ಕೇಂದ್ರ ಸರ್ಕಾರದಿಂದ ರೈತರಿಗೆ ಮತ್ತೊಂದು ಸಿಹಿಸುದ್ದಿ. ನಿಮ್ಮ ಜಮೀನು ಅಥವಾ ಹೊಲ ಗದ್ದೆ ಯಾವುದೇ ಕೃಷಿ ಭೂಮಿಗೆ ತಂತಿ ಬೇಲಿ ಹಾಕಲು 90% ಸಬ್ಸಿಡಿ ನೀಡುತ್ತಿದ್ದಾರೆ. ಕೂಡಲೇ ಅರ್ಜಿ ಹಾಕಿ.

 

WhatsApp Group Join Now
Telegram Group Join Now

ರೈತರನ್ನು ನಮ್ಮ ದೇಶದ ಬೆನ್ನೆಲುಬು, ಅನ್ನದಾತರು ಎಂದು ಕರೆಯಲಾಗುತ್ತದೆ. ರೈತನು ಜಮೀನಿನಲ್ಲಿ ಬೆಳೆ ಬೆಳೆಯದಿದ್ದರೆ ಮನುಷ್ಯ ಕುಲಕ್ಕೆ ಆಹಾರವೇ ಸಿಗುವುದಿಲ್ಲ. ರೈತರು ಜಮೀನುಗಳಲ್ಲಿ ಬಿತ್ತನೆ ಮಾಡಿ ಬೆಳೆ ಬೆಳೆದು ಅದನ್ನು ಮಾರುವಾಗ ಆ ಬೆಳೆಗೆ ಸರಿಯಾದ ಬೆಲೆ ಸಿಕ್ಕರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಂತೆ ಆಗುತ್ತದೆ. ಆದರೆ ಕೆಲವು ವೇಳೆ ರೈತ ತಾನು ಬೆಳೆದು ಲಾಭ ಪಡೆಯುವುದಕ್ಕಿಂತ ಅಧಿಕ ನಷ್ಟವನ್ನೆ ಅನುಭವಿಸಿರುತ್ತಾನೆ.

ಇಂತಹ ಸಂದರ್ಭದಲ್ಲಿ ರೈತರು ಬೇಸರಗೊಂಡು ವ್ಯವಸಾಯ ಮಾಡುವುದನ್ನೇ ಬಿಟ್ಟುಬಿಡುತ್ತಾರೆ. ಈಗಾಗಲೇ ಇಂತಹ ಹಲವಾರು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಅಲ್ಲದೆ ರೈತ ತಾನು ಬೆಳೆದ ಬೆಳೆಗಳನ್ನು ಕಾಪಾಡಿಕೊಳ್ಳುವುದು ಒಂದು ಸವಾಲಾಗಿಯೇ ಇದೆ. ಇತ್ತೀಚಿನ ದಿನಗಳಲ್ಲಿ ಬೆಳೆಗಳನ್ನು ರಕ್ಷಿಸುವುದು ರೈತರಿಗೆ ಗಂಭೀರ ಸಮಸ್ಯೆ ಆಗಿದೆ.

ಏಕೆಂದರೆ ಕಾಡು ಪ್ರಾಣಿಗಳಿಂದ ಬೆಳೆದು ನಿಂತಿರುವ ಬೆಳೆಗಳಿಗೆ ಹಾನಿಯಾಗುವ ಸಂಭವವೇ ಹೆಚ್ಚಾಗಿದೆ. ಕಾಡು ಪ್ರಾಣಿಗಳು ರೈತರ ಶ್ರಮದಿಂದ ಬೆಳೆದು ನಿಂತಿರುವ ಬೆಳೆಗಳನ್ನು ನಾಶ ಮಾಡುತ್ತಾ ಇರುವುದನ್ನು ದಿನೇ ದಿನೇ ಸಾಮಾನ್ಯವಾಗಿ ನೋಡುತ್ತಿದ್ದೇವೆ. ಇದರಿಂದಾಗಿ ರೈತರ ಇಳುವರಿಗೂ ಸಹ ಹೆಚ್ಚಿನ ಪರಿಣಾಮ ಬೀರುತ್ತದೆ. ಆದ್ದರಿಂದ ರೈತನು ತನ್ನ ಜಮೀನಿಗೆ ಸುತ್ತಲೂ ತಂತಿ ಬೇಲಿಗಳನ್ನು ಹಾಕಿಸಿ ಕಾಡು ಪ್ರಾಣಿಗಳಿಂದ ಬೆಳೆಯನ್ನು ಕಾಪಾಡಿಕೊಳ್ಳ ಬಹುದಾಗಿದೆ.

ಆದರೆ ರೈತನು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಸಮಸ್ಯೆಯನ್ನು ದೇಶದ ಬಹುತೇಕ ರಾಜ್ಯಗಳಲ್ಲಿ ಕಾಣಬಹುದಾಗಿದೆ. ಆದ್ದರಿಂದ ಸಮಸ್ಯೆಯನ್ನು ಪರಿಹರಿಸಲು ರೈತರ ಶ್ರಮಕ್ಕೆ ಉತ್ತಮ ಪ್ರತಿಫಲ ಪಡೆಯುವಂತೆ ಮಾಡಲು ಅನೇಕ ರಾಜ್ಯ ಸರ್ಕಾರಗಳು ತಮ್ಮ ಮಟ್ಟದಲ್ಲಿ ಬೆಳೆ ರಕ್ಷಣೆಗಾಗಿ ವಿವಿಧ ರೀತಿಯ ಆರ್ಥಿಕ ನೆರವು ಯೋಜನೆಗಳನ್ನು ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ.

ರೈತರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ರೈತರಿಗೆ ಸಹಾಯವಾಗುವಂತೆ ಹಲವಾರು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈಗಾಗಲೇ ಜಾರಿಗೆ ತಂದಿವೆ. ಅದರಲ್ಲಿ ರೈತರಿಗೆ ಕಾಡು ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಪರಿಹಾರ ನೀಡುವುದಕ್ಕಾಗಿ ಕೇಂದ್ರ ಸರ್ಕಾರವು ಕಬ್ಬಿಣ ತಂತಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಲ್ಲದೆ ಈ ಹಿಂದೆ ಸರ್ಕಾರವು 2020 ರಲ್ಲಿ ಸ್ಯಾಮ್‌ ಯೋಜನೆಯನ್ನು ಜಾರಿಗೆ ತಂದಿತ್ತು.

ಈ ಯೋಜನೆಯಡಿ ಕೃಷಿ ಉಪಕರಣಗಳನ್ನು ಖರೀದಿಸಲು ರೈತರಿಗೆ ಸಹಾಯ ಮಾಡಲಾಗಿತ್ತು. ಪ್ರಸ್ತುತ ರೈತರಿಗೆ ತಂತಿ ಬೇಲಿ ಯೋಜನೆಯನ್ನು ಜಾರಿಗೊಳಿಸಿ ಇದರಲ್ಲಿ ಶೇಕಡಾ 90% ರಷ್ಟು ಸಬ್ಸಿಡಿ ನೀಡುವುದರ ಮೂಲಕ ಸರ್ಕಾರವು ರೈತರಿಗೆ ನೆರವಾಗಿದೆ.

ತಂತಿ ಬೇಲಿಯಿಂದ ಪ್ರಯೋಜನಗಳು :
* ಕಬ್ಬಿಣದ ತಂತಿಯನ್ನು ಹಾಕಿಸುವುದರಿಂದಾ ತಂತಿಯ ಕಂಪನಗಳು ಕಾಡು ಪ್ರಾಣಿಗಳಿಂದ ರೈತನ ಕೃಷಿ ಭೂಮಿಯನ್ನು ಸುರಕ್ಷಿತವಾಗಿಸುತ್ತದೆ.
* ರೈತನು ತನ್ನ ಜಮೀನಿನ ಅಳತೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬಹುದು.
* OBC ಹಾಗೂ SC – ST ಸಮುದಾಯಕ್ಕೆ ಸೇರಿದ ಜನರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ತಂತಿ ಬೇಲಿ‌ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು :

#ಆಧಾರ್‌ ಕಾರ್ಡ್‌
#ಮತದಾರರ ಗುರುತಿನ ಕಾರ್ಡ್‌
#ಚಾಲನಾ ಪರವಾನಗಿ
#ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ
#ಮೊಬೈಲ್ ಸಂಖ್ಯೆ

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now