ನಮ್ಮ ದೇಶದಲ್ಲಿ ಆಸ್ತಿಯು ಒಂದೇ ತೆರನಾಗಿ ಹಂಚಿಕೆಯಾಗಿಲ್ಲ. ಕೆಲವರು ಬಳಿ ಹೆಚ್ಚು ಭೂಮಿ ಇದ್ದರೆ ಅನೇಕರು ಬರಿ ಕೈ ನಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿರುವ ಕೃಷಿ ಭೂಮಿ ರಹಿತ ಕೃಷಿ ಕಾರ್ಮಿಕರ ಕುಟುಂಬವು ತಮ್ಮ ಜೀವನೋಪಾಯಕ್ಕಾಗಿ ಸರ್ಕಾರಿ ಜಮೀನುಗಳನ್ನು ಅವಲಂಬಿಸಿವೆ.
ಈ ಹಿಂದೆ ದೇಶದಲ್ಲಿ ಅಧಿಕಾರದಲ್ಲಿದ್ದ ಸರ್ಕಾರವು ಈ ರೀತಿ ಕೃಷಿ ಕಾರಣಕ್ಕಾಗಿ ಸರ್ಕಾರಿ ಜಮೀನು ಅವಲಂಬಿಸಿರುವ ಕೃಷಿ ಭೂಮಿ ರಹಿತ ಕುಟುಂಬಗಳಿಗೆ ಭೂಮಿಯನ್ನು ನೀಡಲು ನಿರ್ಧರಿಸಿ ಅಕ್ರಮ ಸಕ್ರಮ ಯೋಜನೆಯಡಿ ಅನೇಕರಿಗೆ ಅದಕ್ಕೆ ಸಂಬಂಧಪಟ್ಟ ಹಾಗೆ ಭೂಮಿ ದಾಖಲೆಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅನುಮತಿ ಕೂಡ ನೀಡಿತ್ತು.
ಆದರೆ ಸಂಪೂರ್ಣವಾಗಿ ದೇಶದಾದ್ಯಂತ ಈ ಪ್ರಕ್ರಿಯೆ ಯಶಸ್ವಿಯಾಗಿ ನಡೆಯದೆ ಇನ್ನು ಸಹ ಅನೇಕರು ಭೂಮಿ ಸರ್ಕಾರದ್ದಾಗಿದ್ದರು ತಮ್ಮ ಜೀವನಕ್ಕಾಗಿ ಅದನ್ನೇ ಅವಲಂಬಿಸಿ ಕೃಷಿ ಮಾಡುತ್ತಿದ್ದಾರೆ. ಈಗಲೂ ಸಹ ಸರ್ಕಾರಕ್ಕೆ ಇಂತಹ ರೈತರು ಮನವಿ ಮಾಡಿಕೊಳ್ಳುತ್ತಲೇ ಇದ್ದಾರೆ ಮತ್ತು ಎಂದೂ ಸಹ ರೈತರ ಪರವಾಗಿರುವ ಸರ್ಕಾರಗಳು ಈ ರೀತಿ ಅಕ್ರಮ ಸಕ್ರಮ ಯೋಜನೆಯಡಿ.
ಈ ಸುದ್ದಿ ನೋಡಿ :- ಪೋಸ್ಟ್ ಆಫೀಸ್ ನಾ ಈ ಸ್ಕೀಮ್ ನಲ್ಲಿ ಕೇವಲ 12,500 ಹೂಡಿಕೆ ಮಾಡಿ ಸಾಕು 69 ಲಕ್ಷ ಪಡೆಯಿರಿ.!
ಹಾಗೂ ಬಗರ್ ಹುಕುಂ ಯೋಜನೆಗಳಡಿ ಕೃಷಿಗಾಗಿ ಸರ್ಕಾರಿ ಭೂಮಿಗಳನ್ನು ಅವಲಂಬಿಸಿರುವವರಿಗೆ ಅವರ ಹೆಸರುಗಳಿಗೆ ನಮೂನೆ 50, ನಮೂನೆ 53 ಹಾಗೂ ನಮೂನೆ 57ರ ಪ್ರಕಾರ ಭೂಮಿ ಹಕ್ಕು ವರ್ಗಾವಣೆ ಮಾಡಿ ಕೊಟ್ಟಿವೆ. ಅಂತೆಯೇ ಈಗ ರಾಜ್ಯದಲ್ಲಿ ಅಧಿಕಾರದಲ್ಲಿರುವ ನೂತನ ಸರ್ಕಾರದ ಕಂದಾಯ ಸಚಿವರಾಗಿರುವ ಕೃಷ್ಣಭೈರೇಗೌಡ ಅವರು ಕೂಡ.
ತಾವು ಅಧಿಕಾರಕ್ಕೆ ಬಂದ ಕೂಡಲೇ ಇಂತಹದೊಂದು ಮಹತ್ವದ ತೀರ್ಮಾನವನ್ನು ತೆಗೆದುಕೊಂಡು ರಾಜ್ಯದಲ್ಲಿರುವ ಅನೇಕ ರೈತರಿಗೆ ಸಿಹಿ ಸುತ್ತಿ ಕೊಟ್ಟಿದ್ದರು ಮತ್ತು ಅಕ್ರಮ ಸಕ್ರಮ ಯೋಜನೆಯಡಿ ಹಾಗೂ ಬಗರ್ ಹುಕುಂ ಯೋಜನೆಯಡಿ ಅರ್ಜಿ ಕೂಡ ಆಹ್ವಾನ ಮಾಡಿದ್ದರು ಈಗ ಇದರ ಕುರಿತಾದ ಮತ್ತೊಂದು ಅಪ್ಡೇಟ್ ಇದೆ.
ಇಂತಹ ಯೋಜನೆಗಳಲ್ಲಿ ನಿಜವಾದ ಫಲಾನುಭವಿಗಳಿಗೆ ಯೋಜನೆಯ ಅನುಕೂಲತೆ ದೊರೆಯುವುದಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ಮೋ’ಸಗಳಾಗುವ ಸಾಧ್ಯತೆ ಹೆಚ್ಚು. ಆದರೆ ಈ ಬಾರಿ ಡಿಜಿಟಲ್ ಕ್ರಮದ ಅನುಸಾರವಾಗಿ ಈ ರೀತಿ ಆಸ್ತಿ ಹಕ್ಕು ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ.
ಈ ಸುದ್ದಿ ನೋಡಿ :- ಬಾಡಿಗೆ ಮನೆಯಲ್ಲಿ ಇರುವವರು ಗಮನಿಸಿ, ಗೃಹ ಜ್ಯೋತಿ ಯೋಜನೆ ಬದಲಾವಣೆ.!
ಈ ರೀತಿ ಮಾಡುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಿ ಕೃಷಿ ಭೂಮಿ ಹೊಡೆಯುವುದು ಅಥವಾ ಈಗಾಗಲೇ ತಮ್ಮ ಹೆಸರಿನಲ್ಲಿ ಜಮೀನು ಹೊಂದಿದ್ದರೂ ಕೂಡ ಅತಿ ಆಸೆಯಿಂದ ಮತ್ತೊಮ್ಮೆ ಸರ್ಕಾರದ ಭೂಮಿ ಪಡೆಯಲು ಅರ್ಜಿ ಸಲ್ಲಿಸಿರುವುದು ಇಂತಹ ವಂಚನೆ ಪ್ರಕರಣಗಳು ಬೆಳಕಿಗೆ ಬರಲಿದೆ ಎನ್ನುವ ಉದ್ದೇಶದಿಂದ ಈ ರೀತಿ ಡಿಜಿಟಲ್ ಹಕ್ಕು ಪತ್ರ ವರ್ಗಾವಣೆ ಮಾಡಲು ನಿರ್ಧಾರ ಮಾಡಲಾಗಿದೆ.
ಈ ಬಗ್ಗೆ ಹಿಂದೆಯೂ ಕೂಡ ಸಚಿವರು ಮಾಹಿತಿ ಹಂಚಿಕೊಂಡಿದ್ದರು ಸದ್ಯಯಕ್ಕಿರುವ ಹೊಸ ಮಾಹಿತಿ ಏನೆಂದರೆ, ಈ ಬಾರಿ ಅಧಿಕಾರಿಗಳಿಗೂ ಕೂಡ ಸಚಿವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಪ್ರಭಾವಿ ವ್ಯಕ್ತಿಗಳು ಆಗಲಿ ಅಥವಾ ರಾಜಕೀಯ ಪಕ್ಷಗಳ ಒತ್ತಡದಿಂದಾಗಲಿ ರೈತರಿಗೆ ಅ’ನ್ಯಾ’ಯವಾಗುವ ರೀತಿ ಅಕ್ರಮ ಸಕ್ರಮ ಅರ್ಜಿಗಳ ವಿಲೇವಾರಿ.
ಬಕರ್ ಹುಕುಂಗಾಗಿ ಅರ್ಜಿ ಸಲ್ಲಿಸಿರುವ ಅರ್ಜಿಗಳ ಅನುಮೋದನೆ ನಡೆಯಬಾರದು. ನಿಜವಾಗಿಯೂ ಯಾವ ರೈತ ಕ’ಷ್ಟದಲ್ಲಿ ಇದ್ದಾನೆ ಯಾವ ರೈತನಿ ಹೆಸರಿನಲ್ಲಿ ಕೃಷಿ ಭೂಮಿ ಇಲ್ಲ ಮತ್ತು ಈಗ ಅನುಮತಿ ನೀಡಿರುವಂತೆ ನಿಬಂಧನೆಗಳ ಪ್ರಕಾರವಾಗಿ ರೈತ ಆ ಭೂಮಿಯಲ್ಲಿ ಎಷ್ಟು ವರ್ಷಗಳಿಂದ ಕೃಷಿ ಮಾಡಿಕೊಂಡಿದ್ದಾನೆ ಎನ್ನುವ ದಾಖಲೆಗಳನ್ನೆಲ್ಲ ಸರಿಯಾಗಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಬೇಕು ಎನ್ನುವ ಆದೇಶ ನೀಡಿದ್ದಾರೆ.