ಮನೆ ಕಟ್ಟಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಪ್ರತಿಯೊಬ್ಬರಿಗೂ ತಮ್ಮ ಜೀವಮಾನದಲ್ಲಿ ಒಂದಾದರೂ ಮನೆ ಕಟ್ಟಬೇಕು ಎನ್ನುವುದು ಮನುಷ್ಯರಾದವರಲ್ಲಿ ಸಹಜ ಅಭಿಲಾಷೆ. ಹತ್ತರಲ್ಲಿ ಒಂಬತ್ತು ಜನರ ಯೋಜನಾ ಪಟ್ಟಿಯಲ್ಲಿ ಈ ಆಸೆಯೂ ಸೇರಿರುತ್ತದೆ. ಕೆಲವರಿಗೆ ಇದು ಅಂದುಕೊಂಡ ಹಾಗೆ ಸರಾಗವಾಗಿ ಸಾಧ್ಯವಾದವರಿಗೆ ಹಲವರಿಗೆ ಬಹಳ ಸಮಯ ತೆಗೆದುಕೊಳ್ಳುತ್ತದೆ.
ಕೆಲವರಿಗೆ ಇದು ಪ್ರತಿಷ್ಠೆಯ ವಿಚಾರವಾದರೆ ಮಧ್ಯಮ ವರ್ಗದವರೇ ಹೆಚ್ಚಾಗಿ ತುಂಬಿರುವ ನಮ್ಮ ದೇಶದಲ್ಲಿ ಬಹುತೇಕರಿಗೆ ಮೂಲಭೂತ ಅವಶ್ಯಕತೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ಸ್ವಂತ ಸೂರಿನಡಿ ನಡೆಸುವ ಸೌಲಭ್ಯ ಕಲ್ಪಿಸಬೇಕು ಎನ್ನುವ ನಿಟ್ಟಿನಲ್ಲಿ ಹಲವಾರು ವಸತಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದು ಆ ಮೂಲಕ ಆರ್ಥಿಕ ನೆರವು ನೀಡುತ್ತಿದೆ.
ಈ ಸುದ್ದಿ ಓದಿ:-ಗೃಹಲಕ್ಷ್ಮಿ 8ನೇ ಕಂತಿನ ಹಣ ಇಂದು ಬಿಡುಗಡೆ.! ನಿಮ್ಮ ಖಾತೆಗೂ ಹಣ ಬಂದಿದಿಯೇ ಈ ರೀತಿ ಚೆಕ್ ಮಾಡಿ, ಪೆಂಡಿಂಗ್ ಹಣ ಪಡೆಯಲು ಹೊಸ ಮಾರ್ಗಸೂಚಿ ಪ್ರಕಟ.!
ಮತ್ತು ಸರ್ಕಾರೇತರವಾಗಿಯೂ ಹಣಕಾಸು ಸಂಸ್ಥೆಗಳಲ್ಲಿ ಕೂಡ ಮನೆ ಕಟ್ಟುವವರಿಗೆ ಸಾಲ ಸೌಲಭ್ ಕಡಿಮೆ ಬಡ್ಡಿ ದರದಲ್ಲಿ ಹಾಗೂ ಸರಳವಾದ EMI ಸೌಲಭ್ಯಗಳಲ್ಲಿ ದೊರಕುತ್ತಿದೆ. ಇಷ್ಟೆಲ್ಲ ಇದ್ದರೂ ಮನೆ ಕಟ್ಟುವ ವಿಷಯ ಅಷ್ಟು ಸುಲಭ ಅಲ್ಲವೇ ಅಲ್ಲ.
ಕನ್ನಡದ ಅನೇಕ ಗಾದೆ ಮಾತುಗಳು ಮನೆ ಕಟ್ಟುವುದು ಎಷ್ಟು ಕಷ್ಟ ಎನ್ನುವುದನ್ನು ವಿವರಿಸುತ್ತವೆ. ಅದರಲ್ಲಿ ಮನೆ ಕಟ್ಟಿ ನೋಡಿ ಮದುವೆ ಮಾಡಿ ನೋಡು ಎನ್ನುವ ಗಾದೆಯನ್ನು ಕೂಡ ಮೊದಲಿಗೆ ಉದಾಹರಿಸಬಹುದು. ಈಗಿನ ಕಾಲದಲ್ಲಿ ನೋಡುವುದಾದರೆ ಮದುವೆ ಬೇಕಾದರೂ ಮಾಡಿಬಿಡಬಹುದು ಆದರೆ ಮನೆ ಎನ್ನುವುದು ಬಹಳ ದೊಡ್ಡ ಜವಾಬ್ದಾರಿ ಎನಿಸುತ್ತದೆ.
ಈ ಸುದ್ದಿ ಓದಿ:-ಅಂಚೆ ಇಲಾಖೆ ನೇಮಕಾತಿ, ಆಸಕ್ತರು ಅರ್ಜಿ ಸಲ್ಲಿಸಿ ವೇತನ 63,200/-
ಯಾಕೆಂದರೆ ಕನಿಷ್ಠ ಒಂದು ವರ್ಷವಾದರೂ ಇದಕ್ಕೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ಒಂದು ವರ್ಷದವರೆಗೆ ನಾವು ಪ್ರತಿನಿತ್ಯವೂ ಇದಕ್ಕೆ ಸಮಯ ಮೀಸಲಿಟ್ಟು ಜೋಪಾನ ಮಾಡಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ನಾವು ನಮ್ಮ ಮುಂದಿನ ಪೀಳಿಗೆಗೂ ಇದನ್ನು ಬಳುವಳಿಯಾಗಿ ಕೊಡಲು ಸಾಧ್ಯ ಇಲ್ಲವಾದಲ್ಲಿ ಹಣ ವ್ಯರ್ಥವಾಗುವುದರ ಜೊತೆಗೆ ಪ್ರತಿನಿತ್ಯವು ನಮ್ಮ ಇಷ್ಟದ ಪ್ರಕಾರ ಬರಲಿಲ್ಲ ಎಂದುಕೊಂಡು ಪಶ್ಚಾತಾಪ ಪಡಬೇಕಾಗುತ್ತದೆ.
ಇದೆಲ್ಲವೂ ಒಂದು ಕಡೆಯಾದರೆ ದಿನದಿಂದ ದಿನಕ್ಕೆ ಮನೆ ಕಟ್ಟುವ ಬಜೆಟ್ ದುಬಾರಿಯಾಗುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಸಾಮಾನ್ಯವಾಗಿ ಜನರು ಸಾಲ ಸೋಲಾ ಮಾಡಿಯಾದರೂ ಮನೆ ಕಟ್ಟುತ್ತಾರೆ ಆದರೆ ಹೆಚ್ಚಿನ ಸಂಖ್ಯೆಯ ಜನ ಪೈಸೆ ಪೈಸೆ ಕೂಡಿಟ್ಟು ಸ್ವಲ್ಪ ಅನುಕೂಲವಾದ ಮೇಲೆ ಮನೆ ಕಟ್ಟಲು ಪ್ಲಾನ್ ಮಾಡುತ್ತಾರೆ.
ಈ ಸುದ್ದಿ ಓದಿ:-USA ಟೆಕ್ನಾಲಜಿಯ ಬೋರ್ ವೆಲ್ ಪಾಯಿಂಟ್, ಈ ವಿಧಾನ ಅನುಸರಿಸುವುದರ ಬೋರ್ವೆಲ್ ಪಾಯಿಂಟ್ ಫೇಲ್ ಆಗುವ ಚಾನ್ಸೇ ಇರಲ್ಲ.!
ಈ ರೀತಿ ಮನೆ ಕಟ್ಟುವ ಯೋಜನೆಯನ್ನು ಮುಂದೆ ಹಾಕಿಕೊಂಡು ಹೋದವರಿಗೆ ಒಂದು ಶಾ’ಕಿಂ’ಗ್ ಸಂಗತಿ ಇದೆ. ಅಗತ್ಯ ವಸ್ತುಗಳಾದ ಕಬ್ಬಿಣ ಮರಳು ಸಿಮೆಂಟು ಇಟ್ಟಿಗೆ ಇವುಗಳ ಬೆಲೆ ಹೆಚ್ಚಾಗುತ್ತಿದ್ದು ಕಾರ್ಮಿಕರ ಕೊರತೆ ಕೂಡ ಉಂಟಾಗಿದೆ. ಹಾಗಾಗಿ ಆರು ತಿಂಗಳ ಮೊದಲು ಮನೆ ಕಟ್ಟಿದವರಿಗಿಂತ ಈಗಿನ ಖರ್ಚು ಅಜಗಜಾಂತರ ವ್ಯತ್ಯಾಸವಾಗುತ್ತಿದೆ. ಹಾಗಾದರೆ ಸದ್ಯಕ್ಕೆ ಯಾವ ವಸ್ತುಗಳ ರೇಟ್ ಎಷ್ಟು ಹೆಚ್ಚಾಗಿದೆ ಎಂಬ ವಿವರ ಹೀಗಿದೆ ನೋಡಿ.
* ಉತ್ತಮ ಗುಣಮಟ್ಟದ ಸಿಮೆಂಟ್ 40KG ಬ್ಯಾಗ್ ರೂ.335 – ರೂ.360 ಗೆ ಏರಿಕೆಯಾಗಿದೆ, ಇದು ರೂ. 375 ರವರೆಗೂ ಏರುವ ಸಾಧ್ಯತೆ ಇದೆ
* ಕಬ್ಬಿಣ 4 ಗಜ ಮೀ ಗೆ ರೂ.1,000 ಹೆಚ್ಚಾಗಿದೆ, ಹಿಂದೆ ರೂ.4,000 ಇದ್ದ ಕಬ್ಬಿಣ ಈಗ ರೂ.5000 ಆಗಿದೆ
* ಮಣ್ಣು ಸಾಗಿಸುವ ಟ್ರ್ಯಾಕ್ಟರ್ಗೆ ಪ್ರತಿ ಲೋಡ್ ರೂ.1500
ಈ ಸುದ್ದಿ ಓದಿ:-PF ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್, ವೇತನ ಮಿತಿ 15,000 ದಿಂದ 21,000ಕ್ಕೆ ಹೆಚ್ಚಳ.!
* ಕೆಂಪು ಇಟ್ಟಿಗೆ ಬೆಲೆ ರೂ.10 ರಿಂದ 11 ರೂ.ಗೆ ಏರಿಕೆಯಾಗಿದೆ.
* ಸಣ್ಣ ಸಿಮೆಂಟ್ ಇಟ್ಟಿಗೆ ರೂ.55 ರಿಂದ ರೂ.60 ಕ್ಕೆ ಏರಿಕೆಯಾಗಿದೆ.
* ಇದೆಲ್ಲದರ ಜೊತೆ ಕೂಲಿ ಕಾರ್ಮಿಕರ ಕೊರತೆ ಅವರ ದಿನಗೂಲಿ ಹೆಚ್ಚಿಸುತ್ತಿದೆ ಮತ್ತು ಮಳೆ ಕಡಿಮೆಯಾಗಿರುವ ಕಾರಣ ನೀರಿನ ಕೊರತೆ ಮನೆ ಕಟ್ಟುವವರ ಹೆಗಲಿಗೆ ಹೊರೆ ಆಗುತ್ತಿದೆ.