ಕೆಲವೊಂದು ಬಹಳ ದೊಡ್ಡ ಸಮಸ್ಯೆಗಳಿಗೆ ಪರಿಹಾರವು ನಮ್ಮಲ್ಲಿಗೆ ಇರುತ್ತದೆ. ಅದರ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ನಾವು ಊರೆಲ್ಲಾ ಅದಕ್ಕಾಗಿ ಹುಡುಕಾಡುತ್ತಿರುತ್ತೇವೆ. ಪ್ರಸ್ತುತ ಸಮಾಜದಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಎಲ್ಲಾ ಕಾಯಿಲೆಗಳಿಗೂ ಕೂಡ ಇದನ್ನು ಅನ್ವಯಿಸಿ ಮಾತನಾಡುವುದಾದರೆ ಆಯುರ್ವೇದ ಯೋಗ ಇದೆಲ್ಲ ಕೂಡ ನಮ್ಮ ನೆಲದ ಸ್ವತ್ತು.
ಇದರ ಮಹತ್ವ ಅರಿತು ವಿದೇಶಿಗರು ಇಂದು ಇದನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ ಆದರೆ ನಮ್ಮ ಜನರು ಇಂಗ್ಲೀಷ್ ಔಷಧಿಗಳ ಮೊರೆ ಹೋಗಿದ್ದಾರೆ. ಆದರೆ ಕಾಯಿಲೆ ಗುಣವಾಗುತ್ತದೆ ಎನ್ನುವ ಸಮಾಧಾನದ ಜೊತೆಗೆ ಮತ್ತೊಂದು ರೀತಿಯ ಸೈಡ್ ಎಫೆಕ್ಟ್ ಕೂಡ ಅನುಭವಿಸುತ್ತಾರೆ. ಯೋಗ ಎಂದು ಕೂಡಲೆ ಎಲ್ಲರೂ ಆಸನಗಳು, ಪ್ರಾಣಾಯಾಮ ಇದಿಷ್ಟೇ ಅಂದುಕೊಂಡಿದ್ದಾರೆ. ಇದೇ ಬಹಳ ತಪ್ಪು ಯೋಗವನ್ನು ಅಭ್ಯಾಸ ಮಾಡಿದರೆ ಅದರ ಬಗ್ಗೆ ಪೂರ್ತಿ ತಿಳಿದುಕೊಂಡರೆ ಯೋಗ ಎನ್ನುವುದು ನಾವು ಬದುಕುವ ವಿಧಾನ ಎಂದು ತಿಳಿಯುತ್ತದೆ.
ಯೋಗದಲ್ಲಿ ಆಸನಗಳನ್ನು ಮಾಡಲಾಗದವರಿಗೆ ಪ್ರಾಣಾಯಾಮದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ ಹೀಗೆ ಹಂತ ಹಂತವಾಗಿ ತಿಳಿಯುತ್ತಾ ಹೋದಷ್ಟು ಯೋಗ ಎನ್ನುವುದು ವಿಸ್ತಾರವಾಗಿದೆ. ಪಂಚಭೂತಗಳಿಂದ ಈ ಪ್ರಪಂಚ ಸೃಷ್ಟಿಯಾಗಿದೆ, ನಮ್ಮ ದೇಹವು ಕೂಡ ಪ್ರಕೃತಿಗೆ ಬಹಳ ಹೊಂದಿಕೊಂಡಿದೆ.
ಈ ಸುದ್ದಿ ಓದಿ:- ಪಿಂಚಣಿ ಹಣ ನಿಯಮ ಬದಲಾವಣೆ ಇನ್ನು ಮುಂದೆ 60 ವರ್ಷ ಮೇಲ್ಪಟ್ಟವರ ಪಿಂಚಣಿ 5% ರಷ್ಟು ಹೆಚ್ಚಳ…
ನಮ್ಮ ದೇಹದಲ್ಲೂ ಕೂಡ ಪಂಚಮಯ ಕೋಶಗಳಿವೆ. ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು ಇವು ಒಂದಕ್ಕೊಂದು ಪೂರಕವಾಗಿವೆ. ನಾವು ತಿನ್ನುವ ಆಹಾರದಿಂದ ಅನ್ನಮಯ ಕೋಶ, ಉಸಿರಾಟದಿಂದ ಪ್ರಾಣಮಯ ಕೋಶ, ಮನಸ್ಸಿನಿಂದ ಮನೋಮಯ ಕೋಶ, ಜ್ಞಾನದಿಂದ ವಿಜ್ಞಾನಮಯ ಕೋಶ ಮತ್ತು ಇದೆಲ್ಲವನ್ನು ಮೀರಿದ ಆನಂದದಿಂದ ಆನಂದಮಯಕೋಶದ ಆರೋಗ್ಯ ಸುಧಾರಿಸುತ್ತದೆ ಇದೆಲ್ಲದರ ಕೀಲಿ ನಮ್ಮ ಕೈಲೇ ಇದೆ.
ಆದರಗ ಇಂದಿನ ಕಾಲದಲ್ಲಿ ಅತಿಯಾದ ಒತ್ತಡವು ನಮ್ಮ ಎಲ್ಲಾ ದುಃ’ಖದ ಮೂಲವಾಗಿದ್ದು, ಅನಾವಶ್ಯಕ ಹೆಚ್ಚು ಸ್ಟ್ರೆಸ್ ಗೆ ಒಳಗಾಗಿ ಆತ ಸರಿಯಾಗಿ ತಿನ್ನುವುದಿಲ್ಲ, ಉಸಿರಾಟವು ವ್ಯತ್ಯಾಸವಾಗುತ್ತದೆ, ಜೀರ್ಣಾಂಗ ವ್ಯೂಹದ ಆರೋಗ್ಯ ಹದಗೆಡುತ್ತದೆ, ಯೋಚನೆ ಮಾಡುವ ಸಾವಧಾನ ಕಳೆದುಕೊಳ್ಳುತ್ತಾನೆ ಮತ್ತು ಆನಂದವಂತೂ ದೂರದ ಮಾತು ಒಟ್ಟಾರೆಯಾಗಿ ಬದುಕಿನ ಸ್ವಾಸ್ಥ್ಯವನ್ನು ಕಳೆದುಕೊಳ್ಳುತ್ತಾನೆ.
ಆದರೆ ದುರಾದೃಷ್ಟ ಏನೆಂದರೆ ಇಂತಹ ಸ್ಟ್ರೆಸ್ ಯಾರನ್ನು ಬಿಡುತ್ತಿಲ್ಲ ಶಾಲೆಗೆ ಹೋಗುವ ಮಗುವಿಗೆ ಸರಿಯಾಗಿ ಮಾರ್ಕ್ಸ್ ಬರದೇ ಇದ್ದರೆ ಅಮ್ಮ ಹೊಡೆಯುತ್ತಾಳೆ, ಟೀಚರ್ ಬೈಯುತ್ತಾರೆ, ಫ್ರೆಂಡ್ಸ್ ಅವಮಾನ ಮಾಡುತ್ತಾರೆ ಎನ್ನುವ ಸ್ಟ್ರೆಸ್ ನಿಂದ ಹಿಡಿದು ಕೆಲಸಕ್ಕೆ ಹೋಗುವವರು, ಗೃಹಿಣಿಯರು ಎಲ್ಲರಿಗೂ ಕೂಡ ವಿಪರೀತವಾದ ಸ್ಟ್ರೆಸ್ ಆಗುತ್ತಿದೆ ಮತ್ತು ಇದಕ್ಕೆ ಪರಿಹಾರ ಏನೆಂದರೆ ಆ ಪರಿಹಾರ ನಮ್ಮಲ್ಲಿಗೆ ಇದೆ.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ಕಟ್ಟಿರುವ ಮನೆ.! ಕಮ್ಮಿ ಬಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ನಿರ್ಮಾಣ ಮಾಡಬೇಕು ಅನ್ನುವವರು ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ.!
ಯಾವುದು ನಮ್ಮ ಕೈ ಮೀರಿ ಇದೆ ಅದಕ್ಕೆ ಒತ್ತಡ ಹಾಕುವುದು ಬೇಡ ಮಗು ಎಷ್ಟಾಗುತ್ತದೆ ಅಷ್ಟು ಕಲಿಯಲಿ ಅದಕ್ಕೆ ಏನು ಆಸಕ್ತಿ ಇದೆ ಅದನ್ನು ಕಲಿಯಲಿ ಎಂದರೆ ಆಯಿತು. ನಮಗೆ ನಮ್ಮ ಬಸ್ ಟ್ರೈನ್ ಮಿಸ್ ಆದರೆ ಕೂಡ ಸ್ಟ್ರೆಸ್ ತಡೆದುಕೊಳ್ಳಲು ಆಗುವುದಿಲ್ಲ, ಟ್ರಾಫಿಕ್ ನಲ್ಲಿ ಸಿಲುಕಿಕೊಂಡರೆ ಸ್ಟ್ರೆಸ್ ಆದರೆ ನಮ್ಮಿಂದ ಇದನ್ನು ತಡೆಯಲು ಆಗುವುದೇ? ಇದೆಲ್ಲ ನಮ್ಮ ಕಂಟ್ರೋಲ್ ನಲ್ಲಿ ಇದೆಯೇ? ಇಲ್ಲದ್ದನ್ನು ಒಪ್ಪಿಕೊಳ್ಳಲೇಬೇಕು, ಒಪ್ಪಿಕೊಳ್ಳಲಾರದದ್ದನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು.
ನಮ್ಮ ಹಿರಿಯರು ಈ ಐದು ಕೋಶಗಳ ಆರೋಗ್ಯಕ್ಕೆ ಸಂಬಂಧಪಟ್ಟ ಸಲಹೆಗಳನ್ನು ಶಾಸ್ತ್ರ ಸಂಪ್ರದಾಯ ಪದ್ಧತಿ ಹೆಸರಿನಲ್ಲಿ ಕಂಡು ಕೊಂಡಿದ್ದಾರೆ. ನಮಸ್ಕಾರ ಮಾಡುವುದು, ಮಡಿಯಾಗಿರುವುದು, ಸಾತ್ವಿಕ ಆಹಾರ ಸೇವಿಸುವುದು, ಪ್ರಕೃತಿಗೆ ಹತ್ತಿರವಾಗಿರುವುದು, ಪ್ರಕೃತಿ ಹಾಳು ಮಾಡದೆ ಇರುವುದು ಈ ಎಲ್ಲ ಸಂಸ್ಕಾರಗಳು ಕೂಡ ಯೋಗವೇ ಮತ್ತು ದುರಾಸೆಯನ್ನು ತ್ಯಜಿಸಿ ಮೆಟೀರಿಯಲ್ ವಸ್ತುಗಳ ಆಸೆಗಳು ಮುಗಿದ ಮೇಲೆ ನಾವು ಆನಂದಮಯ ಕೋಶ ವ್ಯವಸ್ಥೆ ತಲುಪಲು ಸಾಧ್ಯ.
ಈ ರೀತಿ ಮನಸ್ಥಿತಿ ಇದ್ದವರಿಗೆ ಯಾವುದೇ ಕಾಯಿಲೆ ಬರುವುದಿಲ್ಲ ಬಂದರೂ ಕೂಡ ಅದು ಗುಣವಾಗುತ್ತದೆ. ಈ ರೀತಿ ನಾವು ಬದುಕಿಬಿಟ್ಟರೆ ಕ್ಯಾನ್ಸರ್ ಅಂತ ಸಮಸ್ಯೆಗಳನ್ನು ಕೂಡ ಧೈರ್ಯವಾಗಿ ಎದುರಿಸಬಹುದು ಅದರ ಮೇಲೆ ರಿಸರ್ಚ್ ಗಳು ಕೂಡ ನಡೆದಿದೆ. ಯೋಗ ಕೆಮೋಥೆರಪಿ ವಿರುದ್ಧವಲ್ಲ ಬದಲಾಗಿ ಯೋಗದ ಮೂಲಕ ಸಾಧನೆ ಮಾಡಿ ಕ್ಯಾನ್ಸರ್ ಗೆದ್ದವರು ಇದ್ದಾರೆ ಇದರ ಬಗ್ಗೆ ವಿಸ್ತಾರದ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.