ನಮ್ಮ ಭಾರತ ಸರ್ಕಾರವು ಆಗಾಗ ಸಾಕಷ್ಟು ನಿಯಮ ಹಾಗೂ ಕಾನೂನುಗಳನ್ನು ದೇಶದಲ್ಲಿ ಜಾರಿಗೆ ತರುತ್ತಿರುತ್ತದೆ. ಇಂತಹ ಒಂದು ಯೋಜನೆಯಲ್ಲಿ ಆಧಾರ್ ಕಾರ್ಡ್ ಎನ್ನುವ ಯೋಜನೆಯ ಸಹ ಒಂದು. ದೇಶದ ಎಲ್ಲಾ ನಾಗರಿಕರಿಗೂ ಹದಿನಾರು ಸಂಖ್ಯೆ ಉಳ್ಳ ಯೂನಿಕ್ ನಂಬರ್ ಕೊಡುವ ನಿರ್ಧಾರವನ್ನು ಮಾಡಿದ್ದು, ಕಳೆದ ದಶಕದಲ್ಲೇ ಈ ಕೆಲಸ ಆರಂಭಗೊಂಡು ಒಂದು ಮಟ್ಟದಲ್ಲಿ ಶೇಕಡವಾರು ದೇಶದಾದ್ಯಂತ ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಯಾಗಿದೆ ಎಂದೇ ಹೇಳಬಹುದು.
ಆದರೂ ಕೂಡ ಈ ಆಧಾರ್ ಕಾರ್ಡ್ ಅಂಕಿ ಅಂಶಗಳಲ್ಲಿ ಹಲವಾರು ಲೋಪ ದೋಷಗಳು ಇರುವುದು ಅವುಗಳ ತಿದ್ದುಪಡಿ ಅನಿವಾರ್ಯ ಆಗಿರುವುದು ಮತ್ತು ಹೊಸ ಆಧಾರ್ ಕಾರ್ಡ್ ಹೊಂದುವ ನಾಗರಿಕರಿಂದ ಸಾಕಷ್ಟು ಮನವಿ ಇರುವುದರಿಂದ ಯುಐಡಿಎಯು ಎನ್ನುವ ಸಂಸ್ಥೆ ಸುಪರ್ಧಿಗೆ ಆ ಜವಾಬ್ದಾರಿಯನ್ನು ಸರ್ಕಾರ ನೀಡಿದೆ. ಆಗಾಗ ಅದರಲ್ಲಿ ಮಹತ್ವಪೂರ್ಣ ಬದಲಾವಣೆ ಮತ್ತು ತಿದ್ದುಪಡಿಗಳನ್ನು ಕೂಡ ಕೆಲವೊಂದು ಮುಖ್ಯ ಉದ್ದೇಶದಿಂದ ಯುಎಐಡಿಯು ಸಂಸ್ಥೆ ಮಾಡಿದೆ.
ಈಗಾಗಲೇ ಇಂತಹ ಹಲವು ತಿದ್ದುಪಡಿಗಳು ಆಗಿದ್ದು ಅದರ ಅನುಸಾರ ಈಗ ಆಧಾರ್ ಪ್ರಕ್ರಿಯೆ ನಡೆಯುತ್ತಿದೆ. ಮತ್ತೊಮ್ಮೆ ಅದೇ ರೀತಿಯ ಮತ್ತೊಂದು ಬದಲಾವಣೆ ಆಧಾರ್ ಕಾರ್ಡ್ ಪ್ರಕ್ರಿಯೆಯಲ್ಲಿ ಮಾಡಲಾಗಿದೆ. ಇದು ಮಕ್ಕಳನ್ನು ಹೊಂದಿರುವ ಎಲ್ಲಾ ಪೋಷಕರಿಗೂ ಮಹತ್ವಪೂರ್ಣವಾದ ಸೂಚನೆಯಾಗಿದ್ದು, ತಿಳಿದುಕೊಳ್ಳಲೇ ಬೇಕಾದ ಸಂಗತಿ ಆಗಿದೆ. ಈಗಾಗಲೇ ಆಧಾರ್ ಕಾರ್ಡ್ ಪತ್ರಿಕೆ ಮೂರು ರೀತಿಯಾಗಿ ಇದೆ ಎಂದು ಹೇಳಬಹುದು.
ಅದೇನೆಂದರೆ ನಮ್ಮ ದೇಶದಲ್ಲಿ ಈಗ ಹುಟ್ಟಿದ ಮಕ್ಕಳು ಕೂಡ ಆದಷ್ಟು ಬೇಗ ಆಧಾರ್ ಕಾರ್ಡನ್ನು ಪಡೆಯಲೇ ಬೇಕಾಗಿದೆ. ಆದರೆ ಎಲ್ಲರಿಗೂ ಅನ್ವಯವಾಗುವಂತೆ ಆ ಪುಟ್ಟ ಮಕ್ಕಳ ಬಯೋಮೆಟ್ರಿಕ್ ಪಡೆಯುವುದು ಅಸಾಧ್ಯವಾದ ಕಾರಣ ಅವರಿಗೆ ವಿನಾಯಿತಿ ಇದೆ. ಮಕ್ಕಳ ಬಯೋಮೆಟ್ರಿಕ್ ಕಡ್ಡಾಯವಲ್ಲದ್ದರಿಂದ ಅವರ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿಕೊಂಡು ನೀಡಲಾಗುತ್ತಿತ್ತು. ಈಗ ಇದೇ ವಿಷಯದಲ್ಲಿ ಬದಲಾವಣೆ ಆಗಿದ್ದು ಪೋಷಕರ ಆಧಾರ್ ಕಾರ್ಡ್ ಸಂಖ್ಯೆಯನ್ನು ಮಕ್ಕಳ ಅರ್ಜಿ ನಮೂನೆಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ.
ಇದರೊಂದಿಗೆ ಪೋಷಕರ ಬಯೋಮೆಟ್ರಿಕ್ ಅನ್ನು ಕೂಡ 5 ವರ್ಷದ ಒಳಗಿನ ಮಕ್ಕಳ ಆಧಾರ್ ಕಾರ್ಡ್ ಅರ್ಜಿ ನಮೂನೆಯಲ್ಲಿ ತುಂಬಿಸುವುದು ಕಡ್ಡಾಯ ಮಾಡಲಾಗಿದೆ. ಮಕ್ಕಳ ಆಧಾರ್ ಕಾರ್ಡ್ ಗಾಗಿ ಪ್ರತ್ಯೇಕ ರೀತಿಯಲ್ಲಿ ಅರ್ಜಿ ಸ್ವೀಕರಿಸಲಾಗುತ್ತದೆ, ಜೊತೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರು ಸ್ವತಃ ಅವರ ದಾಖಲೆಗಳು ಮತ್ತು ಅವರ ಬಯೋಮೆಟ್ರಿಕ್ ಕೊಡುವ ಮೂಲಕ ಆಧಾರ್ ಕಾರ್ಡನ್ನು ಪಡೆಯಬಹುದಾಗಿದೆ. ಎಲ್ಲರಿಗೂ ತಿಳಿದಿದೆ ಯಾವುದೇ ಬ್ಯಾಂಕ್ ಕೆಲಸ ಕಾರ್ಯಗಳು ಅಥವಾ ಸರ್ಕಾರದ ಯಾವುದೇ ಯೋಜನೆ ಫಲಗಳು ಮತ್ತು ಎಲ್ಲ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೂಡ ಹಲವು ವಿಷಯಗಳಿಗೆ ಆಧಾರ್ ಕಾರ್ಡ್ ಅನ್ನುವುದು ಪ್ರಮುಖ ದಾಖಲೆ ಆಗಿದೆ.
ಒಂದು ರೀತಿಯಲ್ಲಿ ಈಗ ಆಧಾರ್ ಕಾರ್ಡ್ ಇಲ್ಲದೆ ಇರುವುದು ಈ ದೇಶದ ನಾಗರಿಕನೋ ಅಲ್ಲವೋ ಎನ್ನುವಂತಹ ಅನುಮಾನವನ್ನು ಸೃಷ್ಟಿಸುವ ರೀತಿ ಆಗಿಬಿಟ್ಟಿದೆ. ನಮ್ಮ ದೇಶದ ನಾಗರಿಕನೊಬ್ಬನ ಪ್ರಮುಖ ದಾಖಲೆ ಆಗಿರುವ ಈ ಆಧಾರ್ ಕಾರ್ಡ್ ಗೆ ಇಷ್ಟು ಪ್ರಾಮುಖ್ಯತೆ ಇರುವುದರಿಂದ ಇದನ್ನು ಅಷ್ಟೇ ಕಟ್ಟನಿಟ್ಟಾಗಿ ಪಾಲಿಸುವ ದೃಷ್ಟಿಯಿಂದ ಆಗಾಗ ಬದಲಾವಣೆಗಳನ್ನು ಮಾಡಲಾಗುತ್ತಿರುತ್ತದೆ. ಈ ಮಹತ್ವಪೂರ್ಣವಾದ ವಿಷಯವನ್ನು ನಿಮ್ಮ ಸ್ನೇಹಿತರ ಹಾಗೂ ಕುಟುಂಬಸ್ಥರಿಗೆ ತಿಳಿಸಿ ಇನ್ನಷ್ಟು ಜನರಿಗೆ ಅಗತ್ಯವಾದ ಮಾಹಿತಿ ತಿಳಿಯುವಂತೆ ಮಾಡಿ ಅನುಕೂಲ ಮಾಡಿಕೊಡಿ.