ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆ ಇರುವಂತಹ ನಟಿ ರಚಿತಾ ರಾಮ್ ಅವರು ಎಂದು ಹೇಳಿದರೆ ತಪ್ಪಾಗಲಾರದು. ಕನ್ನಡದಲ್ಲಿ ಬಹುತೇಕ ಎಲ್ಲಾ ನಟರುಗಳ ಜೊತೆಯಲ್ಲಿ ಅಭಿನಯಿಸಿರುವಂತಹ ರಚಿತಾ ರಾಮ್ ಅವರಿಗೆ ತಮ್ಮದೇ ಆದ ಫ್ಯಾನ್ ಬೇಸ್ ಇದೆ. ತಮ್ಮ ಮೊದಲ ಸಿನಿಮಾ ‘ಬುಲ್ ಬುಲ್’ ಮೂಲಕ ಅಭಿಮಾನಿಗಳಿಗೆ ಹತ್ತಿರವಾದಂತಹ ನಟಿ ರಚಿತಾ ರಾಮ್ ಅವರು ಇಂದಿಗೂ ಸಹ ಅಭಿಮಾನಿಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಇವರ ನಟನೆ ಎಂದರೆ ಎಲ್ಲರಿಗೂ ಸಹ ಅಷ್ಟೊಂದು ಪ್ರಿಯ, ಇದೀಗ ಡಾಲಿ ಧನಂಜಯ್ ಅವರ ಜೊತೆಯಲ್ಲಿ ಮಾನ್ಸೂನ್ ರಾಗ ಎನ್ನುವಂತಹ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಸೆಪ್ಟೆಂಬರ್ 16 ಈ ಚಿತ್ರ ಬಿಡುಗಡೆಯಾಗಿದ್ದು ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ ಈ ಒಂದು ಸಿನಿಮಾದಲ್ಲಿ ರಚಿತಾ ರಾಮ್ ಅವರು ಒಂದು ವಿಭಿನ್ನವಾದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದರೆ ಇದುವರೆಗೂ ಈ ರೀತಿಯಾದಂತಹ ಪಾತ್ರವನ್ನು ರಚಿತಾ ರಾಮ್ ಅವರು ನಿರ್ವಹಿಸಿರಲಿಲ್ಲ.
ಡಾಲಿ ಧನಂಜಯ್ ಮೊದಲ ಬಾರಿಗೆ ರಚಿತಾ ರಾಮ್ ಅವರ ಜೊತೆಯಲ್ಲಿ ನಟನೆ ಮಾಡಿದ್ದಾರೆ. ಧನಂಜಯ್ ಅವರ ಸಿನಿಮಾದ ಪ್ರಾರಂಭದ ದಿನಗಳಲ್ಲಿ ರಚಿತಾ ರಾಮ್ ಅವರನ್ನು ನೋಡಲು ತುಂಬಾ ಸರ್ಕಸ್ ಮಾಡಿದ್ದೆ ಎಂದು ಸ್ವತಹ ಅವರೇ ಹೇಳಿಕೊಂಡಿದ್ದಾರೆ. ಸಾಮಾನ್ಯ ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದಲ್ಲಿ ಇರುವಂತಹ ನಿರ್ಮಾಪಕರು, ನಿರ್ದೇಶಕರು, ಹಾಗೆಯೇ ನಟರು, ನಟಿಯರಲ್ಲಿ ಸಾಕಷ್ಟು ಮಂದಿರ ರಚಿತಾ ರಾಮ್ ಅವರ ಅಭಿಮಾನಿಗಳು ಇದ್ದಾರೆ. ಮಾನ್ಸೂನ್ ರಾಗ ಸಿನಿಮಾದ ಕುರಿತಾಗಿ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಂತಹ ದುನಿಯಾ ವಿಜಯ್ ಅವರು ಹಾಗೆಯೇ ಡಾಲಿ ಧನಂಜಯ್ ಅವರು ವೇದಿಕೆಯ ಮೇಲೆ ನಿಂತುಕೊಂಡು ರಚಿತಾ ರಾಮ್ ಅವರನ್ನು ಸಾಕಷ್ಟು ಹೊಗಳಿದ್ದಾರೆ ಇದಕ್ಕೆ ರಚಿತಾ ರಾಮ್ ಎದ್ದು ನಿಂತು ಅವರಿಗೆ ನಮಸ್ಕರಿಸಿದ್ದಾರೆ.
ಇದನ್ನು ನೋಡಿದರೆ ಅವರು ಎಷ್ಟು ಸಂಸ್ಕಾರವಂತರು ಎಂಬುದು ಎಲ್ಲರಿಗೂ ಸಹ ತಿಳಿಯುತ್ತದೆ. ರಚಿತಾ ರಾಮ್ ಅವರು ಯಾವುದೇ ಕೆಲಸವನ್ನು ಮಾಡಿದರು ಸಹ ಅದನ್ನು ಶ್ರದ್ದೆ ಮತ್ತು ಭಕ್ತಿಯಿಂದ ಮಾಡುತ್ತಾರೆ ಅವರು ಯಾವಾಗಲೂ ಪಾಸಿಟಿವ್ ಎನರ್ಜಿ ಹೊಂದಿರುತ್ತಾರೆ ಹಾಗೆಯೇ ರಚಿತಾ ರಾಮ್ ಅವರ ಜೊತೆಯಲ್ಲಿ ಇರುವಂತಹವರು ಸಹ ಅವರ ರೀತಿಯ ಪಾಸಿಟಿವ್ ಎನರ್ಜಿಯನ್ನು ಹೊಂದಿರುತ್ತಾರೆ ಎಂಬುದಕ್ಕೆ ನಾವೇ ಉದಾಹರಣೆ ಎಂದು ಡಾಲಿ ಧನಂಜಯ್ ಹೇಳಿದ್ದಾರೆ. ನಟಿ ರಚಿತಾ ರಾಮ್ ಅವರು ಈ ಒಂದು ಕಾರ್ಯಕ್ರಮಕ್ಕೆ ಗ್ರೇ ಮಿಶ್ರಿತ ಕೆಂಪು ಬಣ್ಣದ ಸೀರೆಯನ್ನು ಹುಟ್ಟುಬಂದಿದ್ದು ದೇವತೆಯಂತೆ ಕಂಗಳಿಸುತ್ತಿದ್ದರು.
ಇವರ ಫೋಟೋಗಳನ್ನು ನೋಡಿದಂತಹ ಅಭಿಮಾನಿಗಳು ಫೋಟೋಗಳನ್ನು ತುಂಬಾ ಇಷ್ಟಪಡುತ್ತಿದ್ದಾರೆ ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಈ ಒಂದು ಕಾರ್ಯಕ್ರಮದ ನಿರೂಪಣೆಯನ್ನು ಅನುಶ್ರೀ ಅವರು ನೆರವೇರಿಸಿದ್ದು ಕಾರ್ಯಕ್ರಮದ ಮಧ್ಯದಲ್ಲಿ ಅನುಶ್ರೀ ಮತ್ತು ರಚಿತಾ ರಾಮ್ ಅವರು ಡಾನ್ಸ್ ಮಾಡಿದ್ದಾರೆ ಇವರ ಜೊತೆಯಲ್ಲಿ ಸೇರಿಕೊಂಡು ನಟರಾಕ್ಷಸ ಎನಿಸಿಕೊಂಡಿರುವಂತಹ ಧನಂಜಯ್ ಅವರು ಕೂಡ ಡ್ಯಾನ್ಸ್ ಮಾಡಿದ್ದು ಈ ಒಂದು ವಿಡಿಯೋ ಎಲ್ಲೆಡೆ ಸಕ್ಕತ್ ವೈರಲ್ ಆಗುತ್ತಿದೆ. ಇವರ ಈ ಡಾನ್ಸ್ ನೋಡುತ್ತಿದ್ದರೆ ಮತ್ತೊಮ್ಮೆ ನೋಡಬೇಕು ಎಂದು ಅನಿಸುವುದಂತು ಖಂಡಿತ. ಇವರ ಈ ಡ್ಯಾನ್ಸ್ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ಸ್ ಮೂಲಕ ತಿಳಿಸಿ.