ಹೆಣ್ಣು ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳುವ ಮುನ್ನ ಈ ವಿಷಯಗಳನ್ನ ತಿಳಿದುಕೊಂಡಿರಬೇಕು.!

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಸ್ತು ವಾಗಿರಬಹುದು ಪ್ರತಿಯೊಂದು ಭೂಮಿ ಜಾಗ ಎಲ್ಲದಕ್ಕೂ ಕೂಡ ಬೆಲೆ ಹೆಚ್ಚಾಗುತ್ತಿದ್ದಂತೆ ಮನುಷ್ಯರ ನಡವಳಿಕೆ ಅವರ ಸ್ವಭಾವಗಳು ಕೂಡ ಬದಲಾಗುತ್ತಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹೌದು ಅವೆಲ್ಲದರ ಬೆಲೆ ಹೆಚ್ಚಾಗುತ್ತಿ ದ್ದಂತೆ ಜನರ ಸ್ವಭಾವವೂ ಕೂಡ ಬದಲಾಗುತ್ತಿದ್ದು ಎಲ್ಲದರಲ್ಲಿಯೂ ಕೂಡ ಆಸೆ ಹೆಚ್ಚಾಗುತ್ತಲೇ ಬೆಳೆಯುತ್ತಿದೆ.

ಆದ್ದರಿಂದಲೇ ಯಾವುದನ್ನು ಸಹ ಮನುಷ್ಯ ಬಿಡಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದು ತಲುಪಿ ದ್ದಾನೆ. ಅದರಲ್ಲೂ ಆಸ್ತಿಯ ವಿಚಾರವಾಗಿ ಭೂಮಿ ಆಗಿರಬಹುದು, ಸೈಟುಗಳಾಗಿರಬಹುದು ಮನೆಗಳಾಗಿರಬಹುದು ಹೀಗೆ ಬೆಲೆ ಬಾಳುವ ಆಭರಣಗಳಾಗಿರಬಹುದು ಹೀಗೆ ಪ್ರತಿಯೊಂದರಲ್ಲಿಯೂ ಕೂಡ ಮಕ್ಕಳ ಕಣ್ಣು ಬೀಳುತ್ತಲೇ ಇದೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿ ದಂತೆ ಯಾವ ಆಸ್ತಿಗಳನ್ನು ಹೆಣ್ಣು ಮಕ್ಕಳಾಗಿರಬಹುದು ಅಥವಾ ಗಂಡು ಮಕ್ಕಳಾಗಿರಬಹುದು ತಂದೆಯಿಂದ ಪಡೆಯಬಹುದು ಹಾಗೂ ಯಾವ ಆಸ್ತಿಯಲ್ಲಿ ಅವರಿಗೆ ಹಕ್ಕು ಇರುತ್ತದೆ ಹಾಗೂ ತಂದೆಯ ಯಾವ ಆಸ್ತಿ ಯಲ್ಲಿ ಅವರಿಗೆ ಹಕ್ಕುಗಳು ಇರುವುದಿಲ್ಲ ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಕೆಲವೊಂದು ಮಾಹಿತಿಗಳನ್ನು ಈ ದಿನ ತಿಳಿಯೋಣ.

• ಮೊದಲನೆಯದಾಗಿ ಹೆಣ್ಣು ಮಕ್ಕಳಾಗಿರಬಹುದು ಅಥವಾ ಗಂಡು ಮಕ್ಕಳಾಗಿರಬಹುದು ಅವರು ತಮ್ಮ ತಂದೆಯ ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಸಂಪೂರ್ಣ ವಾದಂತಹ ಹಕ್ಕನ್ನು ಹೊಂದಿರುತ್ತಾರೆ. ಅದರಲ್ಲಿ ತಂದೆ ಮಕ್ಕಳಿಗೆ ಕೊಡುವುದಿಲ್ಲ ಎಂದು ಹೇಳಿದರು ಕೂಡ ಕೋರ್ಟ್ ಮೂಲಕ ನೀವು ಹೋಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ಆಸ್ತಿಯನ್ನು ನೀವು ಪಡೆಯಬಹುದಾಗಿದೆ.

• ಇನ್ನು ಎರಡನೆಯದಾಗಿ ತಂದೆಯ ಸ್ವಯಾರ್ಜಿತ ಆಸ್ತಿ ಅಂದರೆ ನಿಮ್ಮ ತಂದೆಯ ತಂದೆ ಆಸ್ತಿ ಅವರು ನಿಮ್ಮ ತಂದೆಗೆ ನಾನು ಮರಣ ನಂತರ ಇದು ನನ್ನ ಒಬ್ಬ ಮಗನಿಗೆ ಸಲ್ಲುತ್ತದೆ ಎಂದು ಹೇಳಿ ನಿಮ್ಮ ತಂದೆಗೆ ಅವರು ಆಸ್ತಿಯನ್ನು ಕೊಟ್ಟಿದ್ದರೆ ಅದರಲ್ಲಿ ನೀವು ಆಸ್ತಿಯನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅದರ ಸಂಪೂರ್ಣವಾದಂತಹ ಹಕ್ಕು ನಿಮ್ಮ ತಂದೆಗೆ ಮಾತ್ರ ಇರುತ್ತದೆ.

ಹಾಗಾಗಿ ನೀವು ನಿಮ್ಮ ತಂದೆಯ ಆಯಸ್ಸು ಇರುವ ತನಕ ಅವರನ್ನು ಚೆನ್ನಾಗಿ ನೋಡಿಕೊಂಡು ಆನಂತರ ಅಂದರೆ ಅವರ ಮರಣ ನಂತರ ಆ ಆಸ್ತಿಯನ್ನು ಪ್ರತಿಯೊಬ್ಬ ಮಕ್ಕಳು ಕೂಡ ಸಮನಾಗಿ ಹಂಚಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
• ಅದೇ ರೀತಿಯಾಗಿ ನಿಮ್ಮ ತಂದೆಗೆ ಅವರ ಅಜ್ಜ ಅಥವಾ ಅಜ್ಜಿ ಆಸ್ತಿ ಏನಾದಾರು ಸ್ವಯಾರ್ಜಿತವಾಗಿ ಬಂದಿದ್ದರೆ. ಅಂದರೆ ನಿಮ್ಮ ತಂದೆ ಹೆಸರಿಗೆ ಬರಬೇಕು ಎಂದು ಮಾಡಿದ್ದರೆ ಅಥವಾ ಮಾರಾಟ ಮಾಡುವುದರ ಮೂಲಕ ನಿಮ್ಮ ತಂದೆಗೆ ಕೊಟ್ಟಿದ್ದರೆ.

ಅಥವಾ ಪ್ರೀತಿಯಿಂದ ಕೊಟ್ಟಿದ್ದರೆ ಅದರಲ್ಲಿ ಸಂಪೂರ್ಣವಾದಂತಹ ಹಕ್ಕು ನಿಮ್ಮ ತಂದೆಗೆ ಇರುತ್ತದೆ. ಅದನ್ನು ನೀವು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ನಿಮ್ಮ ತಂದೆಯ ಕಾಲ ನಂತರ ನೀವು ಅದನ್ನು ಅಂದರೆ ಅಣ್ಣ ತಮ್ಮಂದಿರು ಹಂಚಿಕೊಳ್ಳಬಹುದು ಬದಲಿಗೆ ಅವರು ಬದುಕಿದ್ದಾಗಲೇ ಅದನ್ನು ನೀವು ಅನುಭವಿಸಲು ಸಾಧ್ಯವಾಗುವುದಿಲ್ಲ.
ಹೀಗೆ ಮೇಲೆ ಹೇಳಿದಂತಹ ಇಷ್ಟು ಮಾಹಿತಿಗಳನ್ನು ಕೂಡ ಪ್ರತಿಯೊಬ್ಬ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.

ಬದಲಿಗೆ ನೀವು ಕೋರ್ಟ್ ಮುಖಾಂತರ ನೀವು ಅರ್ಜಿಯನ್ನು ಹಾಕಿ ಅಲ್ಲಿ ಎಲ್ಲ ರೀತಿಯ ವಿಧಾನಗಳನ್ನು ಅನುಸರಿಸುವು ದರ ಬದಲು ನೀವೇ ನಿಮ್ಮ ನಡುವೆಯೇ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಂಡು ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡು ಕೊನೆಯ ತನಕ ನೀವು ನಿಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಂಡು ಆನಂತರ ನೀವು ಒಳ್ಳೆಯ ರೀತಿಯಲ್ಲಿ ಆಸ್ತಿಯನ್ನು ಪಡೆದುಕೊಳ್ಳು ವುದು ಮುಖ್ಯವಾಗಿರುತ್ತದೆ ಬದಲಿಗೆ ಕೋರ್ಟ್ ಮೆಟ್ಟಿಲೇರಿ ಅವರಿಗೆ ನೋವನ್ನು ಉಂಟು ಮಾಡಿ ಅವರಿಂದ ಆಸ್ತಿಯನ್ನು ಪಡೆದುಕೊಂಡರೆ ಒಳ್ಳೆಯದಾಗುವುದಿಲ್ಲ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now