಪ್ರಮಾಣ ಪತ್ರವನ್ನು ಮಾಡಿಸುತ್ತಾರೆ ಆದರೆ ಕೆಲವೊಮ್ಮೆ ಆಸ್ಪತ್ರೆಗಳಲ್ಲಿ ಸರಿಯಾದ ದಿನಾಂಕ ಕೊಡದೆ ಇದ್ದರೆ ಅಥವಾ ನೀವೇನಾದರೂ ಜನನ ಪ್ರಮಾಣ ಪತ್ರ ಮಾಡಿಸುವಾಗ ದಿನಾಂಕ ಅಥವಾ ತಿಂಗಳು ಇಸವಿಯನ್ನು ಏನಾದರೂ ತಪ್ಪು ಮಾಡಿದ್ದರೆ ಅದರಿಂದ ಮುಂದಿನ ದಿನದಲ್ಲಿ ಹಲವಾರು ತೊಂದರೆಗಳು ಉಂಟಾಗಬಹುದು. ಆದ್ದರಿಂದ ಯಾರೇ ಆಗಲಿ ಯಾವುದೇ ಒಂದು ದಾಖಲಾತಿ ಪತ್ರಗಳನ್ನು ಮಾಡಿಸುತ್ತಿದ್ದರೆ ಗಮನದಲ್ಲಿಟ್ಟುಕೊಂಡು ಸರಿಯಾಗಿದೆಯಾ ತಪ್ಪಾಗಿದೆಯಾ ಎನ್ನುವುದನ್ನು ಗಮನದಲ್ಲಿಟ್ಟು ಕೊಂಡು ಅರ್ಜಿಯನ್ನು ಹಾಕುವುದು ಬಹಳ ಮುಖ್ಯವಾಗಿರುತ್ತದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಜನನ ಪ್ರಮಾಣ ಪತ್ರದಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಹೇಗೆ ತಿದ್ದುಪಡಿ ಮಾಡಿಸುವುದು ಹಾಗೂ ಎಲ್ಲಿ ಇದನ್ನು ತಿದ್ದುಪಡಿ ಮಾಡಿಸುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಪ್ರತಿಯೊಬ್ಬರಿಗೂ ಕೂಡ ಈ ಮಾಹಿತಿ ಅವಶ್ಯಕವಾಗಿರುವುದರಿಂದ ಎಲ್ಲರೂ ಇದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.

ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನೆಂದರೆ ಯಾವುದೇ ಮಗು ಹುಟ್ಟಿದ 15 ದಿನದಿಂದ ಆ ಮಗುವಿನ ನಾಲ್ಕು ವರ್ಷ ವಯಸ್ಸಿನವರೆಗೆ ಜನನ ಪ್ರಮಾಣ ಪತ್ರದಲ್ಲಿ ಏನಾದರೂ ತಿದ್ದುಪಡಿ ಮಾಡಬೇಕು ಎಂದರೆ ಮಾತ್ರ ಆ ಸಮಯ ದೊಳಗೆ ತಿದ್ದುಪಡಿಯನ್ನು ಮಾಡಿಸಿಕೊಳ್ಳಬೇಕು. ಮೊದಲು ಒಂದು ಬಿಳಿ ಹಾಳೆಯಲ್ಲಿ ಜನರ ಪ್ರಮಾಣ ಪತ್ರದಲ್ಲಿ ಯಾವುದೆಲ್ಲ ತಿದ್ದುಪಡಿ ಮಾಡಿಸಬೇಕು ಅವೆಲ್ಲ ಸಂಪೂರ್ಣವಾಗಿ ಬರೆದು ಅದಕ್ಕೆ ಈ ಸ್ಟ್ಯಾಂಪ್ ಹಾಕಿ ಅದನ್ನು ಮೊದಲು ನೋಟರಿ ಮಾಡಿಸಬೇಕಾಗುತ್ತದೆ.

ನಂತರ ಇವೆರಡು ದಾಖಲಾತಿಗಳ ಜೊತೆಗೆ ಮಗುವಿನ ತಂದೆ ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಬೇಕಾಗುತ್ತದೆ ಇಷ್ಟು ದಾಖಲಾತಿಗಳನ್ನು ಎರಡು ಸೆಟ್ ಮಾಡಿಸಬೇಕಾಗುತ್ತದೆ ನಂತರ ಇದನ್ನು ನೀವು ಈಗಾಗಲೇ ಪಡೆದುಕೊಂಡಿರುವಂತಹ ಜನಪ್ರಮಾಣ ಪತ್ರದ ಕಚೇರಿಗೆ ಹೋಗಿ ಇವೆಲ್ಲ ದಾಖಲಾತಿಗಳನ್ನು ಕೊಟ್ಟು ಯಾವುದರ ಬಗ್ಗೆ ಬದಲಾವಣೆಯನ್ನು ಮಾಡಬೇಕು ಎನ್ನುವುದನ್ನು ಅವರಿಗೆ ತಿಳಿಹೇಳಿ ನಂತರ ಅದಕ್ಕೆ ಒಂದು ಸೀಲ್ ಮತ್ತು ಸಿಗ್ನೇಚರ್ ಹಾಕಿ ಕೊಡುತ್ತಾರೆ.

ನಂತರ ಈ ಒಂದು ಅಪ್ಲಿಕೇಶನ್ ಯಾವಾಗ ಸಿಗುತ್ತದೆ ಎನ್ನುವಂತಹ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ನಂತರ 10 ರಿಂದ 15 ದಿನಗಳಲ್ಲಿಯೇ ನೀವು ತಿದ್ದುಪಡಿಗೆ ಕೊಟ್ಟಂತಹ ಎಲ್ಲ ದಾಖಲಾತಿ ಗಳು ಕೂಡ ಸರಿಯಾಗಿ ನಿಮಗೆ ಸಿಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಅಲ್ಲಿರುವವರು ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಎಂದಾಗ ನೀವು ಅದಕ್ಕೆ ಸರಿ ಎಂದು ಬರಬಾರದು ಬದಲಿಗೆ 4 ವರ್ಷದ ಒಳಗೆ ಎಷ್ಟೇ ತಪ್ಪಾದರೂ ಸರಿ ಮಾಡಿಸಬಹುದು ಎಂದು ನೀವೇ ಅವರಿಗೆ ಹೇಳಿ ಕೊಡುವುದರ ಮುಖಾಂತರ ನಿಮ್ಮ ಕೆಲಸವನ್ನು ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now