ಈ ವಾಹನಗಳ ಫಾಸ್ಟ್ ಟ್ಯಾಗ್ ಬಂದ್ ಆಗಲಿದೆ ಕೆಂದ್ರ ಸರ್ಕಾರದ ಆದೇಶ.!

 

WhatsApp Group Join Now
Telegram Group Join Now

ಟೋಲ್ ಗೇಟ್ ಗಳಲ್ಲಿ (Toll) ವಾಹನ ಸಂಚಾರದಾರರಿಂದ ಟೋಲ್ ವಸೂಲಿ ಮಾಡಲಾಗುತ್ತದೆ, ಈ ಟೋಲ್ ಪ್ಲಾಜಾಗಳಲ್ಲಿ ಟೋಲ್ ದರ ಸಂಗ್ರಹಣೆಯೇ ಒಂದು ಸಮಸ್ಯೆಯಾಗಿದೆ, ಯಾಕೆಂದರೆ ಎಷ್ಟೇ ಸುಧಾರಣೆಗಳನ್ನು ತಂದರೂ ತಂತ್ರಜ್ಞಾನ ಬಳಕೆ ಮಾಡಿದರು ಸಂಪೂರ್ಣವಾಗಿ ಟೋಲ್ ಪ್ಲಾಜಾ ಗಳಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಆಗುತ್ತಿಲ್ಲ.

ಟೋಲ್ ಗೇಟ್ ಗಳಲ್ಲಿ ಗಂಟೆಗಟ್ಟಲೇ ವಾಹನಗಳು ಕ್ಯೂ ನಿಂತು ಸಂಚಾರ ದಟ್ಟಣೆ ಆಗುವುದನ್ನು ತಪ್ಪಿಸುವ ಕಾರಣಕ್ಕಾಗಿ ಕೆಲ ವರ್ಷಗಳ ಹಿಂದೆ ಫಾಸ್ಟ್ ಟ್ಯಾಗ್ (fastag) ಅಳವಡಿಸಲಾಗಿತ್ತು, ಇದರಿಂದ ಅತಿ ಶೀಘ್ರವಾಗಿ ಟೋಲ್ ಸಂಗ್ರಹಣೆ ಮಾಡಬಹುದು ಇದು ಸಮಸ್ಯೆಯನ್ನು ನಿವಾರಿಸುತ್ತದೆ ಎಂದು ಭಾವಿಸಲಾಗಿತ್ತು ಆದರೆ ಈಗ ಮತ್ತೊಂದು ಬಗೆಯ ಸಮಸ್ಯೆ ಎದುರಾಗಿದೆ.

ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಮೊಬೈಲ್ ಫೋನ್

Fastag ಅಳವಡಿಕೆಯಿಂದ ಅತ್ಯಂತ ಸರಳವಾಗಿ, ವೇಗವಾಗಿ ಟೋಲ್ ಸಂಗ್ರಹ ಮಾಡುವ ಪ್ರಕ್ರಿಯೆ ವೇಗವಾಗಿ ಮುಗಿಯುತ್ತಿತ್ತು. ಸಮಯದ ಜೊತೆಗೆ ಇದು ಸಂಚಾರಿ ದಟ್ಟಣೆಯನ್ನು ಕೂಡ ಕಡಿಮೆ ಮಾಡುತ್ತಿತ್ತು, ಇಷ್ಟೆಲ್ಲಾ ಅನುಕೂಲತೆಗಳು ಇದ್ದರೂ ಕೂಡ ಕೆಲ ಲೋಪ ದೋಷಗಳು ಇದಕ್ಕೂ ತಪ್ಪಿಲ್ಲ.

ಈಗ ಇವುಗಳನ್ನು ನಿಯಂತ್ರಿಸುವ ಉದ್ದೇಶದಿಂದ NHAI (National Highway Authority of India) ಹೊಸದೊಂದು ನಿಯಮವನ್ನು ಹೊರಡಿಸಿದೆ. ಈ ನಿಯಮವು ಇದೇ ಜನವರಿ 31, 2024ರಿಂದ ಅನ್ವಯವಾಗಲಿದೆ ಹೊಸದಾಗಿ ಜಾರಿಗೆ ತರಲಾದ ಈ ನಿಯಮವೇನೆಂದರೆ ಇನ್ನು ಮುಂದೆ ಫಾಸ್ಟ್ ಟ್ಯಾಗ್ ಬಳಕೆದಾರರು ಟೋಲ್ ಪಾವತಿಸಲು ಅವರ ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ತಿಗೊಳಿಸಿರಬೇಕು.

ನ್ಯಾಯಾಲಯದಲ್ಲಿ ಇತ್ಯರ್ಥ ಆಗದ ಮನೆ, ಜಮೀನು, ಸೈಟ್, ಆಸ್ತಿಯನ್ನು ಮಾರಾಟ/ಖರೀದಿ ಮಾಡಬಹುದಾ.?

ಈಗ ಎಲ್ಲಾ ಕಡೆಗಳಲ್ಲೂ ಕೂಡ ತಮ್ಮ ಗ್ರಾಹಕರನ್ನು ತಿಳಿಯಲು know Your Costomer ಅಂದರೆ e-KYC ಪ್ರಕ್ರಿಯೆ ನಡೆಸುತ್ತಿರುವುದರಿಂದ ಈ ಪರಿಹಾರ ಕ್ರಮವನ್ನು ಫಾಸ್ಟ್ ಟ್ಯಾಗ್ ಗೂ ಕೂಡ ಅಳವಡಿಸಿಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಸೂಚನೆ ಕೊಟ್ಟಿದೆ ಮತ್ತು ಈ ಪ್ರಕ್ರಿಯೆಗೆ ಜನವರಿ 31, ಅಂತಿಮ ಗಡುವು ಎಂದು ನಿಗದಿಪಡಿಸಿದೆ.

ಫಾಸ್ಟ್ ಟ್ಯಾಗ್ ಬಳಕೆದಾರರು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಬಳಸಿದ್ದಲ್ಲಿ ಗೊಂದಲಗಳು ಕಡಿಮೆ ಆದರೆ ಅನೇಕ ವಾಹನ ಮಾಲೀಕರು ಒಂದಕ್ಕಿಂತ ಹೆಚ್ಚು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿದ್ದಾರೆ. ಇದರಿಂದ ಇನ್ನಷ್ಟು ಜಟಿಲತೆಗಳು ಎದುರಾಗುತ್ತಿವೆ ಇದನ್ನು ನಿವಾರಿಸಲು ಒಂದು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಅಭಿಯಾನ ಆರಂಭಿಸಲಾಗಿದ್ದು.

DCC ಬ್ಯಾಂಕ್ ನೇಮಕಾತಿ, 10th ಪಾಸ್ ಆದವರು ಅರ್ಜಿ ಸಲ್ಲಿಸಿ ವೇತನ 58,250/-

ಒಂದಕ್ಕಿಂತ ಹೆಚ್ಚಿನ ಫಾಸ್ಟ್ ಟ್ಯಾಗ್ ಇದ್ದರೆ ಕೂಡಲೇ ಮಾಲೀಕರು ಒಂದನ್ನು ಧೃಡೀಕರಿಸಿ ಉಳಿದವನ್ನು ಆಯಾ ಬ್ಯಾಂಕ್ ಗಳ ಮೂಲಕ ತೆರವುಗೊಳಿಸಬೇಕು ಎಂದು ಪ್ರಾಧಿಕಾರವು ಸೂಚನೆ ಕೊಟ್ಟಿದೆ. ಫಾಸ್ಟ್ ಟ್ಯಾಗ್ ನಲ್ಲಿ ಆಗುತ್ತಿರುವ ಸಾಕಷ್ಟು ಗೊಂದಲಗಳಿಗೆ ಇದರಿಂದ ಪರಿಹಾರ ಸಿಗಲಿದೆ ಎನ್ನುವ ಭರವಸೆಯೊಂದಿಗೆ ಈ ಅಭಿಯಾನ ಆರಂಭಿಸಲಾಗಿದೆ.

ಟೋಲ್ ಪ್ಲಾಜಾ ಗಳನ್ನು ಗಳಲ್ಲಿ ವಾಹನಗಳ ತಡೆ ರಹಿತ ಸಂಚಾರವನ್ನು ಉತ್ತೇಜಿಸುವ ಕಾರಣಕ್ಕಾಗಿ ಅನೇಕ ರೀತಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಇವುಗಳಲ್ಲಿ Fastag ಅತ್ಯುತ್ತಮವಾದ ಯೋಜನೆ ಎನ್ನುವ ಸಮಾಧಾನವು ಇತ್ತು.

ಈ ರೈತರಿಗೆ ಮಧ್ಯಂತರ ಬೆಳೆ ವಿಮೆ ಹಣ ಜಮೆ ಆಗಿದೆ.! ಎಷ್ಟು ಹಣ ಬಂದಿದೆ ಅನ್ನೋದನ್ನ ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಚೆಕ್ ಮಾಡಿ.!

ಈಗ ಇದಕ್ಕೂ ತೊಡಕುಗಳು ಎದುರಾಗಿದ್ದು ಇವುಗಳ ನಿವಾರಣೆಯಾದ ನಂತರ ಎಂದಿನಂತೆ ವಾಹನ ಮಾಲೀಕರು ನಿಶ್ಚಿಂತೆಯಾಗಿ ಸಂಚರಿಸುವಂತಾಗುತ್ತದೆ ಎನ್ನುವುದು ಈ ನಿರ್ಧಾರದ ಹಿಂದಿನ ಉದ್ದೇಶ. ಕೂಡಲೇ ಎಲ್ಲಾ ಫಾಸ್ಟ್ ಟ್ಯಾಗ್ ಬಳಕೆದಾರರು ತಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ತಿಗೊಳಿಸಿಕೊಂಡು ಒಂದಕ್ಕಿಂತ ಹೆಚ್ಚಿನ ಪಾಸ್ಟ್ ಟ್ಯಾಗ್ ಅಳವಡಿಸಿದ್ದಲ್ಲಿ ಬ್ಯಾಂಕ್ ನಿಂದ ತೆರವುಗೊಳಿಸಿಕೊಳ್ಳಿ ಮತ್ತೆ ಈ ಉಪಯುಕ್ತ ಮಾಹಿತಿ ಎಲ್ಲರಿಗೂ ತಲುಪುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now