ರಾಜ್ಯದಲ್ಲಿರುವ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆಲ್ಲ ಸರ್ಕಾರದ ವತಿಯಿಂದ ಮತ್ತೊಂದು ನೇಮಕಾತಿ ಬಗ್ಗೆ ಸಿಹಿ ಸುದ್ದಿ ಸಿಗುವ ಸೂಚನೆ ಇದೆ. ರಾಜ್ಯದಲ್ಲಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ ಎನ್ನುವುದು ಅನೇಕ ವರ್ಷಗಳಿಂದಲೂ ಕೇಳಿ ಬರುತ್ತಿರುವ ಸತ್ಯ ಸಾಮಾನ್ಯ ದೂರಾಗಿ ಹೋಗಿದೆ ರಾಜ್ಯ ಸರ್ಕಾರವು ಈ ಸಮಸ್ಯೆಯನ್ನು ಪರಿಹರಿಸಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ.
ಆದರೆ ಇತ್ತ ಸರ್ಕಾರಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಕೂಡ ಸರ್ಕಾರಕ್ಕೆ ಶಿಕ್ಷಕರ ನೇಮಕಾತಿ ನಡೆಸಿ ಅರ್ಹರನ್ನು GPSTR ಮತ್ತು HSTR ಹುದ್ದೆಗಳಿಗೆ ಆಯ್ದುಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಸರ್ಕಾರದಿಂದ ಶಿಕ್ಷಕರ ನೇಮಕಾತಿ ನಡೆದಿತ್ತು ಆದರೆ ಸೂಕ್ತ ಅಭ್ಯರ್ಥಿಗಳು ಆಯ್ಕೆಯಾಗದ ಕಾರಣ ನೂರಾರು ಹುದ್ದೆಗಳು ಖಾಲಿ ಕೂಡ ಉಳಿದವು.
ಈ ಸುದ್ದಿ ಓದಿ:- ಆಯುಷ್ಮಾನ್ ಕಾರ್ಡ್ ಕಳೆದು ಹೋಗಿದ್ಯಾ.! ಮೊಬೈಲ್ ಮೂಲಕ ಮತ್ತೆ ಕಾರ್ಡ್ ಡೌನ್ಲೋಡ್ ಮಾಡುವುದು ಹೇಗೆ ನೋಡಿ.!
ನೇಮಕಾತಿ ಪದ್ಧತಿ ದೋಷಾರೋಪಗಳ ಜೊತೆಗೆ ಅನೇಕ ಚರ್ಚೆಗಳು ನಡೆದ ವಿಷಯ ಇತ್ಯರ್ಥವಾಗಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಶಿಕ್ಷಕರ ಕೊರತೆ ಹೆಚ್ಚಾಗುತ್ತಲೇ ಇದೆ ಹೀಗಾಗಿ ಮತ್ತೊಮ್ಮೆ ನೇಮಕಾತಿ ನಡೆಸಬೇಕು ಎನ್ನುವ ಕೂಗು ಕೂಡ ಕೇಳಿ ಬರುತ್ತಿದೆ. ಈಗ ಚುನಾವಣೆ ನಡೆದು ರಾಜ್ಯದಲ್ಲಿ ಹೊಸ ಸರ್ಕಾರ ಸ್ಥಾಪನೆಯಾಗಿದ್ದು ನೂತನ ಸರಕಾರದಲ್ಲಿ ಶಿಕ್ಷಣ ಸಚಿವರಾಗಿರುವ ಮಧು ಬಂಗಾರಪ್ಪನವರು ಶಿಕ್ಷಣ ನೀತಿಗೆ ಸಂಬಂಧಪಟ್ಟ ಹಾಗೆ.
ಕೆಲ ಅಗತ್ಯ ಬದಲಾವಣೆಗಳ ಜೊತೆಗೆ ಶಾಲಾ ಮಕ್ಕಳ ಆರೋಗ್ಯ ರಕ್ಷಣೆ ಪೌಷ್ಟಿಕ ಆಹಾರ ಪೂರೈಕೆ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ಕೂಡ ಹೆಚ್ಚಿನ ಕಾಳಜಿ ವಹಿಸಿ ನಡೆದುಕೊಳ್ಳುತ್ತಿದ್ದಾರೆ. ಈಗ ಅತಿ ಮುಖ್ಯ ಅವಶ್ಯಕತೆಯಾದ ಶಿಕ್ಷಕರ ಕೊರತೆ ನೀಗಿಸುವ ಬಗ್ಗೆಯೂ ಕೂಡ ಗಮನಹರಿಸಿ ಎಲ್ಲಾ ಶಿಕ್ಷಕ ಹುದ್ದೆ ಆಕಾಂಕ್ಷೆಗಳಿಗೆ ಭರವಸೆಯ ಮಾತುಗಳನ್ನಾಡಿದ್ದಾರೆ.
ಈ ಸುದ್ದಿ ಓದಿ:- BMTC ಕಂಡಕ್ಟರ್ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನ.! SSLC ಆಗಿದ್ರೆ ಸಾಕು ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 30,000
ಇತ್ತೀಚೆಗೆ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ಶಿಕ್ಷಣ ಸಚಿವರು ಕೂಡಲೇ ಸರ್ಕಾರದ ವತಿಯಿಂದ ಮತ್ತೊಂದು ಶಿಕ್ಷಕ ನೇಮಕಾತಿ ನಡೆಯುವುದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ 53,000 ಶಿಕ್ಷಕರ ಕೊರತೆ ಇದೆ 43,000 ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಮಕ್ಕಳಿಗೆ ಪಾಠ ಮಾಡಿಸಲಾಗುತ್ತಿದೆ.
ಇತ್ತೀಚಿಗೆ 12,500 ಹುದ್ದೆಗಳನ್ನು ಭರ್ತಿ ಮಾಡಲಾಗಿತ್ತು ಅವರು ಕೂಡ ಈಗ ಕಾರ್ಯಪ್ರವೃತ್ತರಾಗಿದ್ದಾರೆ ಶಾಲೆಗಳಲ್ಲಿ ಎಲ್ಲಾ ಸಮಸ್ಯೆಗಳಿಂದ ಶಿಕ್ಷಕರ ಕೊರತೆ ಅತಿ ದೊಡ್ಡ ಸಮಸ್ಯೆ ಆಗಿದೆ ಇದನ್ನು ಸರಿಪಡಿಸಲು ಸರ್ಕಾರ ಕೂಡ ಶ್ರಮಿಸುತ್ತಿದೆ. ಈ ವರ್ಷ 20,000 ಶಿಕ್ಷಕರ ನೇಮಕಾತಿ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತಿದ್ದೇನೆ 10 ಸಾವಿರ ಹುದ್ದೆಗಳ ಭರ್ತಿಗಾದರೂ ಮುಖ್ಯಮಂತ್ರಿಗಳು ಅನುಮತಿ ಕೊಡಲಿದ್ದಾರೆ ಎನ್ನುವ ಭರವಸೆ ಇದೆ.
ಈ ಸುದ್ದಿ ಓದಿ:- ರೈತರಿಗೆ 100% ಬೊರ್ವೆಲ್ ನೀರು ಸಿಗುತ್ತೆ.! ನೀರು ಬರದಿದ್ರೆ ಹಣ ವಾಪಸ್, ಹೊಸ ಜಪಾನ್ ಟೆಕ್ನಾಲಜಿ.!
ಈ ವರ್ಷ ಖಂಡಿತವಾಗಿಯೂ ಶಿಕ್ಷಕರ ನೇಮಕಾತಿ ನಡೆಯಲಿದೆ ಶಿಕ್ಷಕ ಉದ್ಯೋಗ ಆಕಾಂಕ್ಷಿಗಳು ಮತ್ತು ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ವರ್ಷ ಸರ್ಕಾರದ ವತಿಯಿಂದ ಸಾಕಷ್ಟು ನೇಮಕಾತಿ ಆಗುವ ಸಾಧ್ಯತೆ ಇದೆ.
ಈ ಪಟ್ಟಿಯಲ್ಲಿ ಎಂದಿನಂತೆ ಶಿಕ್ಷಕರ ಹುದ್ದೆಗಳ ನೇಮಕಾತಿ ಬಗ್ಗೆ ಕೂಡ ನಿರೀಕ್ಷೆ ಇದೆ GPSTR ಹಾಗೂ HSTR ಹುದ್ದೆ ಆಕಾಂಕ್ಷಿಗಳಿಗೆ ಈ ನೇಮಕಾತಿ ಮತ್ತೊಂದು ಅವಕಾಶ ಸಿಗುತ್ತಿದೆ. ಶಿಕ್ಷಣ ಸಚಿವರ ಜೊತೆಗೆ ಈ ಭರವಸೆಯ ಮಾತುಗಳ ಜೊತೆಗೆ ಶಿಕ್ಷಕರ ನೇಮಕಾತಿ ಮಾಡಲೇ ಬೇಕಾಗಿರುವುದು ಅತ್ಯಂತ ಅನಿವಾರ್ಯವಾದ್ದರಿಂದ ಈ ವರ್ಷ ಖಂಡಿತವಾಗಿಯೂ ನೇಮಕಾತಿ ನಡೆಯಲಿದೆ.
ಈ ಸುದ್ದಿ ಓದಿ:- ಗೃಹಿಣಿಯರಿಗೆ ಗುಡ್ ನ್ಯೂಸ್.! ಮನೆಯಲ್ಲಿ ಗ್ಯಾಸ್ ಸಿಲೆಂಡರ್ ಬಳಸುತ್ತಿದ್ದವರಿಗೆ ಮತ್ತೊಂದು ಸೌಲಭ್ಯ.!
ಕೂಡಲೆ ಹುದ್ದೆಗಳಿಗೆ ಪರೀಕ್ಷೆಗಳನ್ನು ಎದುರಿಸಲು ತಯಾರಿ ಮಾಡಿಕೊಳ್ಳಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬ ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.