ಕಟ್ಟಡ ಕಾರ್ಮಿಕ ಮಹಿಳಾ ಫಲಾನುಭವಿ ಹೆರಿಗೆ ಸಹಾಯಧನ, ಅರ್ಜಿ ಸಲ್ಲಿಸುವ ವಿಧಾನ.!

 

WhatsApp Group Join Now
Telegram Group Join Now

ಕರ್ನಾಟಕ ಕಾರ್ಮಿಕ ಮಂಡಳಿಯಲ್ಲಿ ನೋಂದಣಿ ಆಗಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಈಗಾಗಲೇ ಸಾಕಷ್ಟು ಅನುಕೂಲತೆಗಳು ಸಿಗುತ್ತಿವೆ. ಲೇಬರ್ ಕಾರ್ಡ್ ಹೊಂದಿರುವವರ ಮಕ್ಕಳಿಗೆ ವಿದ್ಯಾರ್ಥಿ ಕಿಟ್, ಟ್ರೈನಿಂಗ್ ಕಮ್ ಟೂಲ್ ಕಿಟ್, ವಸತಿ ಸೌಲಭ್ಯ, ಪಿಂಚಣಿ ಸೌಲಭ್ಯ ಮತ್ತು ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ವಿವಾಹಕ್ಕೆ ಪ್ರೋತ್ಸಾಹ ಧನ, ಆರೋಗ್ಯ ಸೌಲಭ್ಯಗಳು ಸೇರಿದಂತೆ ಸಾಕಷ್ಟು ಸೌಲಭ್ಯಗಳು ಸರ್ಕಾರದಿಂದ ಸಿಗುತ್ತವೆ.

ಈಗ ಕಟ್ಟಡ ಮತ್ತು ಇತರೆ ನಿರ್ಮಾಣ ಮಹಿಳಾ ಕಾರ್ಮಿಕರಿಗೆ ಇನ್ನೂ ಒಂದು ಹೆಚ್ಚಿನ ಉಪಯೋಗ ಸಿಗುತ್ತಿದೆ. ಅದೇನೆಂದರೆ, ಅವರ ಹೆರಿಗೆ ಸಮಯದಲ್ಲಿ ಸಹಾಯಧನವನ್ನು ನೀಡಲಾಗುತ್ತಿದೆ. ಇದನ್ನು ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಈ ಯೋಜನೆಯ ಫಲಾನುಭವಿಗಳಾಗಲು ಮತ್ತೆ ಏನಿರಬೇಕು ಎಂಬಿತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.

ಅರ್ಹತೆಗಳು:-
● ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾಗಿ ಲೇಬರ್ ಕಾರ್ಡ್ ಹೊಂದಿರುವ ಮಹಿಳಾ ಕಾರ್ಮಿಕರಿಗೆ ಮಾತ್ರ ಈ ಅನುಕೂಲತೆ ಸಿಗಲಿದೆ.
● ಮೊದಲ ಎರಡು ಮಗುವಿಗೆ ಮಾತ್ರ ಈ ಸಹಾಯಧನ ಪಡೆಯಲು ಅವಕಾಶ.
ಹೆಣ್ಣು ಮಗುವಿನ ಜನನಕ್ಕೆ 30,000 ರೂಗಳು
ಗಂಡು ಮಗುವಿನ ಜನನಕ್ಕೆ 20,000 ರೂಗಳು
● ಒಂದು ವೇಳೆ ಈಗಾಗಲೇ ಜೀವಂತ ಎರಡು ಮಗುವನ್ನು ಹೊಂದಿದ್ದು ನಂತರದ ಮಕ್ಕಳ ಹೆರಿಗೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಬೇಕಾಗುವ ದಾಖಲೆಗಳು:-
● ವೈದ್ಯಕೀಯ ಶುಲ್ಕಗಳ ರಶೀದಿ
● ಆಧಾರ್ ಕಾರ್ಡ್
● ನೊಂದಾಯಿತ ಲೇಬರ್ ಕಾರ್ಡ್
● ಪಾಸ್ ಬುಕ್ ವಿವರ
● ಮೊಬೈಲ್ ಸಂಖ್ಯೆ

ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆಗಿ ಈಗಾಗಲೇ ರಿಜಿಸ್ಟರ್ ಆಗಿದ್ದರೆ ID ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಿ ಇಲ್ಲವಾದಲ್ಲಿ ರಿಜಿಸ್ಟರ್ ಆಗಿ ID ಹಾಗೂ ಪಾಸ್ವರ್ಡ್ ಪಡೆದು ಲಾಗಿನ್ ಆಗಿ.
● ಎರಡಕ್ಕೂ ಸ್ಕ್ರೀನ್ ಮೇಲೆಯೇ ಆಪ್ಷನ್ ಇರುತ್ತದೆ. ಆಯ್ದ ಆಪ್ಶನ್ ಮೂಲಕ ಸೇವಾ ಸಿಂಧು ಪೋರ್ಟಲ್ ಗೆ ಲಾಗಿನ್ ಆದ ಮೇಲೆ service.online.gov.in ವೆಬ್ಸೈಟ್ ಓಪನ್ ಆಗುತ್ತದೆ.

● ವೆಬ್ ಸೈಟ್ ಓಪನ್ ಮಾಡಲು ನಿಮ್ಮ ಯೂಸರ್ ಐಡಿ ಮತ್ತು ಪಾಸ್ವರ್ಡ್ ಹಾಕಬೇಕಾಗುತ್ತದೆ. ಯೂಸರ್ ಐಡಿ ಸ್ಥಳದಲ್ಲಿ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ನೀವು ಸೆಟ್ ಮಾಡಿರುವುದನ್ನು ಹಾಕಿ ಕಾಣುತ್ತಿರುವ ಕ್ಯಾಪ್ಚವನ್ನು ಕೂಡ ಹಾಕಿ ಸಬ್ಮಿಟ್ ಕೊಟ್ಟರೆ serviceplus ಎನ್ನುವ ವೆಬ್ಸೈಟ್ ಓಪನ್ ಆಗುತ್ತದೆ.
● ನಿಮ್ಮ ಪೇಜ್ ಎಡಭಾಗದಲ್ಲಿ ಕಾಣುವ ಅಪ್ಲೈ ಫಾರ್ ಸರ್ವಿಸಸ್ ಎನ್ನುವುದನ್ನು ಕ್ಲಿಕ್, ವಿವ್ಯೂ ಆಲ್ ಅವಾಯ್ಲೇಬಲ್ ಸರ್ವಿಸಸ್ ಎನ್ನುವುದರ ಮೇಲೆ ಟಿಕ್ ಮಾಡಿ.

● ಸೇವಾ ಸಿಂಧು ಪೋರ್ಟಲ್ ಅಲ್ಲಿ ಲಭ್ಯವಿರುವ ಎಲ್ಲಾ ಸರ್ವಿಸಸ್ ಗಳನ್ನು ಕೂಡ ತೋರಿಸುತ್ತದೆ, ಸರ್ಚ್ ಬಾರ್ ಅಲ್ಲಿ ಲೇಬರ್ ಎಂದು ಟೈಪ್ ಮಾಡಿ ಎಂಟರ್ ಕೊಡಿ. 23ನೇ ಕಾಲಮ್ ಅಲ್ಲಿ ಅಸಿಸ್ಟೆನ್ಸ್ ಫಾರ್ ಡೆಲಿವರಿ ಡಿಪಾರ್ಟ್ಮೆಂಟ್ ಆಫ್ ಲೇಬರ್ ಎನ್ನುವುದು ಕಾಣುತ್ತದೆ ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
● ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹೆರಿಗೆ ಸಹಾಯಧನಕ್ಕೆ ಅರ್ಜಿ ಎನ್ನುವುದು ಕಾಣಿಸುತ್ತದೆ. ಆ ಅಪ್ಲಿಕೇಶನ್ ಫಾರಂ ಅಲ್ಲಿ ಎಲ್ಲಾ ವಿವರಗಳನ್ನು ಕೂಡ ಸರಿಯಾಗಿ ಭರ್ತಿ ಮಾಡಿ. ಕೇಳಲಾದ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಮುಂದಿನ ಎಲ್ಲಾ ಹಂತಗಳನ್ನು ಸರಿಯಾಗಿ ಪೂರೈಸಿದ ಬಳಿಕ ನೇರ ಖಾತೆ ವರ್ಗಾವಣೆ ಬಳಿಕ ಈ ಸಹಾಯಧನ ನಿಮ್ಮ ಖಾತೆ ಸೇರುತ್ತದೆ.

● ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now