ಯಾವುದೇ ಮನೆಗಳಿಗೆ ಆದರೂ ಕೂಡ ಮನೆಯ ಹಕ್ಕು ಪತ್ರ, ಮನೆ ನಕ್ಷೆ, ತೆರಿಗೆ ರಸೀದಿ ಮುಂತಾದ ದಾಖಲೆಗಳು ಇದ್ದೇ ಇರುತ್ತವೆ. ಒಂದು ವೇಳೆ ಈ ದಾಖಲೆಗಳು ಇಲ್ಲದೆ ಇದ್ದರೆ ನಿಮ್ಮ ಪಂಚಾಯಿತಿ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಇವುಗಳನ್ನು ಪಡೆಯಬಹುದು. ತಂದೆಯಿಂದ ಮಗನಿಗೆ ಮನೆ ಹಕ್ಕು ವರ್ಗಾವಣೆ ಮಾಡಲು ಈ ಮೇಲೆ ತಿಳಿಸಿದ ದಾಖಲೆಗಳು ಕಡ್ಡಾಯವಾಗಿ ಬೇಕಾಗಿರುತ್ತದೆ.
ಇವುಗಳ ಜೊತೆಗೆ ಇನ್ನು ಯಾವ ಹೆಚ್ಚುವರಿ ದಾಖಲೆಗಳನ್ನು ಕೇಳುತ್ತಾರೆ ಅರ್ಜಿ ಯಾವ ರೀತಿ ಸಲ್ಲಿಸಬೇಕು ಮತ್ತು ಎಲ್ಲಿ ಸಲ್ಲಿಸಬೇಕು ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ನೋಂದಣಿ ಖರ್ಚು ವೆಚ್ಚ ಎಷ್ಟು ನೋಂದಣಿ ಕಡ್ಡಾಯವೇ ಎನ್ನುವ ಉಪಯುಕ್ತ ಮಾಹಿತಿಯ ಬಗ್ಗೆ ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಇಂದಿನಿಂದ ಬ್ಯಾಂಕ್ ಅಕೌಂಟ್, ಸಿಲಿಂಡರ್, ಫಾಸ್ಟ್ ಟ್ಯಾಗ್ ನಿಯಮದಲ್ಲಿ ಬದಲಾವಣೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ತಂದೆಯಿಂದ ಮಗನಿಗೆ ಆಸ್ತಿ ಹಕ್ಕು ವರ್ಗಾವಣೆ ಮಾಡಿದ ಮೇಲೆ ರಿಜಿಸ್ಟರ್ ಮಾಡಬೇಕೆ ಎನ್ನುವುದು ಹಲವರ ಪ್ರಶ್ನೆ. ಹೌದು, ಆಸ್ತಿ ಹಕ್ಕು ವರ್ಗಾವಣೆ ಆದಮೇಲೆ ಅದನ್ನು ರಿಜಿಸ್ಟರ್ ಮಾಡಿಸಬೇಕು ಮತ್ತು ಮಗನ ಹೆಸರಿನಲ್ಲಿ ಇ-ಸ್ವತ್ತು ಕೂಡ ಮಾಡಿಸಬೇಕು. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎನ್ನುವ ವಿವರ ಹೀಗಿದೆ ನೋಡಿ.
1. ಬೇಕಾಗುವ ದಾಖಲೆಗಳು:-
* ನಿಮ್ಮ ಪೂರ್ವಜರು ನೀಡಿದ ಮನೆಗೆ ಆಗಿರಲಿ ಅಥವಾ ಸರ್ಕಾರದಿಂದ ಮಂಜೂರಾಗಿರುವ ಮನೆ ಆಗಿರಲಿ, ಮನೆ ನಿಮ್ಮದು ಎನ್ನುವುದಕ್ಕೆ ದಾಖಲೆ ಬೇಕು
* ಪಂಚಾಯಿತಿ ಕಚೇರಿಯಿಂದ ಫಾರಂ 9 ಮತ್ತು ಫಾರಂ 11 ಪಡೆದುಕೊಳ್ಳಬೇಕು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ರೂ.50 ಶುಲ್ಕ ನೀಡಿ ಪಡೆಯಬಹುದು. ಒಂದು ವೇಳೆ ಇಲ್ಲದಿದ್ದರೆ ಹೊಸದಾಗಿ ಮಾಡಿಸಿಕೊಳ್ಳಬೇಕಾಗುತ್ತದೆ..
* ತಂದೆ ಮತ್ತು ಮಕ್ಕಳ ಆಧಾರ್ ಕಾರ್ಡ್
* ಸಾಕ್ಷಿಗಳ ಸಹಿ ಮತ್ತು ಹಾಜರು.
ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ.
* ತಂದೆಯಿಂದ ಮಕ್ಕಳಿಗೆ ದಾನ, ವಿಭಾಗ, ಕ್ರಯದ ಮೂಲಕ ಆಸ್ತಿ ಹಕ್ಕು ವರ್ಗಾವಣೆ ಮಾಡಬಹುದು. ಆದರೆ ತಂದೆಯಿಂದ ಮಕ್ಕಳಿಗೆ ದಾನ ಪತ್ರದ ಮೂಲಕ ಯಾವುದೇ ಆಸ್ತಿ ಹಕ್ಕು ವರ್ಗಾವಣೆ ಮಾಡುವುದು ಒಳ್ಳೆಯದು.
* ದಾನ ಪತ್ರ ವಿಧಾನ ಅನುಸರಿಸುವುದರಿಂದ ಸ್ಟ್ಯಾಂಪ್ ಡ್ಯೂಟಿ ಚಾರ್ಜಸ್ ಮತ್ತು ಇತರೆ ಖರ್ಚುಗಳಲ್ಲಿ ಉಳಿತಾಯವಾಗುತ್ತದೆ
* ದಾನ ಪತ್ರ ವಿಧಾನ ಅನುಸರಿಸಿದರೆ 4 ರಿಂದ 5ಸಾವಿರ ಖರ್ಚಿನಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ
* ಈ ಮೇಲೆ ತಿಳಿಸದ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಉಪನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು
ರಿಜಿಸ್ಟರ್ ಪ್ರಕ್ರಿಯೆ:-
* ಈ ಮೇಲೆ ತಿಳಿಸಿದ ದಾಖಲೆಗಳೊಂದಿಗೆ ತಂದೆ ಮಕ್ಕಳು ಮತ್ತು ಸಾಕ್ಷಿಗಳು ಮುದ್ರಾಂಕದ ಹಾಳೆಯ ಮೇಲೆ ಸರಿಯಾಗಿ ತಂದೆಯಿಂದ ಮಗನಿಗೆ ಹಕ್ಕು ವರ್ಗಾವಣೆ ಕುರಿತು ದಾನಪತ್ರ ಬರೆಸಬೇಕು.
* ದಾನಪತ್ರದಲ್ಲಿ ಚಕ್ಕು ಬಂದಿ ವಿವರಿಸಿರಿದಂತೆ ನಿವೇಶನದ ಸಂಪೂರ್ಣ ವಿವರವನ್ನು ದಾಖಲಿಸಬೇಕು
* ನಿಮ್ಮ ಆತ್ಮೀಯರಿಗೂ ಸಾಕ್ಷಿಯಾಗಿ ಸಹಿ ಮಾಡಿಸಬೇಕು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 6ನೇ ಕಂತಿನ ಹಣ & ಅನ್ನಭಾಗ್ಯ ಹಣ ಪಡೆಯಲು NPCI ಮಾಡಿಸುವುದು ಕಡ್ಡಾಯ.! NPIC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
* ಸರ್ಕಾರ ವಿಧಿಸಿರುವ ರಿಜಿಸ್ಟರ್ ಶುಲ್ಕವನ್ನು ಕೂಡ ಪಾವತಿ ಮಾಡಬೇಕು, ನಂತರ ನಿಮ್ಮ ವ್ಯಾಪ್ತಿಗೆ ಬರುವ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ರಿಜಿಸ್ಟರ್ ಮಾಡಿಸಿಕೊಳ್ಳಬೇಕು
* ರಿಜಿಸ್ಟರ್ ಆದಮೇಲೆ ಆ ಪತ್ರದ ಸಹಾಯದಿಂದ ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಬೇಕು, ಅರ್ಜಿಯಲ್ಲಿ ಆಸ್ತಿ ಹಕ್ಕು ವರ್ಗಾವಣೆಗೆ ಉದ್ದೇಶ ಮತ್ತು ವಿವರವನ್ನು ತಿಳಿಸಿರಬೇಕು.
ಈ ಸುದ್ದಿ ಓದಿ:- ಕೇವಲ 5,000 ಕಟ್ಟಿ 5 ಲಕ್ಷ ಪಡೆದುಕೊಳ್ಳಿ, ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್.!
* ಅರ್ಜಿ ಸ್ವೀಕರಿಸಿದ ಗ್ರಾಮ ಪಂಚಾಯಿತಿಯವರು ಆಕ್ಷೇಪಣೆ ಇದ್ದರೆ ತಕರಾರು ಅರ್ಜಿ ಸಲ್ಲಿಸುವುದಕ್ಕಾಗಿ ಸಾರ್ವಜನಿಕವಾಗಿ ಪ್ರಚಾರ ಮಾಡಿಸುತ್ತಾರೆ.
* ನಿಗದಿಪಡಿಸಿದ ದಿನಗಳ ವರೆಗೆ ಇದ್ದರೆ ಖಾತೆ ಬದಲಾವಣೆ ಮಾಡಿ ಆಸ್ತಿ ಹಕ್ಕು ವರ್ಗಾವಣೆಗೆ ಆದೇಶ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ತಂದೆಯಿಂದ ಮಗನ ಹೆಸರಿಗೆ ಇ-ಸ್ವತ್ತು ಮಾಡಿಸಿಕೊಳ್ಳುವುದು ಮರೆಯಬೇಡಿ.
* ಇ-ಸ್ವತ್ತು ತಂತ್ರಾಂಶದ ಮೂಲಕ ಆಯಾ ಗ್ರಾಮ ಪಂಚಾಯಿತಿಯಲ್ಲಿಯೇ ಮಾಡಬಹುದಾಗಿದೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ PDO ಸಂಪರ್ಕಿಸಿ.