ಕರ್ನಾಟಕದ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Karnataka government Guarantee Scheme) ಒಂದಾದ ಗೃಹಜ್ಯೋತಿ ಯೋಜನೆಗೆ (Gruhajyothi Scheme) ಜುಲೈ ತಿಂಗಳಿನಿಂದ ಚಾಲನೆ ಸಿಕ್ಕಿದೆ. ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದ 1.42 ಲಕ್ಷ ಕುಟುಂಬಗಳ ಪೈಕಿ ಬಹುತೇಕ ಮಂದಿ ಗೃಹತ್ಯೋತಿ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಸರ್ಕಾರ ಹಾಕಿದ್ದ ಕಂಡಿಷನ್ ನಂತೆ ಏಪ್ರಿಲ್ 2022 ರಿಂದ ಮಾರ್ಚ್ 2023ರ ವರೆಗೆ ಯಾವ ಕುಟುಂಬಗಳು 200 ಯೂನಿಟ್ ಕಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿ, ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದರು ಆ ಎಲ್ಲಾ ಕುಟುಂಬಗಳು ಕೂಡ ಶೂನ್ಯ ವಿದ್ಯುತ್ ಬಿಲ್ (Zero current bill) ಪಡೆದು ಸಂತೋಷಪಟ್ಟಿದ್ದಾರೆ. ಆದರೆ ಇನ್ನೂ ಅನೇಕವರಿಗೆ ವಿದ್ಯುತ್ ಬಿಲ್ ಕೈಗೆ ಸಿಕ್ಕಿಲ್ಲ ಆದ್ದರಿಂದ ಅನೇಕ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ.
ವಿದ್ಯುತ್ ಬಿಲ್ ನೀಡುವ ಪ್ರಕ್ರಿಯೆಯು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ವ್ಯತ್ಯಾಸವಿರುತ್ತದೆ. ಕರ್ನಾಟಕದ ಪೂರ್ತಿ ಒಂದೇ ದಿನಾಂಕದಂದು ವಿದ್ಯುತ್ ಬಿಲ್ ವಿತರಣೆ ಮಾಡದ ಕಾರಣ ಇನ್ನು ಅನೇಕರಿಗೆ ವಿದ್ಯುತ್ ಬಿಲ್ ತಲುಪಿಲ್ಲ. ಆ ಗ್ರಾಹಕರು ಇನ್ನು ವಿದ್ಯುತ್ ಬಿಲ್ ತಲುಪದೇ ಇರುವುದರಿಂದ ಈಗ ನಾವು ಬಳಕೆ ಮಾಡಿರುವ ವಿದ್ಯುತ್ ಕೂಡ ಅದೇ ಲೆಕ್ಕಕ್ಕೆ ಸೇರಿ 200 ಯೂನಿಟ್ ದಾಟಿದರೆ ನಾವು ಈ ಸೌಲಭ್ಯದಿಂದ ವಂಚಿತರಾಗುತ್ತೇವೆ ಎಂದು ಗಾಬರಿಕೊಂಡಿದ್ದಾರೆ.
ಆದರೆ ಈ ರೀತಿ ಗೊಂದಲಕ್ಕೊಳಗಾಗುವ ಅವಶ್ಯಕತೆ ಇಲ್ಲ. ಯಾಕೆಂದರೆ ಯಾವ ದಿನಾಂಕದಂದು ವಿದ್ಯುತ್ ಬಿಲ್ ನೀಡುತ್ತಾರೋ ಆ ಹಿಂದಿನ 30 ದಿನಗಳ ಲೆಕ್ಕವನ್ನು ಮಾತ್ರ ವಿದ್ಯುತ್ ಬಳಕೆ ಮಾಪನವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ, ಈ ಬಗ್ಗೆ ಯಾವುದೇ ರೀತಿ ಆತಂಕ ಪಡುವ ಅವಶ್ಯಕತೆ ಇಲ್ಲ.
ಮೊಬೈಲ್ ಮೂಲಕ ಕೇವಲ 5 ನಿಮಿಷದಲ್ಲಿ ಕಲರ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವ ವಿಧಾನ
ವಿದ್ಯುತ್ ಬಿಲ್ ಬರುವ ಮುಂಚೆಯೇ ನೀವು ಗೃಹಜ್ಯೋತಿ ಯೋಜನೆಗೆ ಅರ್ಹರಾಗಿದ್ದೀರೋ ಇಲ್ಲವೋ, ನಿಮ್ಮ ವಿದ್ಯುತ್ ಬಿಲ್ ಎಷ್ಟು ಬಂದಿರಬಹುದು ಎಂದು ತಿಳಿದುಕೊಳ್ಳಲು ಕುತೂಹಲ ಹೊಂದಿದ್ದರೆ ಈಗ ನಾವು ಹೇಳುವ ಈ ವಿಧಾನದಿಂದ ನಿಮ್ಮ ಮೊಬೈಲ್ ಮೂಲಕ ಅದನ್ನು ತಿಳಿದುಕೊಳ್ಳಬಹುದು. ಪ್ರಸ್ತುತ ತಿಂಗಳದ್ದು ಮಾತ್ರವಲ್ಲದೆ ಈ ಹಿಂದಿನ ತಿಂಗಳುಗಳಲ್ಲಿ ವಿದ್ಯುತ್ ಬಿಲ್ ಎಷ್ಟು ಬಂದಿತ್ತು ಎನ್ನುವುದರ ಮಾಹಿತಿಯನ್ನು ಕೂಡ ನೀವು ಈ ವಿಧಾನದ ಮೂಲಕ ತಿಳಿದುಕೊಳ್ಳಬಹುದು. ಅದಕ್ಕಾಗಿ ಈಗ ನಾವು ಹೇಳುವ ಈ ಸುಲಭ ಹಂತಗಳನ್ನು ಪಾಲಿಸಿ.
● ಮೊದಲಿಗೆ ರಾಜ್ಯ ಸರ್ಕಾರದ ಮಾಹಿತಿ ಕಣಜ ಎನ್ನುವ ವೆಬ್ಸೈಟ್ ಆದ www.mahitikanaja.karnataka.gov.in ಗೆ ಭೇಟಿ ಕೊಡಿ.
● ನಿಮ್ಮ ಮನೆಗೆ ವಿದ್ಯುತ್ ಸಪ್ಲೈ ಆಗುವ ಕಂಪನಿಯನ್ನು (ESCOM) ಸೆಲೆಕ್ಟ್ ಮಾಡಿ.
● ಮುಖಪುಟ ಓಪನ್ ಆದಮೇಲೆ ಗ್ರಾಹಕರ ವಿವರಗಳು ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ನಂತರ ನಿಮ್ಮ ಮನೆಯ ವಿದ್ಯುತ್ ಖಾತೆ ಸಂಖ್ಯೆ (Acc.ID) ಕೇಳಲಾಗುತ್ತದೆ ಅದನ್ನು ಭರ್ತಿ ಮಾಡಿ ಸಬ್ಮಿಟ್ ಕ್ಲಿಕ್ ಮಾಡಿ.
● ತಕ್ಷಣವೇ ಸ್ಕ್ರೀನ್ ಮೇಲೆ ನಿಮ್ಮ ಖಾತೆಯ ಮಾಹಿತಿ, ರಶೀದಿ ವಿವರಗಳು, ಬಳಕೆಯ ವಿವರಗಳು ಲಭ್ಯವಾಗುತ್ತದೆ.
● ಬಿಲ್ಲಿಂಗ್ ಇತಿಹಾಸ ಎನ್ನುವ ಆಪ್ಷನ್ ಕೂಡ ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಹಿಂದಿನ ತಿಂಗಳುಗಳ ಬಿಲ್ ವಿವರವನ್ನು ಕೂಡ ಪಡೆಯಬಹುದು. ಅದರಲ್ಲಿ ಯಾವ ತಿಂಗಳಿನಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡಿದ್ದೀರಾ, ಯಾವ ತಿಂಗಳಿನಲ್ಲಿ ಪಾವತಿ ಮಾಡಿಲ್ಲ ಈ ಎಲ್ಲಾ ವಿವರಗಳು ಕೂಡ ಇರುತ್ತದೆ.