ರೇಷನ್ ಕಾರ್ಡ್ ಇದ್ದವರಿಗೆ ಬಂಪರ್ ಗಿಫ್ಟ್, 10kg ಅಕ್ಕಿ ಜೊತೆ ಎಣ್ಣೆ, ತೊಗರಿ ಬೇಳೆ, ಹಸಿರು ಕಾಳು ಮತ್ತು ಕಡಲೆಕಾಳು ವಿತರಣೆ.!

 

WhatsApp Group Join Now
Telegram Group Join Now

ಕಾಂಗ್ರೆಸ್ ಸರ್ಕಾರವು ಕರ್ನಾಟಕ ವಿಧಾನಸಭಾ ಎಲೆಕ್ಷನ್ 2023 ಗೆಲ್ಲುವುದಕ್ಕೂ ಮುನ್ನ ಪ್ರಚಾರದ ಸಮಯದಲ್ಲಿ ನಾಡಿನಾದ್ಯಂತ ಗ್ಯಾರೆಂಟಿ ಕಾರ್ಡ್ ಯೋಜನೆಗಳನ್ನು ತನ್ನ ಪ್ರಣಾಳಿಕೆಯ ಅಸ್ತ್ರವನ್ನಾಗಿಟ್ಟುಕೊಂಡು ಮತ ಬೇಟೆಯಾಡಿತ್ತು. ಅಂತಿಮವಾಗಿ ಗೆಲುವು ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿ, ಪಕ್ಷದ ವರಿಷ್ಠರಾದ ಸಿದ್ದರಾಮಯ್ಯ ಅವರು ಮಾನ್ಯ ಮುಖ್ಯಮಂತ್ರಿಯಾಗಿ ಮತ್ತು ಡಿಸಿಎಂ ಆಗಿ ಡಿ.ಕೆ ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ನು ಐದು ವರ್ಷಗಳ ಕಾಲ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಸರ್ಕಾರವೇ ಕರ್ನಾಟಕದಲ್ಲಿ ಆಡಳಿತ ನಡೆಸುತ್ತದೆ. ಇದರ ಹಿನ್ನೆಲೆ ಕಾಂಗ್ರೆಸ್ ಸರ್ಕಾರವು ಘೋಷಿಸಿದ್ದ ಆ ಐದು ಗ್ಯಾರಂಟಿ ಕಾರ್ಡ್ ರ್ಯೋಜನೆಗಳ ಜಾರಿಯ ಬಗ್ಗೆ ಆದೇಶ ಪ್ರತಿಯೂ ಕೂಡ ಸಿದ್ಧವಾಗುತ್ತಿದೆ. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ತಕ್ಷಣವೇ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಮೊದಲ ಕ್ಯಾಬಿನೆಟ್ ಅಲ್ಲಿಯೇ ಇದರ ಬಗ್ಗೆ ಚರ್ಚೆ ನಡೆಸಿ ಐದಕ್ಕೆ ಐದು ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಕೂಡ ಕರ್ನಾಟಕದಲ್ಲಿ ಜಾರಿಗೆ ತರುವ ಬಗ್ಗೆ ತಾತ್ವಿಕ ಆದೇಶವನ್ನು ನೀಡಿದ್ದಾರೆ. ಆದರೆ ಅದಕ್ಕೆ ಸಂಬಂಧಪಟ್ಟ ಮಾರ್ಗಸೂಚಿಗಳು ರೂಪು ರೇಷೆಗಳನ್ನು ಮತ್ತು ಇದಕ್ಕಿರುವ ನಿಯಮಗಳು ಹಾಗೂ ಮನದಂಡಗಳು ಏನು ಎನ್ನುವುದರ ಬಗ್ಗೆ ಮತ್ತು ಇದಕ್ಕಾಗುವ ಖರ್ಚು ವೆಚ್ಚಗಳನ್ನು ಕೂಡ ಲೆಕ್ಕಾಚಾರ ಹಾಕಿ ಮುಂದಿನ ಆದೇಶ ಪ್ರತಿಯಲ್ಲಿ ಇದರ ಬಗ್ಗೆ ಸ್ಪಷ್ಟವಾಗಿ ವಿವರ ತಿಳಿಸಿದ್ದೇವೆ.

ಆದರೆ ಎಷ್ಟೇ ಕಷ್ಟವಾದರೂ ಕೂಡ ಈ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ. ಮೊದಲ ಸಂಪುಟ ಸಭೆಯಲ್ಲಿ ಈ ಗ್ಯಾರಂಟಿ ಕಾರ್ಡ್ ನ ಯೋಜನೆಗಳಿಗೆ ತಾತ್ವಿಕ ಆದೇಶ ದೊರಕಿದೆ. ಅದರಲ್ಲಿ ಮೊದಲನೆದಾಗಿ ಅನ್ನ ಭಾಗ್ಯ ಯೋಜನೆ ಅಡಿ 10 ಕೆಜಿ ಉಚಿತ ರೇಷನ್ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾರ್ಡ್ ಈ ಘೋಷಣೆಯಿಂದ BPL ಕಾರ್ಡ್ AAY ಕಾರ್ಡ್ ಹೊಂದಿರುವ ಕುಟುಂಬಗಳ ಪ್ರತಿ ಸದಸ್ಯರಿಗೂ ಕೂಡ 10 ಕೆಜಿ ಅಕ್ಕಿ ಉಚಿತವಾಗಿ ಸಿಗಲಿದೆ. ಶೀಘ್ರವಾಗಿ ಇದನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಸಂಬಂಧ ಪಟ್ಟ ಹಾಗೆ ಸರ್ಕಾರದಿಂದ ಮತ್ತೊಂದು ಸುತ್ತಿನ ಚರ್ಚೆ ನಡೆದು ಸಾಧ್ಯವಾದರೆ ಈ ತಿಂಗಳಿನಿಂದಲೇ ಅದು ಜಾರಿಗೆ ಬರುವ ಸಾಧ್ಯತೆ ಇದೆ.

ಒನ್ ನೇಶನ್ ಒನ್ ರೇಷನ್ ನೀತಿಗೂ ಕೂಡ ಕರ್ನಾಟಕ ರಾಜ್ಯ ಒಳಪಟ್ಟಿರುವುದರಿಂದ ಉದ್ಯೋಗ, ವಿದ್ಯಾಭ್ಯಾಸ, ವಲಸೆ ಯಾವುದೇ ಕಾರಣದಿಂದ ಒಂದು ಭಾಗ ಬಿಟ್ಟು ಮತ್ತೊಂದು ಭಾಗದಲ್ಲಿ ನೆಲೆಸಿದ್ದರು ಕೂಡ ಅವರು ಅಲ್ಲಿರುವ ನ್ಯಾಯಬೆಲೆ ಅಂಗಡಿಗಳ ಮೂಲಕವೇ ಈ ಉಚಿತ ಪಡಿತರವನ್ನು ಪಡೆಯುವ ಅವಕಾಶ ಕೂಡ ಇದೆ.

ಇದರ ಜೊತೆ ಸರ್ಕಾರವು 10 ಕೆಜಿ ಅಕ್ಕಿಗಳ ಜೊತೆ ಉಚಿತವಾಗಿ ಅಥವಾ ಕಡಿಮೆ ಬೆಲೆಗೆ ಅಡುಗೆ ಎಣ್ಣೆ, ತೊಗರಿ ಬೇಳೆ, ಕಡಲೆಕಾಳು ಮತ್ತು ಹಸಿರು ಕಾಳು ಇವುಗಳನ್ನು ಕೂಡ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ. ಮತ್ತು ಕೇಂದ್ರದಲ್ಲೂ ಕೂಡ ಅನ್ನಪೂರ್ಣ ಕಿಟ್ ಬಗ್ಗೆ ಚರ್ಚೆ ನಡೆದಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಇನ್ನೂ ಕೂಡ ಸರ್ಕಾರ ಸ್ಪಷ್ಟತೆ ನೀಡಿಲ್ಲ, ಸರ್ಕಾರದಿಂದಲೇ ಅಧಿಕೃತ ಆದೇಶ ಹೊರಬೀಳುವವರೆಗೂ ಕೂಡ ಕಾದು ನೋಡೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now