ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (Pradhan Mantri Phasal Bheem Scheme) ಎನ್ನುವುದು ರೈತರ ಬೆಳೆಗಳಿಗೆ ವಿಮೆ (Crop Insurance) ನೀಡುವ ಯೋಜನೆಯಾಗಿದೆ. ನರೇಂದ್ರ ಮೋದಿಯವರು (PM Narendra Modi) ದೇಶದ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರು ಇದರಲ್ಲಿ ಬೆಳೆಗಳಿಗೆ ಕೂಡ ವಿಮೆ ಮಾಡಿಸುವ ಸೌಲಭ್ಯ ನೀಡಿರುವ ಈ ಯೋಜನೆ ದೇಶದ ಇತಿಹಾಸದಲ್ಲೇ ಮೊದಲನೆಯದ್ದಾಗಿದೆ.
ಒಂದು ಯೋಜನೆ, ಒಂದು ರಾಷ್ಟ್ರ, ಒಂದು ಬೆಳೆ, ಒಂದು ಪ್ರೀಮಿಯಮ್ ಎಂಬ ಉದ್ದೇಶದೊಂದಿಗೆ ಈ ಯೋಜನೆಯನ್ನು ಆರಂಭಿಸಲಾಗಿದೆ. ಬೆಳೆ ಕಡಿತದ ಪ್ರಯೋಗಗಳ ಮೂಲಕ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಅಂದಾಜು ಮಾಡುವ ಪ್ರಕಾರ ಬೆಳೆಯ ಇಳುವರಿ ಕಡಿಮೆಯಾದ ಕಾರಣ ರೈತರು ಅನುಭವಿಸುವ ನಷ್ಟವನ್ನು ಸರಿದೂಗಿಸುವ ಉದ್ದೇಶವನ್ನು ಈ ಹೊಸ ಯೋಜನೆಯು ಹೊಂದಿದೆ.
ಈ ಸುದ್ದಿ ಓದಿ:- ಈ ಹಸು ದಿನಕ್ಕೆ 45 ಲೀಟರ್ ಹಾಲು ಕೊಡುತ್ತೆ.! ತಿಂಗಳಿಗೆ 50 ಸಾವಿರ ಆದಾಯ ಫಿಕ್ಸ್
ರೈತರು ತಮ್ಮ ಬೆಳೆಗಳ ಅನುಸಾರವಾಗಿ ನಿಗಧಿಯಾಗಿರುವ ಪ್ರೀಮಿಯಂ ಗಳನ್ನು ರೈತರು ಕಂಪನಿಗಳಿಗೆ ಕಟ್ಟಿ ನೋಂದಾಯಿಸಿಕೊಂಡರೆ ಬೆಳೆ ಹಾನಿ (Crop Loss) ಆದ ಸಂದರ್ಭದಲ್ಲಿ ಇದನ್ನು ಸಾಕ್ಷಾಧಾರಗಳ ಜೊತೆಗೆ ಕ್ಲೈಮ್ ಮಾಡಬಹುದು. ಅದೇ ರೀತಿ ಕಳೆದ ವರ್ಷ ರಾಜ್ಯದಲ್ಲಾದ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.
ಈ ಸಂದರ್ಭದಲ್ಲಿ ಯಾರು ಬೆಳೆ ವಿಮೆ ಮಾಡಿಸಿ ಪ್ರೀಮಿಯಂಗಳನ್ನು ಕಟ್ಟಿ ಕ್ಲೈಮ್ ಮಾಡಿದ್ದರು ಅಂತಹ ರೈತರ 2023-24ನೇ ಸಾಲಿನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ವಿಮೆ ಹಣ ಜಮೆ ಆಗಿದೆ. ನೀವು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೇ ಅಥವಾ ನಿಮ್ಮ ಅರ್ಜಿ ಸ್ಥಿತಿ ಹೇಗಿದೆ ಎನ್ನುವುದನ್ನು ಈ ಕೆಳಗೆ ತಿಳಿಸುವ ಸರಳ ವಿಧಾನಗಳ ಮೂಲಕ ಚೆಕ್ ಮಾಡಿ ತಿಳಿದುಕೊಳ್ಳಬಹುದು.
ಈ ಸುದ್ದಿ ಓದಿ:-ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 17ನೇ ಕಂತಿನ ಹಣ ಬಿಡುಗಡೆ.!
* https://samrakshane.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ.
* ಮುಖಪುಟದಲ್ಲಿ 2023-24 ನೇ ವರ್ಷ ಮತ್ತು ಬೆಳೆ ಎನ್ನುವಲ್ಲಿ ಖಾರೀಫ್ ಆಯ್ಕೆ ಮಾಡಿಕೊಳ್ಳಬೇಕು, ಮುಂದೆ (next) ಮೇಲೆ ಕ್ಲಿಕ್ ಮಾಡಬೇಕು.
* ಆಗ ಮತ್ತೊಂದು ಇಂಟರ್ ಫೇಸ್ ಓಪನ್ ಆಗುತ್ತದೆ. * ಅದರಲ್ಲಿ ಫಾರ್ಮರ್ಸ್ ಕಾಲಂ ಕೆಳಗಡೆ ಕಾಣುವ Check Status ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
* ರೈತರು ಈ ಹಂತದಲ್ಲಿ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಂಡು ಬೆಳೆ ವಿಮೆ ಮಾಡಿಸುವಾಗ ಯಾವ ಮೊಬೈಲ್ ನಂಬರ್ ಕೊಟ್ಟಿರುತ್ತಾರೋ ಆ ಮೊಬೈಲ್ ನಂಬರ್ ನಮೂದಿಸಬೇಕು.
ಈ ಸುದ್ದಿ ಓದಿ:- 5 ಎಕರೆ ಒಳಗೆ ಭೂಮಿ ಇರುವ ಎಲ್ಲಾ ರೈತರಿಗೂ ಸರ್ಕಾರದಿಂದ ವರ್ಷಕ್ಕೆ 31,000 ಸಿಗಲಿದೆ.!
* ಇದಾದ ಮೇಲೆ ನೀಡಲಾಗುವ ಕ್ಯಾಪ್ಚ್ಯಾ ಕೋಡ್ ಎಂಟ್ರಿ ಮಾಡಬೇಕು. (ಒಂದು ವೇಳೆ ಕ್ಯಾಪ್ಚ್ಯಾ ಕೋಡ್ ಸರಿಯಾಗಿ ಕಾಣಿಸದಿದ್ದರೆ ರಿಫ್ರೆಶ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಹೊಸ ಕ್ಯಾಪ್ಚ್ಯಾ ಕೋಡ್ ಅಪ್ಡೇಟ್ ಆಗುತ್ತದೆ). ಇದಾದ ಮೇಲೆ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಬೆಳೆ ವಿಮೆ ಹಣ ಜಮೆಯಾಗಿದೆಯೋ ಇಲ್ಲವೋ ಎಂಬ ಮಾಹಿತಿ ಸಿಗುತ್ತದೆ.
* ಇದಲ್ಲದೆ ಮತ್ತೊಂದು ವಿಧಾನದಲ್ಲಿ ಕೂಡ ಪ್ರಯತ್ನಿಸಬಹುದು ವಿಮಾ ಕಂಪನಿ ಸಿಬ್ಬಂದಿ ನಂಬರ್ ಗೊತ್ತಿರದಿದ್ದರೆ ರೈತರು ಕರೆ ಮಾಡಿ ವಿಚಾರಿಸಬಹುದು ಅಥವಾ ನಂಬರ್ ತಿಳಿಯದೆ ಇದ್ದರೆ ಸಹಾವಾಣಿ ಸಂಖ್ಯೆ 1800 180 1551 ಗೆ ಕರೆ ಮಾಡಿ, ಇಲ್ಲಿ ನೀವು ಯಾವ ವಿಮಾ ಕಂಪನಿಗೆ ಬೆಳೆ ವಿಮೆ ಪಾವತಿಸಿದ್ದೀರಿ ಎಂಬುದನ್ನು ಹೇಳಿ ಆ ಕಂಪನಿಯ ನಂಬರ್ ಪಡೆದು ವಿಚಾರಣೆ ಮಾಡಬಹುದು.