ಈಗಿನ ಕಾಲದಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಪ್ರತಿಯೊಬ್ಬರಿಗೂ ಅನಿವಾರ್ಯ. ನಾವು ದುಡಿದ ಹಣವನ್ನು ಉಳಿಕೆ ಮಾಡುವುದಕ್ಕೆ ಮಾತ್ರವಲ್ಲದೆ ಹೂಡಿಕೆ ಮಾಡುವುದಕ್ಕೂ ಕೂಡ ಬ್ಯಾಂಕ್ ಅಕೌಂಟ್ ಇರಬೇಕು ಮತ್ತು ದೇಶದಾದ್ಯಂತ ನೂರಾರು ಬಗೆಯ ಬ್ಯಾಂಕುಗಳು ಹಣಕಾಸು ಸಂಸ್ಥೆಗಳು ಇದ್ದು ಒಂದಕ್ಕಿಂತ ಒಂದು ಆಕರ್ಷಣೀಯ ಯೋಜನೆಗಳನ್ನು (Schemes) ಪರಿಚಯಿಸುತ್ತಲೇ ಇರುತ್ತವೆ.
ಆದರೆ ಹೆಚ್ಚಿನ ಬಡ್ಡಿದರದ (high intrest) ಆಕರ್ಷಣೆಗೆ ಒಳಗಾಗುವ ಮೊದಲು ನಮ್ಮ ಹಣಕಾಸಿಗೆ ಭದ್ರತೆ ಎಷ್ಟಿದೆ ಎನ್ನುವುದರ ಬಗ್ಗೆ ಗಮನ ನೀಡುವುದು ಒಳ್ಳೆಯದು. ನಮಗೆ ಹೆಚ್ಚಿನ ಬಡ್ಡಿರದ ಲಾಭದೊಂದಿಗೆ ನಮ್ಮ ಹಣಕ್ಕೆ ಅದೇ ರೀತಿ ಗ್ಯಾರಂಟಿ ಇರಬೇಕು ಎಂದರೆ ರಾಷ್ಟ್ರೀಕೃತ ಬ್ಯಾಂಕ್ ಗಳು (Natinalized Banks) ಮೊದಲನೇ ಆದ್ಯತೆ ಆಗಿರುವುದು ಒಳ್ಳೆಯದು.
ಈ ಸುದ್ದಿ ಓದಿ:- SBI ಬ್ಯಾಂಕ್ ನಾ ಈ ಯೋಜನೆಯಲ್ಲಿ, 1 ಲಕ್ಷ ಡೆಪಾಸಿಟ್ ಮಾಡಿ ಸಾಕು 38 ಲಕ್ಷ ಸಿಗುತ್ತೆ.!
ಯಾಕೆಂದರೆ ಇವುಗಳಲ್ಲಿ RBI ನಿಯಮನುಸಾರ 5 ಲಕ್ಷದವರೆಗೆ ಠೇವಣಿ ಭರವಸೆ (assurance) ಇರುತ್ತದೆ. ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ RBI ಇದನ್ನು ಭರಿಸಿ ಠೇವಣಿದಾರನಿಗೆ ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಪ್ರತಿಷ್ಠಿತ ಬ್ಯಾಂಕ್ ಆದ SBI (State Bank Of Mysore) ಕೂಡ ಸದಾ ಮುಂದಿದೆ.
ಈ ಸುದ್ದಿ ಓದಿ:- ಗುಪ್ತಚರ ಇಲಾಖೆ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ ವೇತನ 69,100
ಪ್ರತಿ ವರ್ಷ ಇಂತಹ ವಿವಿಧ ಯೋಜನೆಗಳ ಚಿಂತನೆಯೊಂದಿಗೆ ತನ್ನ ಗ್ರಾಹಕರ ಆಸಕ್ತಿ ತಣಿಸಲು ಬಯಸುವ SBI ಬ್ಯಾಂಕ್ ನೀಡಿದ್ದ ಎರಡು FD (Fixed Deposite) ಯೋಜನೆಗಳು ಇದೇ ತಿಂಗಳ 31 ರಂದು (31 March, 2024) ಕೊನೆಯಾಗುತ್ತಿದೆ, ಇವು ಇದುವರೆಗೆನ ಎಲ್ಲಾ ಸ್ಕೀಮ್ ಗಳಿಗಿಂತ ಅತಿ ಹೆಚ್ಚು ಬಡ್ಡಿದರ ನೀಡುವಂತಹ ಯೋಜನೆಗಳಾಗಿವೆ ಎಂದು ಕೂಡ ಹೆಸರಾಗಿವೆ.
ನೀವೇನಾದರೂ ಈ ಸ್ಕೀಮ್ ನಲ್ಲಿ ಮುಂದುವರೆಯಲು ಅಥವಾ ಹೊಸದಾಗಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೂ ಇದು ಅತ್ಯುತ್ತಮ ಆಕ್ಷನ್ ಮತ್ತು ಕಡೆಯ ಅವಕಾಶ ಆಗಿದೆ. ಯಾವ ಯೋಜನೆಗಳು? ಮತ್ತು ಇವುಗಳ ವೈಶಿಷ್ಟತೆಗಳು ಏನು? ಇವುಗಳ ಬಗ್ಗೆ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಎಲ್ಲರಿಗೂ ಈ ಯೋಜನೆಗಳ ಅನುಕೂಲತೆ ಸಿಗುವಂತೆ ನೆರವಾಗಿ.
SBI V ಕೇರ್ ಠೇವಣಿ ಯೋಜನೆ (SBI V Care Deposite Schemes):-
* ಇದು ಹಿರಿಯ ನಾಗರಿಕರಿಗಾಗಿ ಆಕರ್ಷಕ ಆದಾಯ ಅಂದರೆ ಹೆಚ್ಚಿನ ಬಡ್ಡಿ ದರದ ಮೂಲಕ ಲಾಭ ಮಾಡಿಕೊಡುತ್ತಿರುವ ಯೋಜನೆ ಆಗಿದೆ
* ಹಿರಿಯ ನಾಗರಿಕರಿಗೆ ಈ ಯೋಜನೆ ಮೂಲಕ 7.5% ಬಡ್ಡಿದರವನ್ನು ಸಿಗುತ್ತದೆ. ಅದಾಗ್ಯೂ ಈ ಯೋಜನೆಯಲ್ಲಿ
60ಕ್ಕಿಂತ ಕಡಿಮೆ ವಯಸ್ಸಿನವರು ಕೂಡ ಹೂಡಿಕೆ ಮಾಡಬಹುದು, ಆದರೆ 0.50% ಕಡಿಮೆಯಾಗಿ 6.5% ಬಡ್ಡಿದರ ಸಿಗುತ್ತದೆ
* ಯೋಜನೆಯಡಿ 5 ರಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಬೇಕು.
* ಠೇವಣಿ ಮಾಡಿದ ಮೊತ್ತದ ಮೇಲೆ ಸಾಲವನ್ನು ಕೂಡ ಪಡೆಯುವ ಹೆಚ್ಚುವರಿ ಪ್ರಯೋಜನವನ್ನು ಹೊಂದಿದೆ.
* SBI ಅಮೃತ್ ಕಲಶ್ ಠೇವಣಿ ಯೋಜನೆ (SBI Amruth Kalash Deposite Scheme):-
* SBI ಯ ಅಮೃತ್ ಕಲಶ್ ಠೇವಣಿ ಯೋಜನೆಯಡಿ 40 ದಿನಗಳ ಅವಧಿಗೆ 7.10% ವಾರ್ಷಿಕ ಆದಾಯದೊಂದಿಗೆ ಅಲ್ಪಾವಧಿಯ ಹೂಡಿಕೆಯ ಅವಕಾಶವನ್ನು ಸಿಗುತ್ತದೆ.
* ಹಿರಿಯ ನಾಗರಿಕರು ಈ ಯೋಜನೆಯಡಿ 7.60% ಬಡ್ಡಿದರವನ್ನು ಪಡೆಯುತ್ತಾರೆ
* ಈ ಯೋಚನೆಯಡಿ ಕೂಡ ಹೂಡಿಕೆ ಮೇಲೆ ಸಾಲ ಸೌಲಭ್ಯ ಸಿಗುತ್ತದೆ.