ಅಂಚೆ ಕಛೇರಿಗಳು (Post Office) ಈಗ ಪತ್ರ ವ್ಯವಹಾರಕ್ಕೆ ಮಾತ್ರವಲ್ಲ, ಒಂದು ಸ್ಥಳೀಯ ಬ್ಯಾಂಕ್ ಆಗಿ ಕೂಡ ನೆರವಿಗೆ ಬರುತ್ತಿವೆ. ಜೊತೆಗೆ ಅಂಚೆ ಕಚೇರಿಯಲ್ಲೂ ಕೂಡ ಸಾಕಷ್ಟು ಉಳಿತಾಯ ಹಾಗೂ ಹೂಡಿಕೆ ಯೋಜನೆಗಳು (Saving and Investment Schemes) ಇದ್ದು, ಇದು ಕೇಂದ್ರ ಸರ್ಕಾರದಡಿ (Government) ಕಾರ್ಯ ನಿರ್ವಹಿಸುವುದರಿಂದ ನೂರಕ್ಕೆ ನೂರರಷ್ಟು ಹಣಕ್ಕೆ ಭದ್ರತೆ ಮತ್ತು ಖಚಿತ ಲಾಭ ಕೂಡ ಸಿಗುತ್ತದೆ ಎಂದು ನಂಬಬಹುದು.
ಅಂಚೆ ಕಚೇರಿಯಲ್ಲಿ ಎಲ್ಲಾ ವರ್ಗದವರಿಗೂ ಅನುಕೂಲವಾಗುವಂತೆ ವಿವಿಧ ಬಗೆಯ 13ಕ್ಕೂ ಹೆಚ್ಚು ಯೋಜನೆಗಳಿದ್ದು 1 ಜನವರಿ, 2024 ರಲ್ಲಿ ಅನೇಕ ಯೋಜನೆಗಳಿಗೆ ಬಡ್ಡಿದರವು (Intrest) ಪರೀಷ್ಕೃತಗೊಂಡಿದೆ. ಇದರಲ್ಲಿ ಹೆಣ್ಣು ಮಕ್ಕಳಿಗಾಗಿಯೇ ರೂಪಿಸಿರುವ ವಿಶೇಷ ಯೋಜನೆಯಾದ ವಾರ್ಷಿಕ ರೂ. 1.5 ಲಕ್ಷ ಹೂಡಿಕೆ ಮಾಡಿದರೆ ಅಥವಾ ತಿಂಗಳಿಗೆ ಕೇವಲ 12,500/- ಸಾವಿರ ಹೂಡಿಕೆ ಮಾಡಿದರೆ ಯೋಜನೆ ಮೆಚುರಿಟಿ ಅವಧಿಯಲ್ಲಿ ಒಟ್ಟು 47 ಲಕ್ಷ ಹೂಡಿಕೆಗೆ 69 ಲಕ್ಷ ಹಣ ಕೈ ಸೇರುವ ವಿಶೇಷ ಯೋಜನೆಯಾದ ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddi Yojane) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ತಪ್ಪದೆ ಓದಿ:- ಕೇಂದ್ರದಿಂದ ಜಾರಿಗೆ ಬಂತು ಭಾರತ್ ರೈಸ್ ಸ್ಕೀಮ್, ಇನ್ಮುಂದೆ ಕೇವಲ 29 ರೂಪಾಯಿಗೆ ಸಿಗಲಿದೆ BT ಅಕ್ಕಿ…
22 ಜನವರಿ, 2015 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ಬೇಟಿ ಬಚಾವೋ – ಬೇಟಿ ಪಢಾವೋ ಈ ಉಪಕ್ರಮದಡಿ ಪರಿಚಯಿಸಿದ ಸರ್ಕಾರಿ ಉಳಿತಾಯ ಯೋಜನೆಯಾಗಿದೆ, ಈ ಯೋಜನೆಗೆ ಇರುವ ನೀತಿ ನಿಬಂಧನೆಗಳು ಮತ್ತು ಹೂಡಿಕೆಯ ಮಾಹಿತಿ ಹೀಗಿದೆ ನೋಡಿ.
* ಹೆಣ್ಣು ಮಕ್ಕಳ ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಈ ಯೋಜನೆಗೆ ಖಾತೆ ತೆರೆಯಬಹುದು
* ಹೆಣ್ಣು ಮಗುವಿಗೆ 10 ವರ್ಷ ತುಂಬುವುದರ ಒಳಗೆ ಖಾತೆ ತೆರೆಯಬೇಕು
* ಒಂದು ಹೆಣ್ಣು ಮಗುವಿಗೆ ಒಂದು ಖಾತೆಯನ್ನು ಮಾತ್ರ ಅನುಮತಿ
ಈ ಸುದ್ದಿ ತಪ್ಪದೆ ಓದಿ:- HDFC ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! ಪ್ರಮುಖ ಘೋಷಣೆ…
* ಪೋಷಕರು ತಮ್ಮ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಮಾತ್ರ ಈ ಯೋಜನೆಗೆ ಖಾತೆ ತೆರೆಯಬಹುದು ಆದರೆ
ಅವಳಿ ಅಥವಾ ತ್ರಿವಳಿ ಹೆಣ್ಣುಮಕ್ಕಳು ಹುಟ್ಟುವ ಮೊದಲು ಹೆಣ್ಣು ಮಗು ಜನಿಸಿದರೆ ಅಥವಾ ಮೊದಲು ತ್ರಿವಳಿ ಮಕ್ಕಳು ಜನಿಸಿದರೆ, ನಂತರ ಮೂರನೇ ಖಾತೆಯನ್ನು ತೆರೆಯಬಹುದು.
ಒಂದು ವೇಳೆ ಅವಳಿ ಅಥವಾ ತ್ರಿವಳಿ ಹೆಣ್ಣುಮಕ್ಕಳ ಜನನದ ನಂತರ ಹೆಣ್ಣು ಮಗು ಜನಿಸಿದರೆ, ಮೂರನೇ SSY ಖಾತೆಯನ್ನು ತೆರೆಯಲಾಗುವುದಿಲ್ಲ
* ಈಶ SSY ಖಾತೆಯನ್ನು ದೇಶದ ಒಂದು ಭಾಗದಿಂದ ಇನ್ನೊಂದು ಭಾಗದ ಪೋಸ್ಟ್ ಆಫೀಸ್ ಗೆ ಮುಕ್ತವಾಗಿ ವರ್ಗಾಯಿಸಬಹುದು .
* ಖಾತೆ ತೆರೆದ ದಿನಾಂಕದಿಂದ 15 ವರ್ಷಗಳವರೆಗೆ ನೀವು ಪ್ರತಿ ವರ್ಷ ಕನಿಷ್ಠ ರೂ. 250 ರಿಂದ ರೂ.1.5 ಲಕ್ಷದವರೆಗೆ ತಮಗೆ ಅನುಕೂಲ ಆದಾಗ ಹಣವನ್ನು ಹೂಡಿಕೆ ಮಾಡಬಹುದು.
* 15 ವರ್ಷಕ್ಕೆ ನಿಮ್ಮ ಹೂಡಿಕೆ ಮಾಡುವ ಅವಧಿ ಮುಗಿಯುತ್ತದೆ, ಅದರ ನಂತರವೂ ಖಾತೆಯು ಮುಕ್ತಾಯವಾಗುವವರೆಗೆ ಬಡ್ಡಿಯನ್ನು ಗಳಿಸುತ್ತಲೇ ಇರುತ್ತದೆ.
ಈ ಸುದ್ದಿ ತಪ್ಪದೆ ಓದಿ:- 135 ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಕೇವಲ ರೂ.100 ಕಟ್ಟಿ ಕರ್ನಾಟಕ ಒನ್ ಪ್ರಾಂಚೈಸಿ ಪಡೆಯಿರಿ.!
* ನಿಮ್ಮ ಮಗುವಿಗೆ 18 ವರ್ಷ ತಲುಪಿದ ನಂತರ ಹೆಣ್ಣು ಮಗುವಿನ ಮದುವೆ ಖರ್ಚಿಗೆ ಅಥವಾ ಶೈಕ್ಷಣಿಕ ಖರ್ಚು-ವೆಚ್ಚಕ್ಕಾಗಿ, ಅಥವಾ ಉದ್ಯೋಗ ಆರಂಭಿಸಲು ಯೋಜನೆಯ 75% ಹಿಂಪಡೆಯಬಹುದು
* 1961 ರ ಸೆಕ್ಷನ್ 80C ಅಡಿಯಲ್ಲಿ ಆದಾಯ ತೆರಿಗೆ ರಿಯಾಯಿತಿಗೆ ಅರ್ಹವಾಗಿದೆ
* ನಾಮಿನಿ ಫೆಸಿಲಿಟಿ ಕೂಡ ಇರುತ್ತದೆ, ಒಂದು ವೇಳೆ ಹೆಣ್ಣು ಮಗು ಮೃ’ತ ಪಟ್ಟರೆ ಪೋಷಕರು ಹಣವನ್ನು ಕ್ಲೈಮ್ ಮಾಡಬಹುದು.
* ಪ್ರಸ್ತುತವಾಗಿ 8.0% ಬಡ್ಡಿದರ ಅನ್ವಯವಾಗುತ್ತದೆ ಮತ್ತು ಪ್ರತಿ ತ್ರೈಮಾಸಿಕಕೊಮ್ಮೆ ಇದು ಪರಿಷ್ಕೃತವಾಗುತ್ತದೆ, ಉದಾಹರಣೆಯೊಂದಿಗೆ ಹೇಳುವುದಾದರೆ ಈ ಬಡ್ಡಿದರದ ಅನ್ವಯ ನೀವು ವಾರ್ಷಿಕವಾಗಿ 1.5 ಲಕ್ಷ ಹಣವನ್ನು 15 ವರ್ಷದವರೆಗೆ ಹೂಡಿಕೆ ಮಾಡುತ್ತಾ ಬಂದರೆ ನಿಮ್ಮ ಹೂಡಿಕೆಯ ಮೊತ್ತ 22.50 ಲಕ್ಷ ಲಕ್ಷವಾಗಿರುತ್ತದೆ. ಈ ಹಣಕ್ಕೆ 47 ಲಕ್ಷ ಬಡ್ಡಿಯು ಲಾಭವಾಗಿ ಸಿಗುತ್ತದೆ, ಮೆಚುರಿಟಿ ಅವಧಿಯಲ್ಲಿ ಒಟ್ಟಾರೆಯಾಗಿ ನಿಮ್ಮ ಮಗುವಿಗೆ 67 ಲಕ್ಷ ಹಣವು ಸಿಗುತ್ತದೆ.