ಆಂಡ್ರಾಯ್ಡ್ ಫೋನ್ ಗಳು (Android phone) ಬಂದ ಮೇಲೆ ಮೊಬೈಲ್ ಫೋನ್ (mobile phone) ಅವಶ್ಯಕತೆ ಹೆಚ್ಚಾಗಿ ಹೋಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಕ್ಷೇತ್ರವು ಡಿಜಿಟಲೀಕರಣ ಗೊಳ್ಳುತ್ತಿರುವುದರಿಂದ ಮೊಬೈಲ್ ಇದ್ದರೆ ಮಾತ್ರ ದಿನನಿತ್ಯದ ಜೀವನ ಸರಾಗ ಎನ್ನುವಷ್ಟರ ಮಟ್ಟಿಗೆ ನಾವು ಇದರ ಮೇಲೆ ಡಿಪೆಂಡ್ ಆಗಿ ಬಿಟ್ಟಿದ್ದೇವೆ.
ಬೆಳಿಗ್ಗೆ ಎದ್ದಾಗ ಸಮಯ ನೋಡುವುದಕ್ಕೆ ಗಡಿಯಾರ ನೋಡುವುದರ ಬದಲು ಮೊಬೈಲ್ ಉಪಯೋಗಿಸುವುದರಿಂದ ಹಿಡಿದು ನಮ್ಮ ಬ್ಯಾಂಕಿಂಗ್ ವ್ಯವಹಾರಗಳು, ಸರ್ಕಾರಕ್ಕೆ ಮನವಿ ಸಲ್ಲಿಸಬೇಕಾದರೆ ಯಾವುದೇ ಅರ್ಜಿಗಳನ್ನು ಕೂಡ ಮೊಬೈಲ್ ಮೂಲಕ, ಮನೋರಂಜನೆ, ಮತ್ತು ಪ್ರಚಲಿತ ವಿದ್ಯಮಾನದ ಅರಿವು ಸೇರಿದಂತೆ ಕೆಲ ಉದ್ಯೋಗವಕಾಶವನ್ನು ಕೂಡ ಮೊಬೈಲ್ ಮೂಲಕ ಪಡೆಯುತ್ತಿದ್ದೇವೆ.
ಈಗ ಶಿಕ್ಷಣ ಕ್ಷೇತ್ರವು ಕೂಡ ಇದರಿಂದ ಹೊರಗೆ ಉಳಿದಿಲ್ಲ, ಕರೋನ ಲಾಕ್ ಡೌನ್ (Corona) ಅವಧಿಯಲ್ಲಿ ಬಹಳ ಅನುಕೂಲಕರ ಮಾಡಿಕೊಟ್ಟ ಈ ಸ್ಮಾರ್ಟ್ ಫೋನ್ ಗಳು ಆನ್ಲೈನ್ ಕ್ಲಾಸ್ ಕಾನ್ಸೆಪ್ಟ್ ಯಶಸ್ವಿಗೊಳಿಸಲು ಮುಖ್ಯ ಕಾರಣವಾಯಿತು.
ನ್ಯಾಯಾಲಯದಲ್ಲಿ ಇತ್ಯರ್ಥ ಆಗದ ಮನೆ, ಜಮೀನು, ಸೈಟ್, ಆಸ್ತಿಯನ್ನು ಮಾರಾಟ/ಖರೀದಿ ಮಾಡಬಹುದಾ.?
ಈಗ ಕೊರೋನಾ ಪರಿಸ್ಥಿತಿ ಇಲ್ಲದೆ ಇದ್ದರು ಈ ಆನ್ಲೈನ್ ತರಗತಿಗಳು ಎಂಬ ಪ್ರಕ್ರಿಯೆ ಮುಂದುವರೆದಿದೆ. ಕೆಲವು ಅಗತ್ಯ ಸಂಗತಿಗಳನ್ನು ಮೊಬೈಲ್ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಗೆ ಕಳಿಸುವುದು ಅಥವಾ ವಿಶೇಷವಾಗಿ ಕೆಲ ಆನ್ಲೈನ್ ಕ್ಲಾಸ್ ಗಳನ್ನು ಮೊಬೈಲ್ ಫೋನ್ ಗಳ ಮೂಲಕ ತೆಗೆದುಕೊಳ್ಳುವುದು ಇನ್ನು ಅನೇಕ ಶಾಲಾ ಕಾಲೇಜುಗಳಲ್ಲಿ ರೂಢಿಯಲ್ಲಿ ಇದೆ.
ಮೊಬೈಲ್ ಫೋನ್ ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಹೇಗೆ ಶಿಕ್ಷಣಕ್ಕೂ ಕೂಡ ಅನುಕೂಲಕಾರಿ ಆಗಲಿದೆ ಎನ್ನುವುದನ್ನು ಇದು ತಿಳಿಸಿಕೊಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗಾಗಿ ಈಗಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕೂಡ ಮೊಬೈಲ್ ಫೋನ್ ಅವಶ್ಯಕತೆ ಇದ್ದೇ ಇದೆ. ಆದರೆ ಇನ್ನು ಅನೇಕ ಕುಟುಂಬಗಳಿಗೆ ಮೊಬೈಲ್ ಫೋನ್ ಖರೀದಿಸಲು ಸಾಧ್ಯವಾಗಿಲ್ಲ ಅಂತ ಕುಟುಂಬಗಳ ಮಕ್ಕಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಇದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಮಹತ್ವದ ಯೋಜನೆಯೊಂದಕ್ಕೆ ಸಹಿ ಹಾಕಿದೆ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿರುವ ಆರ್ಥಿಕವಾಗಿ ಬಹಳ ಹಿಂದುಳಿದಿರುವ ಕುಟುಂಬಗಳನ್ನು ಗುರುತಿಸಿ ಆ ಕುಟುಂಬದ ಮಕ್ಕಳಿಗೆ ಲ್ಯಾಪ್ಟಾಪ್, ಟ್ಯಾಬ್ ವಿತರಣೆ ಅಥವಾ ಸ್ಮಾರ್ಟ್ಫೋನ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ ಎಂದು ಬಲವಾದ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
DCC ಬ್ಯಾಂಕ್ ನೇಮಕಾತಿ, 10th ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 58,250/-
ಇದಕ್ಕಾಗಿ ಸರ್ಕಾರವು 3000 ಕೋಟಿ ಅನುದಾನವನ್ನು ಮೀಸಲಿಟ್ಟಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ. ಈ ಮೊಬೈಲ್ ಫೋನ್ ಗಳನ್ನು ಮಕ್ಕಳು ಶಿಕ್ಷಣದ ಉದ್ದೇಶಕ್ಕಾಗಿ ಬಳಸಬಹುದಾಗಿದೆ ಮತ್ತು ಇತರ ಮಕ್ಕಳ ಜೊತೆ ತಾವು ಕೂಡ ಸೃಜನಶೀಲತೆ ಬೆಳೆಸಿಕೊಳ್ಳಲು ಈ ಮೊಬೈಲ್ ಅನುಕೂಲ ಮಾಡಿಕೊಡಲಿದೆ ಎಂದು ಭಾವಿಸಲಾಗಿದೆ.
ಯೋಚನೆ ಚರ್ಚೆಯ ರೂಪದಲ್ಲಿದ್ದು, ಬಹುತೇಕ ಸಂಪುಟದ ಒಪ್ಪಿಗೆ ಸಿಕ್ಕಿದೆ ಎಂದು ತಿಳಿದು ಬರುತ್ತಿದೆ. ಶೀಘ್ರದಲ್ಲಿ ಸರ್ಕಾರದ ವತಿಯಿಂದಲೇ ಈ ಕುರಿತಾದ ಅಧಿಕೃತ ಅಪ್ ಡೇಟ್ ಸಿಗುವ ಸಾಧ್ಯತೆ ಇದೆ. ಮೊಬೈಲ್ ವಿತರಣೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ನಿರ್ಧರಿಸುವ ಸಾಧ್ಯತೆಯೂ ಇದೆ.
ಈಗಿರುವ ಮಾಹಿತಿ ಪ್ರಕಾರ ಪದವಿ ಹಂತದ ವಿದ್ಯಾರ್ಥಿಗಳಿಗಷ್ಟೇ ಈ ಮೊಬೈಲ್ ಫೋನ್ ಸಿಗಲಿದೆ. ಪದವಿ, ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮೋ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಈ ಸ್ಮಾರ್ಟ್ ಫೋನ್ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತಾರೆ. ಆದರೆ ಸರ್ಕಾರ ಎಲ್ಲಾ ವಿದ್ಯಾರ್ಥಿಗಳಿಗೂ ಅಥವಾ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ನೀಡಲಿದೆಯೋ ಅಥವಾ ಎಲ್ಲ ವಿದ್ಯಾರ್ಥಿಗಳಿಗೂ ನೀಡಲಿದೆಯೋ ಅಧಿಕೃತಗೊಳಿಸಬೇಕಾಗಿದೆ.
ಈ ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ಜಮೆ ಆಗಿದೆ.! ಎಷ್ಟು ಹಣ ಬಂದಿದೆ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!