ಸಾಮಾನ್ಯವಾಗಿ ರಾಜ್ಯದ ಆಡಳಿತದ ಒಳಗೆ ಜನಸಾಮಾನ್ಯರಿಂದ ಸಾಕಷ್ಟು ಬೇಡಿಕೆಗಳು ಇರುತ್ತವೆ. ಆಗಾಗ ಇದಕ್ಕಾಗಿ ಮನವಿಯೂ ಸಲ್ಲಿಸುತ್ತಾರೆ. ಒಂದು ವೇಳೆ ವಿಳಂಬವಾದರೆ ಅಥವಾ ಸ್ಪಂದಿಸದೆ ಇದ್ದರೆ ಪ್ರತಿಭಟನೆ ಕೂಡ ಮಾಡುತ್ತಾರೆ ನಾಗರಿಕರ ಸಮಸ್ಯೆ ಆರಿತು ಅವರ ತೊಂದರೆಗಳನ್ನು ಪರಿಹಾರ ಮಾಡಿಕೊಡಬೇಕಾದದ್ದು ಆಯಾ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳ ಕರ್ತವ್ಯ.
ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳಿಗೆ ಯಾವಾಗಲೂ ಸರ್ಕಾರಿ ನೌಕರರಿಂದ ಹಲವು ರೀತಿಯ ಬೇಡಿಕೆಗಳು ಇದ್ದೇ ಇರುತ್ತವೆ. ಸರ್ಕಾರಿ ನೌಕರರ ಪಿಂಚಣಿ ವಿಷಯವಾಗಿ ಈಗ ರಾಜ್ಯ ಸರ್ಕಾರದಿಂದ ಒಂದು ಮಹತ್ವದ ಬದಲಾವಣೆಯಾಗಿತ್ತು ಇದು ಅನೇಕ ಪಿಂಚಣಿದಾರರಿಗೆ ಸಮಾಧಾನವನ್ನು ಉಂಟು ಮಾಡಿದೆ ಮತ್ತು ಸರ್ಕಾರಿ ನೌಕರರ ನಿವೃತ್ತಿ ವೇತನ ಮಾತ್ರವಲ್ಲದೇ ರಾಜ್ಯ ಸರ್ಕಾರಗಳಲ್ಲಿ ನೀಡುವ ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಯಾಪ್ಯ ವೇತನ ಪಡೆಯುತ್ತಿರುವವರಿಗೂ ಕೂಡ ಒಂದು ಅಪ್ಡೇಟ್ ಇದೆ.
ಸರಕಾರಿ ನೌಕರರಿಗೆ ಸರಕಾರ ಈಗಾಗಲೇ ಹೆಚ್ಚಿನ ಸೌಲಭ್ಯಗಳನ್ನು ನೀಡುತ್ತಿದೆ. ಈಗ ಮತ್ತೊಮ್ಮೆ ಅವರ ಬೇಡಿಕೆಯ ವಿಷಯವಾಗಿದ್ದ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿ ಅನುಷ್ಠಾನದ ಯೋಜನೆಗಳನ್ನು ನವೀಕರಣ ಮಾಡುವ ಬಗ್ಗೆ ರಾಜ್ಯ ಸರ್ಕಾರದಿಂದ ನಿವೃತ್ತಿ ನೌಕರರಿಗೆ ಶುಭ ಸುದ್ದಿ ಹೊರಬಿದ್ದಿದೆ. 60 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಪಿಂಚಣಿ ನೀಡಲು ಸರ್ಕಾರ ನಿರ್ಧರಿಸಿದೆ.
ಆ ಪ್ರಕಾರವಾಗಿ ಈಗ ಸರ್ಕಾರಿ ನೌಕರರಿಗೆ ಸಿಗುತ್ತಿರುವ ಪಿಂಚಣಿ ಮೊತ್ತ ಇಂತಿದೆ ಈ ರೀತಿ ನಾಗರಿಕರ ಬೇಡಿಕೆ ವಿಷಯಗಳು ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ಪ್ರಣಾಳಿಕೆಯಲ್ಲಿ ಸೇರಿರುತ್ತವೆ ಮತ್ತು ಯಾವುದಾದರೂ ಸರ್ಕಾರದ ವಿರುದ್ಧ ಈ ರೀತಿ ಬೇಡಿಕೆ ಸಲ್ಲಿಸಿ ಈಡೇರಿದೆ ಇದ್ದಾಗ ವಿರೋಧಪಕ್ಷಗಳು ಅದನ್ನೇ ಅಸ್ತ್ರ ಮಾಡಿಕೊಂಡು ತಮ್ಮ ಸರ್ಕಾರ ಗೆದ್ದರೆ ತಕ್ಷಣವೇ ಜಾರಿಗೆ ತರುವುದಾಗಿ ಆಶ್ವಾಸನೆ ನೀಡಿರುತ್ತದೆ.
ಈಗ ಅಂತೆಯೇ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಇದೇ ಬಗ್ಗೆ ಅನೇಕ ಬೇಡಿಕೆಗಳಿಗೆ ಸರ್ಕಾರ ಅಸ್ತು ಎನ್ನುತ್ತಿದೆ ಮತ್ತು ಈ ಸೌಲಭ್ಯಗಳನ್ನು ಜಾರಿಗೆ ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ ವೃದ್ಯಾಪ್ಯ ವೇತನ ಪಿಂಚಣಿ ಪಡೆಯುತ್ತಿರುವವರು ಹಾಗೂ ನಿವೃತ್ತಿ ಪೆನ್ಷನ್ ಪಡೆಯುತ್ತಿರುವವರ ಪೆನ್ಷನ್ ಮತ್ತು ಪರಿಷ್ಕೃಕತಗೊಂಡಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ಕುರಿತು ಸರ್ಕಾರವು ದೊಡ್ಡ ನವೀಕರಣವನ್ನು ನೀಡಿದ್ದು ರಾಜ್ಯ ನೌಕರರ DA ಮತ್ತು DR ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ, ಉದ್ಯೋಗಿಗಳಿಗೆ 4% ಗ್ರಾಚ್ಯುಟಿ ಲಾಭವನ್ನು ನೀಡಲಾಗುತ್ತಿದ್ದು ಪಿಂಚಣಿದಾರರ ಪಿಂಚಣಿಯನ್ನು ಶೇ.5 ಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ ಪಿಂಚಣಿದಾರರ DR 38% ಕ್ಕೆ ಏರಿಕೆಯಾಗಿದೆ. ಇದು ಮಧ್ಯಪ್ರದೇಶದ 4 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಅನುಕೂಲವಾಗುತ್ತಿದೆ.
ಪಿಂಚಣಿದಾರರ DR38% ರಿಂದ 42% ಕ್ಕೆ ಹೆಚ್ಚಿಸುವಂತೆ ಛತ್ತೀಸ್‌ಗಢವು ಮಧ್ಯಪ್ರದೇಶ ಸರ್ಕಾರವನ್ನು ಒತ್ತಾಯಿಸಿದೆ, ಮತ್ತೆ 4% ರಷ್ಟು ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ಇದಕ್ಕೆ ಎರಡೂ ರಾಜ್ಯಗಳು ಒಪ್ಪಿಗೆ ನೀಡಿದರೆ ಜುಲೈ ತಿಂಗಳಿನಿಂದ ಪಿಂಚಣಿದಾರರಿಗೆ 9%ರಷ್ಟು DR ಸೌಲಭ್ಯ ದೊರೆಯಲಿದೆ.
ಸರ್ಕಾರ ಮಟ್ಟದಲ್ಲಿ ಈ ಬಗ್ಗೆ ಚಿಂತನೆ ನಡೆದಿದ್ದು ಮಧ್ಯಪ್ರದೇಶ ಸರ್ಕಾರ DR ಹೆಚ್ಚಳ ಕುರಿತು ಅಧಿಕೃತ ಆದೇಶ ಹೊರಡಿಸುವವರೆಗೆ ಕಾಯಬೇಕಿದೆ. ಸದ್ಯದಲ್ಲೇ ಮಧ್ಯಪ್ರದೇಶದಲ್ಲಿ ಈ ನಿಯಮ ಜಾರಿಯಾಗಲಿದ್ದು ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ ಇತರೆ ರಾಜ್ಯ ಸರ್ಕಾರವೂ ಈ ಯೋಜನೆಯನ್ನು ಜಾರಿಗೆ ತರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.