ಹಿಂದೆಲ್ಲಾ ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಖರೀದಿಸುತ್ತಿದ್ದರು, ಆದರೆ ಈಗ ಕೃಷಿಗಿಂತ ಹೆಚ್ಚಾಗಿ ಹೂಡಿಕೆ ಉದ್ದೇಶದಿಂದ ಖರೀದಿಸಲಾಗುತ್ತಿದೆ. ನಗರ ಪ್ರದೇಶಗಳಲ್ಲಿ ಸೈಟ್ ಗಳ ಬೆಲೆ ವಿಪರೀತವಾಗಿ ಏರುತ್ತಿದ್ದೆ ಹಾಗಾಗಿ ಚಿನ್ನಕ್ಕಿಂತಲೂ ಹೂಡಿಕೆಗೆ ಕಡಿಮೆ ಅವಧಿಗೆ ಗರಿಷ್ಠ ಲಾಭ ತಂದು ಕೊಡುವುದು ಪ್ರಾಪರ್ಟಿ ಎಂದು ಜನರಿಗೆ ಮನವರಿಕೆಯಾಗಿ ಹೋಗಿದೆ.
ಹಾಗಾಗಿಯೇ ಭೂಮಿ ಖರೀದಿಗೆ ಬಹಳ ದೊಡ್ಡ ಕಾಂಪಿಟೇಶನ್ ಇದೆ. ಆದರೆ ಇದು ಅಷ್ಟು ಸುಲಭವಲ್ಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರವಾಗಿ ಭೂಮಿ ಒಲಿಯಲು ಯೋಗ ಬೇಕು ಆದರೆ ಕಾನೂನಿನ ಪ್ರಕಾರವಾಗಿ ನೋಡುವುದಾದರೆ ನಾವು ಎಚ್ಚರಿಕೆಯಿಂದ ಇದ್ದು ದಾಖಲೆಗಳು ಸರಿ ಇದ್ದಾಗ ಮಾತ್ರ ನಾವು ಕಟ್ಟಿದ್ದ ಹಣಕ್ಕೆ ಮೋ’ಸವಾಗದೆ ನಮ್ಮ ಹೆಸರಿಗೆ ಜಾಗ ಬರುತ್ತದೆ.
ಇದ್ದ ಇಲ್ಲವಾದಲ್ಲಿ ಹಣವನ್ನು ಕಳೆದುಕೊಂಡು, ಹೆಚ್ಚು ಹಣ ಸಮಯ ಖರ್ಚು ಮಾಡುತ್ತ ಕೋರ್ಟು ಕಚೇರಿಗೆ ಅಲೆದು ಮನಶಾಂತಿಯನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಒಂದೇ ಪ್ರಾಪರ್ಟಿಯನ್ನು ನಾಲ್ಕೈದು ಜನರಿಗೆ ಮೋ’ಸ ಮಾಡಿ ಮಾರಾಟ ಮಾಡುವ ಅಥವಾ ತಮ್ಮದಲ್ಲದ ಜಾಗವನ್ನು ತಮ್ಮದು ಎಂದು ಹೆಸರು ಹೇಳಿಕೊಂಡು.
ಈ ಸುದ್ದಿ ಓದಿ:- ಬೋರ್ ವೆಲ್ ಕೊರೆಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.! ಬೋರ್ವೆಲ್ ಫೇಲ್ ಆಗೋಕ್ಕೆ ಮುಖ್ಯ ಕಾರಣ ಇದು.!
ಮೋ’ಸ ಮಾಡುವ ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಣ್ಣಿಗೆ ಮಣ್ಣೆರಚುವ ಮತ್ತು ತಕರಾರು ಇರುವ ಆಸ್ತಿಯನ್ನು ಮಾರಾಟ ಮಾಡಿ ಅ’ನ್ಯಾ’ಯ ಮಾಡುವ ದೊಡ್ಡ ಜಾಲವೇ ಸೃಷ್ಟಿಯಾಗಿದೆ. ಒಮ್ಮೆ ಅವರ ಕೈಗಳಿಗೆ ಹಣ ಹೋದರೆ ಮುಗಿಯಿತು ನಮಗೆ ಹಣ ವಾಪಸ್ ಸಿಗುತ್ತದೆ ಎನ್ನುವ ನಂಬಿಕೆಯನ್ನು ಬಿಟ್ಟು ಬಿಡಬೇಕಾಗುತ್ತದೆ.
ಹಾಗಾಗಿ ಈ ರೀತಿ ಎಡವಟ್ಟು ಆಗುವ ಮುನ್ನ ನಾವೇ ಜಮೀನು ಖರೀದಿ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಿದರೆ ಇಂತಹ ಸಮಸ್ಯೆ ತಪ್ಪುತ್ತದೆ. ಹಾಗಾದರೆ ಯಾವ ದಾಖಲೆಗಳನ್ನು ನೋಡಿ ಇದನ್ನು ದೃಡೀಕರಿಸಿಕೊಳ್ಳಬೇಕು ಎನ್ನುವ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಿಗೂ ಸಿಗಬೇಕು ಎನ್ನುವ ಉದ್ದೇಶದಿಂದ ಇಂದು ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ. ಇನ್ನು ಮುಂದೆ ಆಸ್ತಿ ಖರೀದಿ ಮಾಡುವ ಮನ್ನ ಈ ಕೆಳಕಂಡ ದಾಖಲೆಗಳನ್ನು ಪರಿಶೀಲನೆ ಮಾಡಿ ಮುಂದುವರೆಯಿರಿ.
* ಮೊದಲು ಯಾವುದೇ ಆಸ್ತಿ ಖರೀದಿ ಮಾಡುವುದಿದ್ದರೂ ಆ ಆಸ್ತಿಯ ಮಾಲೀಕರು ಯಾರು ಎಂಬುದು ದೃಢವಾಗಬೇಕು ಕ್ರಾಸ್ ಚೆಕ್ ಗಳ ಮೂಲಕ ಅಸಲಿ ಮಾಲೀಕರು ಯಾರು ಎನ್ನುವುದನ್ನು ತಿಳಿದುಕೊಳ್ಳಿ.
* ಅವರಿಗೆ ಆ ಸೈಟ್ ಅಥವಾ ಜಮೀನು ಹೇಗೆ ಬಂದಿದೆ ಅದರ ಬಗ್ಗೆ ಯಾವುದೇ ರೀತಿಯ ಕಾಗದಪತ್ರ ಇದೆಯೇ ಎಂಬುದನ್ನು ಪರಿಶೀಲಿಸಬೇಕು.
ಈ ಸುದ್ದಿ ಓದಿ:- ಉಚಿತ ಟೈಲರಿಂಗ್ ತರಬೇತಿ ಆರಂಭ ಆಸಕ್ತರು ಅರ್ಜಿ ಸಲ್ಲಿಸಿ.!
* ಇನ್ನು ಸಾಕಷ್ಟು ಬಾರಿ ಉಡುಗೊರೆಯಾಗಿ ಸೈಟ್ ಸಿಗಬಹುದು. ಅಂತ ಸಂದರ್ಭದಲ್ಲಿ ಅವರಿಗೆ ಯಾವ ರೀತಿ ಸೈಟ್ ಸಿಕ್ಕಿತ್ತು ಎಂಬುದನ್ನು ತಿಳಿದುಕೊಳ್ಳಿ. ಇಲ್ಲವಾದರೆ ಅವರು ವಂಚನೆ ಮಾಡಿ ತೆಗೆದುಕೊಂಡ ಸೈಟ್ ಆಗಿದ್ರೆ ಮುಂದೆ ನಿಮಗೆ ಸಮಸ್ಯೆ ಆಗುತ್ತಿದೆ
* ಆನ್ಲೈನಲ್ಲಿ ನೀವು ನೋಡುತ್ತಿರುವ ಪ್ರಾಪರ್ಟಿಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲೆಗಳನ್ನು ಅಪ್ಡೇಟ್ ಮಾಡಿದ್ದಾರಾ ಎಂಬುದನ್ನು ಚೆಕ್ ಮಾಡಿ.
* ನೀವು ಖರೀದಿಸುವ ಆಸ್ತಿಯ ಮೇಲೆ ಯಾವುದಾದರೂ ಕ್ರಿಮಿನಲ್ ಮುಖದ್ದಮೆ ಅಥವಾ ಸಾಲ ಬಾಕಿ ಇದೆಯಾ ಎಂಬುದನ್ನು ಪರಿಶೀಲಿಸಿ.
* ಆಸ್ತಿ ನೋಂದಣಿ ಸಮಯದಲ್ಲಿ ಮ್ಯುಟೇಶನ್ ಪತ್ರ ಚೆಕ್ ಮಾಡುವುದನ್ನು ಮರೆಯಬೇಡಿ.
* ಆದಷ್ಟು ತಾಳ್ಮೆಯಿಂದ ಅಕ್ಕಪಕ್ಕದವರನ್ನು ಕೂಡ ವಿಚಾರಿಸಿ ದಾಖಲೆಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಅಥವಾ ಅನುಭವಸ್ಥರ ಅಣತಿ ಮೇರೆಗೆ ಅವರು ಹೇಳುವ ಕ್ರಮಗಳನ್ನು ಪಾಲಿಸಿ, ನಿಧಾನವಾಗಿ ಮುಂದುವರೆಯಿರಿ. ಯಾವುದೇ ಹಣಕಾಸಿನ ವ್ಯವಹಾರ ನಡೆಯುವ ಮುನ್ನ ಸಾಕ್ಷಿಗಳ ಸಮ್ಮುಖದಲ್ಲಿ ಆಗುವುದು ಅಥವಾ ಅಗ್ರಿಮೆಂಟ್ ಮಾಡಿಕೊಳ್ಳುವುದನ್ನು ಮರೆಯಬೇಡಿ.