ನಾವು ಬ್ಯಾಂಕ್ ಲೋನ್ (Bank loan) ಮಾಡಿ ಕಾರು, ಬೈಕ್, ಮನೆ ಕೊಂಡುಕೊಳ್ಳುತ್ತಿರುತ್ತೇವೆ. ಇದರ ಮೇಲೆ ಬ್ಯಾಂಕ್ ಗಳಿಗೂ ಕೂಡ ಅಧಿಕಾರ ಇರುತ್ತದೆ. ಪ್ರಾಪರ್ಟಿ ನಮ್ಮ ಹೆಸರಿನಲ್ಲಿ ಇದ್ದರು ನಮ್ಮ ಎಲ್ಲಾ ಡಾಕ್ಯುಮೆಂಟ್ ಗಳನ್ನು ಸಾಲಕ್ಕಾಗಿ ಬ್ಯಾಂಕ್ ಗೆ ನೀಡಿರುತ್ತೇವೆ. ಇದು ಬ್ಯಾಂಕ್ ನಲ್ಲಿ ಅಡ ಇಟ್ಟ ಹಾಗಾಯಿತು.
ಹೀಗೆ ಸರಿಯಾಗಿ ಬ್ಯಾಂಕ್ ಗಳಿಗೆ ಕಂತುಗಳನ್ನು ಕಟ್ಟಿ ಲೋನ್ ಕ್ಲಿಯರ್ ಮಾಡುವವರೆಗೆ ಬ್ಯಾಂಕ್ ಗಳಿಗೂ ಈ ಪ್ರಾಪರ್ಟಿ ಮೇಲೆ ಅಧಿಕಾರ ಇರುತ್ತದೆ. ಇದನ್ನು ಸೆಕ್ಯೂರ್ಡ್ ಲೋನ್ ಗಳು (secured Loan) ಎಂದು ಕರೆಯುತ್ತಾರೆ.
ಮೂರು ತಿಂಗಳುಗಳು ನಾವು ಸರಿಯಾಗಿ ಪಾವತಿ ಮಾಡಿಲ್ಲ ಎಂದರೆ ಬ್ಯಾಂಕ್ ನಿಂದ ಹಲವಾರು ಎಚ್ಚರಿಕೆ ನೋಟಿಸ್ ಗಳು ಬರುತ್ತವೆ. 60 ದಿನ ಆದ ಬಳಿಕ ಡಿಮ್ಯಾಂಡ್ ನೋಟಿಸ್ ಕಳುಹಿಸುತ್ತಾರೆ, ಇದಕ್ಕೆ ಸ್ಪಂದಿಸದೆ ಇದ್ದಾಗ ಪೊಸಿಷನ್ ನೋಡಿದ ಕಳುಹಿಸುತ್ತಾರೆ ಇದು 30 ದಿನಗಳ ಸಮಯ ಹೊಂದಿರುತ್ತದೆ ಇದಕ್ಕೂ ಸ್ಪಂದಿಸದೆ ಇದ್ದರೆ ಸೇಲ್ ನೋಟಿಸ್ ಕಳುಹಿಸುತ್ತಾರೆ.
ಈ ಸುದ್ದಿ ಓದಿ:- ಈ ದಿನಾಂಕದಂದು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2,000 ಹಣ ಜಮೆ ಆಗುತ್ತೆ.!
ಕೊನೆಗೆ ಒಂದು ದಿನವನ್ನು ನಿಗದಿಪಡಿಸುತ್ತಾರೆ (Auction date). ಆ ದಿನದಂದು ಕೂಡ ಅವಕಾಶ ಇರುತ್ತದೆ ಬಾಕಿ. ಸಾಲಗಾರ ಎಲ್ಲಾ ನೋಟಿಸ್ ಮಿಸ್ ಮಾಡಿದರು ಕೂಡ ಇರುವ ಎಲ್ಲಾ EMI ಗಳನ್ನು ಅಂದು ಪಾವತಿಸಿ ಕ್ಲಿಯರ್ ಮಾಡಿಕೊಳ್ಳುವುದಕ್ಕೆ ಕಡೆ ಅವಕಾಶ ಕೂಡ ಆ ದಿನ ಇರುತ್ತದೆ..
ಒಂದು ವೇಳೆ ಆತ ಸಾಲ ಕಟ್ಟಲಾಗಲಿಲ್ಲ ಎಂದರೆ ಬ್ಯಾಂಕ್ ನಿಗದಿಪಡಿಸಿದ ದಿನದಂದು ಎಲ್ಲರ ಸಮ್ಮುಖದಲ್ಲಿ ಹರಾಜಿಗೆ ಬೆಲೆ ನಿಗದಿಪಡಿಸುತ್ತದೆ. ಅದಕ್ಕಿಂತ ಹೆಚ್ಚಿಗೆ ಯಾರು ಫೈನಲ್ ಬಿಟ್ ಮಾಡುತ್ತಾರೆ ಅವರಿಗೆ ಪ್ರಾಪರ್ಟಿ ಹೋಗುತ್ತದೆ ಒಂದು ವೇಳೆ ಹೆಚ್ಚಿಗೆ ಯಾರು ಕೂಗದೆ ಇದ್ದರೆ ಬ್ಯಾಂಕ್ ನಿಗದಿಪಡಿಸಿದ ಮೊತ್ತಕ್ಕೆ ಮೊದಲು ಕೂಗಿದವರಿಗೆ ಮಾರಾಟ ಮಾಡುತ್ತದೆ.
ಈಗ ಆನ್ಲೈನ್ ಯುಗವಾರುವುದರಿಂದ ಆನ್ಲೈನಲ್ಲಿ ಬಿಟ್ ಮಾಡಲು ಬುಕ್ ಮಾಡಲು ಅಥವಾ ಎಲ್ಲೆಲ್ಲಿ ಯಾವ ಪ್ರಾಪರ್ಟಿ ಸೇಲ್ ಆಗುತ್ತಿದೆ ಎಂದು ತಿಳಿದುಕೊಳ್ಳಲು ಎಲ್ಲದಕ್ಕೂ ಕೂಡ ಅವಕಾಶ ಇದೆ. ನೀವು ಬ್ಯಾಂಕ್ ಗಳಿಕೆ ಹೋಗಿ ಮ್ಯಾನೇಜರ್ ಪಳಿ ಈ ರೀತಿ ಸೇಲ್ ಗಿರುವ ಪ್ರಾಪರ್ಟಿಗಳ ಬಗ್ಗೆ ಆಕ್ಷನ್ ಡೇ ಬಗ್ಗೆ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:- ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!
ಅಥವಾ ಬ್ಯಾಂಕ್ ಗಳೇ ಜಾಹಿರಾತು ನೀಡಿದಾಗಲೂ ಅವುಗಳನ್ನು ನೋಡಿ ತಿಳಿದುಕೊಳ್ಳಬಹುದು ಅಥವಾ ಆನ್ಲೈನ್ ನಲ್ಲಿ ಇದಕ್ಕಾಗಿ ಇರುವ ವೆಬ್ಸೈಟ್ಗಳಾದ E Auction India.com, for clousure india.com, ibapi website ಗಳಲ್ಲಿ ಕೂಡ ಇದರ ಬಗ್ಗೆ ತಿಳಿದುಕೊಳ್ಳಬಹುದು. ಆದರೆ ಈ ವಿಚಾರಗಳಲ್ಲಿ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು ಯಾಕೆಂದರೆ ಕೆಲವರು ಫೇಕ್ ಡಾಕ್ಯುಮೆಂಟ್ ಕೊಟ್ಟು ಕೂಡ ಬ್ಯಾಂಕ್ ಗೆ ಮೋಸ ಮಾಡಿರುವವರು ಇರುತ್ತಾರೆ.
ನೀವು ಅದನ್ನು ಪರ್ಚೇಸ್ ಮಾಡುವಾಗ ಇದರ ಬಗ್ಗೆ ಕುಲಂಕುಶವಾಗಿ ಪರೀಕ್ಷಿಸಬೇಕಾದದ್ದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ನೀವು ಸೆಲೆಕ್ಟ್ ಮಾಡಿಕೊಂಡ ಪ್ರಾಪರ್ಟಿ ಸೇಲ್ ಡೀಡ್ ಸರಿಯಾಗಿದಿಯೇ ? ಎಲ್ಲ ಡಾಕ್ಯುಮೆಂಟ್ ನಲ್ಲೂ ಇದು ಮ್ಯಾಚ್ ಆಗುತ್ತಿದೆಯೇ? ಟೈಟಲ್ ಕ್ಲಿಯರೆನ್ಸ್ ಆಗಿದೆಯೇ? Enclosure Certificate ಇದೆಯೇ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಇದೆಲ್ಲ ದಾಖಲೆ ಸರಿ ಇದೆಯೇ ಎನ್ನುವುದನ್ನೆಲ್ಲಾ ಕ್ರಾಸ್ ಚೆಕ್ ಮಾಡಿಕೊಳ್ಳಬೇಕು.
ಫಿಸಿಕಲ್ ಗಳಾಗಿದ್ದರೆ ಡಾಕ್ಯುಮೆಂಟ್ ಸರಿ ಇದೆಯೇ ಡ್ಯಾಮೇಜ್ ಆಗಿದೆಯೇ ತಿಳಿದುಕೊಳ್ಳಬೇಕು. ಎಲ್ಲವು ಸರಿ ಇದ್ದರೆ ಮಾತ್ರ ಬಿಟ್ ಮಾಡಿ ಸ್ಥಳದಲ್ಲಿ ಪ್ರಾಪರ್ಟಿ ವ್ಯಾಲ್ಯುನ 10% ಮಾತ್ರ ಅಡ್ವಾನ್ಸ್ ಬುಕಿಂಗ್ ಆಗಿ ಪೇಮೆಂಟ್ ಮಾಡಬೇಕು ನಂತರದ ಪ್ರಕ್ರಿಯೆ ಹೇಗಿರುತ್ತದೆ? ಇದರ ಸಾಧಕ ಭಾದಕಗಳೇನು? ಇತ್ಯಾದಿ ವಿಚಾರವನ್ನು ವಿವರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.