ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Gyaranty Scheme) ವತಿಯಿಂದ ಅನ್ನಭಾಗ್ಯ ಯೋಜನೆಯ (Annabhagya Amount) ಹೆಚ್ಚುವರಿ 5Kg ಅಕ್ಕಿ ಪ್ರತಿ ಸದಸ್ಯನ ಹಣ ರೂ.170 ಹಾಗೂ ಗೃಹಲಕ್ಷ್ಮಿ ಯೋಜನೆಯ (Gruhalakshmi Amount) ಮೂಲಕ ರೂ.2000 ಹಣವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರಾಗಿರುವ ಮಹಿಳೆಗೆ ಖಾತೆಗೆ DBT ಮೂಲಕ ಜಮೆ ಆಗುತ್ತಿದೆ.

WhatsApp Group Join Now
Telegram Group Join Now

ಆದರೆ ಯೋಜನೆ ಆರಂಭವಾದಗಳಿಂದ ಸಾಕಷ್ಟು ತೊಡಕುಗಳು ಎದುರಾಗಿದ್ದು, ಗೃಹಲಕ್ಷ್ಮಿ ಯೋಜನೆಗೆ 1.20 ಮಹಿಳೆಯರು ಅರ್ಹರಾಗಿದ್ದರೂ ಕಾರಣಾಂತರಗಳಿಂದ 90%ರಷ್ಟು ಮಹಿಳೆಯರು ಮಾತ್ರ ಹಣ ಪಡೆಯುತ್ತಿದ್ದಾರೆ. ಹಣ ಪಡೆಯಲಾಗದ ಮಹಿಳೆಯರಿಗೆಲ್ಲಾ ಸರ್ಕಾರದಿಂದ ಒಂದು ಸಿಹಿ ಸುದ್ದಿ ಇದೆ.

ಅ‌ದೇನೆಂದರೆ, ಬ್ಯಾಂಕ್ ಖಾತೆ ಅಕ್ಟಿವ್ ಇಲ್ಲದೆ ಇರುವುದು, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರುವುದು, ರೇಷನ್ ಕಾರ್ಡ್ ಇ-ಕೆವೈಸಿ ಆಗದೆ ಇರುವುದು ಅಥವಾ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯಲ್ಲಿರುವ ಮಾಹಿತಿಗಳು ಹೊಂದಾಣಿಕೆ ಆಗದೆ ಇರುವುದು ಇದೆಲ್ಲವೂ ಕೂಡ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ಪಡೆಯುವುದಕ್ಕೆ ಉಂಟಾಗಿರುವ ತೊಡಕುಗಳಾಗಿವೆ.

ಈ ಸುದ್ದಿ ಓದಿ:- ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!

ಈಗಾಗಲೇ ಸರ್ಕಾರದ ಕಡೆಯಿಂದ ಡಿಸೆಂಬರ್ ತಿಂಗಳಿನಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಮತ್ತು ಪಡಿತರ ಅಂಗಡಿಗಳಲ್ಲಿ ಶಿಬಿರಗಳನ್ನು ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಪ್ರಯತ್ನವನ್ನು ಮಾಡಲಾಗಿದೆ. ಆ ಪ್ರಕಾರವಾಗಿ ಯಾರೆಲ್ಲಾ ಭಾಗವಹಿಸಿ ಸಮಸ್ಯೆ ಪರಿಹರಿಸಿಕೊಂಡಿದ್ದರು ಆ ಮಹಿಳೆಯರು ಇದೇ ತಿಂಗಳ 26, 27 ಮತ್ತು 28 ನೇ ತಾರೀಖಿನಂದು ಒಟ್ಟು 5 ಕಂತುಗಳ ರೂ.10,000 ಹಣವನ್ನು ಪಡೆಯಲಿದ್ದಾರೆ ಮತ್ತು 7ನೇ ಕಂತಿನಹಣವು ಕೂಡ ಸರ್ಕಾರದಿಂದ ಬಿಡುಗಡೆಯಾಗಿದ್ದು.

ಈ ತಿಂಗಳ ಮೂರನೇ ವಾರದ ಒಳಗಡೆ ಎಲ್ಲ ಅರ್ಹ ಫಲಾನುಭವಿಗಳ ಖಾತೆಗೂ ತಲುಪಲಿದೆ. ಒಂದು ವೇಳೆ ಈ ಸಮಯದಲ್ಲಿ ಏನಾದರೂ ನಿಮಗೆ ಹಣ ತಲುಪದೇ ಇದ್ದರೆ ಅಥವಾ ಒಂದೆರಡು ಕಂತುಗಳ ಹಣ ಬಂದು ಮತ್ತೆ ಹಣ ಬರದೆ ಸಮಸ್ಯೆ ಆಗಿದ್ದರೆ ಇದನ್ನೆಲ್ಲ ಗಮನಿಸಿ ಕೂಡಲೇ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿರುವ CDPO ಅಧಿಕಾರಿಗಳಿಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ವಿವರ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪ್ರತಿ ಜೊತೆ ಹೋಗಿ ಮತ್ತೊಮ್ಮೆ ಮನವಿ ಸಲ್ಲಿಸಬೇಕು.

ಸ್ಥಳದಲ್ಲಿಯೇ ಅರ್ಜಿ ಪರಿಶೀಲನೆ ನಡೆಸಿ ಅಧಿಕಾರಿಗಳು ಅನುಮೋದಿಸುತ್ತಾರೆ ನಂತರ ಮುಂದಿನ ತಿಂಗಳ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಹಣಗಳು ವರ್ಗಾವಣೆ ಆಗುವ ಸಮಯದಲ್ಲಿ ಬಾಕಿ ಉಳಿದಿರುವ ಎಲ್ಲಾ ಕಂತುಗಳ ಹಣ ಕೂಡ ನಿಮ್ಮ ಖಾತೆಗೆ ಬರಲಿದೆ. ನೀವೆ ನಿಮ್ಮ ಯಾವ ಬ್ಯಾಂಕ್ ಖಾತೆಗೆ ಹಣ ಬರ್ತಾವೆ ಎಂದು ಈ ಎರಡು ವಿಧಾನಗಳ ಮೂಲಕ ಚೆಕ್ ಮಾಡಿ ತಿಳಿದುಕೊಳ್ಳಬಹುದು.

ಈ ಸುದ್ದಿ ಓದಿ:- ಪ್ರಾಪರ್ಟಿ ಟ್ರಾನ್ಸ್ಫರ್ ಹೇಗೆಲ್ಲಾ ಮಾಡುತ್ತಾರೆ ಗೊತ್ತಾ.? ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇದ್ದವರು ನೋಡಿ.!

* UIDAI ನ ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು, ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ NPCI ಆಗಿದೆಯೇ ಎಂದು ಚೆಕ್ ಮಾಡಿ, ಒಂದು ವೇಳೆ ಆಗಿರದೆ ಇದ್ದರೆ ಕೂಡಲೇ ಆ ಪ್ರಕ್ರಿಯೆ ಪೂರ್ತಿಗೊಳಿಸಿ, ಈಗಾಗಲೇ ಆಗಿದ್ದರೆ ಯಾವ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದೆ ಎನ್ನುವ ವಿವರ ಚೆಕ್ ಮಾಡಿ ಅದೇ ಬ್ಯಾಂಕ್ ಖಾತೆಗೆ ಈ ಗ್ಯಾರಂಟಿ ಯೋಜನೆಗಳ ಹಣ ವರ್ಗಾವಣೆ ಆಗಿರುತ್ತದೆ.

* ಪ್ಲೇ ಸ್ಟೋರ್ ನಲ್ಲಿ ಕರ್ನಾಟಕ ಸರ್ಕಾರದ ಡಿಬಿಟಿ ಕರ್ನಾಟಕ (DBT Karnataka App) ಆಪ್ ಡೌನ್ಲೋಡ್ ಮಾಡಿಕೊಂಡು ಕೂಡ ನೀವು ಗೃಹಲಕ್ಷ್ಮಿ ಯೋಜನೆ ಅನ್ನ ಭಾಗ್ಯ ಯೋಜನೆ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದು, ಇವು ಮಾತುಗಳಂತೆ ಸರ್ಕಾರದಿಂದ ನಿಮಗೆ ಯಾವುದೇ ಅನುದಾನ ದೊರೆತ್ತಿದ್ದರೂ ನಿಮ್ಮ ಯಾವ ಖಾತೆಗೆ ಹಣ ವರ್ಗಾವಣೆ ಆಗಿದೆ ಎನ್ನುವುದರ ಮಾಹಿತಿಯನ್ನು ಪಡೆದುಕೊಳ್ಳಬಹುದು.

https://youtu.be/iDDxo_GC5Ww?si=QW3jlyqMbzsgfiEZ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now