ಸಾರಥಿ ವಾಹನ ಯೋಜನೆ 2023-24 ಅರ್ಜಿ ಸಲ್ಲಿಸಿದವರಿಗೆ ಸಿಗಲಿದೆ ವಾಹನಗಳ ಖರೀದಿ ಮೇಲೆ 3 ಲಕ್ಷ ರೂ. ಸಬ್ಸಿಡಿ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (CM Siddaramaiah) ಅವರು ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಗಳ ಜಾರಿ ಜೊತೆಗೆ ಗ್ಯಾರಂಟಿಯೇತರವಾದ ಹಲವು ಯೋಜನೆಗಳನ್ನು ಕೂಡ ಕೈಗೆತ್ತಿಕೊಂಡಿದ್ದಾರೆ.
ಸ್ವಯಂ ಉದ್ಯೋಗ ಮಾಡಲು ಯುವ ಜನತೆಗಾಗಿ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಗೂಡ್ಸ್, ಟ್ಯಾಕ್ಸಿ, ಮಿನಿ ಟ್ರಕ್ ಮುಂತಾದ ವಾಹನಗಳನ್ನು ಖರೀದಿಸಿ ಇವುಗಳ ಮೂಲಕ ದುಡಿಮೆ ಮಾಡುವವರಿಗೆ ಈ ವಾಹನಗಳ ಖರೀದಿಗೆ ಶೇಕಡ 50%ರಷ್ಟು ಸಬ್ಸಿಡಿ ಅಥವಾ 3 ಲಕ್ಷದವರೆಗೆ ಸಹಾಯಧನ ನೀಡಲು (Subsidy for Vehicle purchase) ಸರ್ಕಾರ ಮುಂದಾಗಿದೆ.
ಸೆಪ್ಟೆಂಬರ್ 1 ರಿಂದ 587 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!
ಈ ಹಿಂದೆ ರಾಜ್ಯದಲ್ಲಿ ಐರಾವತ ಯೋಜನೆಯೆಂಬ ಇದೇ ಮಾದರಿಯ ಯೋಜನೆ ಜಾರಿಯಲ್ಲಿತ್ತು. ಈಗ ಅದರ ಬದಲು ಈಗ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತರಲಾಗಿದ್ದು ಅಲ್ಪಸಂಖ್ಯಾತ ವರ್ಗದ ಯುವಜನತೆ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಯೋಜನೆ ಕುರಿತು ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಯೋಜನೆ ಹೆಸರು:- ಸ್ವಾವಲಂಬಿ ಸಾರಥಿ ಯೋಜನೆ 2023-24.
ಅರ್ಹತಾ ಮಾನದಂಡಗಳು :-
● ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
● ಅರ್ಜಿದಾರರು 21 ರಿಂದ 55 ವರ್ಷ ವಯಸ್ಸಿನ ಒಳಗಿನವರಾಗಿರಬೇಕು.
● ಅರ್ಜಿದಾರರ ಕುಟುಂಬದವರು ಕೇಂದ್ರ ಅಥವಾ ರಾಜ್ಯ ಸರ್ಕಾರದ ನೌಕರರಾಗಿದ್ದರೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
● ಅರ್ಜಿದಾರರು ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಾಗಿರಬೇಕು.
● ಅರ್ಜಿದಾರರ ಕುಟುಂಬದವರು ಕಳೆದ 5 ವರ್ಷದಲ್ಲಿ ನಿಗಮದಿಂದ ಯಾವುದಾದರು ಸೌಲಭ್ಯವನ್ನು ಪಡೆದಿದ್ದರೆ ಅವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
● ಅರ್ಜಿದಾರರ ಕುಟುಂಬದ ಆದಾಯವು ಎಲ್ಲಾ ಮೂಲಗಳಿಂದ ವಾರ್ಷಿಕವಾಗಿ 4.50 ಲಕ್ಷಕ್ಕಿಂತ ಕಡಿಮೆ ಇರಬೇಕು.
● ಅರ್ಜಿದಾರರು ಕಡ್ಡಾಯವಾಗಿ ಪ್ರಾದೇಶಿಕ ಸಾರಿಗೆ ಕಛೇರಿಯಿಂದ ಚಾಲನ ಪರವಾನಗಿ ಹೊಂದಿರಬೇಕು.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಪ್ಯಾನ್ ಕಾರ್ಡ್
● ನಿವಾಸ ಪ್ರಮಾಣಪತ್ರ
● ಮೊಬೈಲ್ ನಂಬರ್
● ಪಾಸ್ಪೋರ್ಟ್ ಗಾತ್ರದ ಫೋಟೋ
● ಬ್ಯಾಂಕ್ ಪಾಸ್ಬುಕ್ ವಿವರ
● ಜಾತಿ ಪ್ರಮಾಣ ಪತ್ರ
● ಆದಾಯ ಪ್ರಮಾಣ ಪತ್ರ
● ಅಲ್ಪಸಂಖ್ಯಾತರ ಪ್ರಮಾಣಪತ್ರ
● ವಾಹನ ಖರೀದಿಸಿರುವ ಕೊಟೇಶನ್
● ಸ್ವಯಂ ಘೋಷಣೆ ಪತ್ರ
ಸ್ವಾವಲಂಬಿ ಸಾರಥಿ ಯೋಜನೆಯ ಪ್ರಯೋಜನಗಳು:-
● ಅಲ್ಪಸಂಖ್ಯಾತರ ವರ್ಗದ ನಿರುದ್ಯೋಗಿ ಯುವ ಜನತೆಗೆ ಉದ್ಯೋಗಾವಕಾಶ ಸಿಗುತ್ತದೆ.
● ಸ್ವಯಂ ಉದ್ಯೋಗ ಆರಂಬಿಸುವ ಯುವಕರಿಗೆ ನಾಲ್ಕು ಚಕ್ರ ವಾಹನಗಳನ್ನು ಖರೀದಿಸಲು 50% ಗರಿಷ್ಠ 3 ಲಕ್ಷದವರೆಗೆ ಸಹಾಯಧನ ಸಿಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
● ಸ್ವಾವಲಂಬಿ ಸಾರಥಿ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
kmdconline.karntaka.gov.in ಭೇಟಿ ಕೊಡಿ.
● ಮುಖಪುಟದಲ್ಲಿ, ಆನ್‌ಲೈನ್ ಅರ್ಜಿ ಸಲ್ಲಿಸಲು ಆಪ್ಷನ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿ.
● ಸ್ಕ್ರೀನ್ ಮೇಲೆ ನೀಡಲಾದ ಸೂಚನೆಗಳ ಪ್ರಕಾರ ಸ್ವಾವಲಂಬಿ ಸಾರಥಿ ಯೋಜನೆಯ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ.
● ವೈಯುಕ್ತಿಕ ಮಾಹಿತಿ, ವಿಳಾಸ, ದಾಖಲೆಗಳು ಮತ್ತು ಬ್ಯಾಂಕ್ ವಿವರಗಳಂತಹ ಅಗತ್ಯ ವಿವರಗಳನ್ನು ನಮೂದಿಸಿ.
● ಕೊಟ್ಟಿರುವ ಫೀಲ್ಡ್‌ಗಳಲ್ಲಿ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ ಮತ್ತು ಸಲ್ಲಿಸು ಬಟನ್ ಕ್ಲಿಕ್ ಮಾಡಿ.
● ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ನೋಂದಣಿಯ ನಂತರ, ಅರ್ಜಿ ನಮೂನೆಯ ಪ್ರಿಂಟ್ ಔಟ್ ತೆಗೆದುಕೊಳ್ಳಿ. ಇದು ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ.
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 30.09.2023