ಬೆಂಗಳೂರು ಮಹಾನಗರದ ನರನಾಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BBTC) ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ಯುವ ಜನತೆಗೆ ನಿಗಮದಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ (BMTC Recruitment) ಮಾಡಿಕೊಳ್ಳುವ ಬಗ್ಗೆ ಸಿಹಿ ಸುದ್ದಿ ನೀಡಿತ್ತು.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೂಡ ತನ್ನ ಅಧಿಕೃತ ಜಾಲತಾಣದಲ್ಲಿ BMTC ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರವನ್ನು ಕೂಡ ಪ್ರಕಟಿಸಿತ್ತು. ಹೀಗಾಗಿ ಶೀಘ್ರವೇ ಈ ನೇಮಕಾತಿ ನಡೆಯುವುದು ಧೃಡವಾಗಿದ್ದು ಈ ಬಾರಿ ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವ ಜನತೆಗೆ ಉದ್ಯೋಗ ಸಿಗುವುದು ಗ್ಯಾರಂಟಿಯಾಗಿದೆ.
BMTC ಯಲ್ಲಿ ಖಾಲಿ ಇರುವ ನಿರ್ವಾಹಕ ಹುದ್ದೆಗಳಿಗೆ (Conductor) ಅರ್ಜಿ ಸಲ್ಲಿಸಲು ಕರ್ನಾಟಕದ ಯುವ ಜನತೆಗೆ ಮಾತ್ರ ಅವಕಾಶ ನೀಡಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನೇಮಕಾತಿಗೆ ಸಂಬಂಧಪಟ್ಟ ಕೆಲವು ಪ್ರಮುಖ ಮಾಹಿತಿಗಳನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ರೈತರಿಗೆ 100% ಬೊರ್ವೆಲ್ ನೀರು ಸಿಗುತ್ತೆ.! ನೀರು ಬರದಿದ್ರೆ ಹಣ ವಾಪಸ್, ಹೊಸ ಜಪಾನ್ ಟೆಕ್ನಾಲಜಿ.!
ನೇಮಕಾತಿ ಸಂಸ್ಥೆ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)
ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ :- 2503
ಹುದ್ದೆಗಳ ವಿವರ:-
* ನಿರ್ವಾಹಕ – 2500
* ಸಹಾಯಕ ಲೆಕ್ಕಿಗ – 1
* ಸ್ಟಾಫ್ ನರ್ಸ್ – 1
* ಫಾರ್ಮಾಸಿಸ್ಟ್ – 1
ಉದ್ಯೋಗ ಸ್ಥಳ:- ಬೆಂಗಳೂರು…
ವೇತನ ಶ್ರೇಣಿ:-
* ಮೇಲ್ಕಂಡ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.30,000 ವೇತನ ಇರುತ್ತದೆ
* ಇದರೊಂದಿಗೆ ಇತರ ಭತ್ಯೆಗಳು ಹಾಗೂ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ
ಶೈಕ್ಷಣಿಕ ವಿದ್ಯಾರ್ಹತೆ:-
* ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ SSLC ಉತ್ತೀರ್ಣರಾಗಿರಬೇಕು
* ಇತರೆ ಹುದ್ದೆಗಳಿಗೆ ಆಯಾ ಹುದ್ದೆಗಳಿಗೆ ಅನುಸಾರವಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಈ ಸುದ್ದಿ ಓದಿ:-ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ – 1 ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಲಿಕೆ ಇರುತ್ತದೆ
* 2A, 2B, 3A, 3B ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಅಧಿಕೃತ ವೆಬ್ಸೈಟ್ or https://mybmtc.karnataka.gov.in ವೆಬ್ ಸೈಟ್ ಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ಪಡೆಯಬಹುದು
* ಸದ್ಯದಲ್ಲಿಯೇ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲಿದ್ದು, ದಿನಾಂಕವನ್ನು ಕೂಡ ಅಧಿಕೃತ ವೆಬ್ಸೈಟ್ಗಳಲ್ಲಿ ಪ್ರಕಟಿಸಲಾಗುವುದು, ಅಭ್ಯರ್ಥಿಗಳು ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅಧ್ಯಯನ ಚುರುಕುಗೊಳಿಸಿಕೊಳ್ಳಿ.
ಈ ಸುದ್ದಿ ಓದಿ:-ಸರ್ಕಾರಿ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಸಿಹಿಸುದ್ದಿ, ಹಕ್ಕು ಪತ್ರ ವಿತರಣೆ.!
ಆಯ್ಕೆ ವಿಧಾನ:-
* ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ ಲಿಖಿತ ಪರೀಕ್ಷೆ ಇರುತ್ತದೆ
* ಆಯ್ಕೆ ಆದವರಿಗೆ ದೈಹಿಕ ಪರೀಕ್ಷೆ, ನೇರ ಸಂದರ್ಶನ ಮತ್ತು ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ನಡೆಸಿ ಸದರಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸಲು ಕೇಳಲಾಗುವ ದಾಖಲೆಗಳು:-
* ಅರ್ಜಿದಾರನ ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ ಮತ್ತು ಸಹಿ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣ ಪತ್ರ
* ನಿವಾಸ ದೃಢೀಕರಣ ಪತ್ರ
* ಇನ್ನಿತರ ಪ್ರಮುಖ ದಾಖಲೆಗಳು.