ಮನೆ ಕಟ್ಟಿಸುವುದು ಎನ್ನುವುದು ಬಹಳ ದೊಡ್ಡ ಜವಾಬ್ದಾರಿ, ಇದು ದೊಡ್ಡ ಯೋಜನೆ, ಮನೆ ಕಟ್ಟಿಸುವಾಗ ಹಣಕಾಸಿನ ಸಮಸ್ಯೆಗಳು ಮಾತ್ರವಲ್ಲದೆ ನೂರಾರು ರೀತಿಯ ಅಡೆತಡೆಗಳು ಕೂಡ ಬರುತ್ತವೆ. ಅಕ್ಕ ಪಕ್ಕದವರ ಜೊತೆ ಜಾಗಕ್ಕೆ ಸಂಬಂಧಿಸಿದ ತಕರಾರಿನ ಸಮಸ್ಯೆಗಳು ಮತ್ತು ಸರ್ಕಾರದಿಂದ ಮನೆ ಕನ್ಸ್ಟ್ರಕ್ಷನ್ ಮಾಡಲು ಅನೇಕ ಪರ್ಮಿಷನ್ ಗಳನ್ನು ತೆಗೆದುಕೊಳ್ಳಬೇಕು.
ಈ ಅಪ್ರೂವಲ್ ಗಳು ತೆಗೆದುಕೊಳ್ಳದೆ ಇದ್ದಾಗ ಅನೇಕ ಬಗೆಯ ತೊಡಕುಗಳು ಎದುರಾಗುತ್ತವೆ. ಹಾಗಾಗಿ ಮನೆ ಕಟ್ಟಿಸಿಕೊಳ್ಳುವುದು ಹಳ್ಳಿಯಲ್ಲಿ ಇರಲಿ ನಗರ ಪ್ರದೇಶಗಳಲ್ಲೇ ಆಗಲಿ ಯಾವೆಲ್ಲ ಪರ್ಮಿಷನ್ ಗಳನ್ನು ತೆಗೆದುಕೊಳ್ಳಬೇಕು ಎನ್ನುವ ವಿಷಯವು ಎಲ್ಲರಿಗೂ ತಿಳಿದಿರಬೇಕು. ಈ ಪ್ರಕ್ರಿಯೆ ಹೇಗೆ ನಡೆಯಬೇಕು ಎನ್ನುವುದರ ಕುರಿತು ಕೆಲ ಅಗತ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಮೊದಲಿಗೆ ಮನೆ ಕಟ್ಟಿಸಬೇಕು ಎನ್ನುವ ಪ್ಲಾನ್ ಹೊಂದಿರುವವರು ಎರಡು ತಿಂಗಳ ಮುಂಚೆ ಉದಾಹರಣೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿದ್ದರೆ BBMP Plan Sanction ತೆಗೆದುಕೊಳ್ಳಬೇಕು. ಎಲ್ಲಾ ದಾಖಲೆ ಸರಿ ಇದ್ದರೆ ಇದು 20 ದಿನಗಳೊಳಗೆ ಮುಗಿಯುತ್ತದೆ. ಇಲ್ಲವಾದರೆ ದಾಖಲೆಗಳನ್ನು ಸರಿಪಡಿಸಿಕೊಂಡು ತಿದ್ದುಪಡಿ ಮಾಡಿಸಿಕೊಂಡು ಅದನ್ನು ಸಿಸ್ಟಂನಲ್ಲಿ ಅಪ್ಲೋಡ್ ಮಾಡಿ ಅಪ್ರೂವಲ್ ನೀಡುವುದರ ಒಳಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ.
ಈ ಸುದ್ದಿ ಓದಿ:- ಮೆಡಿಸನ್ ಇಲ್ಲದೆ ಕ್ಯಾನ್ಸರ್ ವಾಸಿ ಮಾಡಬಹುದು.! ಒಮ್ಮೆ ಈ ಮಾಹಿತಿ ನೋಡಿ…
ಹಾಗಾಗಿ ಬಹಳ ಬೇಗ ಪರ್ಮಿಷನ್ ಗಾಗಿ BBMP ಗೆ ಅರ್ಜಿ ಹಾಕಿ. ಎ-ಖಾತಾ ಅಥವಾ ಕನ್ವರ್ಷನ್ ಆಗಿರದ ಸೈಟ್ ಗಳಾಗಿದ್ದರೆ BBMP, ಬಿ-ಖಾತಾ ಅಥವಾ ರೆವೆನ್ಯೂ ಸೈಟ್ ಗಳಾಗಿದ್ದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಸೈಟ್ ಗಳಾಗಿದ್ದರೆ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಹಾಕಬೇಕು.
ಕೆಲವೊಮ್ಮೆ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬರುವವರು ಇದನ್ನು ನಿರ್ಲಕ್ಷಿಸುತ್ತಾರೆ ಈ ರೀತಿ ಮಾಡುವಂತಿಲ್ಲ BBMP ವ್ಯಾಪ್ತಿಗೆ ಬರುವವರಿಗೆ ಪರ್ಮಿಷನ್ ಕಡ್ಡಾಯ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬರುವವರಿಗೆ ಕೂಡ ಪರ್ಮಿಷನ್ ತೆಗೆದುಕೊಳ್ಳಬೇಕು ಎನ್ನುವ ನಿಯಮ ಇದೆ.
ಹಳೆ ಮನೆಗಳು ಇದ್ದರೆ ಅದನ್ನು ಡೆಮಾಲಿಷ್ ಮಾಡಲು ಕೂಡ ಪರ್ಮಿಷನ್ ತೆಗೆದುಕೊಳ್ಳಬೇಕು. ಇದಕ್ಕೆ ಅಪ್ರುವಲ್ ಎಂದು ಏನು ಇರುವುದಿಲ್ಲ. ಯಾವ ಸಮಯದಲ್ಲಿ ಡೆಮಾಲಿಷ್ ಮಾಡುತ್ತೇವೆ ಎನ್ನುವುದನ್ನು ಹೇಳಿರಬೇಕು ಹಗಲಿನ ಸಮಯದಲ್ಲಿ ಆದರೆ ಟ್ರಾಫಿಕ್ ಪ್ರಾಬ್ಲಮ್ ಆಗುತ್ತದೆ.
ಈ ಸುದ್ದಿ ಓದಿ:- ಪಿಂಚಣಿ ಹಣ ನಿಯಮ ಬದಲಾವಣೆ ಇನ್ನು ಮುಂದೆ 60 ವರ್ಷ ಮೇಲ್ಪಟ್ಟವರ ಪಿಂಚಣಿ 5% ರಷ್ಟು ಹೆಚ್ಚಳ…
ಅದರ ಬಗ್ಗೆ ಗಮನವಿರಬೇಕು ಮತ್ತು ಇದು ಯಾವ ಏರಿಯಾ ಕಡೆ ಇದೆ ಎಂಬ ನಿರ್ಧಾರ ಆಗುತ್ತದೆ ಮತ್ತು ಪೊಲೀಸರಿಗೆ ನೀವೇ ಅಕ್ಕಪಕ್ಕದವರು ಬಂದು ಪ್ರಶ್ನೆ ಮಾಡಿ ತೊಂದರೆ ಮಾಡಬಹುದು ಅದಕ್ಕಾಗಿ ಮೊದಲು ಪೊಲೀಸ್ ಪರ್ಮಿಷನ್ ಇದ್ದರೆ ಒಳ್ಳೆಯದು. ಡೆಮಾಲಿಶ್ ಮಾಡುವಾಗಲೂ ಕೂಡ ಯಾವುದೇ ರಿಸ್ಕ್ ಆಗದಂತೆ ರಕ್ಷಣಾ ಕ್ರಮಗಳನ್ನು ಕೈಗೊಂಡು ಮುಂದುವರೆಯಬೇಕು.
ಡೆಮಾಲಿಶ್ ಆದ ನಂತರ ಬಂದು ಆ ಸ್ಥಳದಲ್ಲಿ ಮಾಲೀಕನ ಫೋಟೋ ಕೂಡ ತೆಗೆದುಕೊಂಡು ಹೋಗುತ್ತಾರೆ. ಯಾಕೆಂದರೆ ಡೆಮಾಲಿಶ್ ಮಾಡದೆ ಪರ್ಮಿಷನ್ ತೆಗೆದುಕೊಂಡು ಅದರ ಮೇಲೆ ಹೊಸ ಕಟ್ಟಡ ಕಟ್ಟುವವರು ಇದ್ದಾರೆ. ಆ ಕಟ್ಟಡಗಳು ಹಳೆ ಸ್ಟ್ರಕ್ಚರ್ ಹೊಂದಿರುತ್ತವೆ ಮತ್ತು ಬಹಳ ಹಳೆಯ ಕಟ್ಟಡಗಳು ಆಗಿದ್ದರೆ ಅದಕ್ಕೆ ವಾಸಿಸಲು ಅನುಮತಿ ಇರುವುದಿಲ್ಲ ಇದೆಲ್ಲ ಮುಂದೆ ತೊಂದರೆ ಆಗಬಾರದು ಎಂದು ಬಂದು ಚೆಕ್ ಮಾಡುತ್ತಾರೆ.
ಸ್ಯಾಂಕ್ಷನ್ ಪರ್ಮಿಷನ್ ತೆಗೆದುಕೊಂಡ ಮೇಲೆ ಅವರು ನೀಡಿರುವ ಅವಧಿ ಒಳಗಡೆ ಶುರು ಮಾಡಬೇಕು. ಉದಾಹರಣೆಗೆ, ಎರಡು ವರ್ಷಗಳ ಸಮಯ ಕೊಟ್ಟಿದ್ದಾರೆ ಅಷ್ಟರ ಒಳಗಡೆ ಶುರು ಮಾಡಬೇಕು ಎರಡು ವರ್ಷಗಳಾದ ನಂತರ ಶುರು ಮಾಡಿದರೆ ಮತ್ತೆ ತೊಂದರೆ ಆಗುತ್ತದೆ. ಆಗ ನೀವು ಹೊಸದಾಗಿ ಅರ್ಜಿ ಹಾಕಿ ಮತ್ತೆ ಆರಂಭಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಕೇವಲ 10 ಲಕ್ಷದಲ್ಲಿ ಕಟ್ಟಿರುವ ಮನೆ.! ಕಮ್ಮಿ ಬಜೆಟ್ ನಲ್ಲಿ ಅಚ್ಚುಕಟ್ಟಾದ ಮನೆ ನಿರ್ಮಾಣ ಮಾಡಬೇಕು ಅನ್ನುವವರು ನೋಡಿ ಇಲ್ಲಿದೆ ಸಂಪೂರ್ಣ ಮಾಹಿತಿ.!
ಹಣ ಮತ್ತು ಕಚೇರಿಗೆ ಓಡಾಡಿದ್ದ ಸಮಯ ವ್ಯರ್ಥವಾಗುತ್ತದೆ ಹಾಗಾಗಿ ಸ್ಯಾಂಕ್ಷನ್ ಆರ್ಡರ್ ತೆಗೆದುಕೊಂಡ ತಕ್ಷಣವೇ ಕೆಲಸ ಆರಂಭಿಸಬೇಕು. ಇದಿಷ್ಟೇ ಅಲ್ಲದೆ ಇನ್ನು ಬಹಳಷ್ಟು ಮುಖ್ಯವಾದ ಪರ್ಮಿಷನ್ ಗಳನ್ನು ತೆಗೆದುಕೊಳ್ಳುವುದು ಇದೆ. ಒಳಚರಂಡಿ, ಕೈಗಾರಿಕಾ ಪ್ರದೇಶ ವ್ಯಾಪ್ತಿಗೆ ಇದೆಯೇ ಕೆಪಿಟಿಸಿಎಲ್ ಗೆ ಸೇರಿದೆಯೇ ಅಥವಾ ಅರಣ್ಯ ಪ್ರದೇಶದಲ್ಲಿ ಇದೆಯೇ ಎಂದು ಪರಿಶೀಲನೆ ಮಾಡಿಸಿ ಸಂಬಂಧಪಟ್ಟ ಕಚೇರಿಗಳಿಂದ NOC ತೆಗೆದುಕೊಳ್ಳಬೇಕು.
ಇನ್ನು ಸಾಕಷ್ಟು ಪ್ರೊಸೀಜರ್ ಇದೆ ಇದನ್ನೆಲ್ಲ ಸುಲಭ ಮಾಡಲು ಈಗ ಅನೇಕ ಕನ್ಸ್ಟ್ರಕ್ಷನ್ ಕಂಪನಿಗಳು ಹೊಣೆ ಹೊತ್ತುಕೊಂಡಿವೆ, ಗೈಡ್ ಮಾಡುತ್ತಿವೆ. ಆದರೆ ಇದು ಮಾಲೀಕನದ್ದೇ ಜವಬ್ದಾರಿಯಾಗಿರುತ್ತದೆ. ಇನ್ನು ಯಾವೆಲ್ಲಾ ಪರ್ಮಿಷನ್ ತೆಗೆದುಕೊಳ್ಳಬೇಕು ಎನ್ನುವುದನ್ನು ವಿಸ್ತಾರವಾಗಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.