Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಅಂಚೆ ಕಚೇರಿಗಳು (Post Office) ಈಗ ಪತ್ತ ವ್ಯವಹಾರಕ್ಕಾಗಿ ಮಾತ್ರವಲ್ಲದೇ ಅಂಚೆ ಬ್ಯಾಂಕ್ ಆಗಿ ಕೂಡ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮೀಣ ಭಾಗದಲ್ಲಿರುವ ಜನರಿಗೆ ಸಂಪರ್ಕ ನಾಡಿಯಾಗಿದ್ದ ಅಂಚೆ ಕಛೇರಿ ತನ್ನಲ್ಲಿ ಹೂಡಿಕೆ ಮಾಡುವ ಗ್ರಾಹಕನ ಹಣಕ್ಕೆ 100% ಭದ್ರತೆ ಒದಗಿಸುತ್ತದೆ. ಯಾಕೆಂದರೆ ಅಂಚೆ ಕಚೇರಿಗಳು ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿವೆ.
ಹಾಗಾಗಿ ನಾವು ಕೊಡುವ ಹಣಕ್ಕೆ ಸರ್ಕಾರವೇ ಗ್ಯಾರಂಟಿ ಮತ್ತು ಖಚಿತ ರೂಪದ ಲಾಭವು ಸಿಗುವುದು ಕೂಡ ಅಷ್ಟೇ ಗ್ಯಾರಂಟಿ ಆಗಿದೆ. ಸದ್ಯಕ್ಕೆ ಅಂಚೆ ಕಚೇರಿಗಳಲ್ಲಿ 13ಕ್ಕೂ ಹೆಚ್ಚು ವಿವಿಧ ಬಗೆಯ ಉಳಿತಾಯ ಯೋಜನೆಗಳು (Poat office Schemes) ಲಭ್ಯವಿದ್ದು ಗ್ರಾಹಕರು ತಮ್ಮ ಅನುಕೂಲತೆ ಹಾಗೂ ಹಣಕಾಸಿನ ಪರಿಸ್ಥಿತಿಗೆ ಅನುಗುಣವಾಗಿ ತಮಗೆ ಬೇಕಾದ ಯೋಜನೆಗಳನ್ನು ಆರಿಸಿಕೊಳ್ಳಬಹುದಾಗಿದೆ.
ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಕೂಡ ಅಂಚೆ ಕಚೇರಿಗಳು ಇರುವುದರಿಂದ ಬ್ಯಾಂಕ್ ಗಳಿಗಿಂತ ಇನ್ನೂ ಶೀಘ್ರವಾಗಿ, ಸರಳವಾಗಿ ಅಂಚೆ ಕಚೇರಿ ಸೇವೆಗಳು ಸಿಗುತ್ತವೆ ಎಂದು ನಂಬಲಾಗಿದೆ. ಜೊತೆಗೆ ಕಡಿಮೆ ಸಮಯದಲ್ಲಿ ಅತಿ ಕಡಿಮೆ ದಾಖಲೆ ಪತ್ರಗಳ ಜೊತೆಗೆ ಈ ಯೋಜನೆ ಖಾತೆಗಳನ್ನು ತೆರೆಯಬಹುದು.
ಈ ಸುದ್ದಿ ಓದಿ:- ಬೋರ್ ವೆಲ್ ಕೊರೆಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.! ಬೋರ್ವೆಲ್ ಫೇಲ್ ಆಗೋಕ್ಕೆ ಮುಖ್ಯ ಕಾರಣ ಇದು.!
ಮತ್ತು ಯಾವುದೇ ಗೊಂದಲಗಳು ಇದ್ದರೂ ನಮ್ಮ ಊರಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮೂಲಕ ಸ್ಪಷ್ಟವಾದ ವಿವರಗಳನ್ನು ಪಡೆದುಕೊಳ್ಳಬಹುದು. ಹೀಗಾಗಿ ನಿಧಾನವಾಗಿ ಜನರು ಬ್ಯಾಂಕ್ ಗಳಷ್ಟೇ ಅಂಚೆ ಕಚೇರಿಯ ಸೇವೆಗಳತ್ತ ಕೂಡ ವಾಲಿದ್ದಾರೆ. ಹೀಗಾಗಿ ದಿನದಿಂದ ದಿನಕ್ಕೆ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯುವ ಸಂಖ್ಯೆ ಮತ್ತು ಈ ಯೋಜನೆಗಳನ್ನು ಅಳವಡಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.
ನೀವು ಕೂಡ ಈ ಬಗ್ಗೆ ಆಸಕ್ತಿ ಹೊಂದಿದ್ದು ಸದ್ಯಕ್ಕೆ 2 ಲಕ್ಷ ಹೂಡಿಕೆ ಮಾಡುವ ಪ್ಲಾನಿಂಗ್ ಇದೆ ಯಾವ ಯೋಜನೆಯಲ್ಲಿ ಹಣ ಇಟ್ಟರೆ ಎಷ್ಟು ಲಾಭ ಬರುತ್ತದೆ ಎಂದು ಮಾಹಿತಿಗಾಗಿ ಹುಡುಕಾಡುತ್ತಿದ್ದರೆ ಈ ಅಂಕಣವನ್ನು ಪೂರ್ತಿಯಾಗಿ ಓದಿ. ಅಂಚೆ ಕಚೇರಿಯ ಯಾವ ಯೋಜನೆಗಳ ಮೂಲಕ ಎಷ್ಟು ಲಾಭ ಸಿಗುತ್ತದೆ ಎನ್ನುವುದನ್ನು ತಿಳಿಸುತ್ತಿದ್ದೇನೆ.
* ಉಳಿತಾಯ ಖಾತೆ (Post Office Saving Account)
ನೀವು ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ಹಣ ಇಡುವುದಾದರೆ ನಿಮಗೆ ಕೇವಲ 4% ನಿಮಗೆ ಬಡ್ಡಿ ಸಿಗುತ್ತದೆ. ಇದು ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ನಿಮ್ಮ ಉಳಿತಾಯ ಖಾತೆಗೆ ಜಮೆ ಆಗುತ್ತದೆ.
ಈ ಸುದ್ದಿ ಓದಿ:- ಕೆನರಾ ಬ್ಯಾಂಕ್ ಅಕೌಂಟ್ ನಲ್ಲಿ ಅಕೌಂಟ್ ಇದ್ದವರಿಗೆ ಬಂಪರ್ ಕೊಡುಗೆ, ನಿಮ್ಮ ಹಣ ಡಬಲ್ ಆಗುವ ಹೊಸ ಸ್ಕೀಮ್.!
* ನ್ಯಾಷನಲ್ ಸೇವಿಂಗ್ಸ್ ಟೈಮ್ ಡಿಪಾಸಿಟ್ ಸ್ಕೀಮ್ (National Savings time deposit scheme):-
ಅಂಚೆ ಕಚೇರಿ ಅತ್ಯುತ್ತಮ FD ಯೋಜನೆ ಇದಾಗಿದ್ದು, ಇದರಲ್ಲಿ ಒಂದೇ ಬಾರಿ ಹಣ ಠೇವಣಿ ಇಡಬೇಕು. ಈ ಯೋಜನೆಯ ಮೆಚುರಿಟಿ ಅವಧಿ ಐದು ವರ್ಷಗಳಾಗಿರುತ್ತದೆ.6.19% – 7.5% ವರೆಗೆ ಬಡ್ಡಿ ಸಿಗುತ್ತದೆ.
* ನಿಶ್ಚಿತ ಠೇವಣಿ (Fixed Deposite):-
ನೀವು ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಅಥವಾ ಐದು ವರ್ಷಗಳ ಅವಧಿಗೆ ಠೇವಣಿ ಇಡಬಹುದು ನೀವು ಎಷ್ಟು ವರ್ಷ ಅವಧಿ ಆರಿಸುತ್ತೀರಾ ಅದರ ಆಧಾರದ ಮೇಲೆ ಬಡ್ಡಿದರ ವ್ಯತ್ಯಾಸವಾಗುತ್ತದೆ ಪ್ರಸ್ತುತವಾಗಿ ವಿಶೇಷವಾದ ಕೇಂದ್ರ ಸರ್ಕಾರದ ಮಹಿಳಾ ಸಮ್ಮಾನ್ ಯೋಜನೆಯಡಿ ಎರಡು ವರ್ಷಗಳ ಠೇವಣಿಗೆ 7% ಬಡ್ಡಿದರ ಸಿಗುತ್ತದೆ.
ಮೂರು ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿಗಳನ್ನು ಡಿಪಾಸಿಟ್ ಇಡುವುದಾದರೆ 7.1% ಬಡ್ಡಿ ದರದಲ್ಲಿ ರೂ.2,47, 015, ಐದು ವರ್ಷಗಳ ಅವಧಿಗೆ 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 7.5% ಬಡ್ಡಿ ದರದ ಅನ್ವಯ ರೂ.2,89,990 ಸಿಗುತ್ತದೆ.
ಈ ಸುದ್ದಿ ಓದಿ:- ಲವಂಗ ಕೃಷಿ ಎಷ್ಟು ಲಾಭದಾಯಕ ಗೊತ್ತಾ.? KGಗೆ ರೂ.750 ಮತ್ತು 100 ವರ್ಷಗಳವರೆಗೆ ಬೆಳೆ ಗ್ಯಾರಂಟಿ
* ಅಂಚೆ ಕಚೇರಿ ಮಾಸಿಕ ಉಳಿತಾಯ ಯೋಜನೆ (POMIS):- ಈ ಯೋಜನೆಯ ಮೆಚುರಿಟಿ ಅವಧಿ ಕೂಡ ಐದು ವರ್ಷಗಳಾಗಿರುತ್ತವೆ, ನೀವು ಒಂದು ಬಾರಿಗೆ 2 ಲಕ್ಷ ಹೂಡಿಕೆ ಮಾಡಿದರೆ ಯೋಜನೆ ಹೆಸರೇ ತಿಳಿಸುವಂತೆ ಪ್ರತಿ ತಿಂಗಳು 7.4% ಬಡ್ಡಿದರದ ಅನ್ವಯ ಲಾಭ ರೂಪದ ಹಣವು ನಿಮ್ಮ ಉಳಿತಾಯ ಖಾತೆಗೆ ಜಮೆ ಆಗುತ್ತದೆ. ಆ ಪ್ರಕಾರವಾಗಿ ಸದ್ಯಕ್ಕೆ 2 ಲಕ್ಷ ಹೂಡಿಕೆಗೆ ಪ್ರತಿ ತಿಂಗಳು ರೂ.1,233 ಸಿಗುತ್ತದೆ.
18 ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ನಾಗರಿಕ ಸ್ವತಂತ್ರವಾಗಿ ಈ ಖಾತೆಗಳಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ರೂಪದ ಲಾಭ ಪಡೆಯಬಹುದು, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿದರ ಪರಿಷ್ಕೃತವಾಗುತ್ತದೆ ಹಾಗೂ ನಾಮಿನಿ ಫೆಸಿಲಿಟಿ ಕೂಡ ಇರುತ್ತದೆ. ಈ ವಿಚಾರವಾಗಿ ಯಾವುದೇ ಗೊಂದಲ ಇದ್ದರೂ ಅಥವಾ ಇನ್ನು ಹೆಚ್ಚು ವಿವರವಾಗಿ ಮಾಹಿತಿ ಬೇಕಿದ್ದರೆ ನಿಮ್ಮ ಅಂಚೆಠಾಣೆಗೆ ಭೇಟಿ ನೀಡಿ.