ಮೇಲೆ ಹೇಳಿದಂತೆ ಪ್ರತಿಯೊಬ್ಬರಿಗೂ ಕೂಡ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆಯಾಗಿರುತ್ತದೆ. ಏಕೆಂದರೆ ಪ್ರತಿಯೊಬ್ಬರಿಗೂ ಕೂಡ ಇತ್ತೀಚಿನ ದಿನದಲ್ಲಿ ಯಾವುದೇ ರೀತಿಯ ಅಪ್ಲಿಕೇಶನ್ ಗಳಾಗಿರಬಹುದು, ಮಕ್ಕಳನ್ನು ಶಾಲೆಗೆ ಸೇರಿಸುವುದಕ್ಕಾ ಗಿರಬಹುದು, ಹೀಗೆ ರೈತರಿಗೆ ಪ್ರತಿಯೊಬ್ಬರಿಗೂ ಕೂಡ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯಕತೆ ಇದೆ. ಆದ್ದರಿಂದ ಅವರು ತಮ್ಮ ಎಲ್ಲಾ ಅಗತ್ಯ ದಾಖಲಾತಿಗಳನ್ನು ಕೊಟ್ಟು ಇವೆರಡು ಪ್ರಮಾಣ ಪತ್ರಗಳನ್ನು ಮಾಡಿಸಿಕೊಂಡಿರುತ್ತಾರೆ.
ಆದರೆ ಕೆಲವೊಮ್ಮೆ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಅರ್ಜಿಯನ್ನು ಹಾಕುವಂತಹ ಸಮಯದಲ್ಲಿ ಅವರು ಒಂದು ಆರ್ ಡಿ ನಂಬರ್ ಕೊಡುತ್ತಾರೆ. ಆದರೆ ಕೆಲವೊಮ್ಮೆ ಕೆಲವೊಬ್ಬರು ಆ ಆರ್ ಡಿ ನಂಬರ್ ಅನ್ನು ಹಾಳು ಮಾಡಿಕೊಂಡಿರುತ್ತಾರೆ, ಆದರೆ ಹೆಚ್ಚಿನ ಜನ ಇದು ಹಾಳಾದರೆ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ ದುಡ್ಡಿನ ಆಸೆಗೆ ಮತ್ತೆ ನೀವು ಇದನ್ನು ಮಾಡಿಸಲೇಬೇಕು ಎಂದು ಹೇಳಿರುತ್ತಾರೆ.
ಆದರೆ ಅದು ತಪ್ಪು ಬದಲಿಗೆ ಆರ್‌ಡಿ ನಂಬರ್ ಇಲ್ಲದೆ ಇದ್ದರೂ ಕೂಡ ಈ ಒಂದು ಅರ್ಜಿಯನ್ನು ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳನ್ನು ಕೊಟ್ಟಿರುತ್ತೀರೋ ಅದರ ಒಂದು ನಂಬರ್ ಇದ್ದರೆ ಸಾಕು ನೀವು ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿ ರುತ್ತದೆ. ಹಾಗಾದರೆ ಆರ್‌ಡಿ ನಂಬರ್ ಕಳೆದು ಹೋಗಿದ್ದರು ಕೂಡ ಹೇಗೆ ಇವೆರಡು ಪ್ರಮಾಣ ಪತ್ರಗಳನ್ನು ತೆಗೆದುಕೊಳ್ಳುವುದು.
ಇದಕ್ಕೆ ಅನುಸರಿಸಬೇಕಾದಂತಹ ವಿಧಾನಗಳು ಯಾವುದು ಎನ್ನುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ನೀವು ಆನ್ಲೈನ್ ಮುಖಾಂತರ ಯಾವುದೇ ಒಂದು ಅರ್ಜಿಯನ್ನು ಹಾಕಿದರೂ ಕೂಡ ಅದಕ್ಕೆ ಒಂದು ನಂಬರ್ ಕೊಡುತ್ತಾರೆ ಆ ನಂಬರ್ ಇದ್ದರೆ ಮಾತ್ರ ಅವರ ಅಪ್ಲಿಕೇಶನ್ ಗಳು ಬರುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಆ ನಂಬರ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಆದರೆ ಈಗ ಆರ್‌ಡಿ ನಂಬರ್ ಹಾಳಾಗಿದ್ದರೆ ಹೇಗೆ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ಪಡೆದುಕೊಳ್ಳುವುದು ಎಂದು ನೋಡುವುದಾದರೆ ಇವೆರಡು ಅರ್ಜಿಯನ್ನು ಹಾಕುವಂತಹ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಮತ್ತು ರೇಷನ್ ಕಾರ್ಡ್ ನಂಬರ್, ಮೊಬೈಲ್ ನಂಬರ್ ಹೀಗೆ ಕೆಲವೊಂದು ದಾಖಲಾತಿಗಳನ್ನು ಕೊಟ್ಟು ಅಪ್ಲಿಕೇಶನ್ ಹಾಕಿರುತ್ತೀರಾ.
ಆದರೆ ಆರ್‌ಡಿ ನಂಬರ್ ಹಾಳಾದಂತಹ ಸಮಯದಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಅನ್ನು ನಾಡ ಕಛೇರಿ ವೆಬ್ಸೈಟ್ ಗೆ ಹೋಗಿ ಅಲ್ಲಿ ನ್ಯೂ ರಿಕ್ವೆಸ್ಟ್ ಆಪ್ಶನ್ ಮೇಲೆ ಓಕೆ ಮಾಡಿದರೆ,ಅಲ್ಲಿ ನಿಮಗೆ ಯಾವ ಪ್ರಮಾಣ ಪತ್ರ ಎಂದು ಕೇಳುತ್ತದೆ ಆಗ ನೀವು ಅದನ್ನು ಓಕೆ ಮಾಡಿ ಅಲ್ಲಿ ನಿಮ್ಮ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ನಂಬರ್ ಕೇಳುತ್ತದೆ.
ಆ ಸಮಯದಲ್ಲಿ ನೀವು ಆ ನಂಬರ್ ಹಾಕಿದರೆ ನಿಮಗೆ ಜಾತಿ ಪ್ರಮಾಣ ಪತ್ರ ಅಥವಾ ಆದಾಯ ಪ್ರಮಾಣ ಪತ್ರದ ಆರ್ಡಿ ನಂಬರ್ ತೋರಿಸುತ್ತದೆ ನಂತರ ಅದನ್ನು ತೆಗೆದು ಕೊಂಡು ನೀವು ಈ ಪ್ರಮಾಣ ಪತ್ರಗಳನ್ನು ಸುಲಭವಾಗಿ ಪಡೆಯ ಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.