ಗ್ರಾಮೀಣ ಪ್ರದೇಶಗಳು (Rural) ಗ್ರಾಮ ಒನ್ ಸೇವಾ ಕೇಂದ್ರಗಳು (Grama One) ಕಾರ್ಯನಿರ್ವಹಿಸುವಂತೆ ಕರ್ನಾಟಕ ರಾಜ್ಯಾದ್ಯಂತ ಆಯ್ದ ನಗರ ಪಾಲಿಕೆ, ನಗರ ಸಭೆ, ಪಟ್ಟಣ ಪಂಚಾಯಿತಿ ಮತ್ತು ಪುರಸಭೆಗಳ ವ್ಯಾಪ್ತಿಯಲ್ಲಿ ಕೂಡ ಒಂದೇ ಸೂರಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಕರ್ನಾಟಕ ಒನ್ (Karnataka One) ಸೇವಾ ಕೇಂದ್ರಗಳ ಮೂಲಕ ಪಡೆಯಬಹುದು.
ಈಗಾಗಲೇ ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಕರ್ನಾಟಕ ಒನ್ ಸೇವಾ ಕೇಂದ್ರಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳಿಗೆ ಯಾವುದೇ ಮಧ್ಯವರ್ತಿ ಕಾಟ ಇಲ್ಲದೆ ತಾವು ಇರುವ ಸ್ಥಳದ ಸಮೀಪದಲ್ಲಿಯೇ ಈ ಕೇಂದ್ರಗಳು ಕಾರ್ಯ ನಿರ್ವಹಿಸುವುದರಿಂದ ದೂರದ ತಾಲೂಕು ಹಾಗು ಜಿಲ್ಲಾ ಕೇಂದ್ರಗಳ ಕಚೇರಿಗಳಿಗೆ ಅಲೆಯಬೇಕಾದ ಅವಶ್ಯಕತೆ ಇಲ್ಲದೆ ಸಮಯ ಮತ್ತು ಹಣದ ಉಳಿತಾಯದೊಂದಿಗೆ ಜನರು ಅನುಕೂಲತೆಯನ್ನು ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿ:- ಪ್ರತಿ ತಿಂಗಳು ನಿಮ್ಮ PF ಖಾತೆಗೆ ಹಣ ಜಮಾ ಆಗುತ್ತಿದಿಯೋ ಇಲ್ಲವೋ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಇದರ ಅಗತ್ಯತೆಯನ್ನು ಅರಿತು ಮತ್ತೊಮ್ಮೆ ಹೊಸದಾಗಿ 135 ಕರ್ನಾಟಕ ಒನ್ ಫ್ರಾಂಚೈಸಿ ತೆರೆಯಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರ ಕುರಿತಾದ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಅರ್ಜಿ ಸಲ್ಲಿಸುವುದಕ್ಕೆ ಇರುವ ನಿಬಂಧನೆಗಳು:-
* ಅರ್ಜಿದಾರರು ಭಾರತದ ಪ್ರಜೆಯಾಗಿದ್ದು ಕರ್ನಾಟಕದ ನಿವಾಸವಾಗಿರಬೇಕು.
* ಯಾವುದೇ ಕಂಪನಿಗಳು / NGO ಗಳು / ಮಾಲೀಕತ್ವ / ಪಾಲುದಾರಿಕೆಯಿಂದ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
* ಅರ್ಜಿದಾರರು ಡಿಪ್ಲೊಮಾ / ITI / PUC ಉತ್ತೀರ್ಣರಾಗಿರಬೇಕು ಅಥವಾ ತಾಂತ್ರಿಕ ಸಾಮರ್ಥ್ಯದೊಂದಿಗೆ ತತ್ಸಮಾನವಾದ ವಿದ್ಯಾರ್ಹತೆ ಪಡೆದಿರಬೇಕು ಮತ್ತು ಹೆಚ್ಚಿನ ವಿದ್ಯಾರ್ಹತೆ ಪಡೆದವರಿಗೆ ಆದ್ಯತ ಇರುತ್ತದೆ.
* ಅರ್ಜಿದಾರರು ಕನ್ನಡ ಮತ್ತು ಇಂಗ್ಲಿಷ್ ಅನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು ಹಾಗೂ ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಟೈಪ್ ಮಾಡಲು ತಿಳಿದಿರಬೇಕು.
ಈ ಸುದ್ದಿ ಓದಿ:- USA Technology ಬಳಸಿ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ ಇವರು, ಒಂದೂವರೆ ವರ್ಷದಿಂದ 1500 ಪಾಯಿಂಟ್ ಮಾರ್ಕ್, ಎಲ್ಲವೂ ಸಕ್ಸಸ್.!
* ಒಬ್ಬ ಅಭ್ಯರ್ಥಿಯು ಒಂದು ಕೇಂದ್ರಕ್ಕೆ ಮಾತ್ರ ಅರ್ಜಿ ಸಲ್ಲಿಸಬಹುದು.
* ಅರ್ಜಿದಾರರು ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಂದ ಮುಕ್ತರಾಗಿರಬೇಕು.
* ಅರ್ಜಿದಾರರು ಸ್ಥಳ, ಐಟಿ ಮತ್ತು ಐಟಿ ಅಲ್ಲದ ಮೇಲೆ ಹೂಡಿಕೆ ಮಾಡಲು ಸಿದ್ಧರಿರಬೇಕು.
* ಅರ್ಜಿದಾರನು ಕರ್ನಾಟಕ ಒನ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೂಲಸೌಕರ್ಯ
ಮತ್ತು ಕಾರ್ಯಾಚರಣೆಯ ವೆಚ್ಚಗಳನ್ನು ಭರಿಸಲು ಸಿದ್ಧರಾಗಿರಬೇಕು.
ಕರ್ನಾಟಕ ಒನ್ ಕೇಂದ್ರ ಸ್ಥಾಪಿಸಲು ಬೇಕಾಗುವ ಸಲಕರಣೆಗಳು:-
* ಡೆಸ್ಕ್ ಟಾಪ್ / ಲ್ಯಾಪ್ ಟಾಪ್
* ಪ್ರಿಂಟರ್ (ಪ್ರೀಂಟ್/ಸ್ಕ್ಯಾನ್)
* ಬಯೋಮೆಟ್ರಿಕ್ ಸ್ಕ್ಯಾನರ್
* 2ಇಂಟರ್ನೆಟ್ ಕನೆಕ್ಷನ್
* ವೆಬ್ ಕ್ಯಾಮರಾ
* ವೈ-ಪೈ ರಿಸೀವರ್
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಅರ್ಜಿದಾರನ ಆಧಾರ್ ಕಾರ್ಡ್
* ಪಾನ್ ಕಾರ್ಡ್
* ಮೊಬೈಲ್ ನಂಬರ್
* ಇಮೇಲ್ ಐಡಿ
* ಬ್ಯಾಂಕ್ ಪಾಸ್ ಬುಕ್
* ವಿದ್ಯಾರ್ಹತೆಯ ಪ್ರಮಾಣ ಪತ್ರ
* ಅರ್ಜಿ ಶುಲ್ಕವಾಗಿ ರೂ.100
ಅರ್ಜಿ ಸಲ್ಲಿಸುವ ವಿಧಾನ:-
* https://karnatakaone.gov.in ವೆಬ್ ಸೈಟ್ ಗೆ ಭೇಟಿ ನೀಡಿ
* ಕೇಳಿರುವ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿ ಮಾಡಿ, ಇದೆ ವೆಬ್ ಸೈಟ್ ನಲ್ಲಿ ನೀವು ಖಾಲಿ ಇರುವ ಫ್ರಾಂಚೈಸಿಗಳ ವಿವರವನ್ನು ಕೂಡ ಪಡೆದು ನಿಮ್ಮ ಸಮೀಪದ ಸ್ಥಳವನ್ನು ಆರಿಸಬಹುದು
* ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆಯಿರಿ.
ಈ ಸುದ್ದಿ ಓದಿ:- ಇಂದು ಮತ್ತು ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 1 ಫೆಬ್ರವರಿ, 2024.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15 ಫೆಬ್ರವರಿ, 2024.
* ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಸಹಾಯವಾಣಿ ಸಂಖ್ಯೆ:
080 – 49203888, 8904085030