ದರ್ಶನ್ ಹೊಸದಾಗಿ ಖರೀದಿಸಿದ ಲ್ಯಾಂಬೋರ್ಗಿನಿ ಕಾರು ಬೆಲೆ ಎಷ್ಟು ಗೊತ್ತಾ .? ಬಾಯಿ ಮೇಲೆ ಬೆರಳು ಇಡುತ್ತೀರಾ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡ ಚಲನಚಿತ್ರ ರಂಗದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರುಗಳಲ್ಲಿ ಮೊದಲನೆ ಸಾರಿನಲ್ಲಿ ಇದ್ದಾರೆ ಅವರು ಎಲ್ಲೇ ಹೋದರು ಕೂಡ ಅವರ ಅಭಿಮಾನಿಗಳು ಅವರ ಸುತ್ತ ಸುತ್ತುವರೆಯುತ್ತಾರೆ. ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ನಟ ದರ್ಶನ್ ಅವರು ಪ್ರಾಣಿ ಪ್ರಿಯರು ಹಾಗೆಯೇ ಅವರಿಗೆ ದುಬಾರಿ ಕಾರುಗಳ ಮೇಲೆ ಕ್ರೇಜ್ ಕೂಡ ಇದೆ ಇತ್ತೀಚಿಗಷ್ಟೇ ದರ್ಶನ್ ಅವರ ಕಾರ್ ಕಲೆಕ್ಷನ್ ಗೆ ಮತ್ತೊಂದು ದುಬಾರಿ ಕಾರು ಸೇರಿಕೊಂಡಿದೆ ಎಂಬುದು ಈಗ ತಿಳಿದು ಬಂದಿದೆ. ಸದ್ಯ ದರ್ಶನ್ ಅವರು ಖರೀದಿಸಿರುವ ಕಾರು ಲ್ಯಾಂಬೋರ್ಗಿನಿ ಈಗಾಗಲೇ ಲ್ಯಾಂಬೋರ್ಗಿನಿ ಸಂಸ್ಥೆಯ ಎರಡು ದುಬಾರಿ ಕಾರುಗಳು ದರ್ಶನ್ ಅವರ ಬಳಿ ಇದೆ ಅವರ ಕಾರುಗಳ ಕಲೆಕ್ಷನ್ ಗೆ ಮತ್ತೊಂದು ಸೇರ್ಪಡೆಯಾಗುತ್ತಿದೆ ಇದು ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ಸುದ್ದಿ.

WhatsApp Group Join Now
Telegram Group Join Now

ದರ್ಶನ್ ಅವರು ಗ್ರೇ ಕಲರ್ ಲ್ಯಾಂಬೋರ್ಗಿನಿ ಅವೆಂಟಡೋರ್ ಕಾರನ್ನು ಖರೀದಿಸಿದ್ದಾರೆ ಇದರ ಬೆಲೆ ಬರೋಬ್ಬರಿ 5 ಕೋಟಿಗೂ ಹೆಚ್ಚು ಇದೆ ಎಂದು ತಿಳಿದುಬಂದಿದೆ. ದರ್ಶನ್ ಅವರಿಗೆ ಕಾರುಗಳ ಮೇಲೆ ಹೆಚ್ಚು ವ್ಯಾಮೋಹ ಹೀಗಾಗಿ ಇವರ ಹತ್ತಿರ ವಿಧವಿಧವಾದಂತಹ ಕಾರುಗಳ ಕಲೆಕ್ಷನ್ ಇದೆ. ದರ್ಶನ್ ಅವರ ಬಳಿ ಇರುವಂತಹ ಕಾರ್ ಗಳನ್ನು ನೋಡುವುದಾದರೆ ಇವರ ಬಳಿಯಲ್ಲಿ ರೇಂಜ್ ರೋವರ್ ಡಿಫೆಂಡರ್ ಕಾರು ಇದ್ದು ನಟ ದರ್ಶನ್ ಈ ಕಾರನ್ನು ಇತ್ತೀಚಿಗಷ್ಟೇ ಖರೀದಿಸಿದರು ಈ ಕಾರಿನ ಬೆಲೆ ಒಂದು 1.20 ಕೋಟಿ. ಲ್ಯಾಂಬೋರ್ಗಿನಿ ಅವೆಂಟೆಂಡೋರ್ ವೈಟ್ ಕಲರ್ ನ ಈ ಕಾರು 6 ಕೋಟಿಗೂ ಹೆಚ್ಚು ಬೆಲೆ ಬಾಳುತ್ತದೆ.

ಟೊಯೋಟಾ ವೆಲ್ ಫೈಯರ್ ಈ ಕಾರಿನ ಬೆಲೆ 85 ಲಕ್ಷ ರೂಪಾಯಿ. ಜಾಗ್ವಾರ್ XK ಈ ಕಾರವರನ್ನು ದರ್ಶನ್ ಅವರ ಬರ್ತಡೆಗೆ ಅವರ ಪತ್ನಿ ವಿಜಯಲಕ್ಷ್ಮಿ ಅವರು ಉಡುಗೊರೆಯಾಗಿ ನೀಡಿದರು ಈ ಕಾರಿನ ಬೆಲೆ 88 ಲಕ್ಷ. ಫೋರ್ಡ್ ಮಸ್ಟಾಂಗ್ ಡಿ ಬಾಸ್ ಅವರ ಈ ಕಾರಿನ ಬೆಲೆ 75 ಲಕ್ಷ. ಲ್ಯಾಂಬೋರ್ಗಿನಿ ಉರು ಇನ್ನು ಈ ಕಾರಿನ ಬೆಲೆ 3 ಕೋಟಿ. ಸಾಮಾನ್ಯವಾಗಿ ಕಾರುಗಳ ಬೆಲೆಯನ್ನು ಕೇಳಿದರೆ ಆಶ್ಚರ್ಯವಾಗುವುದು ಖಂಡಿತ. ಇನ್ನು ದರ್ಶನ್ ಅವರ ಹುಟ್ಟು ಹಬ್ಬದಲ್ಲಿ ಪ್ರೊಡ್ಯೂಸರ್ ಸಂದೇಶ್ ನಾಗರಾಜ್ ಅವರು ಫಾಸ್ಚ್ ಕಿಯಾರ್ ಕಾರನ್ನು ಉಡುಗೊರೆಯಾಗಿ ನೀಡಿದರು ಈ ಕಾರಿನ ಬೆಲೆ 1.5 ಕೋಟಿ.

ರೇಂಜ್ ರೋವರ್ ವೋಗ್ ಈ ಕಾರಿನ ಬೆಲೆ 2 ಕೋಟಿ 75 ಲಕ್ಷ. ಮಿನಿ ಕೂಪರ್ ಇದರ ಬೆಲೆ 38 ಲಕ್ಷ ರೂಪಾಯಿ, ಟೊಯೋಟಾ ಫಾರ್ಚುನರ್ ಈ ಕಾರಿನ ಬೆಲೆ 38 ಲಕ್ಷ ಇವೆರಡು ದರ್ಶನ್ ಅವರ ಬಳಿ ಇರುವ ಅತ್ಯಂತ ಕಡಿಮೆ ಬೆಲೆಯ ಕಾರುಗಳು. ರ್ಯಾಂಗ್ಲರ್ ಜೀಪ್ ಇದರ ಬೆಲೆ 53 ಲಕ್ಷ, ಬಿ ಎಂ ಡಬ್ಲ್ಯೂ 52OD ಈ ಕಾರಿನ ಬೆಲೆ 61 ಲಕ್ಷ ರೂಪಾಯಿ ಅಷ್ಟೇ ಅಲ್ಲದೆ ಇವರ ಬಳಿ ಆಡಿ Q7 ಎರಡು ಕಾರುಗಳಿದ್ದು ಒಂದು ಬಿಳಿ ಮತ್ತು ಕಪ್ಪು ಬಣ್ಣದ ಎರಡು ಕಾರುಗಳಿವೆ. ಹೀಗೆ ದರ್ಶನವರ ಬಳಿಯಲ್ಲಿ ಸಾಕಷ್ಟು ಕಾರುಗಳ ಕಲೆಕ್ಷನ್ ಇದ್ದು ಇವರಿಗೆ ಕಾರ್ ಕ್ರೇಜ್ ತುಂಬಾ ಇದೆ ದರ್ಶನ್ ಅವರ ಕಾರ್ ಕ್ರೇಜಿನ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now