ಆಹಾರ ಇಲಾಖೆ ಅಧಿಕಾರಿಗಳು (Food Department) ಪ್ರತಿ ತಿಂಗಳು ಕೂಡ ರೇಷನ್ ಕಾರ್ಡ್ ಗಳ (Rationcard) ಪರಿಶೀಲನೆ ಮಾಡುತ್ತಾರೆ. ಈ ವೇಳೆಗೆ 2016ರ BPL ರೇಷನ್ ಕಾರ್ಡ್ ಮಾನದಂಡಗಳನ್ನು ಮೀರಿ ಅನುಕೂಲಸ್ಥರು ಸಹಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ BPL / AAY ರೇಷನ್ ಕಾರ್ಡ್ ಗಳನ್ನು ಹೊಂದಿದ್ದರೆ ಅಂತಹ ರೇಷನ್ ಕಾರ್ಡ್ ಗಳನ್ನು ರದ್ದುಪಡಿಸುತ್ತಾರೆ (Rationcard Cancel).
ಇದರ ಜೊತೆಗೆ ರೇಷನ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ನಿಯಮಗಳ ಬದಲಾವಣೆ ಆಗುತ್ತಿರುತ್ತದೆ. ಇದಕ್ಕೆ ತಕ್ಕ ಹಾಗೆ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ಅಂತಹ ರೇಷನ್ ಕಾರ್ಡ್ ಗಳನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ (Suspend) ಇತ್ತೀಚೆಗೆ ರೇಷನ್ ಕಾರ್ಡ್ ರಾಜ್ಯದಲ್ಲಿ ಹೆಚ್ಚು ಚರ್ಚೆಯಲ್ಲಿರುವ ವಿಷಯ.
ಈ ಸುದ್ದಿ ತಪ್ಪದೆ ಓದಿ:- ಮಾನವ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ.? ಎಷ್ಟು ಪಾಲು ಸಿಗುತ್ತೆ.? ಕಾನೂನು ಹೇಳುವುದೇನು ನೋಡಿ.!
ಯಾಕೆಂದರೆ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯ (Annabhagya and Gruhalakshmi) ಹಣವು ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥೆಯಾಗಿರುವ ಮಹಿಳೆಯ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ. ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ನಿಯಮ ಪ್ರಕಾರವಾಗಿ ಇಲ್ಲದೆ ಹೋದಲ್ಲಿ.
ನಿಮಗೆ ಆ ತಿಂಗಳಿನಲ್ಲಿ ಅನ್ನ ಭಾಗ್ಯ ಯೋಜನೆ ಅಥವಾ ಗೃಹಲಕ್ಷ್ಮಿ ಯೋಜನೆ ಅಥವಾ ರೇಷನ್ ಕಾರ್ಡ್ ಆಧಾರಿತವಾದ ಯೋಜನೆಯ ಅನುದಾನವು ಕೂಡ ಸಿಗುವುದಿಲ್ಲ. ಇತ್ತೀಚೆಗೆ ಸರ್ಕಾರ ಈ ಸಹಾಯಧನಗಳನ್ನು ಪಡೆಯಲು e-KYC ಕೂಡ ಕಡ್ಡಾಯಗೊಳಿಸಿದೆ. ನೀವೇನಾದರೂ e-KYC ಪೂರ್ಣಗೊಳಿಸದೆ ಇದ್ದರೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ e-KYC ಪೂರ್ತಿಯಾಗುವವರೆಗೂ ಕೂಡ ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿರುತ್ತದೆ.
ಈ ಸುದ್ದಿ ತಪ್ಪದೆ ಓದಿ:- ಗೃಹಲಕ್ಷ್ಮಿ ಯೋಜನೆ 6ನೇ ಕಂತಿನ ಹಣ & ಪೆಂಡಿಂಗ್ ಇರುವ ಎಲ್ಲಾ ಹಣ ಈ ದಿನ ನಿಮ್ಮ ಖಾತೆಗೆ ಜಮೆ ಆಗುತ್ತೆ.!
ಈ ಪ್ರಕ್ರಿಯೆ ಪೂರ್ತಿಗೊಂಡ ನಂತರವೇ ನಿರ್ಬಂಧ ತೆರೆವುಗೊಳಿಸಲಾಗುತ್ತದೆ ಇದರೊಂದಿಗೆ ಆಹಾರ ಇಲಾಖೆ ವತಿಯಿಂದ ಈಗಾಗಲೇ ರದ್ದಾಗಿರುವ ರೇಷನ್ ಕಾರ್ಡ್ ಗಳ ಲಿಸ್ಟ್ ಕೂಡ ಬಿಡುಗಡೆ ಆಗಿದೆ. ಅದರಲ್ಲಿ ಜನವರಿ ತಿಂಗಳಲ್ಲಿ ರದ್ದಾಗಿರುವ ರೇಷನ್ ಕಾರ್ಡ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ನೀವು ಚೆಕ್ ಮಾಡಿಕೊಳ್ಳಬೇಕು.
ಒಂದು ವೇಳೆ ಎಲ್ಲಾ ಮಾಹಿತಿಯು ಸರಿ ಇದ್ದು ಕೂಡ ಯಾವುದಾದರೂ ತಾಂತ್ರಿಕ ಸಮಸ್ಯೆಯಿಂದಾಗಿ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಅಥವಾ ಸ್ಥಗಿತಗೊಂಡಿದೆ ಎಂದು ತೋರಿಸುತ್ತಿದ್ದರೆ ನೀವು ಕೂಡಲೇ ಆಹಾರ ಇಲಾಖೆ ಕಚೇರಿಗೆ ಭೇಟಿ ಕೊಟ್ಟು ಸಮಸ್ಯೆ ಸರಿಪಡಿಸಿಕೊಳ್ಳಬೇಕು ಯಾವ ವಿಧಾನದಲ್ಲಿ ನೀವು ಮೊಬೈಲ್ ನಲ್ಲಿಯೇ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಬಹುದು ಎನ್ನುವ ಸುಲಭ ವಿಧಾನವನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ತಪ್ಪದೆ ಓದಿ:- ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗಲಿದೆ 60 ಸಾವಿರ.!
* ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/ ಗೆ ಭೇಟಿ ನೀಡಿ.
* ಇ-ಸೇವೆ ವಿಭಾಗಕ್ಕೆ (e-Services) ಹೋಗಿ.
* ರದ್ದಾಗಿರುವ ಅಥವಾ ಸ್ಥಗಿತಗೊಂಡಿರುವ ರೇಷನ್ ಕಾರ್ಡ್ (Cancelled or Suspended Ration Card) ಎಂಬ ಆಪ್ಷನ್ ಕ್ಲಿಕ್ ಮಾಡಿ.
* ವಿಭಾಗವಾರು ಮೂರು ಲಿಂಕ್ ಗಳು ಕಾಣುತ್ತವೆ ನಿಮ್ಮ ಜಿಲ್ಲೆಯ ಹೆಸರಿರುವ ಲಿಂಕ್ ಸೆಲೆಕ್ಟ್ ಮಾಡಿ.
* ಮುಂದಿನ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷವನ್ನು ಆಯ್ಕೆ ಮಾಡಿ GO ಕ್ಲಿಕ್ ಮಾಡಿ.
ಈ ಸುದ್ದಿ ತಪ್ಪದೆ ಓದಿ:- ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಗೆ ಹೋಗದೆ ಮನೆಯಲ್ಲಿ ಕುಳಿತು ಬದಲಾಯಿಸುವ ವಿಧಾನ.!
* ಈಗ ನೀವು ರದ್ದಾದ ಅಥವಾ ಅಮಾನತುಗೊಂಡ ಪಡಿತರ ಚೀಟಿಯ ಪಟ್ಟಿಯನ್ನು ನೋಡುತ್ತೀರಿ. ನಿಮ್ಮ ತಾಲೂಕಿನಲ್ಲಿ ಯಾರ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆಯೋ ಅವರ ಹೆಸರನ್ನು ಇಲ್ಲಿ ನೋಡಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ಮುಂದಿನ ತಿಂಗಳಿನಿಂದ ನೀವು ಯಾವುದೇ ಗ್ಯಾರಂಟಿ ಯೋಜನೆಯ ಹಣವನ್ನು ಪಡೆಯುವುದಿಲ್ಲ. ನಿಮ್ಮ ಕಾರ್ಡ್ ಸಂಖ್ಯೆ / ಹೆಸರು ಯಾವ ಕಾರಣಕ್ಕಾಗಿ ರದ್ದಾಗಿದೆ ಅಥವಾ ಸ್ಥಗಿತಗೊಂಡಿದೆ ಎನ್ನುವ ಮಾಹಿತಿ ಕೂಡ ಇರುತ್ತದೆ.