ಕುರಿ ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನುಗಾರಿಕೆ ಕೃಷಿ ಜೊತೆಜೊತೆಗೆ ಮಾಡಬಹುದಾದಂತಹ ಕಸಬುಗಳಾಗಿವೆ. ಒಂದು ವೇಳೆ ಪೂರ್ಣ ಪ್ರಮಾಣದಲ್ಲಿಯೇ ಇದರಲ್ಲಿ ತೊಡಗಿಕೊಂಡರೂ ಕೂಡ ಬಹಳ ಲಾಭ ಪಡೆಯಬಹುದು. ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಕುಟುಂಬಗಳ ಆದಾಯದ ಮೂಲ ಇದೇ ಆಗಿದೆ.
ಪ್ರತಿಯೊಬ್ಬ ರೈತನು ಕೂಡ ತನ್ನ ಕೃಷಿ ಚಟುವಟಿಕೆ ಜೊತೆಗೆ ಈ ರೀತಿ ಸಣ್ಣ ಪ್ರಮಾಣದ ದಲ್ಲಿ ಕುರಿ ಕೋಳಿ ಮೇಕೆ ಹಸು ಸಾಕುತ್ತಿರುತ್ತಾರೆ. ಕುರಿ ಕೋಳಿ ಸಾಕಾಣಿಕೆ ಮಾಡುವುದಕ್ಕಾಗಿಯೇ ಸರ್ಕಾರದಿಂದ ಅನೇಕ ಸೌಲಭ್ಯಗಳಿರುವುದರಿಂದ ಈ ನೆರವನ್ನು ಪಡೆದುಕೊಂಡು ದೊಡ್ಡ ಪ್ರಮಾಣದಲ್ಲಿ ಘಟಕಳನ್ನು ಸ್ಥಾಪಿಸಿ ಪೂರ್ಣ ಪ್ರಮಾಣದಲ್ಲಿ ಇದರಲ್ಲೇ ತೊಡಗಿಕೊಂಡವರು ಕೂಡ ಇದ್ದಾರೆ.
ಈ ರೀತಿ ಫಾರಂ ಗಳನ್ನು ಮಾಡುವವರು ಫಾರಂ ಕೋಳಿ, ಬಾಯ್ಲರ್ ಕೋಳಿ ತಳಿಗಳನ್ನು ಬೆಳೆಸುತ್ತಾರೆ ಆದರೆ ಇದಕ್ಕಿಂತ ನಾಟಿ ಕೋಳಿ ಸಾಕುವುದರಿಂದ ಹೆಚ್ಚು ಹಣ ಪಡೆಯಬಹುದು ಅದಕ್ಕೆ ನಾವು ನೀಡುವ ತರಬೇತಿ ಪಡೆದು ಆ ನಿಯಮಗಳನ್ನು ಪಾಲಿಸಿ ಎನ್ನುತ್ತಾರೆ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡಿರುವ ಶಿವಮೊಗ್ಗದ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಮಲ್ನಾಡ್ ನಾಟಿ ಕೋಳಿ ಸಾಕಾಣಿಕೆ ಮತ್ತು ತರಬೇತಿ ಕೇಂದ್ರದ ಮಾಲೀಕರಾದ ಅವಿನಾಶ್ ಎನ್ನುವ ಯುವ ರೈತ.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!
ಇವರು ಹೇಳುವ ಪ್ರಕಾರ ಫಾರಂ ಕೋಳಿಗಳನ್ನು ಸಾಕುವುದಕ್ಕಿಂತ ನಾಟಿ ಕೋಳಿಗಳನ್ನು ಸಾಕುವುದು ಹೆಚ್ಚು ಉತ್ತಮವಂತೆ ಮತ್ತು ಖರ್ಚು ಕೂಡ ಕಡಿಮೆ, ರಿಸ್ಕ್ ಪ್ರಮಾಣ ಕೂಡ ಕಡಿಮೆ, ಇಳುವರಿ ಕೂಡ ಚೆನ್ನಾಗಿರುತ್ತೆ. ಈ ರೀತಿ ಆಸಕ್ತಿ ಇದ್ದು ರೂ.50,000 ಬಂಡವಾಳ ಇದ್ದರೂ ಕೂಡ ಆ ರೈತರ ನಮ್ಮ ಬಳಿಗೆ ಬಂದರೆ ನಾವು ಉಚಿತ ತರಬೇತಿ ಕೊಟ್ಟು ತಳಿಗಳನ್ನು ಕೊಡುವುದರ ಜೊತೆಗೆ ಹೇಗೆ ಸಾಕಬೇಕು?
ಹೇಗೆ ಆದಾಯ ಮಾಡಿಕೊಳ್ಳಬೇಕು? ಹೇಗೆ ನೋಡಿಕೊಳ್ಳಬೇಕು? ಹೇಗೆ ಮಾರಾಟ ಮಾಡಬೇಕು ಎಂದು ಹೇಳಿಕೊಡುವುದರ ಜೊತೆಗೆ ಒಂದು ವೇಳೆ ಅವರು ಮಾರಾಟ ಮಾಡಲು ಇಚ್ಛಿಸಿದರೆ ನಾವೇ ಕೊಂಡುಕೊಳ್ಳುತ್ತೇವೆ ಕೂಡ ಎನ್ನುವ ಧೈರ್ಯವನ್ನು ಕೂಡ ನೀಡುತ್ತಾರೆ. ಮೊದಮೊದಲು ಒಂದು ಫಾರಂ ಆರಂಭಿಸಿದ್ದ ಇವರು ಇಂದು ನಾಲ್ಕು ಕಡೆಗಳಲ್ಲಿ ಫಾರಂ ತೆರೆದಿದ್ದಾರೆ.
ನಾಟಿ ಕೋಳಿಗಳನ್ನು ಸಾಕುವ ಒಂದು ಪ್ಲಸ್ ಪಾಯಿಂಟ್ ಏನೆಂದರೆ ಇವುಗಳಿಗೆ ಯಾವುದೇ ಫೀಡ್‌ಗಳನ್ನು ಹಾಕುವ ಅವಶ್ಯಕತೆ ಇಲ್ಲ ಮತ್ತು ನಾಟಿ ಕೋಳಿಗಳಿಗೆ ಎಂದು ಕೂಡ ಬೇಡಿಕೆ ಇದ್ದೆ ಇರುವುದರಿಂದ ನಾಟಿ ಕೋಳಿ ನಮ್ಮ ಮನೆಯ ವೇಸ್ಟ್, ಪದಾರ್ಥಗಳು ತಿಪ್ಪೆ, ಜಮೀನು ಇದರಲ್ಲಿಯೇ ಆಹಾರ ಹುಡುಕಿಕೊಂಡು ತಿನ್ನುತ್ತದೆ ಮತ್ತು ಚೆನ್ನಾಗಿ ಬೆಳೆಯುತ್ತದೆ.
ಈ ಸುದ್ದಿ ಓದಿ:- ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!
ಒಂದು ವೇಳೆ ರೈತ ಕಷ್ಟಪಟ್ಟು ಆರೇಳು ತಿಂಗಳು ನೋಡಿಕೊಂಡರೆ ನಂತರ ಮೊಟ್ಟೆ ಇಡಲು ಆರಂಭಿಸಿದಾಗ ಆ ಮೊಟ್ಟೆಗಳಿಂದಲೇ ದಿನಕ್ಕೆ ಕಡಿಮೆ ಎಂದರೂ ರೂ.500 ರಿಂದ ರೂ.1000 ವರೆಗೆ ದಿನ ಆದಾಯ ಪಡೆಯಬಹುದು. ರೈತ ಏಳೆಂಟು ತಿಂಗಳಿಗೆ ಮಾರುವುದರ ಬದಲು ಸ್ವಲ್ಪ ತಡೆದು ನೋಡಿ ಮೊಟ್ಟೆಯಿಂದ ಆದಾಯ ಪಡೆದ ಮೇಲೆ ಮಾರಿದರೆ ಆತನ ಬಂಡವಾಳ ಮೊಟ್ಟೆಯಲ್ಲಿ ಬಂದಿರುತ್ತದೆ ನಂತರ ಕೋಳಿ ಮಾರಾಟ ಮಾಡಿದ್ದರಲ್ಲಿ ಕೈ ತುಂಬಾ ಹಣ ಸಿಗುತ್ತದೆ.
ಈ ನಾಟಿ ಕೋಳಿಗಳನ್ನು ಮನೆಯಲ್ಲಿ ವಯಸ್ಸಾಗಿರುವ ತಂದೆ ತಾಯಿ ಅಥವಾ ಮನೆಯಲ್ಲಿರುವ ಹೆಣ್ಣು ಮಕ್ಕಳೇ ಬಹಳ ಸಲೀಸಾಗಿ ಆರಾಮವಾಗಿ ನೋಡಿಕೊಳ್ಳಬಹುದು ಎನ್ನುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.
ಉಚಿತ ತರಬೇತಿ ಮತ್ತು ತಳಿಗಾಗಿ ಸಂಪರ್ಕಿಸಿ:-
ಅವಿನಾಶ್ (ಮಲ್ನಾಡ್ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರ)
ಕೊನಂದೂರು,
ತೀರ್ಥಹಳ್ಳಿ ತಾಲೂಕು,
ಶಿವಮೊಗ್ಗ ಜಿಲ್ಲೆ.
9036796744