ಕೇಂದ್ರ ಸರ್ಕಾರವು (Central Karnataka) ದೇಶದ ಬಡ ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ರಕ್ಷಣೆಗಾಗಿ ಆಯುಷ್ಮಾನ್ ಭಾರತ್ (Ayushman Bharath) ಎನ್ನುವ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆ ಮೂಲಕ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಕನಿಷ್ಠ 5 ಲಕ್ಷದವರೆಗೆ ಹಾಗೂ APL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳು ಗರಿಷ್ಠ 1.5 ಲಕ್ಷದವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು.
2018 ರಲ್ಲಿ ಈ ಯೋಜನೆ ಪರಿಚಯಿಸಲಾಗಿತ್ತು ಮತ್ತು ಅನೇಕರು ಆ ಸಮಯದಲ್ಲಿಯೇ ನೋಂದಾಯಿಸಿಕೊಂಡು ಆಯುಷ್ಮಾನ್ ಕಾರ್ಡ್ ಕೂಡ ಪಡೆದಿದ್ದರು. ಈಗ ಕರ್ನಾಟಕ ಸರ್ಕಾರವು (Karnataka Government) ಇದನ್ನು ನವೀಕರಿಸಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮುಖ್ಯಮಂತ್ರಿ ಯೋಜನೆ (Ayushman Bharath – Arogya Karnataka) ಎಂದು ಮರು ನಾಮಕರಣ ಮಾಡಿ ನವೀಕರಿಸಿ ಇನ್ನಷ್ಟು ಹೆಚ್ಚಿನ ರಿಯಾಯಿತಿಯನ್ನು ನೀಡಿದ್ದಾರೆ.
ಈ ಸುದ್ದಿ ಓದಿ:- BMTC ಕಂಡಕ್ಟರ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ.! SSLC ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000
ನೀವೇನಾದರೂ ಈಗಾಗಲೇ ಆಯುಷ್ಮಾನ್ ಕಾರ್ಡ್ ಪಡೆದಿತ್ತು ಅದನ್ನು ಕಳೆದುಕೊಂಡಿದ್ದರೆ ಚಿಂತಿಸುವ ಅಗತ್ಯವಿಲ್ಲ ನಾವು ಹೇಳುವ ವಿಧಾನದ ಮೂಲಕ ನಿಮ್ಮ ಮೊಬೈಲ್ ನಲ್ಲಿಯೇ ಡೌನ್ಲೋಡ್ ಮಾಡಿಕೊಳ್ಳಬಹುದು.
* ಮೊದಲಿಗೆ https://beneficiary.nha.gov.in/ ವೆಬ್ ಸೈಟ್ ಗೆ ಭೇಟಿ ನೀಡಿ
* ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ಪೋರ್ಟಲ್ ಮುಖಪುಟ ಓಪನ್ ಆಗುತ್ತದೆ
* ಸ್ಕ್ರೀನ್ ಬಲಭಾಗದಲ್ಲಿ ಲಾಗಿನ್ (Login) ಆಪ್ಷನ್ ಇರುತ್ತದೆ, ಫಲಾನುಭವಿ (Beneficiary) ಆಪ್ಷನ್ ಮೇಲೆ ಕ್ಲಿಕ್ ಮಾಡಿ
* ನಿಮ್ಮ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಿ ಮತ್ತು ಆ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ ಅದನ್ನು ನಮೂದಿಸುವ ಮೂಲಕ ಲಾಗಿನ್ ಆಗಿ
* ಮತ್ತೊಂದು ಇಂಟರ್ ಫೇಸ್ ಓಪನ್ ಆಗುತ್ತದೆ ಇದರಲ್ಲಿ ನೀವು ನಿಮ್ಮ ರಾಜ್ಯ ನಿಮ್ಮ ಜಿಲ್ಲೆ ಇವುಗಳನ್ನು ಆಯ್ಕೆ ಮಾಡಿ ಯೋಜನೆ ವಿಭಾಗದಲ್ಲಿ PMJAY ಆಯ್ಕೆ ಮಾಡಿ
* ಈಗ ಕುಟುಂಬದ ID / ಆಧಾರ್ ಸಂಖ್ಯೆ / ಹೆಸರು / ಸ್ಥಳ / PMJAY ID ಇವುಗಳ ಸಹಾಯದಿಂದ ನಿಮ್ಮ ಆಯುಷ್ಮಾನ್ ಕಾರ್ಡ್ ಸರ್ಚ್ ಮಾಡಿ.
ಈ ಸುದ್ದಿ ಓದಿ:- ರೈತರಿಗೆ 100% ಬೊರ್ವೆಲ್ ನೀರು ಸಿಗುತ್ತೆ.! ನೀರು ಬರದಿದ್ರೆ ಹಣ ವಾಪಸ್, ಹೊಸ ಜಪಾನ್ ಟೆಕ್ನಾಲಜಿ.!
* ಮತ್ತೊಂದು ಪೇಜ್ ಓಪನ್ ಆಗುತ್ತದೆ ಇದರಲ್ಲಿ ನಿಮ್ಮ ಆಯ್ಕೆ ಆಧಾರ್ ಲಿಂಕ್ ಮಾಡಲು ಹಾಗೂ ಕುಟುಂಬ ಸದಸ್ಯರನ್ನು ಸೇರಿಸಲು ಆಯ್ಕೆಗಳನ್ನು ನೀಡಲಾಗಿರುತ್ತದೆ, ನೀಡಿರುವ ಸೂಚನೆಯಂತೆ ಮುಂದುವರಿಸಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿ
* ಆಧಾರ್ ಲಿಂಕ್ ಮಾಡುವ ಸಂದರ್ಭದಲ್ಲಿ ಮತ್ತೊಂದು OTP ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ UIDAI ನಿಂದ ಬರುತ್ತದೆ, ಆ OTP ನಮೂದಿಸುವ ಮೂಲಕ ಆಧಾರ್ ಲಿಂಕ್ ಮಾಡಿ
* ಕುಟುಂಬ ಸದಸ್ಯರನ್ನು ಲಿಂಕ್ ಮಾಡಲು ಕೂಡ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇನ್ನಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಿರುತ್ತದೆ ಅಥವಾ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕಿರುತ್ತದೆ ನಿಮಗೆ ಈ ಆಪ್ಷನ್ ಗಳನ್ನು ಕ್ಲಿಕ್ ಮಾಡಿದ ತಕ್ಷಣ ಸೂಚನೆಗಳು ಸಿಗುತ್ತಿರುತ್ತವೆ.
ಈ ಸುದ್ದಿ ಓದಿ:- ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!
ಅದರಂತೆ ಮುಂದುವರಿಸಿ ಕೊನೆಯಲ್ಲಿ ಎಲ್ಲವನ್ನು ಮತ್ತೊಮ್ಮೆ ಪರಿಶೀಲಿಸಿ ಸಬ್ಮಿಟ್ ಕೊಡಿ ನಿಮ್ಮ ಆಯುಷ್ಮಾನ್ ಕಾರ್ಡ್ ಅಂಚೆ ಮೂಲಕ ನೀವು ನೀಡಿದ ವಿಳಾಸಕ್ಕೆ ಬರುತ್ತದೆ ಅಥವಾ ನೀವು ಅದನ್ನು ಡೌನ್ಲೋಡ್ ಮಾಡಿಕೊಂಡು ನಂತರ ಪ್ರಿಂಟ್ ಔಟ್ ಕೂಡ ಪಡೆದುಕೊಳ್ಳಬಹುದು. ಈ ಪ್ರಕ್ರಿಯೆ ಸಂಪೂರ್ಣ ಉಚಿತವಾಗಿರುತ್ತದೆ ನಿಮ್ಮ ಮೊಬೈಲ್ ಮೂಲಕವೂ ಕೂಡ ಈ ಮೇಲೆ ತಿಳಿಸಿದ ಸರಳ ವಿಧಾನದಿಂದ ಇದನ್ನು ಪೂರ್ತಿಗೊಳಿಸಬಹುದು.