ಅಪ್ಪು ಅವರು ನಮ್ಮ ಜೊತೆ ದೈಹಿಕವಾಗಿ ಇಲ್ಲದೆ ಇದ್ದರೂ ಸಹ ಮಾನಸಿಕವಾಗಿ ಅವರು ನಮ್ಮ ಜೊತೆಯಲ್ಲಿ ಸದಾ ಇದ್ದೇ ಇರುತ್ತಾರೆ ಅವರ ಇಷ್ಟ ಕಷ್ಟ ಹಾಗೆ ಸುಖ-ದುಃಖ ನೋವುಗಳೆಲ್ಲವನ್ನು ಸಹ ನಾವು ಆಗಾಗ ನೆನಪು ಮಾಡಿಕೊಳ್ಳುತ್ತಲೇ ಇರುತ್ತೇವೆ. ಈ ಅಕ್ಟೋಬರ್ ತಿಂಗಳನ್ನು ಫುಡ್ ಫೆಸ್ಟ್ ಎಂದು ಅಪ್ಪುಗಾಗಿ ಮೀಸಲಿಟ್ಟಿದ್ದಾರೆ ಹೌದು, ಅಪ್ಪು ಅವರು ಆಹಾರ ಪ್ರಿಯರು ಎಲ್ಲಾ ವಿಧ ವಿಧವಾದಂತಹ ಆಹಾರಗಳನ್ನು ತುಂಬಾ ಇಷ್ಟ ಪಟ್ಟು ತಿನ್ನುತ್ತಿದ್ದರು ಆದ್ದರಿಂದ ಅವರಿಗಾಗಿ ಅವರ ಹೆಸರಿನಲ್ಲಿ ಪ್ಲೇವರ್ಸ್ ಆಫ್ ಗಂಧದಗುಡಿ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಅಪ್ಪು ಅವರ ಆಹಾರಗಳನ್ನು ಯಾವ ಯಾವ ಹೋಟೆಲ್ ಗಳಿಗೆ ಇಷ್ಟಪಟ್ಟು ತಿನ್ನುತ್ತಿದ್ದರು ಅಂತಹ ವಿಧವವಿಧವಾದಂತಹ ತಿಂಡಿಗಳನ್ನು ಮಾಡಿ ಅವರಿಗೆ ಅರ್ಪಣೆ ಮಾಡುತ್ತಿದ್ದಾರೆ.
ಅಪ್ಪು ಅವರು ಭೇಟಿ ಕೊಟ್ಟಿದ್ದಂತಹ ಸಾಕಷ್ಟು ಹೋಟೆಲ್ ಗಳಿಗೆ ಹೋಗಿ ಸಾಕಷ್ಟು ಜನರು ಅಭಿಮಾನಿಗಳು ಅಪ್ಪು ಅವರ ಕುಟುಂಬಸ್ಥರು ಹಾಗೆಯೇ ನಟರು ನಟಿಯರು ಅಪ್ಪು ಅವರನ್ನು ತುಂಬಾ ಇಷ್ಟಪಡುತ್ತಿದ್ದ ಆಂಕರ್ ಅನುಶ್ರೀ ಅವರು ಹೋಗಿ ಭೇಟಿ ನೀಡಿ ಅಲ್ಲಿ ಅಪ್ಪು ಅವರು ಇಷ್ಟ ಪಟ್ಟು ತಿನ್ನುತ್ತಿದ್ದಂತಹ ತಿಂಡಿಗಳನ್ನು ಸವಿದು ಬರುತ್ತಿದ್ದಾರೆ. ಅಪ್ಪು ಅವರಿಗೆ ನಾನ್-ವೆಜ್ ಎಂದರೆ ತುಂಬಾ ಇಷ್ಟ ತಮಗೆ ಇಷ್ಟವಾದಂತಹ ಊಟಗಳನ್ನು ಹೋಟೆಲ್ ಗಳಿಗೆ ಹೋಗಿ ಸವಿದು ತೃಪ್ತಿ ಪಡುತ್ತಿದ್ದರು ಹಾಗೆಯೇ ಅವರಿಗೆ ಬೇರೆಯವರ ಹೊಟ್ಟೆತುಂಬಿಸುವ ಪ್ರಯತ್ನ ಮಾಡುತ್ತಿದ್ದರು. ಬೆಂಗಳೂರಿನ ಬಿವಿ ಪುರಂ ಸ್ಟ್ರೀಟ್ ಫುಡ್ ಅಲ್ಲಿ ದೋಸೆಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಿದ್ದರು ಆದ್ದರಿಂದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ವಿವಿ ಪುರಂ ನ ಸ್ಟ್ರೀಟ್ ಫುಡ್ ಗೆ ಹೋಗಿ ತಮ್ಮ ಮಗಳೊಂದಿಗೆ ದೋಸೆಯನ್ನು ಸವಿದು ಬಂದಿದ್ದಾರೆ.
ದೋಸೆಯನ್ನು ತಿಂದ ನಂತರ ಅಪ್ಪು ಅವರನ್ನು ಈ ಮೂಲಕ ನೆನಪು ಮಾಡಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ಸನ್ಮಾನವನ್ನು ಮಾಡಿ ಕಳುಹಿಸಿದ್ದಾರೆ. ಫ್ಲೇವರ್ಸ್ ಆಫ್ ಗಂಧದಗುಡಿಯನ್ನು ಎಲ್ಲೆಲ್ಲಿ ಆಚರಣೆ ಮಾಡುತ್ತಿದ್ದಾರೆ ಅಲ್ಲೆಲ್ಲ ಅಪ್ಪು ಅವರ ಫೋಟೋವನ್ನು ಇಟ್ಟು ಅವರಿಗೆ ಇಷ್ಟವಾದಂತಹ ತಿಂಡಿಗಳನ್ನು ಫೋಟೋ ಮುಂದೆ ಇಟ್ಟು ಅವರಿಗೆ ನೈವೇದ್ಯವಾಗಿ ನೀಡುತ್ತಾ ಇದ್ದಾರೆ. ಅಪ್ಪು ಅವರನ್ನು ದೇವರು ಎಂದೇ ಅವರ ಫೋಟೋ ಮುಂದೆ ಎಲ್ಲ ತಿಂಡಿ ತಿನಿಸುಗಳನ್ನು ಇಟ್ಟು ಪೂಜಿಸುತ್ತಿದ್ದಾರೆ.
ಅಪ್ಪು ಅವರ ಎಲ್ಲಾ ಅಭಿಮಾನಿಗಳು ಸಹ ಹೋಟೆಲ್ ಗಳಿಗೆ ಹೋಗಿ ಅವರು ಇಷ್ಟಪಡುತ್ತಿದ್ದಂತಹ ತಿಂಡಿಗಳನ್ನೇ ಕೇಳಿ ಪಡೆಯುತ್ತಿದ್ದಾರೆ ಇಷ್ಟೊಂದು ಪ್ರೀತಿಯನ್ನು ಅಪ್ಪು ಅವರ ಮೇಲೆ ಇಟ್ಟಿರುವುದನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಅಪ್ಪು ಅವರು ಒಬ್ಬ ಸ್ಟಾರ್ ನಟನಾಗಿ ಮಾತ್ರ ಗುರುತಿಸಿಕೊಂಡಿಲ್ಲ ಬದಲಿಗೆ ಅದಕ್ಕಿಂತ ಹೆಚ್ಚಾಗಿ ಅವರ ನಡೆ ನುಡಿ ವಿನಯತೆ ಇದರ ಜೊತೆಗೆ ಇತರರ ಜೊತೆಗೆ ಬೆರೆಯುತ್ತಿದ್ದಂತಹ ರೀತಿ ಎಲ್ಲವೂ ಸಹ ಅವರನ್ನು ಮೇಲುಗೈ ಮಾಡಿದೆ. ಅಪ್ಪು ದೈಹಿಕವಾಗಿ ಇಲ್ಲವಾದರೂ ಅಪ್ಪು ಅವರು ಹೆಸರಿನಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಲೇ ಇದೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.