ಮಹಿಳೆಯರಿಗೆ ಈಗ ಸರ್ಕಾರ ಕಡೆಯಿಂದ ಅನೇಕ ಅನುಕೂಲತೆಗಳು ಸಿಗುತ್ತಿದೆ. ಸರ್ಕಾರಗಳು ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಕೂಡ ಮಹಿಳೆಯರಿಗೆ ಮೀಸಲಾತಿ ಹಾಗೂ ಕೆಲ ರಿಯಾಯಿತಿ ನೀಡಲಾಗುತ್ತಿದೆ. ಹೀಗೆ ರಿಯಲ್ ಎಸ್ಟೇಟ್ (Real Estate) ಕ್ಷೇತ್ರದಲ್ಲೂ ಕೂಡ ಮಹಿಳೆಯರ ಹೂಡಿಕೆ ಪ್ರೋತ್ಸಾಹಿಸುವ ಉದ್ದೇಶದಿಂದ ವಿವಿಧ ಬ್ಯಾಂಕ್ ಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುತ್ತಿವೆ.
ಮಹಿಳೆಯರಿಗೆ ಗೃಹ ಸಾಲವು (Home lians for Womens) ಪುರುಷರಿಗೆ ಹೋಲಿಸಿಕೊಂಡರೆ 0.05% – 0.10% ರಷ್ಟು ಅಗ್ಗದಲ್ಲಿ ಸಿಗುತ್ತಿದೆ. ಇದು ಬ್ಯಾಂಕ್ ನಿಂದ ಬ್ಯಾಂಕ್ ಗೆ ಭಿನ್ನವಾಗಿರುತ್ತದೆ ಮತ್ತು ಸಾಲ ಪಡೆದುಕೊಳ್ಳಲು ಹೆಚ್ಚಿಸುವ ಮಹಿಳೆಯ ಸಿಬಿಲ್ ಸ್ಕೋರ್ (Credit Score) ಮೇಲೆ ಕೂಡ ನಿರ್ಧಾರವಾಗುತ್ತದೆ. ಇದು ಕಡಿಮೆ ಎನಿಸಿದರೂ ಕೂಡ ಧೀರ್ಘಾವಧಿಯಲ್ಲಿ ಈ ರೀತಿ ಉಳಿತಾಯ ಆಗುವ ಹಣವೇ ದೊಡ್ಡ ಮಟ್ಟದ್ದಾಗಿರುತ್ತದೆ ಎನ್ನುವುದನ್ನು ನಿರ್ಲಕ್ಷಿಸುವಂತಿಲ್ಲ.
ಈ ಸುದ್ದಿ ಓದಿ:- ಕೊಟಕ್ ಸುರಕ್ಷಾ ವಿದ್ಯಾರ್ಥಿ ವೇತನ, 1 ಲಕ್ಷ ಸ್ಕಾಲರ್ಶಿಪ್ ಸಿಗಲಿದೆ ಈ ರೀತಿ ಅರ್ಜಿ ಸಲ್ಲಿಸಿ.!
ಸದ್ಯಕ್ಕೆ ಮಹಿಳೆಯರಿಗೆ ಸಿಗುತ್ತಿರುವ ವಿನಾಯಿತಿ ಬಗ್ಗೆ ವಿವರವಾಗಿ ಹೇಳುವುದಾದರೆ ವ್ಯಕ್ತಿಯೊಬ್ಬರು SBI ಬ್ಯಾಂಕ್ ನಲ್ಲಿ ಗೃಹ ಸಾಲ ಪಡೆದುಕೊಂಡರೆ 9.15% ಮೇಲ್ಪಟ್ಟು ಬಡ್ಡಿದರ ನಿಗದಿಯಾಗುತ್ತದೆ ಒಂದು ವೇಳೆ ಆ ವ್ಯಕ್ತಿಯು ತನ್ನ ಪತ್ನಿಯ ಹೆಸರಿನಲ್ಲಿ ಇದೇ SBI (State Bank of India) ಬ್ಯಾಂಕ್ ನಲ್ಲಿ ಸಾಲ ಪಡೆದುಕೊಂಡರೆ 9.10% ಬಡ್ಡಿದರ ಅನ್ವಯವಾಗುತ್ತದೆ.
ಒಂದು ವೇಳೆ ಈ ವ್ಯಕ್ತಿಯು ಸೆಂಟ್ರಲ್ ಬ್ಯಾಂಕ್ ನಲ್ಲಿ (Central Bank) ಗೃಹ ಸಾಲ ಪಡೆದುಕೊಂಡರೆ ಆತನಿಗೆ 8.5% – 9.5% ಬಡ್ಡಿ ವಿಧಿಸಲಾಗುತ್ತದೆ ಒಂದು ವೇಳೆ ಸೆಂಟ್ರಲ್ ಬ್ಯಾಂಕ್ ನಲ್ಲಿ ಆತ ಪತ್ನಿಯ ಹೆಸರಿನಲ್ಲಿ ಗೃಹ ಸಾಲ ಪಡೆದುಕೊಂಡರೆ 8.35% – 9.25% ಬಡ್ಡಿ ವಿಧಿಸಲಾಗುತ್ತದೆ.
ಈ ಸುದ್ದಿ ಓದಿ:- 4 ಗುಂಟೆಯಲ್ಲಿ ತಿಂಗಳಿಗೆ 1 ಲಕ್ಷ ಆದಾಯ, ಲಕ್ಷ ಲಕ್ಷ ಆದಾಯ ನೋಡಿ ಕೆಲಸ ಬಿಟ್ಟು ಸಂಪೂರ್ಣ ಕೃಷಿ ಕಡೆ ಮುಖ ಮಾಡಿದ ಯುವಕ.!
ಇನ್ನಷ್ಟು ವಿವರವಾಗಿ ತಿಳಿಸುವುದಾದರೆ ಗೌತಮ್ ಎನ್ನುವ ವ್ಯಕ್ತಿಯು ಸೆಂಟ್ರಲ್ ಬ್ಯಾಂಕ್ ನಲ್ಲಿ 20 ವರ್ಷಗಳ ಅವಧಿಗೆ ರೂ.1 ಕೋಟಿ ಗೃಹ ಸಾಲ ಪಡೆದಿದ್ದಾರೆ ಎಂದುಕೊಳ್ಳೋಣ, ROI (Rate of Intrest) 9.50% ವಿಧಿಸಲಾಗಿದೆ. EMI ಮೊತ್ತವು ರೂ.93,213 ಎಂದಿಟ್ಟುಕೊಳ್ಳೋಣ ಒಟ್ಟಾರೆಯಾಗಿವರೆಗೆ ಸಾಲ ಮುಗಿಯುವ ಅವಧಿವರೆಗೆ ಇವರು ಬ್ಯಾಂಕ್ ಗೆ ಕಟ್ಟಿದ ಒಟ್ಟು ಮೌಲ್ಯವು ರೂ.1,23,71,149 ಆಗಿರುತ್ತದೆ
ಇದರ ಬದಲು ಒಂದು ವೇಳೆ ಗೌತಮ್ ಅವರು ಪತ್ನಿ ರಾಧಿಕ ಹೆಸರಿನಲ್ಲಿ ಸಾಲ ಪಡೆದುಕೊಂಡರೆ ಇದೇ ಬ್ಯಾಂಕ್ ನಲ್ಲಿ ಇದೇ ಮೊತ್ತದ ಇದೆ ಅವಧಿಯವರೆಗಿನ ಸಾಲಕ್ಕೆ 9.25% ಬಡ್ಡಿ ಅನ್ವಯವಾಗುತ್ತದೆ ಆ ಪ್ರಕಾರವಾಗಿ ರೂ.91,587 EMI ಬೀಳುತ್ತದೆ. ಬಡ್ಡಿ ಸಹಿತವಾಗಿ ಕಟ್ಟುವ ಒಟ್ಟು ಮೊತ್ತವು ರೂ.1,19,80,804 ಈಗ ಈ ಎರಡು ಮೊತ್ತಕ್ಕೂ ಕಂಪೇರ್ ಮಾಡಿ ನೋಡಿದರೆ ಪತ್ನಿ ಹೆಸರಿನಲ್ಲಿ ಲೋನ್ ತೆಗೆದುಕೊಳ್ಳುವುದರಿಂದ ರೂ.3,90,345 ಹಣ ಉಳಿಸಿದ ರೀತಿ ಆಗುತ್ತದೆ.
ಇದಿಷ್ಟೇ ಅಲ್ಲದೆ ಪತ್ನಿ ಲೋನ್ ಗೆ ಅಪ್ಲೈ ಮಾಡಿದ ವೇಳೆ ಪತಿಯ ಆದಾಯ ಕೂಡ ಲೆಕ್ಕಕ್ಕೆ ತೆಗೆದುಕೊಳ್ಳುವುದರಿಂದ ಬ್ಯಾಂಕ್ ನಿಂದ ನೀಡುವ ಸಾಲದ ಮೊತ್ತ ಹೆಚ್ಚಾಗಿ ಸಿಗುತ್ತದೆ ಮತ್ತು ಅನೇಕ ರಾಜ್ಯಗಳಲ್ಲಿ ಮಹಿಳೆಯರು ಆಸ್ತಿ ಖರೀದಿಸಿದ್ದಲ್ಲಿ ಅವರ ಹೆಸರಿಗೆ ರಿಜಿಸ್ಟರ್ ಆಗುವಾಗ ರಿಜಿಸ್ಟ್ರೇಷನ್ ಸಮಯದಲ್ಲಿ ಬೀಳುವ ಸ್ಟ್ಯಾಂಪ್ ಡ್ಯೂಟಿ ಚಾರ್ಜಸ್ ಗಳಲ್ಲಿ ವಿನಾಯಿತಿ ಕೂಡ ಇರುತ್ತದೆ.
ಈ ಸುದ್ದಿ ಓದಿ:- ಮನೆ ಕಟ್ಟಿಸುವಾಗ ರೂಮ್ ಗಳ ಸೈಜ್ ಎಷ್ಟಿರಬೇಕು.? ಮನೆ ಕಟ್ಟುವವರು ಈಗಲೇ ಈ ವಿಚಾರ ತಿಳಿದುಕೊಂಡರೆ ಪಶ್ಚಾತಾಪ ಪಡುವುದು ತಪ್ಪುತ್ತೆ.!
ಈ ವಿಚಾರದಲ್ಲಿ ಗರಿಷ್ಠ 2 ಲಕ್ಷದವರೆಗೂ ಕೂಡ ಉಳಿತಾಯ ಮಾಡಬಹುದು. ಪ್ರಧಾನಮಂತ್ರಿಗಳ ವಸತಿ ಯೋಜನೆಗಳಲ್ಲಿ PLSS ಅಡಿಯಲ್ಲಿ ಬಡ್ಡಿಯಲ್ಲಿ ಸಬ್ಸಿಡಿ ಕೂಡ ಸಿಗುತ್ತದೆ. ಇನ್ನು ಮುಂತಾದ ಹೆಚ್ಚಿನ ಅನುಕೂಲತೆಗಳು ಇರುವುದರಿಂದ ಇನ್ನು ಮುಂದೆ ಈ ರೀತಿಯೂ ಯೋಚಿಸಿ.