ಮನೆ ಎನ್ನುವುದು ಜೀವಮಾನದಲ್ಲಿ ಪದೇಪದೇ ಆಗುವ ಸಂಗತಿಯಲ್ಲ ಹಾಗಾಗಿ ಮನೆ ಕಟ್ಟುವ ಸಂದರ್ಭದಲ್ಲಿ ಎಷ್ಟು ಎಚ್ಚರಿಕೆ ವಹಿಸಿ ಮನೆ ಕಟ್ಟಿಸಿಕೊಳ್ಳುತ್ತೇವೋ ಅಷ್ಟು ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ. ಇಲ್ಲವಾದರೆ ಮನೆ ಕಟ್ಟುವ ವಿಚಾರದಲ್ಲಿ ಕೂಡ ಬಹಳ ಮೋ’ಸಗಳಾಗುವ ಸಾಧ್ಯತೆ ಇದೆ.
ಪ್ರತಿಯೊಬ್ಬ ಸಾಮಾನ್ಯನಿಗೂ ಕೂಡ ತಾನು ಸ್ವಂತ ಮನೆ ಕಟ್ಟಬೇಕು ಎನ್ನುವ ಆಸೆ ಇರುತ್ತದೆ ಹಾಗಾಗಿ ಮನೆ ಕಟ್ಟುವ ಮುನ್ನವೇ ಈ ವಿಚಾರಗಳನ್ನು ತಿಳಿದುಕೊಂಡಿರಿ ಮತ್ತು ಈ ಉಪಯುಕ್ತ ಸಂಗತಿಯ ಬಗ್ಗೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಮಾಹಿತಿ ಹಂಚಿಕೊಳ್ಳಿ.
* ಪುಟ್ಟಿಂಗ್ ಮಾಡಿಸುವಾಗ ಡೀಪಿಂಗ್ 3-4 ಅಡಿ ಮಾಡಿಸಿದರೆ ಸಾಕು ಎಂದು ಎಲ್ಲರೂ ಸಲಹೆ ಕೊಡುತ್ತಾರೆ ಆದರೆ ಆ ರೀತಿ ಇರುವುದಿಲ್ಲ ನೀವು ಮನೆ ಎಷ್ಟು ಹೈಟ್ ನಿರ್ಮಿಸುತ್ತೀರೋ ಆ ರೀತಿ ಮನೆ ಸಾಮರ್ಥ್ಯದ ಮೇಲೆ ಪುಟ್ಟಿಂಗ್ ಕೂಡ ನಿರ್ಧಾರ ಮಾಡಬೇಕಾಗುತ್ತದೆ.
ಈ ಸುದ್ದಿ ಓದಿ:- ವರ್ಷಕ್ಕೆ ಅರ್ಧ ಕೋಟಿ ಲಾಭ ಕೊಡುತ್ತದೆ ಈ ಮುತ್ತಿನ ಕೃಷಿ, ಒಂದು ಮುತ್ತಿನ ಬೆಲೆ ರೂ.300 ರಿಂದ ರೂ.1000, ಸರ್ಕಾರದಿಂದ 50% ಸಬ್ಸಿಡಿ ಕೂಡ ಸಿಗುತ್ತದೆ.!
ನೀವು ಸಿಂಗಲ್ ಫ್ಲೋರ್ ಮಾಡಿಸುವುದಾದರೆ ಅಗಲ ಬೇಕಾದರೆ 4*4 ಇರಲಿ, ಡೀಪಿಂಗ್ 4 ಅಡಿ ಇರಬೇಕು ಯಾಕೆಂದರೆ ಮುಂದೆ ಒಂದು ಫ್ಲೋರ್ ಹೆಚ್ಚಿಗೆ ಮಾಡಬೇಕಾದ ಸಾಧ್ಯತೆ ಬರಬಹುದು ಹಾಗಾಗಿ ಮುಂದಾಲೋಚನೆ ಇರಲಿ. ಫಸ್ಟ್ ಫ್ಲೋರ್ ವರೆಗೂ ಮಾಡಿಸುವುದಾದರೆ 5 ಅಡಿ, ಎರಡು ಫ್ಲೋರ್ ಮಾಡುವುದಾದರೆ 6 ಅಡಿ ಡೆಪ್ತ್ ಇರಲಿ.
* ಕಾಲಮ್ ಮತ್ತು ಭೀಮ್ ಸೈಜ್ ಗಳು ಎಷ್ಟಿರಬೇಕು ಎನ್ನುವುದನ್ನು ಕೂಡ ತಿಳಿದುಕೊಂಡಿರಬೇಕು. 1000 sq.ft ಮನೆ ಕಟ್ಟುತ್ತಿದ್ದೀರಾ ಎಂದರೆ 9/9, 8/18 ಇಂಚು ಇರಬೇಕು, ಇದು ಸ್ಟ್ಯಾಂಡರ್ಡ್ ಸೈಜ್. ಇದಕ್ಕಿಂತ ಕಡಿಮೆಗೆ ನಿಮ್ಮ ಕಾಂಟ್ರಾಕ್ಟರ್ ಮಾಡುತ್ತಿದ್ದರೆ ಹಣ ಉಳಿಸಲು ಮಾಡುತ್ತಿದ್ದಾರೆ ಎಂದೇ ಅರ್ಥ.
* 8 ಅಡಿಯ ಮೇಲೆ ಲಿಂಟಲ್ ಗಳನ್ನು ಹಾಕಬೇಕಾಗುತ್ತದೆ. ಎಲ್ಲಾ ಡೋರ್ ಗಳು ಹಾಗೂ ವಿಂಡೋಗಳು ಕವರ್ ಹಾಗುವ ರೀತಿ ಲಿಂಟಲ್ ಗಳನ್ನು ಹಾಕಬೇಕು. ಆದರೆ ಹಣ ಉಳಿಸಲು ಕೆಲವು ಕಾಂಟ್ರಾಕ್ಟರ್ ಗಳು ಡೋರ್ ಮೇಲೆ ಹಾಗೂ ವಿಂಡೋ ಮೇಲೆ ಮಾತ್ರ ಲಿಂಟಲ್ ಗಳನ್ನು ಹಾಕುತ್ತಾರೆ ಇದು ತಪ್ಪಾದ ವಿಧಾನ ಇದರ ಬಗ್ಗೆ ಗಮನವಹಿಸಿ.
ಈ ಸುದ್ದಿ ಓದಿ:- ಸೈಟ್, ಜಮೀನು ವ್ಯಾಜ್ಯ ಕೋರ್ಟ್ ನಲ್ಲಿ ಇದ್ದಾಗ ಕಟ್ಟಡ ಕಾಮಗಾರಿ ಮಾಡಬಹುದ.?
* ಪ್ಲಿಂಥ್ ಭೀಮ್ ಮೇಲೆ DPC ಮಾಡಬೇಕು. DPC ಎಂದರೆ ಪ್ಲಿಂಥ್ ಭೀಮ್ ಮೇಲೆ 3 – 4 ಇಂಚು ಮಂದವಾಗಿರುವ ಕಾಂಕ್ರೀಟ್ ಲೇಯರ್ ಹಾಕಿಸುವುದು. ಈ ರೀತಿ ಮಾಡುವುದರಿಂದ ನೆಲದಿಂದ ನೀರು ನಿಮ್ಮ ಗೋಡೆಗಳಿಗೆ ಬರದಂತೆ ಡ್ಯಾಂಪ್ ನೆಸ್ ಆಗದಂತೆ ಕಾಪಾಡುತ್ತದೆ ಈ DPC. DPC ಗೂ ಕೂಡ ಸಪರೇಟ್ ಖರ್ಚು ಮಾಡಬೇಕು ಎಂದು ಹಲವರು ಇದನ್ನು ಸಜೆಸ್ಟ್ ಮಾಡುವುದಿಲ್ಲ, ಆದರೆ ನೀವು ಈ ಬಗ್ಗೆ ಗಮನ ವಹಿಸಬೇಕು
* ಸೆಫ್ಟಿಕ್ ಟ್ಯಾಂಕ್ ಗೂ ಕೂಡ ಸ್ಟ್ಯಾಂಡರ್ಡ್ ಸೈಜ್ ಎನ್ನುವುದು ಇರುವುದಿಲ್ಲ. ಇದು ಮನೆಯಲ್ಲಿ ಎಷ್ಟು ಜನ ಇದ್ದಾರೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ.
* ವುಡನ್ ವಾಸ್ಕಲ್ ಹಾಗೂ ವುಡನ್ ವಿಂಡೋಗಳಿಗೆ ಟರ್ಮಿನೇಟರ್ ಟ್ರೀಟ್ಮೆಂಟ್ ಮಾಡಬೇಕು. ಇದನ್ನು ಯಾಕೆ ಮಾಡುತ್ತಾರೆಂದರೆ ಗೋಡೆಗಳಿಗೆ ಕನೆಕ್ಟ್ ಆಗಿರುವ ಡೋರ್ ಗಳು ಹಾಗೂ ವಿಂಡೋಗಳಿಗೆ ಇದನ್ನು ಹಚ್ಚುವುದರಿಂದ ಅದು ಹುಳುಕು ಬೀಳುವುದಿಲ್ಲ. ಬಣ್ಣ ಹಚ್ಚಿ ಹಾಗೆ ಫಿಕ್ಸ್ ಮಾಡುವುದು ಕೂಡ ತಪ್ಪಾಗುತ್ತದೆ ಮೊದಲು ಇವುಗಳನ್ನು ಹಚ್ಚಿ ನಂತರ ಬಣ್ಣ ಹೊಡೆದು ಫಿಕ್ಸ್ ಮಾಡಬೇಕಾಗುತ್ತದೆ. ಈ ವಿಚಾರದ ಬಗ್ಗೆ ಕೂಡ ಗಮನಹರಿಸಿ ಮತ್ತು ಇಂತಹದೇ ಇನ್ನಷ್ಟು ಪಾಯಿಂಟ್ ಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.