Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಮಧ್ಯಮ ಹಾಗೂ ಬಡಜನತೆಗೆ ಬದುಕು ದುಬಾರಿ ಎನಿಸುತ್ತಿದೆ. ಅದರಲ್ಲೂ ದಿನ ಬಳಕೆಯ ಮೂಲಭೂತ ಅವಶ್ಯಕತೆಯಾದ ಆಹಾರ ಬಳಕೆಯ ಪ್ರತಿಯೊಂದು ಪದಾರ್ಥದ ಬೆಲೆ ದಿನದಿಂದ ದಿನಕ್ಕೆ ಆಕಾಶಕ್ಕೆ ಏರುತ್ತಿರುವುದು ಜನಸಾಮಾನ್ಯರನ್ನು ಕಂಗಲಾಗಿಸಿದೆ.
ಇದರ ನಿಯಂತ್ರಣಕ್ಕೆ ಶ್ರಮಪಡುತ್ತಿರುವ ಕೇಂದ್ರ ಸರ್ಕಾರವು (Central Government) ಈಗಾಗಲೇ ಸಾಕಷ್ಟು ಬಾರಿ ಕೆಲ ಅಗತ್ಯ ಕ್ರಮಗಳನ್ನು ಕೂಡ ಕೈಗೊಂಡಿದೆ ಈಗ ಅದೇ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದೆ. ದೇಶದಲ್ಲಿ ಅತಿ ಹೆಚ್ಚು ಬಳಕೆಯ ಆಗುವ ಆಹಾರ ಪದಾರ್ಥವಾದ ಅಕ್ಕಿಯನ್ನು ಅತ್ಯಂತ ಕಡಿಮೆ ದರದಲ್ಲಿ, ಗುಣಮಟ್ಟದಲ್ಲಿ ನೀಡಲು ನಿರ್ಧರಿಸಿದೆ ಭಾರತ್ ಅಕ್ಕಿ (Bharath Rice) ಎನ್ನುವ ಯೋಜನೆಯೊಂದಿಗೆ 29 ರೂಪಾಯಿಗೆ ಒಂದು ಕೆಜಿ ಅಕ್ಕಿ (Rs.29 per KG) ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿ ಓದಿ:- HDFC ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್.! ಪ್ರಮುಖ ಘೋಷಣೆ…
ಮೋದಿ ಸರ್ಕಾರದ ಈ ಯೋಜನೆಯಡಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಇದೇ ವಾರದಿಂದ ಕೆ.ಜಿಗೆ 29 ರೂ.ಯಂತೆ ಭಾರತ್ ರೈಸ್ ಮಾರಾಟ ಆರಂಭವಾಗಿದೆ. ಇದಕ್ಕಾಗಿ ಅಕ್ಕಿ ದಾಸ್ತಾನುಗಳನ್ನು ಬಹಿರಂಗಪಡಿಸುವಂತೆ ವರ್ತಕರಿಗೂ ತಿಳಿಸಲಾಗಿದೆ. ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಮತ್ತು ಆಹಾರದ ವಿಚಾರದಲ್ಲಿ ದೇಶದ ಜನತೆಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಜನಸಾಮಾನ್ಯರು ಈ ಅಕ್ಕಿಯನ್ನು ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಂಟಿಂಗ್ ಫೆಡರೇಷನ್ ಆಫ್ ಇಂಡಿಯಾ (NAFED), ನ್ಯಾಷನಲ್ ಕೋಅಪರೇಟಿವ್ ಕನ್‌ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ (NCCF), ಕೇಂದ್ರೀಯ ಭಂಡಾರಗಳು ಮತ್ತು ಅಕ್ಕಿಯನ್ನು 5Kg ಮತ್ತು 10Kg ಚೀಲಗಳಲ್ಲಿ ಮಾರಾಟ ಮಾಡಲಾಗುತ್ತದೆ.
ಭಾರತ್ ರೈಸ್ ಮೊಬೈಲ್ ವ್ಯಾನ್‌ಗಳು ಮತ್ತು ಮೂರು ಕೇಂದ್ರ ಸಹಕಾರ ಏಜೆನ್ಸಿಗಳ ಭೌತಿಕ ಮಳಿಗೆಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ ಇದಿಷ್ಟು ಮಾತ್ರವಲ್ಲದೇ ಶೀಘ್ರದಲ್ಲಿಯೇ ಇ-ಕಾಮರ್ಸ್‌ಗಳ ತಾಣಗಳಾದ ಬಿಗ್ ಬಾಸ್ಕೆಟ್, ಫ್ಲಿಪ್ಕಾರ್ಟ್ ಮಂತಾದ ಚಿಲ್ಲರೆ ಸರಪಳಿ ಮೂಲಕವೂ ಕೂಡ ಅಕ್ಕಿ ಖರೀದಿ ಮಾಡುವ ಅವಕಾಶ ಸಿಗಲಿದೆ.
ಈ ಸುದ್ದಿ ಓದಿ:- USA Technology ಬಳಸಿ ಬೋರ್ವೆಲ್ ಪಾಯಿಂಟ್ ಮಾಡಿಕೊಡುತ್ತಾರೆ ಇವರು, ಒಂದೂವರೆ ವರ್ಷದಿಂದ 1500 ಪಾಯಿಂಟ್ ಮಾರ್ಕ್, ಎಲ್ಲವೂ ಸಕ್ಸಸ್.!
ಹಲವು ದಿನಗಳಿಂದ ಚರ್ಚೆಯಲ್ಲಿದ್ದ ಈ ವಿಷಯಕ್ಕೆ ಮಾನ್ಯ ಆಹಾರ ಕಾರ್ಯದರ್ಶಿಯವರಾದ ಸಂಜೀವ್ ಚೋಪ್ರಾ ರವರು ಕಳೆದ ವಾರ ಪ್ರಕಟಣೆಗೆ ಸ್ಪಷ್ಟತೆ ನೀಡಿದ್ದರು. ಕೇಂದ್ರ ಸರ್ಕಾರದ ಈ ಯೋಜನೆ ನಿರ್ಧಾರದ ಜೊತೆಗೆ ಅವರು ಅಕ್ಕಿ ದರ ನಿಯಂತ್ರಣಕ್ಕೆ ಬರುವವರೆಗೂ ಅಕ್ಕಿ ರಫ್ತಿಗೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎನ್ನುವ ವಿಷಯವನ್ನು ಕೂಡ ಸ್ಪಷ್ಟಪಡಿಸಿದ್ದಾರೆ.
ಹೀಗಿರುವ ಮಾಹಿತಿಯ ಪ್ರಕಾರವಾಗಿ ಕೇಂದ್ರ ಸರ್ಕಾರದ ಭಾರತ್ ರೈಸ್ ಯೋಜನೆಗಾಗಿ ಮೊದಲ ಹಂತದಲ್ಲಿ 5 ಲಕ್ಷ ಟನ್ ಅಕ್ಕಿ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಲೆ ನಿಯಂತ್ರಣಕ್ಕಾಗಿ ಈ ಹಿಂದೆಯೂ ಕೂಡ ಸರ್ಕಾರ ಇದೇ ರೀತಿಯ ಕೆಲವು ಯೋಜನೆಗಳನ್ನು ಹಮ್ಮಿಕೊಂಡಿದ್ದನ್ನು ನಾವು ನಡೆಯಬಹುದು.
ಈ ಸುದ್ದಿ ಓದಿ:- ಪ್ರತಿ ತಿಂಗಳು ನಿಮ್ಮ PF ಖಾತೆಗೆ ಹಣ ಜಮಾ ಆಗುತ್ತಿದಿಯೋ ಇಲ್ಲವೋ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಕೇಂದ್ರ ಸರ್ಕಾರ ಈಗಾಗಲೇ ಭಾರತ್ ಆಟಾ ಹೆಸರಿನಲ್ಲಿ ಗುಣಮಟ್ಟದ ಗೋಧಿ ಹಿಟ್ಟು ಪ್ರತಿ KG ಗೆ ರೂ.27.50 ನಂತೆ ಮತ್ತು ಭಾರತ್ ದಾಲ್ ಗುಣಮಟ್ಟದ ಕಡಲೆ ಕಾಳು Kg ಗೆ ರೂ.60 ರಂತೆ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಭಾರತ್ ರೈಸ್ 06 ಫೆಬ್ರವರಿ, 2024 ರಂದು ಲಗ್ಗೆ ಇಟ್ಟಿದ್ದು, ಮೊದಲ ಹಂತದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಲಭ್ಯವಿದ್ದು, ಹಂತ ಹಂತವಾಗಿ ಮಂಡ್ಯ, ಮೈಸೂರು ಸೇರಿದಂತೆ ವಾರದೊಳಗೆ ರಾಜ್ಯದಾದ್ಯಂತ ಭಾರತ್ ರೈಸ್ ಸಿಗಲಿದೆ.