ಸಾಮಾನ್ಯವಾಗಿ ಹಲವರಿಗೆ ಈ ವಿಚಾರವಾಗಿ ಗೊಂದಲ ಇದೆ. ಅದೇನೆಂದರೆ, ತಮಗೆ ಸೇರಬೇಕಾದ ತಮ್ಮ ಹೆಸರಿನಲ್ಲಿಗೆ ಇರುವ ಆಸ್ತಿಯ ಮೇಲೆ ಬೇರೆಯವರು ಕೇಸ್ ಹಾಕಿರುತ್ತಾರೆ ಆದರೆ ಯಾವುದೇ ರೀತಿಯ ಇಂಜೆಕ್ಷನ್ ಆರ್ಡರ್ ಅಂದರೆ ಸ್ಟೇ ಇರುವುದಿಲ್ಲ. ಅನಾವಶ್ಯವಾಗಿ ನನ್ನ ಮೇಲೆ ತೊಂದರೆ ಕೊಡಲು ಈ ರೀತಿ ಕೇಸ್ ಹಾಕಿದ್ದಾರೆ ಅಂತಹ ಸಮಯದಲ್ಲಿ ಆಸ್ತಿಯನ್ನು ಮಾರಬಹುದೇ ಎಂದು ಪ್ರಶ್ನೆ ಇರುತ್ತದೆ.
The transfer of property act 1882ರ ಪ್ರಕಾರ ಸ್ಥಿರಾಸ್ತಿಯನ್ನು ಸುಲಭವಾಗಿ ವರ್ಗಾಯಿಸಲು ಅಥವಾ ವಿಲೇವಾರಿ ಮಾಡಲು ಕೆಲವು ನಿಯಮಗಳು ಇವೆ. ಇತ್ಯರ್ಥವಾಗದ ದಾವೇ ಅಥವಾ ಇದಕ್ಕೆ ಸಂಬಂಧಿಸಿದ ನಿಯಮಗಳ ಕುರಿತು The transfer of property act section 52ರಲ್ಲಿ ತಿಳಿಸಲಾಗಿದೆ ಈ ಸೆಕ್ಷನ್ 52 Lis Pendens ಸಿದ್ದಾಂತದೊಂದಿಗೆ ವ್ಯವಹರಿಸುತ್ತದೆ.
DCC ಬ್ಯಾಂಕ್ ನೇಮಕಾತಿ, 10th ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 58,250/-
ಯಾವುದೇ ದಾವೆ ಇತ್ಯರ್ಥವಾಗದೆ ಇನ್ನು ನ್ಯಾಯಾಲಯದಲ್ಲಿ ಇದ್ದಾಗ ಅದಕ್ಕೆ ಹೊಸ ಸಂಗತಿಗಳನ್ನು ಸೇರಿಸಬಾರದು ಎನ್ನುವ ತತ್ವವನ್ನು ಸಾರುತ್ತದೆ. ಇತ್ಯರ್ಥವಾಗದೆ ದಾವೆಯ ಆಸ್ತಿಯನ್ನು ದಾವೆಯ ಯಾವುದೇ ಪಕ್ಷದಾರ ಮಾರಾಟ ಮಾಡಿದರೆ ಖರೀದಿ ಮಾಡಿರುವ ವ್ಯಕ್ತಿಯು ನ್ಯಾಯಾಲಯದ ತೀರ್ಮಾನಗಳಿಗೆ ಬದ್ಧನಾಗಿರುತ್ತೇನೆ ಎಂದು ಒಪ್ಪಿಕೊಂಡು ಖರೀದಿಸಿದ್ದಾನೆ ಎಂದು ಅರ್ಥ.
ಆ ವ್ಯಕ್ತಿಗೆ ಆತ ಖರೀಸಿರುವ ಆಸ್ತಿಯ ಮೇಲೆ ಕೇಸ್ ಇರುವುದು ಗೊತ್ತಿರಬಹುದು ಅಥವಾ ಗೊತ್ತಿಲ್ಲದೇ ಇರಬಹುದು ಆದರೂ ಆತನ ನ್ಯಾಯಾಲಯದ ತೀರ್ಪಿಗೆ ಬದ್ಧನಾಗಿರಬೇಕು. ಒಂದು ವೇಳೆ ನೀವು ನಿಮ್ಮ ದಾವೇ ಇರುವ ಆಸ್ತಿಯನ್ನು ಮಾರಾಟ ಮಾಡಬೇಕಾದಾಗ ಸೆಕ್ಷನ್ 52ರ Lis Pendens ಸಿದ್ದಾಂತದ ಮೇಲೆ ಚಾಲೆಂಜ್ ಮಾಡಬಹುದು.
ಈ ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ಜಮೆ ಆಗಿದೆ.! ಎಷ್ಟು ಹಣ ಬಂದಿದೆ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!
ಆದರೆ ಈ ಸಿದ್ಧಾಂತದ ಉದ್ದೇಶ ದಾವೇ ಪ್ರಕರಣದ ಅಂತಿಮ ತೀರ್ಪು ಬರದೇ ಇರುವ ಮೊದಲು ಮೂರನೇ ವ್ಯಕ್ತಿಗೆ ಪ್ರಕರಣದ ವಿಷಯವನ್ನು ವರ್ಗಾಯಿಸುವುದನ್ನು ತಡೆಯುವುದಾಗಿರುತ್ತದೆ. ಈ ರೀತಿ ಕೋರ್ಟಿನಲ್ಲಿ ಯಾವುದೇ ಸುದ್ದಿಗೆ ಸಂಬಂಧಪಟ್ಟ ಹಾಗೆ ಕೇಸ್ ಗಳ ದಾಖಲಾಗಿದ್ದಾಗ ಆ ವ್ಯಕ್ತಿ ಆಸ್ತಿಯನ್ನು ಮಾರಾಟ ಮಾಡದಂತೆ ತಡೆಯಲು ಹೇಗೆ ಅವಕಾಶಗಳು ಇದೆಯೋ.
ಅದೇ ರೀತಿ ಅದನ್ನು ನಿಯಂತ್ರಿಸುವುದಕ್ಕೂ ಕೂಡ ಈ 1882ರ ಅನುಕೂಲ ಮಾಡಿಕೊಡುತ್ತದೆ, ಆದರೆ ಇದಕ್ಕೆ ಕೆಲವು ನಿಯಮಗಳು ಇವೆ. ಈಗಾಗಲೇ ಸ್ವತ್ತು ಇರುವಂತಹ ವ್ಯಾಪ್ತಿಗೆ ಬರುವ ಸಕ್ಷಮ ಪ್ರಾಧಿಕಾರದಲ್ಲಿ ಕೇಸ್ ದಾಖಲಾಗಿ ಅದು ಪೆಂಡಿಂಗ್ ನಲ್ಲಿ ಇರಬೇಕು, ಸ್ಥಿರ ಆಸ್ತಿಯ ಹಕ್ಕಿನ ಕುರಿತು ನೇರವಾಗಿ ಸ್ಪಷ್ಟವಾಗಿ ಪ್ರಶ್ನಿಸಿರಬೇಕು.
ಗೃಹ ಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇನ್ಮುಂದೆ ಫ್ರೀ ಕರೆಂಟ್ ಇಲ್ಲ.! 10 ಯೂನಿಟ್ ಮಾತ್ರ ಫ್ರೀ, ಸಿಎಂ ಕಡೆಯಿಂದ ವಿದ್ಯುತ್ ಶಾ’ಕ್…
ದಾವೆ ಸ್ವತ್ತನ್ನು ದಾವೆಯ ಪಕ್ಷದಾರರಲ್ಲಿಯೇ ಒಬ್ಬನು ಸ್ವತ್ತನ್ನು ಹಸ್ತಾಂತರಿಸಿರಬೇಕು, ಇದು ದಾವೆಯ ಮತ್ತೊಬ್ಬ ಪಕ್ಷದಾರನ ಹಕ್ಕಿಗೆ ಪರಿಣಾಮ ಬೀರುವಂತಿರಬೇಕು, ಈ ದಾವೆಯು ಸಂಚಿನ ಪ್ರಕರಣವಾಗಿರಬಾರದು ಈ ರೀತಿ ಪ್ರಕರಣಗಳಲ್ಲಿ ಮಾತ್ರ 1882 ಆಕ್ಟ್ ಅಧಾರದಲ್ಲಿ ಪ್ರಶ್ನಿಸಬಹುದು.
ಮಾರಾಟ ಮಾತ್ರ ಅಲ್ಲದೆ ಭೋಗ್ಯಕ್ಕೆ ಕೊಡುವುದು ಅಥವಾ ದಾನ ಪತ್ರದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಮಾಡುವುದು ಎಲ್ಲವನ್ನು ಕೂಡ ಇದು ಒಳಗೊಂಡಿರುತ್ತದೆ. ಒಟ್ಟಾರೆಯಾಗಿ ನ್ಯಾಯಾಲಯದ ಅನುಮತಿ ಇಲ್ಲದೆ ಈ ರೀತಿ ದಾವೆ ಇರುವ ಪ್ರಕರಣದ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಬಾರದು ಎನ್ನುವುದೇ ಇದರ ಉದ್ದೇಶ ಎಂದು ಹೇಳಬಹುದು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಳೆದುಕೊಂಡಿದ್ರೆ ಈ ವಿಧಾನದ ಮೂಲಕ ಮತ್ತೆ ಪಡೆದುಕೊಳ್ಳಿ.!
ಕೇಸ್ ಇರುವಾಗಲೇ ಈ ರೀತಿ ಆಸ್ತಿ ಹಕ್ಕನ್ನು ವರ್ಗಾವಣೆ ಮಾಡಿದರೆ ಅದು ಅಂತ್ಯವಿಲ್ಲದ ಪ್ರಕರಣವಾಗುತ್ತದೆ. ಖರೀದಿದಾರರು ಕೂಡ ಇದರಲ್ಲಿ ಹೊಸ ಪಾರ್ಟಿಯಾಗಿ ಪ್ರಕರಣದಲ್ಲಿ ಸೇರಿಕೊಳ್ಳುತ್ತಾರೆ, ಇದನ್ನೆಲ್ಲ ತಡೆಯುವ ಉದ್ದೇಶವನ್ನು ಮತ್ತು ಇಂತಹ ಪ್ರಕರಣಗಳಲ್ಲಿ ಮಾರಾಟ ಮಾಡಿದ ಎದುರಾಳಿಯ ಪಕ್ಷದಾರನ ಹಕ್ಕನ್ನು ರಕ್ಷಿಸುವುದು ಮತ್ತು ಪ್ರಕರಣದಲ್ಲಿ ಎಲ್ಲರನ್ನು ಸಮನಾಗಿ ಕಾಣುವುದು ಕೂಡ ಈ ಆಕ್ಟ್ ಉದ್ದೇಶವಾಗಿದೆ.