Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ನಮ್ಮ ನಿಮ್ಮೆಲ್ಲರ ಸ್ಯಾಂಡಲ್ ವುಡ್ ಸುಂದರಿ ರಾಧಿಕಾ ಕುಮಾರಸ್ವಾಮಿ ಅವರು ನಟಿಸಿದ್ದು ಕೆಲವೇ ಚಿತ್ರಗಳಲ್ಲಿ ಆದರೂ ಅವರನ್ನು ಮರೆಯುವಂತಿಲ್ಲ, ಅಷ್ಟರ ಮಟ್ಟಿಗೆ ಅವರ ಸೌಂದರ್ಯ ಹಾಗೆ ಅವರ ನಟನೆ ನಮ್ಮ ಕಣ್ಣಲ್ಲಿ ಕಟ್ಟುವಂತಿದೆ. ಹದಿಹರೆಯದ ಹುಡುಗಿಯಂತೆ ಕಂಗೊಳಿಸುವ ಇವರು ಈಗಿನ ಹೀರೋಯಿನ್ ಗಳಿಗೆ ಏನು ಕಡಿಮೆ ಇಲ್ಲ. ಕೇವಲ 14 ವರ್ಷಕ್ಕೆ ಚಿತ್ರರಂಗಕ್ಕೆ ಕಾಲಿಟ್ಟಂತಹ ಇವರಿಗೆ ಬ್ರೇಕ್ ಕೊಟ್ಟಂತಹ ಸಿನಿಮಾ ಎಂದರೆ ‘ನಿನಗಾಗಿ’ ವಿಜಯ್ ರಾಘವೇಂದ್ರ ಅವರ ಜೊತೆಯಲ್ಲಿ ನಿನಗಾಗಿ ಸಿನಿಮಾವನ್ನು ಮಾಡಿದ ನಂತರ ಇವರ ಜೀವನವೇ ಬದಲಾಗಿ ಹೋಯಿತು. ರಾಧಿಕಾ ಕುಮಾರಸ್ವಾಮಿ ಅವರು ಡಾನ್ಸ್ ಡಾನ್ಸ್ ವೇದಿಕೆಯಲ್ಲಿ ಸಲ್ಮಾನ್ ಅವರ ಜೊತೆಗೆ ಮಾಡಿರುವಂತಹ ಡಾನ್ಸರ್ ವಿಡಿಯೋ ಈಗ ಎಲ್ಲಿದೆ ವೈರಲ್ ಆಗುತ್ತಿದೆ ಇಷ್ಟೊಂದು ಅದ್ಭುತವಾಗಿ ಇವರು ನೃತ್ಯ ಮಾಡುತ್ತಾರೆ ಎಂದು ನಂಬಲು ಅಸಾಧ್ಯ.
ಯಾವ ಡಾನ್ಸರ್ಸ್ ಗೂ ಕಡಿಮೆ ಇಲ್ಲ ಎನ್ನುವಂತೆ ಡ್ಯಾನ್ಸ್ ಮಾಡಿದ್ದಾರೆ ಹೌದು ರಾಧಿಕಾ ಕುಮಾರಸ್ವಾಮಿ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಡಾನ್ಸ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ಜಡ್ಜ್ ಆಗಿದ್ದತಮರು ಇವರ ಜೊತೆಯಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ಸಲ್ಮಾನ್ ಅವರು ಸಹ ವೇದಿಕೆಯ ಮೇಲೆ ಜಡ್ಜ್ ಸ್ಥಾನವನ್ನು ಅಲಂಕರಿಸಿದ್ದರು ಕಾರ್ಯಕ್ರಮದಲ್ಲಿ ತುಂಬಾ ಲವಲೀಕೆಯಿಂದ ಇದ್ದಂತಹ ಒವರೆಲ್ಲರು ಅದ್ಭುತವಾದಂತಹ ನೃತ್ಯಗಾರರು. ಕೆಂಪು ಬಣ್ಣದ ಬಟ್ಟೆಯನ್ನು ಹುಟ್ಟು ಇವರು ಮಾಡಿರುವಂತಹ ಅದ್ಭುತವಾದ ಡ್ಯಾನ್ಸನ್ನು ನೋಡುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ರಾಧಿಕಾ ಕುಮಾರಸ್ವಾಮಿ ಇತ್ತೀಚೆಗೆ ಅಷ್ಟಾಗಿ ಸಿನಿಮಾ ಮಾಡುತ್ತಿಲ್ಲ ಸಿನಿಮಾ ಗಳಿಗಿಂತಲೂ ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯವಾಗಿ ಇರುತ್ತಾರೆ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ ಡೇಟ್ ಗಳನ್ನು ಕೊಡುತ್ತಿರುತ್ತಾರೆ ಫೋಟೋ ಜೊತೆಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ರಾಧಿಕಾ ಅವರು ಡಾನ್ಸ್ ಮಾಡಿರುವಂತಹ ವಿಡಿಯೋ ಹಂಚಿಕೊಂಡು ಇವರ ಈ ಡಾನ್ಸ್ ಗೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇವರ ಪೋಸ್ಟ್ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾ ಕುಳಿತಿರುತ್ತಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡುವ ಮೂಲಕ ಅಭಿಮಾನಿಗಳನ್ನು ಹೆಚ್ಚು ಹೆಚ್ಚು ಪಡೆದುಕೊಳ್ಳುತ್ತಿರುವ ರಾಧಿಕಾ ಜೀವನವನ್ನು ತುಂಬಾ ಎಂಜಾಯ್ ಮಾಡುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರ ವೈಯಕ್ತಿಕ ಜೀವನ ಅಷ್ಟೇನು ಚೆನ್ನಾಗಿ ಇಲ್ಲದಿದ್ದರೂ ಸಹ ಯಾವುದನ್ನು ಅವರು ತಲೆಕೆಡಿಸಿಕೊಳ್ಳದೆ ನಮ್ಮ ಜೀವನದಲ್ಲಿ ತಮಗೆ ಬೇಕಾದ ರೀತಿಯಲ್ಲಿ ಹೋಗುತ್ತಿದ್ದಾರೆ. ರಾಧಿಕಾ ಅವರಿಗೆ ಶಮಿಕಾ ಎಂಬ ಒಬ್ಬ ಮುದ್ದಾದ ಮಗಳು ಸಹ ಇದ್ದಾಳೆ ಅವಳಿಗಾಗಿ ಇವರು ಎಲ್ಲವನ್ನು ಮರೆತು ಜೀವನವನ್ನು ಸುಖಕರವಾಗಿ ನಿರ್ಮಾಣ ಮಾಡಿ ಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಕೆಲವೊಮ್ಮೆ ನಾವು ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ ಖುಷಿಯಿಂದ ಇರಬೇಕಾಗುತ್ತದೆ, ಮಗಲಿಗಾಗಿ ಎಲ್ಲವನ್ನು ಮುಡಿಪಾಗಿ ಇಟ್ಟಿದ್ದಾರೆ. ಚಿತ್ರರಂಗದಿಂದ ಬ್ರೇಕ್ ಪಡೆದುಕೊಂಡಿದ್ದಂತಹ ರಾಧಿಕಾ ಅವರು ಇದೀಗ ಚಿತ್ರರಂಗದಲ್ಲಿ ಹಲವಾರು ಪ್ರಾಜೆಕ್ಟ್ ಗಳನ್ನು ಮಾಡಲು ಮುಂದಾಗಿದ್ದಾರೆ ಕೇವಲ ನಟನೆ ಮಾತ್ರವಲ್ಲದೆ ನಿರ್ಮಾಣಕ್ಕೂ ಕಾಲಿಟ್ಟಿರುವ ಇವರು ಇದೀಗ ಮೂರು ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ ಈ ಚಿತ್ರಗಳು ಇವರಿಗೆ ಯಶಸ್ಸನ್ನು ತಂದುಕೊಟ್ಟಿವೆ ಅದೇ ರೀತಿಯಲ್ಲಿ ಚಿತ್ರರಂಗದಲ್ಲಿ ಯಾವಾಗಲೂ ಸಕ್ರಿಯರಾಗಿ ಮುಂದುವರೆಯಬೇಕು ಎನ್ನುವುದು ರಾಧಿಕಾ ಕುಮಾರಸ್ವಾಮಿ ಅವರ ಅಭಿಮಾನಿಗಳ ಆಶಯ. ರಾಧಿಕಾ ಕುಮಾರಸ್ವಾಮಿ ಅವರ ಅದ್ಭುತ ನಟನೆ ಮತ್ತು ಡಾನ್ಸ್ ವಿಡಿಯೋದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.