ಆಸ್ತಿ ಸಂಬಂಧಿತ ವಿಚಾರವಾಗಿಯೇ ಈಗಿನ ಕಾಲದಲ್ಲಿ ಹೆಚ್ಚು ಕೇಸ್ ಗಳು ಕೋರ್ಟ್ ನಲ್ಲಿ ದಾಖಲಾಗುತ್ತಿರುವುದು. ಹಿಂದೆಲ್ಲಾ ದಾಯಾದಿಗಳು ಈ ರೀತಿ ಆಸ್ತಿಗಾಗಿ ಕ’ಲ’ಹ ಮಾಡುತ್ತಿದ್ದರು. ಇದು ಮಹಾಭಾರತದ ಕಾಲದಿಂದಲೂ ನಡೆಯುತ್ತಿತ್ತು. ಆದರೆ ಈಗ ರಕ್ತ ಸಂಬಂಧಿಗಳು ಒಂದೇ ರಕ್ತ ಹಂಚಿಕೊಂಡು ಒಂದೇ ಮನೆಯಲಿ ಆಡಿ ಬೆಳೆದವರು ಕೂಡ ಆಸ್ತಿಗಾಗಿ ವಿವಾದ ಮಾಡಿಕೊಂಡು ಕೋರ್ಟ್ ಕಛೇರಿ ಅಲೆಯುತ್ತಿದ್ದಾರೆ ಎನ್ನುವುದೇ ಶೋ’ಚ’ನೀ’ಯ ಆಸ್ತಿ ಹಕ್ಕಿನ ಕುರಿತಾಗಿ ನಮ್ಮ ಜನರಿಗೆ ಸಾಕಷ್ಟು ಗೊಂದಲಗಳು ಇವೆ.
ಇದರ ಬಗ್ಗೆ ಕಾನೂನಿನಲ್ಲಿ ಏನಿದೆ ಎನ್ನುವ ನಿಖರ ಮಾಹಿತಿ ತಿಳಿದರೆ ತಾವು ಕೇಸ್ ಹಾಕುತ್ತಿರುವುದು ಸರಿಯೋ ತಪ್ಪೋ ಎನ್ನುವ ತಿಳುವಳಿಕೆ ಬರುತ್ತದೆ. ಇದರಿಂದ ಕೆಲವರ ಶ್ರಮ ಹಾಗೂ ಸಮಯ ವ್ಯರ್ಥವಾಗುವುದಾದರೂ ತಪ್ಪುತ್ತದೆ. ಈ ಉದ್ದೇಶದಿಂದ ಈ ಅಂಕಣದಲ್ಲಿ ಆಸ್ತಿ ವಿಚಾರವಾಗಿ ಎರಡನೇ ಹೆಂಡತಿ ಮಕ್ಕಳಿಗೆ ಎಷ್ಟು ಅಧಿಕಾರ ಇದೆ ಎನ್ನುವ ಸಂಗತಿ ಬಗ್ಗೆ ಕೆಲ ವಿಷಯವನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ :-ಯಾವ ಬೈಕ್ ತೆಗೆದುಕೊಳ್ಳುವುದು ಬೆಸ್ಟ್? ಇದನ್ನು ಡಿಸೈಡ್ ಮಾಡುವುದು ಹೇಗೆ ನೋಡಿ.!
ಇದನ್ನು ಒಂದು ಪ್ರಕರಣದ ಉದಾಹರಣೆಯೊಂದಿಗೆ ಮನವರಿಕೆ ಮಾಡಲು ಇಚ್ಚಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ಒಬ್ಬ ತಂದೆಗೆ ಇಬ್ಬರು ಹೆಂಡತಿಯರು ಇದ್ದಾರೆ. ಮೊದಲ ಹೆಂಡತಿಗೆ ಒಬ್ಬ ಗಂಡು ಮಗ ಇದ್ದು ಆ ಹೆಂಡತಿ ಮೃ’ತಪಟ್ಟ ಬಳಿಕ ಆತ ತನ್ನ ಕುಟುಂಬಕ್ಕೆ ಆಧಾರವಾಗಲಿ ಎಂದು ಮತ್ತೊಬ್ಬ ಮಹಿಳೆಯನ್ನು ಮದುವೆ ಆಗುತ್ತಾರೆ.
ಎರಡನೇ ಮದುವೆ ಆದ ಆ ಹೆಣ್ಣು ಮಗಳಿಗೂ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಾಗುತ್ತದೆ. ಈಗ ಒಟ್ಟು ಆತನಿಗೆ ಮೂರು ಜನ ಗಂಡು ಮಕ್ಕಳಿದ್ದಾರೆ ಮತ್ತು ಇವರಿಗೆ ಆರು ಎಕರೆ ಆಸ್ತಿ ಇದೆ. ಈ ಆರು ಎಕರೆ ಆಸ್ತಿಯು ಆತನ ಸ್ವಯಾರ್ಜಿತ ಆಸ್ತಿ ಆಗಿದ್ದರೆ ಆತ ಮ’ರ’ಣ ಹೊಂದುವ ಮುನ್ನ ತನ್ನ ಆಸ್ತಿ ಹಕ್ಕು ಮೂರು ಜನರಲ್ಲಿ ಯಾರಿಗೆ ಎಷ್ಟು ಹೋಗಬೇಕು ಎಂದು ಆ ಪುತ್ರ ಅಥವಾ ಪುತ್ರಿ ಹೆಸರಿನಲ್ಲಿ ದಾನ ಪತ್ರದ ಮೂಲಕ ಅಥವಾ ವಿಲ್ ಮೂಲಕ ಬರೆದು ಕೊಟ್ಟಿದ್ದರೆ ಆ ಪ್ರಕಾರವಾಗಿ ಅವರ ಇಚ್ಛೆಯಂತೆಯೇ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ.
ಈ ಸುದ್ದಿ ಓದಿ :-ಆಸ್ತಿ ಬೇಡ ಎಂದು ಪತ್ರ ಬರೆದು ಕೊಟ್ಟಿದ್ದೀರಾ.? ಹಾಗಾದರೆ ಮುಂದೆ ಪರಿಹಾರ ಏನು ನೋಡಿ.!
ಒಂದು ವೇಳೆ ಆ ಆಸ್ತಿಯು ಪಿತ್ರಾರ್ಜಿತ ಆಸ್ತಿ ಆಗಿದ್ದರೆ ಆತನ ಮರಣದ ನಂತರವಾಗಿ ಮೊದಲ ಹೆಂಡತಿ ಮತ್ತು ಎರಡನೇ ಹೆಂಡತಿ ಮೂರು ಜನ ಮಕ್ಕಳಿಗೂ ಕೂಡ ಸಮಾನವಾಗಿ ಆಸ್ತಿ ಹಕ್ಕು ವರ್ಗಾವಣೆ ಆಗುತ್ತದೆ. ಇದರಲ್ಲಿ ಗಂಡು ಮಕ್ಕಳು ಹೆಣ್ಣು ಮಕ್ಕಳು ಎನ್ನುವ ಭೇದ ಕೂಡ ಇಲ್ಲ ಮತ್ತು ಎರಡನೇ ಮದುವೆಯೂ ಕೂಡ ಕಾನೂನು ಬದ್ಧವಾಗಿ ಆಗಿರುವುದರಿಂದ ಮೊದಲನೇ ಹೆಂಡತಿ ಮಕ್ಕಳಿಗೆ ಹೆಚ್ಚು ಅಧಿಕಾರ ಎರಡನೇ ಹೆಂಡತಿ ಮಕ್ಕಳಿಗೆ ಕಡಿಮೆ ಆಸ್ತಿ ಎನ್ನುವ ಯಾವುದೇ ಭೇದ ಇಲ್ಲ ಎನ್ನುವ ಅಂಶ ಕಾನೂನಿನಲ್ಲಿ ಇದೆ.
ಆದರೆ ಕೆಲವೊಮ್ಮೆ ಮೊದಲ ಹೆಂಡತಿ ಬದುಕಿರುವಾಗಲೇ ಎರಡನೇ ಮದುವೆ ಆಗಿರುತ್ತಾರೆ ಈ ಮದುವೆ ಕಾನೂನಿನ ಪ್ರಕಾರವಾಗಿ ಸಿಂಧು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಎರಡನೇ ಹೆಂಡತಿಗೆ ಮಕ್ಕಳಾದರೆ ಅವರಿಗೂ ಕೂಡ ಪಿತ್ರಾರ್ಜಿತ ಆಸ್ತಿ ಹಕ್ಕಿನ ವಿಚಾರವಾಗಿ ತೊಂದರೆ ಆಗುತ್ತದೆ ಹಾಗಾಗಿ ಯಾವುದೇ ಸಂಗತಿ ಆದರೂ ಕಾನೂನು ಬದ್ಧವಾಗಿ ನಡೆಯಬೇಕು ಮತ್ತು ಈ ರೀತಿ ಕಾನೂನಿನ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಹತ್ತಿರದಲ್ಲಿರುವ ಕಾನೂನು ಸಲಹಾ ಕೇಂದ್ರಕ್ಕೆ ಭೇಟಿ ಕೊಟ್ಟು ಸರಿಯಾದ ವಿವರಣೆಯನ್ನು ಉಚಿತವಾಗಿ ಪಡೆಯಬಹುದು ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ.