ನಿಮ್ಮ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಗಳಿವೆ ರಿಜಿಸ್ಟರ್ ಆಗಿದೆ ಅಂತ ತಿಳಿಯಲು ಹೀಗೆ ಮಾಡು ಸಾಕು.

ಆಧಾರ್ ಕಾರ್ಡ್ ಎಂಬುದು ಭಾರತೀಯರ ಬಹು ಮುಖ್ಯ ದಾಖಲೆಯ ಪತ್ರವಾಗಿದೆ. ಸ್ನೇಹಿತರು, ಸಂಬಂಧಿಗಳು, ವ್ಯವಹಾರಗಳು ಎನ್ನುತ್ತಾ ಒಂದಕ್ಕಿಂತ ಹೆಚ್ಚು ಸಿಮ್ ಗಳ ಬಳಕೆ ಮಾಡುತ್ತಿದ್ದೇವೆ. ಹೊಸ ಸಿಮ್ ಅನ್ನು ಖರೀದಿ ಮಾಡುವಾಗ ಆಧಾರ್ ಕಾರ್ಡ್ ಆಧಾರಿತವಾಗಿ ತೆಗೆದುಕೊಳ್ಳುತ್ತೇವೆ. ಹತ್ತು ಹಲವು ಕಡೆಗಳ ಕೆಲಸದಿಂದಾಗಿ ಆಧಾರ್ ಕಾರ್ಡ್ ನ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ ಎಂಬುದನ್ನು ಮರೆತಿರುತ್ತೇವೆ. ಅದನ್ನು ಪರಿಶೀಲಿಸುವುದಕ್ಕಾಗಿ ಇದೊಂದು ಪೋರ್ಟಲ್ ಎಲ್ಲರಿಗೂ ಸಹಾಯವಾಗಿದೆ.

WhatsApp Group Join Now
Telegram Group Join Now

ಮನೆಯ ವಿದ್ಯುತ್, ನೀರು, ದೂರದರ್ಶನ, ಅಡುಗೆಗಾಗಿ ಬಳಸುವ ಸಿಲಿಂಡರ್, ವೈಫೈ ಸಂಪರ್ಕ ಸೇರಿದಂತೆ ಅನೇಕ ಸಣ್ಣಪುಟ್ಟ ವ್ಯವಸ್ಥೆಗಳಿಂದ ಹಿಡಿದು ಕೃಷಿ ವ್ಯವಹಾರ, ಉದ್ಯೋಗ, ಬ್ಯಾಂಕ್ ಖಾತೆ, ಆಸ್ತಿ ಪತ್ರಗಳವರೆಗೂ ಆಧಾರ್ ಕಾರ್ಡ್ ನ ಬಳಕೆಯಾಗುತ್ತಿದೆ. ಈ ರೀತಿಯಾಗಿ ಅನೇಕ ವೇದಿಕೆಗಳಲ್ಲಿ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿರುತ್ತೇವೆ. ಕೆಲವೊಮ್ಮೆ ಬೇರೆಯವರು ತಿಳಿದು ತಿಳಿಯದೆಯೋ ನಿಮ್ಮ ಆಧಾರ್ ಕಾರ್ಡಗೆ ಪ್ರವೇಶವನ್ನು ಪಡೆದಿರಬಹುದು. ಈ ಬಗ್ಗೆ ನಿಮಗೂ ಕೂಡ ಅರಿವು ಇಲ್ಲದಿರಬಹುದು.

ಇತರರು ನಿಮ್ಮ ಆಧಾರ್ ಕಾರ್ಡ್ ಗೆ ಪ್ರವೇಶ ಪಡೆಯಲು ಕಾರಣ ಏನು ಬೇಕಾದರೂ ಆಗಿರಬಹುದು. ನಿಮ್ಮ ಆಧಾರ್ ನಂಬರ್ ಗೆ ಎಂಟ್ರಿ ಪಡೆದವರು ನಿಮಗೂ ಹಾಗೂ ಅವರಿಗೂ ಯಾವುದೇ ಕೆಡುಕು ಉಂಟುಮಾಡದೆ ಇರಬಹುದು. ಒಳ್ಳೆಯ ಉದ್ದೇಶವನ್ನು ಹೊಂದಿರಬಹುದು. ಆದರೆ ಹಲವಾರು ಬಾರಿ ನಿಮ್ಮ ಬಗೆಗಿನ ಮಾಹಿತಿಯನ್ನು ಕಲೆ ಹಾಕುವ ಉದ್ದೇಶವಿರಬಹುದು. ಅಥವಾ ನಿಮ್ಮ ಆಧಾರ್ ಕಾರ್ಡನ್ನು ದುರುಪಯೋಗ ಪಡಿಸಿಕೊಳ್ಳುವ ಯೋಚನೆ ಹೊಂದಿರಬಹುದು ಅಥವಾ ಅವ್ಯವಹಾರಗಳನ್ನು ನಿಮ್ಮ ಹೆಸರಿನಲ್ಲಿ ನಡೆಸುತ್ತಿರಬಹುದು.

ಈ ಎಲ್ಲಾ ಕಾರಣದಿಂದಾಗಿ ಸರ್ಕಾರವು ಪೋರ್ಟಲ್ ಒಂದನ್ನು ಆರಂಭಿಸಿದೆ. 2018ರಲ್ಲಿ ಇಲಾಖೆಯು ಪ್ರತಿಯೊಬ್ಬ ವ್ಯಕ್ತಿಯು ಬಳಸಬಹುದಾದ ಸಿಮ್ ಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದರಲ್ಲಿ 9 ಸಿಮ್ ಗಳನ್ನು ವ್ಯವಹಾರಕ್ಕಾಗಿ ಮತ್ತು 9 ಸಿಮ್ ಗಳನ್ನು ಸಂವಹನಕ್ಕಾಗಿ ಬಳಸಬಹುದು ಎಂದಿದೆ. ಯಾರಾದರೂ ನಿಮ್ಮ ಆಧಾರ್ ಕಾರ್ಡ್ ಅನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ? ನಿಮ್ಮ ಹೆಸರಿನಲ್ಲಿ ಸಿಮ್ ಅನ್ನು ಖರೀದಿಸಿದ್ದಾರೆಯೇ? ಎಂಬ ಮಾಹಿತಿಯನ್ನು ತಿಳಿದುಕೊಂಡು ತಪ್ಪಿನ ಪ್ರಕರಣಗಳನ್ನು ಮಾಡುವ ನಿಟ್ಟಿನಲ್ಲಿ ಪೋರ್ಟಲ್ ಕಾರ್ಯನಿರ್ವಹಿಸುತ್ತಿದೆ.

ನಿಮ್ಮ ಆಧಾರ್ ಕಾರ್ಡ್ ಹೆಸರಿನಲ್ಲಿ ಎಷ್ಟು ಸಿಮ್ ಗಳಿವೆ ಎಂದು ಪರಿಶೀಲಿಸಲು ಮೊದಲು TAFCOP (https://tafcop.dgtelecom.gov.in/) ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಓಟಿಪಿಯನ್ನು ಪಡೆಯಬೇಕು. ಪಡೆದ ಓಟಿಪಿಯನ್ನು ನಮೂದಿಸಿ ಮೌಲ್ಯೀಕರಿಸಬೇಕು. ಈ ರೀತಿ ಮಾಡುವುದರಿಂದಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಬಳಕೆ ಆಗುತ್ತಿರುವ ಎಲ್ಲಾ ಸಿಮ್ ನಂಬರ್ ಗಳ ಪಟ್ಟಿಯು ದೊರಕುತ್ತದೆ.

ನೀವು ಖರೀದಿಸದ ಅಥವಾ ಇನ್ನು ಯಾವುದೋ ಅಪರಿಚಿತ ನಂಬರ್ ಅನ್ನು ಗುರುತಿಸಿದರೆ ಆ ಕೂಡಲೇ ಅದನ್ನು ನೀವು ತೆಗೆದು ಹಾಕಬಹುದು. ವರದಿ ಕೂಡ ಮಾಡಬಹುದು. ಇದಕ್ಕಾಗಿ ಎಡ ಭಾಗದ ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರದಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಕರೆ ಮಾಡಿ ಸಂಪರ್ಕಿಸಬೇಕು. ಅವರಲ್ಲಿ ಅಪರಿಚಿತ ನೋಂದಾಯಿತ ನಂಬರ್ ಬಗ್ಗೆ ತಿಳಿಸಬೇಕು. ಸೇವಾದಾರರು ಆ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾರೆ. ಈ ರೀತಿಯಾಗಿ ಹೆಚ್ಚಿದ ಆಧಾರ್ ಕಾರ್ಡ್ ಬಳಕೆಯಿಂದ ಆಗುತ್ತಿರುವ ವಂಚನೆಗಳನ್ನು ತಪ್ಪಿಸಬಹುದು. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now