ಕೆಲವೊಂದು ಸಂದರ್ಭದಲ್ಲಿ ನಮ್ಮ ಮೊಬೈಲ್ ಸಂಖ್ಯೆ ಚೇಂಜ್ ಮಾಡಬೇಕಿರುತ್ತದೆ. ಆದರೆ ಈಗ ನಾವು ಆಧಾರ್ ಸಮೇತವಾಗಿ ಬ್ಯಾಂಕ್ ಖಾತೆ ಸೇರಿದಂತೆ ಅನೇಕ ಕಡೆ ನಮ್ಮ ಮೊಬೈಲ್ ನಂಬರ್ ಲಿಂಕ್ ಮಾಡಿರುತ್ತೇವೆ. ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (Change Mobile No. on Bank Account) ಬೇರೆ ಆದರೆ ಬದಲಾಯಿಸುವವರೆಗೂ ನಾವು ಆನ್ಲೈನ್ ನಲ್ಲಿ ಪೇಮೆಂಟ್ ಮಾಡಲು ಆಗುವುದಿಲ್ಲ.
ಬ್ಯಾಂಕ್ ಶಾಖೆಗೆ ಹೋಗಿ ನಾವು ಮೊಬೈಲ್ ನಂಬರ್ ಬದಲಾಯಿಸಿಕೊಳ್ಳಬಹುದು, ಈಗ ಎಲ್ಲವೂ ಡಿಜಿಟಲೀಕರಣ ಗೊಂಡಿರುವುದರಿಂದ ಆನ್ಲೈನಲ್ಲಿ ಮನೆಯಲ್ಲಿಯೇ ಕುಳಿತು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಅದು ಹೇಗೆ ಎಂಬ ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ತಪ್ಪದೆ ಓದಿ:- ಪ್ಯೂರ್ ನಾಟಿ ಕೋಳಿ ಸಾಕಾಣಿಕೆಯಿಂದ ಪ್ರತಿನಿತ್ಯ ತಪ್ಪದೇ 1000 ಗಳಿಸಬಹುದು, ಪೂರ್ತಿ ತರಬೇತಿ ಜೊತೆಗೆ ಅವರೇ ಮರಿ ಖರೀದಿ ಮಾಡ್ತಾರೆ.!
* ಗೂಗಲ್ ಅಡ್ರೆಸ್ ಬರ್ ನಲ್ಲಿ ನೀವು ಯಾವ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದೀರಾ ಆ ಬ್ಯಾಂಕ್ ನ ಆನ್ಲೈನ್ ಬ್ಯಾಂಕಿಂಗ್ ಸೇವೆ ಒದಗಿಸುವ ವೆಬ್ಸೈಟ್ ಹೆಸರು ಹಾಕಿ ಸರ್ಚ್ ಮಾಡಿ. ಉದಾಹರಣೆಗೆ:-
SBI ಖಾತೆದಾರರು www.onlinesbi.com
Canara Bank ಖಾತೆದಾರರು www.onlinecanara.com
ಬಹುತೇಕ ಎಲ್ಲಾ ಬ್ಯಾಂಕ್ ವೆಬ್ಸೈಟ್ ವಿಳಾಸವೂ ಇದೆ ಮಾದರಿಯಲ್ಲಿ ಇರುತ್ತದೆ.
* SBI online Banking ಮುಖಪುಟ ಓಪನ್ ಆದಮೇಲೆ Personal Banking ಎನ್ನುವ ಆಪ್ಷನ್ ಕಾಣುತ್ತದೆ Log in ಮೇಲೆ ಕ್ಲಿಕ್ ಮಾಡಿ ಮುಂದಿನ ಹಂತದಲ್ಲಿ Continue to Login ಎನ್ನುವುದರ ಮೇಲೆ ಕ್ಲಿಕ್ ಮಾಡಿ
* ಇದಾದ ನಂತರ User ID & Password ಟೈಪ್ ಮಾಡಿಕೊಂಡು ನೀಡಿರುವ image captcha ಕೂಡ ಹಾಕಿ Login ಕ್ಲಿಕ್ ಮಾಡಿ.
ಈ ಸುದ್ದಿ ತಪ್ಪದೆ ಓದಿ:- ವಾಹನ ಮಾಲೀಕರಿಗೆ ಮಹತ್ವದ ಸುದ್ದಿ, HSRP ನಂಬರ್ ಪ್ಲೇಟ್ ಇಲ್ಲದೇ ಇದ್ದರೆ ಇನ್ಮುಂದೆ ದಂಡ ಗ್ಯಾರಂಟಿ, ನಿಮ್ಮ ಮೊಬೈಲ್ ಮೂಲಕವೇ ಅಪ್ಲೈ ಮಾಡಿ.!
* ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ ಆನ್ಲೈನ್ ಬ್ಯಾಂಕಿಂಗ್ ಕುರಿತಾದ ಬಹಳಷ್ಟು ಆಪ್ಷನ್ ಗಳಿರುತ್ತವೆ. ನೀವು ಮೆನು ಬಾರ್ ನಲ್ಲಿ ಮೊದಲನೇದಾಗಿ ಇರುವ My Accounts & Profile ಮೇಲೆ ಕ್ಲಿಕ್ ಮಾಡಿ, ನಂತರ ಇರುವ ಫೋಲ್ಡರ್ ಗಳಲ್ಲಿ Profile ಎನ್ನುವುದರ ಮೇಲೆ ಕ್ಲಿಕ್ ಮಾಡಿ.
* Personal details / Mobile ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
* ಮುಂದಿನ ಹಂತದಲ್ಲಿ ನಿಮ್ಮ Profile Password ಟೈಪ್ ಮಾಡಿ Submit ಕೊಡಿ, ನಿಮ್ಮ ಪರ್ಸನಲ್ ಅಕೌಂಟ್ ಡೀಟೇಲ್ಸ್ ಓಪನ್ ಆಗುತ್ತದೆ
* ನಿಮ್ಮ e-mail ID & Mobile No. ಚೇಂಜ್ ಮಾಡಿಕೊಳ್ಳುವುದಕ್ಕೆ ಅನುಮತಿ ನೀಡಿರುತ್ತಾರೆ. ಹಲವಾರು ವಿಧಾನಗಳಿರುತ್ತವೆ,
ಈ ಸುದ್ದಿ ತಪ್ಪದೆ ಓದಿ:- ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ…
1. through branch ಸೆಲೆಕ್ಟ್ ಮಾಡಿದರೆ ಹೊಸ ಮೊಬೈಲ್ ನಂಬರ್ ಎಂಟ್ರಿ ಮಾಡಿ ಅಕ್ನಾಲೆಜ್ ಮೆಂಟ್ ಪ್ರಿಂಟ್ ತೆಗೆದುಕೊಂಡು ಹೋಗಿ ಚೇಂಜ್ ಮಾಡಿಸಿಕೊಳ್ಳಬಹುದು.
2. Change Mobile No. Domestic only through OTP / ATM / Contact Centre ಏನು ಆಪ್ಷನ್ ಕ್ಲಿಕ್ ಮಾಡಿ Create request ನಲ್ಲಿ ನಿಮ್ಮ ಹೊಸ ಮೊಬೈಲ್ ನಂಬರ್ ಎಂಟ್ರಿ ಮಾಡಿ ಮತ್ತೊಮ್ಮೆ ಅದೇ ನಂಬರ್ ಎಂಟ್ರಿ ಮಾಡುವ ಮೂಲಕ ಕನ್ಫರ್ಮ್ ಮಾಡಿ Submit ಕೊಡಿ.
* ನಿಮ್ಮ ಬಳಿ ಹಳೆ ಹಾಗೂ ಹೊಸ ಎರಡು ಮೊಬೈಲ್ ನಂಬರ್ ಇದ್ದರೆ by OTP with Both Mobile No. ಎನ್ನುವ ಮೊದಲ ಆಪ್ಷನ್ ಕ್ಲಿಕ್ ಮಾಡಿ ಒಂದು ವೇಳೆ ಮೊಬೈಲ್ ನಂಬರ್ ಇಲ್ಲದಿದ್ದರೆ ಇತರೆ ಆಪ್ಷನ್ ಗಳು ಇರುತ್ತವೆ ಅವುಗಳನ್ನು ನೋಡಿ ನಿಮಗೆ ಅನುಕೂಲವಾದದ್ದನ್ನು ಸೆಲೆಕ್ಟ್ ಮಾಡಿ Proceed ಕ್ಲಿಕ್ ಮಾಡಿ.
ಈ ಸುದ್ದಿ ತಪ್ಪದೆ ಓದಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!
* Bank account No. ಬಂದಿರುತ್ತದೆ ಅದನ್ನು ಸೆಲೆಕ್ಟ್ ಮಾಡಿ Proceed ಕ್ಲಿಕ್ ಮಾಡಿ, Card type ಎನ್ನುವ ಆಪ್ಷನ್ ಬಂದಾಗ ಸರಿಯಾದ ಉತ್ತರವನ್ನು ಸೆಲೆಕ್ಟ್ ಮಾಡಿ ಮುಂದುವರೆಸಿ ನಿಮ್ಮ ATM Card details ಕೇಳಲಾಗಿರುತ್ತದೆ ಅದನ್ನು ಕೂಡ ಸರಿಯಾಗಿ ಭರ್ತಿ ಮಾಡಿ, ಚೆಕ್ ಮಾಡಲು Pay ಆಕ್ಷನ್ ಇರುತ್ತದೆ ಮುಂದುವರೆಸಿ Rs.1 ಮಾತ್ರ ಪೇಮೆಂಟ್ ತೆಗೆದುಕೊಳ್ಳುತ್ತದೆ.
* ಇಷ್ಟಕ್ಕೆ ಮುಗಿಯುವುದಿಲ್ಲ ನಿಮ್ಮ ಹೊಸ ಮತ್ತು ಹಳೆ ಎರಡು ಮೊಬೈಲ್ ಸಂಖ್ಯೆಗೂ OTP & Reference No. ಹೋಗಿರುತ್ತದೆ, ಅದನ್ನು ನಾವು ಹೇಳುವ ವಿಧಾನದಲ್ಲಿ SMS ಮಾಡಬೇಕಿರುತ್ತದೆ.
* ACTIVATE OTP UM Ref.No ಈ ಫಾರ್ಮೆಟ್ ನಲ್ಲಿ 567676 ಈ ನಂಬರಿಗೆ ಸಂದೇಶ ಕಳುಹಿಸಿ (2 ಮೊಬೈಲ್ ನಂಬರ್ ಇಂದಲೂ ಇದೇ ರೀತಿಯಾಗಿ SMS ಮಾಡಿ)
* ನೀವೇನಾದರೂ ATM Cardಮೂಲಕ ಮೊಬೈಲ್ ಸಂಖ್ಯೆ ಬದಲಾಯಿಸಲು ಸೆಲೆಕ್ಟ್ ಮಾಡಿದ್ದರೆ ATM ಗೆ ಹೋಗಿ ಚೇಂಜ್ ಮಾಡಬೇಕಾಗುತ್ತದೆ.