ಸಾಮಾನ್ಯವಾಗಿ ಜನಸಾಮಾನ್ಯರು ಹಬ್ಬ, ಹೊಸ ವರ್ಷ, ಹುಟ್ಟುಹಬ್ಬ ಇಂತಹ ಸಂದರ್ಭದಲ್ಲಿ ಹೊಸ ವಸ್ತುಗಳನ್ನು ಖರೀದಿಸಲು ಇಚ್ಚಿಸುತ್ತಾರೆ. ಅದರಲ್ಲೂ ಹಬ್ಬಗಳ ಸೀಸನ್ ನಲ್ಲಿ ಆಫರ್ಗಳು ಹೆಚ್ಚಿರುವುದರಿಂದ ಈ ಸಮಯಕ್ಕಾಗಿ ಕಾಯುತ್ತಾರೆ. ಅಂತೆಯೇ ಎಲ್ಲಾ ಉತ್ಪನ್ನ ಕಂಪನಿಗಳು ಕೂಡ ಗ್ರಾಹಕರನ್ನು ಸೆಳೆಯುವ ಸಲುವಾಗಿ ದಸರಾ, ದೀಪಾವಳಿ, ಯುಗಾದಿ ರಿಯಾಯಿತಿಗಳನ್ನು ವಿಶೇಷ ಆಫರ್ ಗಳನ್ನು ನೀಡಿ ಗ್ರಾಹಕರಿಗೆ ಸಮಾಧಾನಪಡಿಸಿ ತಾವು ಹೆಚ್ಚು ವ್ಯಾಪಾರ ಮಾಡಿ ಲಾಭ ಮಾಡಿಕೊಳ್ಳುತ್ತೇವೆ.
ಈಗ ದೀಪಾವಳಿ ಸಮಯ, ಈ ಸುಸಂದರ್ಭದಲ್ಲಿ ಪ್ರತಿಷ್ಠಿತ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಿಗಾಸ್(BGauss) ಕೂಡ ಲೇಟೆಸ್ಟ್ ಮಾಡೆಲ್ ಲಾಂಚ್ ಮಾಡಿದೆ. ಹಾಗೆಯೇ ಕಂಪನಿ ದೀಪಾವಳಿ ಆಫರ್(Diwali Offer) ಕೂಡ ನೀಡುತ್ತಿದೆ. ನೀವು ದೀಪಾವಳಿ ವಿಶೇಷದಲ್ಲಿ ಬಿಗಾಸ್ BG C120 ಎಲೆಕ್ಟ್ರಿಕ್ ಸ್ಕೂಟರ್(Electric Scooter) ಖರೀದಿಸಿದರೆ ನೀವು ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.
ನೀವು ಈ ದೀಪಾವಳಿ ಸಮಯದಲ್ಲಿ ಬಿಗಾಸ್ ಕಂಪನಿಯ BG C 120 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದರೆ, ನೀವು BG C12i EX ಎಲೆಕ್ಟ್ರಿಕ್ ಸ್ಕೂಟರ್ ನ್ನು ಉಚಿತವಾಗಿ ಪಡೆಯಬಹುದು. ಇದರ ಶೋ ರೂಂ ಬೆಲೆ ರೂ. 1,05,000 ಆಗಿದ್ದು ಕಂಪನಿಯು ದೀಪಾವಳಿ ಆಫರ್ ಆಗಿ ಇದನ್ನು ಖರೀದಿಸುವವರಿಗೆ ಸ್ಕ್ರ್ಯಾಚ್ ಮತ್ತು ವಿನ್ ಸ್ಪರ್ಧೆಯನ್ನು ನಡೆಸುತ್ತಿದೆ.
ಕಂಪನಿಯ ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದವರು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಕ್ರಾಚ್ ಮಾಡಿದಾಗ ನಿಮಗೆ ಹಲವಾರು ಬಹುಮಾನಗಳನ್ನು ಗೆಲ್ಲುವ ಚಾನ್ಸ್ ಕೊಡಲಾಗಿದೆ, ಅದರಲ್ಲಿ BG C12i EX ಸ್ಕೂಟರ್ ಕೂಡ ಇದೆ ಗ್ರಾಹಕರಿಗೆ ಉಚಿತವಾಗಿ ಸಿಗಲಿರುವ BG C12i EX ಎಲೆಕ್ಟ್ರಿಕ್ ಸ್ಕೂಟರ್ನ ಬೆಲೆ ಕೂಡ 1,05,000 ರೂ. ಇದೆ.
ಈ ಬಂಪರ್ ಹೊಡೆದವರಿಗೆ ಒಂದು ಸ್ಕೂಟರ್ ಬೆಲೆಯಲ್ಲಿ ಎರಡು ಸ್ಕೂಟರ್ ಖರೀದಿಸಿದ ಸಂತೋಷ ಸಿಗಲಿದೆ. ಇದರ ಜೊತೆ ಈ ಸ್ಕ್ರ್ಯಾಚ್ & ವಿನ್ ಸ್ಪರ್ಧೆಯಲ್ಲಿ ಅನೇಕ ಬಗೆಯ ಉತ್ಪನ್ನಗಳನ್ನು ಉಚಿತವಾಗಿ ಪಡೆಯುವ ಅವಕಾಶ ಕೊಡಲಾಗಿದೆ. 8750 ರೂ. ಮೌಲ್ಯದ VIP ಟ್ರಾಲಿ ಬ್ಯಾಗ್ , RTBLDC ರಿಮೋಟ್ ಕಂಟ್ರೋಲ್ ಇರುವ 5500ರೂ. ಬೆಲೆಯ ಸೀಲಿಂಗ್ ಫ್ಯಾನ್, 1 ಗ್ರಾಂ ಚಿನ್ನದ ನಾಣ್ಯವನ್ನು ಸಹ ಹೊಂದಬಹುದು. ಇದರ ಮೌಲ್ಯ ರೂ. 6 ಸಾವಿರ ಇದೆ.
ಬಿಗಾಸ್ ಎಲೆಕ್ಟ್ರಿಕಲ್ ಸ್ಕೂಟರ್ ಮೆಟಲ್ ಬಾಡಿ, 16 ಇಂಚಿನ ಚಕ್ರಗಳು, IP 67 ಬ್ಯಾಟರಿ, ಮೋಟಾರ್, DTE ಸ್ಮಾರ್ಟ್ ಕನೆಕ್ಟೆಡ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ. ಮೊಬೈಲ್ ಅಪ್ಲಿಕೇಶನ್(Mobile Application) ಸಂಪರ್ಕ ಸಹಾ ಇದ್ದು ಈ ಎಲೆಕ್ಟ್ರಿಕ್ ಸ್ಕೂಟರ್ ಗೆ 3 ವರ್ಷಗಳ ವಾರಂಟಿ ಕೊಡಲಾಗುತ್ತಿದೆ. ಆದರೆ ಈ ದೀಪಾವಳಿಯ ವಿಶೇಷ ಆಫರ್ ಎಲ್ಲರಿಗೂ ಅನ್ವಯಿಸುವುದಿಲ್ಲ.
ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ಮಧ್ಯಪ್ರದೇಶ, ದೆಹಲಿ, ಪುಚುಚೇರಿಯಲ್ಲಿ ಬಿಗಾಸ್ ಶೋರೂಮ್ ನಲ್ಲಿ ಖರೀದಿಸುವ ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ. ಹೀಗಾಗಿ ನೀವು ಹತ್ತಿರದ ಶೋರೂಮ್ಗೆ(Show Room) ಭೇಟಿ ನೀಡಿ ಈ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಅಥವಾ ಬಿಗಾಸ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಬಹುದು.