ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ಕರ್ನಾಟಕ ಸರ್ಕಾರವು ಕೂಡ ಎಲ್ಲ ವಾಹನಗಳಿಗೂ HSRP (High Security Registration Plate) ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಈಗಾಗಲೇ ಎರಡು ಬಾರಿ ಇದಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಲಾಗಿದ್ದು ಅಂತಿಮವಾಗಿ ಫೆಬ್ರವರಿ 17, 2024ರ ಒಳಗೆ ಸರ್ಕಾರದ ನಿಯಮದಂತೆ 1 ಫೆಬ್ರವರಿ, 2019ಕ್ಕೂ ಮುನ್ನ ವಾಹನ ಖರೀದಿ ಮಾಡಿರುವ ವಾಹನಗಳ ಮಾಲೀಕರು ಬದಲಾಗಿರುವ ನಿಯಮದ ಅನುಸಾರ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದಲ್ಲಿ ದಂಡ ಬಿಡುವುದು ಗ್ಯಾರಂಟಿ.
ದೇಶದ ಭದ್ರತೆ ಹಾಗೂ ವಾಹನಗಳು ಕಳ್ಳತನವಾದಾಗ ಸುಲಭವಾಗಿ ಹುಡುಕಲು ಅನುಕೂಲವಾಗಲಿ ಎನ್ನುವ ಕಾರಣದಿಂದಾಗಿ HSRP ಎನ್ನುವ ಡಿಜಿಟಲ್ ರೂಪದ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ನೀವಿನ್ನು ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಸಿಕೊಂಡಿಲ್ಲ ಎಂದರೆ ನಾವು ಹೇಳುವ ಈ ವಿಧಾನದ ಮೂಲಕ ಆನ್ಲೈನ್ ನಲ್ಲಿ ಬುಕ್ ಮಾಡಿ ಅಳವಡಿಸಿಕೊಳ್ಳಿ.
ಈ ಸುದ್ದಿ ಓದಿ:- ಅಕ್ರಮ-ಸಕ್ರಮ ಮತ್ತು ಬಗರ್ ಹುಕುಂ ಸಾಗುವಳಿ ಮಾಡುವವರಿಗೆ ಗುಡ್ ನ್ಯೂಸ್ ಸರ್ಕಾರಿ ಜಮೀನು ನಿಮ್ಮ ಹೆಸರಿಗೆ ವರ್ಗಾವಣೆ…
* Google ನಲ್ಲಿ siam.in ಎಂದು ಸರ್ಚ್ ಮಾಡಿ Society of Indian Automobile Manifactures ಅಧಿಕೃತ ವೆಬ್ಸೈಟ್ ಲಿಂಕ್ ಮುಖಪುಟಕ್ಕೆ ಬನ್ನಿ, ಬಲಭಾಗದಲ್ಲಿರುವ 3 dot ಕ್ಲಿಕ್ ಮಾಡಿ desktop site ಸೆಲೆಕ್ಟ್ ಮಾಡಿ
* ಮುಖಪುಟದ ಬಲಭಾಗದ ಕೊನೆಯಲ್ಲಿ Book HSRP ಎನ್ನುವ ಲಿಂಕ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
* HSRP Registration ಎನ್ನುವ ಫಾರ್ಮೆಟ್ ಓಪನ್ ಆಗುತ್ತದೆ ಇದರಲ್ಲಿ ನಿಮ್ಮ ಹೆಸರು (Name), ಇ-ಮೇಲ್(email), ರಾಜ್ಯ(State), ವೆಹಿಕಲ್ ರಿಜಿಸ್ಟ್ರೇಷನ್ ನಂಬರ್ (Vehicle Registration No.) ಮತ್ತು ಮೊಬೈಲ್ ನಂಬರ್ (Mobile No.), ಎಂಟ್ರಿ ಮಾಡಿ ಜಿಲ್ಲೆಯನ್ನು (District) ಸೆಲೆಕ್ಟ್ ಮಾಡಿ I agree ಚೆಕ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ (Submit) ಕೊಡಿ.
ಈ ಸುದ್ದಿ ಓದಿ:- ನಿಮ್ಮ ಮನೆ ಮೇಲೆ ಜಾಗ ಇದ್ದರೆ ಸಾಕು ತಿಂಗಳಿಗೆ 80 ಸಾವಿರ ದುಡಿಯಬಹುದು, ಶುದ್ಧ ಕರೆಂಟ್ ಜೊತೆ ಈ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸಬ್ಸಿಡಿ ಕೂಡ ಸಿಗುತ್ತದೆ.!
* ಮತ್ತೊಂದು ಇಂಟರ್ಫೇಸ್ ಓಪನ್ ಆಗುತ್ತದೆ ಇದರಲ್ಲಿ ನಿಮ್ಮ ವಾಹನದ ಬಗ್ಗೆ ಮಾಹಿತಿ ಕೇಳಲಾಗಿರುತ್ತದೆ. select your vehicle type ಎಂದು ಕೇಳಲಾಗಿರುತ್ತದೆ ಅದರಲ್ಲಿ ದ್ವಿಚಕ್ರ ವಾಹನ, ಮೂರು ಚಕ್ರದ ವಾಹನ ಅಥವಾ ನಾಲ್ಕು ಚಕ್ರದ ವಾಹನ (2 / 3 / 4 Wheeler) ಯಾವುದೆಂದು ಸೆಲೆಕ್ಟ್ ಮಾಡಿ. ನಂತರ ನಿಮ್ಮ ವಾಹನದ ಬ್ರಾಂಡ್ (Brand) ಸೆಲೆಕ್ಟ್ ಮಾಡಿ, Submit ಕೊಡಿ. ಮುಂದೆ ನಿಮ್ಮ ಬ್ರಾಂಡ್ ನ ಡೀಲರ್ ಶಿಪ್ ವೆಬ್ ಸೈಟ್ ಪೇಜ್ ಓಪನ್ ಆಗುತ್ತದೆ Booking ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* Booking details Vehicle Information ಎನ್ನುವ ಪೇಜ್ ಕಾಣುತ್ತದೆ ಇದರಲ್ಲಿ ಮತ್ತೊಮ್ಮೆ ನಿಮ್ಮ ಜಿಲ್ಲೆ, ರಿಜಿಸ್ಟ್ರೇಷನ್ ನಂಬರ್, ಚಾಲ್ಸಿ ನಂಬರ್, ಇಂಜಿನ್ ನಂಬರ್ ಇತ್ಯಾದಿಗಳನ್ನು ಭರ್ತಿ ಮಾಡಿ ನೀಡಲಾಗುವ ಕ್ಯಾಪ್ಚ ಎಂಟ್ರಿ ಮಾಡಿ Click here ಮೇಲೆ ಕ್ಲಿಕ್ ಮಾಡಿದರೆ Contact information & Vehicle Information Autofill ಆಗಿ ಬರುತ್ತದೆ Submit ಕೊಡಿ, OTP ಬರುತ್ತದೆ, OTP ಎಂಟ್ರಿ ಮಾಡಿ next ಎನ್ನುವುದನ್ನು ಸೆಲೆಕ್ಟ್ ಮಾಡಬೇಕು.
ಈ ಸುದ್ದಿ ಓದಿ:- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!
* step-2 Fitment Location ಹಂತಕ್ಕೆ ಬರುತ್ತೀರಿ, home delivery or Dealer appointment ಈ ಎರಡು ಆಪ್ಷನ್ ಗಳಿರುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸೆಲೆಕ್ಟ್ ಮಾಡಿಕೊಳ್ಳಿ. Home Delivery ಆಪ್ಷನ್ ನಲ್ಲಿ 225+GST Delivery Charges ಇರುತ್ತದೆ. ಸೆಲೆಕ್ಟ್ ಮಾಡಿ ಪೇ ಮಾಡಿದರೆ ನೀವು ನೀಡಿರುವ ವಿಳಾಸಕ್ಕೆ ಕೆಲವೇ ದಿನಗಳಲ್ಲಿ ನಂಬರ್ ಪ್ಲೇಟ್ ಆರ್ಡರ್ ಬರುತ್ತದೆ
* Dealer appointment ಆಪ್ಷನ್ ಸೆಲೆಕ್ಟ್ ಮಾಡಿದರೆ ನಿಮ್ಮ ಹತ್ತಿರದ ನೀವು ಸೆಲೆಕ್ಟ್ ಮಾಡಿರುವ ಬ್ರಾಂಡ್ ನ ಎಲ್ಲಾ ಡೀಲರ್ಸ್ ವಿವರ ಬರುತ್ತದೆ ನಿಮಗೆ ಬೇಕಾದದ್ದನ್ನು ಸೆಲೆಕ್ಟ್ ಮಾಡಬಹುದು
* ನಿಮಗೆ date and time ಸೆಲೆಕ್ಟ್ ಮಾಡುವ ಸ್ಲಾಟ್ ಕೂಡ ಸಿಗುತ್ತದೆ ಮತ್ತು ಈಗಾಗಲೇ ಬುಕಿಂಗ್ ಆಗಿರುವ ಸಮಯ ಬಿಟ್ಟು ಇರುವ ಸಮಯದಲ್ಲಿ ನೀವು ಸೆಲೆಕ್ಟ್ ಮಾಡಿ Confirmed and processed ಕ್ಲಿಕ್ ಮಾಡಿ.
ಈ ಸುದ್ದಿ ಓದಿ:- ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!
* Booking Summary ಹಂತಕ್ಕೆ ತಲುಪುತ್ತೀರಿ ಇಲ್ಲಿ ನಿಮ್ಮ ಪೂರ್ತಿ ಡೀಟೇಲ್ಸ್ ಇರುತ್ತದೆ ಮತ್ತೊಮ್ಮೆ ಚೆಕ್ ಮಾಡಿಕೊಳ್ಳಿ, ಸಮಸ್ಯೆ ಇದ್ದರೆ Back ಹೋಗಿ ಸರಿಪಡಿಸಿಕೊಂಡು Confirmed and processed ಕ್ಲಿಕ್ ಮಾಡಿ
* Verify details and Pay ಎಂದು ಆಪ್ಷನ್ ಬರುತ್ತದೆ, ಮತ್ತೊಮ್ಮೆ ಮೊಬೈಲ್ ನಂಬರ್ ಕೇಳಿರುತ್ತದೆ ನೀವು ಸರಿಯಾದ ನಂಬರ್ ಫಿಲ್ ಮಾಡಿದರೆ ಆರ್ಡರ್ ಗೆ ಸಂಬಂಧಪಟ್ಟ ಯಾವುದೇ ಮಾಹಿತಿ ಇದ್ದರೂ SMS ಮೂಲಕ ಬರುತ್ತದೆ. ಪೇಜ್ ಸ್ಕ್ರೋಲ್ ಮಾಡಿ i agree ಕ್ಲಿಕ್ ಮಾಡಿದರೆ Pay online ಆಪ್ಷನ್ ಇರುತ್ತದೆ. ನೀವು ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ನಿಮಗೆ ತೋರಿಸುತ್ತಿರುವ ಟೋಟಲ್ Cost ಪೇ ಮಾಡಬಹುದು.
ಕೇಂದ್ರದಿಂದ ಜಾರಿಗೆ ಬಂತು ಭಾರತ್ ರೈಸ್ ಸ್ಕೀಮ್, ಇನ್ಮುಂದೆ ಕೇವಲ 29 ರೂಪಾಯಿಗೆ ಸಿಗಲಿದೆ BT ಅಕ್ಕಿ…
* Receipt of Payment and Booking ಎಂಬ ಆಪ್ಷನ್ ಹಾಗೂ Print ಪಡೆದುಕೊಳ್ಳುವ ಆಯ್ಕೆ ಇರುತ್ತದೆ ಕ್ಲಿಕ್ ಮಾಡಿ ಪ್ರಿಂಟ್ ಪಡೆದುಕೊಳ್ಳಬಹುದು. ನಮಗೆ ನಿಗದಿ ಆಗಿರುವ ದಿನಾಂಕದಂದು ನಾವು ಸೆಲೆಕ್ಟ್ ಮಾಡಿದ ಡೀಲರ್ ಶಾಪ್ ಬಳಿ ಹೋಗಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಬರಬಹುದು.