ಪ್ರತಿ ತಿಂಗಳ ಆರಂಭ ಹಾಗೂ ವರ್ಷದ ಅಂತ್ಯದಲ್ಲಿ ದೇಶದ ಆಡಳಿತಕ್ಕೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳು ಬದಲಾಗುತ್ತವೆ. ಆ ಬಗೆಯಾಗಿ ನಾವೀಗ ಫೆಬ್ರವರಿ ತಿಂಗಳ ಆರಂಭದಲ್ಲಿದ್ದೇವೆ. ಈ ಕುರಿತ ಮತ್ತೊಂದು ಮಹತ್ವದ ವಿಷಯವೇನೆಂದರೆ, ಪ್ರತಿ ವರ್ಷವು ಫೆಬ್ರವರಿ ಆರಂಭದಲ್ಲಿ ಕೇಂದ್ರದಿಂದ ಬಜೆಟ್ ಮಂಡಿಸಲಾಗುತ್ತದೆ.
ಅಂತೆಯೇ ಫೆಬ್ರವರಿ 1, 2024 ರಂದು ಈ ವರ್ಷದ ಬಜೆಟ್ ಮಂಡನೆಯಾಗುತ್ತಿದ್ದು ಇದರೊಂದಿಗೆ ಹಲವಾರು ಮಹತ್ವದ ಬದಲಾವಣೆಗಳು ಜಾರಿಗೆ ಬರುವ ನಿರೀಕ್ಷೆ ಇದೆ. ಈ ಬದಲಾವಣೆಗಳು ನಿಮ್ಮ ಹಣಕಾಸಿನ ಮೇಲೆ ನೇರವಾಗಿ ಪರಿಣಾಮ ಬೀರುವಂತದ್ದಾಗಿರುವುದರಿಂದ ಅವುಗಳ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ & ಅನ್ನಭಾಗ್ಯ ಹಣ ಪಡೆಯಲು NPCI ಮಾಡಿಸುವುದು ಕಡ್ಡಾಯ.! NPIC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
1. RBI (Reserve Bank of India) ಫೆಬ್ರವರಿ 1, 2024 ರಿಂದ ಸಿಬಿಲ್ ಸ್ಕೋರ್ (CIBIL Score) ಮತ್ತು ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ. ಈ ನಿಯಮಗಳು ಸಾಲದ ಪ್ರಕ್ರಿಯೆಗಳು ಮತ್ತು ಬ್ಯಾಂಕಿಂಗ್ ಉದ್ಯಮದ ಮೇಲೆ ಪರಿಣಾಮ ಬೀರಲಿವೆ.
2. NPS (national Pension Scheme) ನಲ್ಲಿ ಕೆಲಸದ ಬದಲಾವಣೆ ಮಾಡಲಾಗುತ್ತಿದ್ದು, ಭಾಗಶಃ ಹಿಂತೆಗೆದುಕೊಳ್ಳುವಿಕೆ(Partial withdrawal) ಮತ್ತು ಕ್ವಾರ್ಟರ್-ಗಾತ್ರದ ಮೇಕ್ ಓವರ್ ಪಡೆಯಿರಿ
PFRDA NPS ಹಿಂತೆಗೆದುಕೊಳ್ಳುವಿಗೆ ಹೊಸ ಗಡಿ ರೂಪಿಸಲಾಗುತ್ತಿದೆ.
ಈ ಸುದ್ದಿ ಓದಿ:- ಕೇವಲ 5,000 ಕಟ್ಟಿ 5 ಲಕ್ಷ ಪಡೆದುಕೊಳ್ಳಿ, ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್.!
3. ಫೆಬ್ರವರಿ 1 ರಿಂದ, IMPS (Immediate Payment Service) ನಿಯಮ ಬದಲಾಗಿದೆ. ಗ್ರಾಹಕರು ಫಲಾನುಭವಿಯ ಹೆಸರನ್ನು ಸೇರಿಸಿದರೆ ಬ್ಯಾಂಕ್ ಖಾತೆಗಳ ನಡುವೆ ₹5 ಲಕ್ಷದವರೆಗೆ ಹಣವನ್ನು ವರ್ಗಾಯಿಸಬಹುದಾಗಿದೆ. ಇದು ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತಿದ್ದು ವೈಯಕ್ತಿಕ ಬಳಕೆದಾರರಿಗೆ ವಹಿವಾಟು ಶೀಘ್ರವಾಗಿ ಪೂರ್ಣಗೊಳ್ಳಲು ಹಾಗೂ ಸರಾಗವಾಗಿ ಜರುಗಲು ಅನುಕೂಲ ಮಾಡಿಕೊಡುತ್ತಿದೆ.
4. SBI ಗೃಹ ಸಾಲ (Home loan) ಅಭಿಯಾನವನ್ನು ಆರಂಭಿಸಿದೆ. ನಿಮ್ಮ ಕನಸಿನ ಮನೆಯನ್ನು SBI ನೆರವಿನಿಂದ ಖರೀದಿಸುವುದಕ್ಕೆ ಶುಭ ಸಮಯ. ಯಾಕೆಂದರೆ, ಎಲ್ಲಾ ಗೃಹ ಸಾಲಗಳ ಮೇಲೆ 65 BPS ವರೆಗೆ ರಿಯಾಯಿತಿ ನೀಡುತ್ತಿದೆ. ಈ ರಿಯಾಯಿತಿಗಳು ಫ್ಲೆಕ್ಸಿಪೇ, NRI ಮತ್ತು ಸಂಬಳ-ವರ್ಗದ ಸಾಲಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಗೃಹ ಸಾಲಗಳಿಗೆ ಅನ್ವಯಿಸುತ್ತದೆ. ಈ ಅಭಿಯಾನವು 2023 ರ ಡಿಸೆಂಬರ್ 31 ರವರೆಗೆ ಮಾತ್ರ ಲಭ್ಯವಿದೆ.
ಈ ಸುದ್ದಿ ಓದಿ:- ಕ್ರಯ ಮಾಡಿದ ಮಾರಾಟ ಪತ್ರವನ್ನು ರದ್ದುಗೊಳಿಸುವುದು ಹೇಗೆ ನೋಡಿ.!
5. ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ನಿಂದ (PSB) ಹೊಸ 444 ದಿನಗಳ FD ಯೋಜನೆ ಆರಂಭಿಸಲಾಗುತ್ತಿದೆ. ಈ ಯೋಜನೆಯು ಸಾಮಾನ್ಯ ಗ್ರಾಹಕರಿಗೆ 7.4%, ಹಿರಿಯ ನಾಗರಿಕರಿಗೆ 7.9% ಮತ್ತು ಸೂಪರ್ ಹಿರಿಯ ನಾಗರಿಕರಿಗೆ 8.05% ಬಡ್ಡಿದರವನ್ನು ನೀಡುತ್ತದೆ.
6. FASTag KYC ನ್ನು ಪೂರ್ತಿಗೊಳಿಸಲು ಜನವರಿ 31 ಕಡೆ ಗಡುವು. ಈ ಅವಧಿ ಒಳಗೆ ಪೂರ್ಣಗೊಳಿಸದಿದ್ದರೆ ಫೆಬ್ರವರಿ ಒಂದರಿಂದ KYC ಪೂರ್ತಿಗೊಳಿಸಿದವರ ಫಾಸ್ಟ್ಯಾಗ್ ನಿಷೇಧಿಸಲಾಗುತ್ತದೆ.
ಈ ಸುದ್ದಿ ಓದಿ:- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ವೇತನ 61,500/- ಆಸಕ್ತರು ಅರ್ಜಿ ಸಲ್ಲಿಸಿ.!
7. ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಶೀಘ್ರವಾಗಿ e-KYC ಮಾಡಿಸಲು ಸೂಚಿಸಲಾಗಿದೆ. ನವೆಂಬರ್ 25 ರಿಂದ ಈ ಪ್ರಕ್ರಿಯೆ ನಡೆಯುತ್ತಿತ್ತು ಉಜ್ವಲ ಯೋಜನೆ ಗ್ರಾಹಕರು ಇ-ಕೆವೈಸಿ ಮಾಡಿಸದೆ ಇದ್ದಲ್ಲಿ ಸಬ್ಸಿಡಿ ಇಂದ ವಂಚಿತರಾಗಲಿದ್ದಾರೆ.
ಇ-ಕೆವೈಸಿಯನ್ನು ಆನ್ಲೈನ್ ನಲ್ಲಿ ಗ್ರಾಹಕರೇ ಪೂರ್ತಿಗೊಳಿಸಲು ಅವಕಾಶವಿದೆ ಅಥವಾ ತಮ್ಮ ಗ್ಯಾಸ್ ಏಜೆನ್ಸಿಯ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮಾಡಬಹುದು. ಇದಕ್ಕೆ ಯಾವುದೇ ಕಡೆ ದಿನಾಂಕದ ಬಗ್ಗೆ ಸರ್ಕಾರ ತಿಳಿಸಿಲ್ಲ ಆದರೆ ಕೂಡಲೇ ಪೂರ್ತಿ ಗೊಳಿಸಿ ಎನ್ನುವ ಸೂಚನೆ ನೀಡಿದೆ.