ಮನೆ ಕಟ್ಟಿಸುವ ವಿಚಾರ ಬಂದಾಗ ಮನೆಗೆ ಮಾಡುವ ಪ್ರತಿಯೊಂದು ಕೆಲಸವೂ ಕೂಡ ಮುಖ್ಯವೇ. ಮನೆಗೆ ಕನ್ಸ್ಟ್ರಕ್ಷನ್ ಮಾಡಿಸುವವರೆಗೆ ಒಂದು ಟೆನ್ಶನ್ ಆದರೆ ಫಿನಿಶಿಂಗ್ ಆಗುವವರೆಗೆ ಮತ್ತೊಂದು ರೀತಿಯ ಟೆನ್ಶನ್ ಆಗಿರುತ್ತದೆ. ಸರಿಯಾದ ನಾಲೆಡ್ಜ್ ಇದ್ದಾಗ ಮಾತ್ರ ನಮಗೆ ಹಣ ವ್ಯರ್ಥ ಆಗುವುದು ತಪ್ಪುತ್ತದೆ ಇಲ್ಲವಾದಲ್ಲಿ ಪ್ರತಿ ವಿಷಯದಲ್ಲಿ ಪ್ರತಿ ಹಂತದಲ್ಲೂ ಮೋ’ಸ ಮಾಡುವರಿದ್ದಾರೆ, ಮತ್ತು ನಾವು ಕೆಲಸ ಮಾಡಿಸಿದ ವಿಧಾನ ತೃಪ್ತಿ ತರದೆ ಹೋಗಬಹುದು.
ಈ ರೀತಿ ಕೆಲಸಗಳಲ್ಲಿ ಮನೆಗೆ ಗ್ರಾನೆಟ್ ಅಥವಾ ಮಾರ್ಬಲ್ ಅಥವಾ ಟೈಲ್ಸ್ ಹಾಕಿಸುವುದು ಕೂಡ ಒಂದು ಬಹಳ ಮುಖ್ಯ ಸಂಗತಿಯಾಗಿದೆ. ಈ ವಿಚಾರದಲ್ಲಿ ಏನೆಲ್ಲಾ ವಂ’ಚ’ನೆ ಆಗಬಹುದು ಮತ್ತು ಯಾವೆಲ್ಲಾ ವಿಷಯಗಳನ್ನು ಮೊದಲೇ ತಿಳಿದುಕೊಂಡಿರಬೇಕು ಎನ್ನುವುದರ ಬಗ್ಗೆ ಕೆಲವು ಉಪಯುಕ್ತ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
* ಮನೆಗೆ ಎಷ್ಟು ಗ್ರಾನೈಟ್ ಅಥವಾ ಟೈಲ್ಸ್ ಬೇಕಾಗುತ್ತದೆ ಎಂದು ಮೆಜರ್ಮೆಂಟ್ ತೆಗೆದುಕೊಂಡು ನೀವೇ ಅಂಗಡಿಗಳಿಗೆ ಭೇಟಿ ಕೊಟ್ಟು ಖರೀದಿಸಬೇಕು. ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಮೇಸ್ತ್ರಿಯನ್ನು ಜೊತೆಗೆ ಕರೆದುಕೊಂಡು ಹೋಗಬೇಡಿ ಯಾಕೆಂದರೆ ಮೇಸ್ತ್ರಿ ಹಾಗೂ ಗ್ರಾನೈಟ್ ಶಾಪ್ ಮಾಲೀಕರಿಗೆ ಒಂದು ಅಂಡರ್ ಸ್ಟ್ಯಾಡಿಂಗ್ ಇರುತ್ತದೆ.
ಅವರು ಮಾತನಾಡಿಕೊಂಡಿದ್ದರೂ ಮಾತನಾಡಿಕೊಳ್ಳದೇ ಹೋದರು ಈಗ ಕಾಲ ಹಾಗಿದೆ. ಮೇಸ್ತ್ರಿ ಜೊತೆಗೆ ಬಂದಿದ್ದಾರೆ ಎಂದರೆ ಕಮಿಷನ್ ತೆಗೆದುಕೊಳ್ಳುತ್ತಾರೆ ಮತ್ತು ತನಗೂ ಹೆಚ್ಚು ಲಾಭವಾಗುವ ರೀತಿ ಮಾಡುತ್ತಾರೆ ಎಂದು ಅಂಗಡಿಯವನಿಗೆ ಕನ್ಫರ್ಮ್ ಆಗುತ್ತದೆ, ಈ ರೀತಿ 80% ಗಿಂತ ಹೆಚ್ಚಿನ ಜನರಿಗೆ ಆಗಿದೆ. ಹಾಗಾಗಿ ನಿಮ್ಮ ಪರಿಚಯಿಸ್ಥರು ಇದ್ದಾರೆ ಅವರೇ ಗ್ರಾನೈಟ್ ಕೊಡುತ್ತಿದ್ದಾರೆ ಆದರೆ ಮೆಜರ್ಮೆಂಟ್ ಮಾತ್ರ ಬೇಕು ಎಂದು ಗಟ್ಟಿಯಾಗಿ ಹೇಳಿ ಖರೀದಿಸಿ.
ಈ ಸುದ್ದಿ ಓದಿ:- ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
* ಸಾಮಾನ್ಯವಾಗಿ ಈ ಅಳತೆ ಹೇಗಿರುತ್ತದೆ ಎಂದರೆ, 10*15 ರೂಮ್ ಇದ್ದರೆ 11*16 ಅಳತೆ ತೆಗೆದುಕೊಳ್ಳಬೇಕಾಗುತ್ತದೆ. ಯಾಕೆಂದರೆ ಎರಡು ಭಾಗದಲ್ಲೂ ಸ್ಕೇಟಿಂಗ್ ಗೆ ಹೋಗುತ್ತದೆ.
* ನಾವು ಮೆಟೀರಿಯಲ್ ತೆಗೆದುಕೊಳ್ಳಲು ಹೋದಾಗಲೂ ಕೂಡ ಗ್ರಾನೈಟ್ ಗೆ ಆಗಲಿ ಟೈಲ್ಸ್ ಗೆ ಆಗಲಿ ಒಂದೇ ಕಡೆ ಹೋಗಿ ತೆಗೆದುಕೊಳ್ಳುವ ಬದಲು ಎರಡು ಮೂರು ಕಡೆ ವಿಚಾರಿಸಿಕೊಂಡು ತೆಗೆದುಕೊಂಡರೆ ಮೆಟೀರಿಯಲ್ ಕ್ವಾಲಿಟಿ ಡಿಸೈನ್ ಇತ್ಯಾದಿ ಕಲೆಕ್ಷನ್ ಬಗ್ಗೆ ನಿಮಗೂ ಕೂಡ ಒಂದು ಐಡಿಯಾ ಬರುತ್ತದೆ, ಸ್ವಲ್ಪವಾದರೂ ಹಣ ಉಳಿತಾಯ ಆಗುತ್ತದೆ.
* ಯಾವುದೇ ಶಾಪ್ ಗೆ ಹೋದರೂ ಕೂಡ ನೀವು ಮೊದಲೇ ಕಡಿಮೆ ಹಣದ್ದು ಬೇಕು ಎಂದು ಹೇಳಿ ಬಿಡಬಾರದು. ನೀವು ಯಾವ ಬಜೆಟ್ ನಲ್ಲಿ ನೋಡುತ್ತಿದ್ದೀರಾ ಎನ್ನುವುದೇ ಅವರಿಗೆ ಐಡಿಯಾ ಬರಬಾರದು ಇಲ್ಲವಾದಲ್ಲಿ ಮೋ’ಸ ಮಾಡುವ ಸಾಧ್ಯತೆ ಇರುತ್ತದೆ. ಕಡಿಮೆ ಹಣದ ಟೈಲ್ಸ್ ಗೂ ಹೆಚ್ಚು ಹೇಳಿ ಬಹಳ ಕಡಿಮೆ ಕೊಡುತ್ತಿದ್ದೇವೆ ಎಂದು ಟ್ರ್ಯಾಪ್ ಮಾಡಿ ಬಿಡುತ್ತಾರೆ. ಹಾಗಾಗಿ ಈ ಗುಟ್ಟು ಬಿಟ್ಟು ಕೊಡಬಾರದು.
ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!
* ಮನೆ ಹೇಗಿದೆ ಎನ್ನುವುದು ಕೂಡ ಮುಖ್ಯ ಆಗುತ್ತದೆ. ಒಂದು ವೇಳೆ ಕತ್ತಲೆ ಮನೆಗೆ ಡಾರ್ಕ್ ಗ್ರಾನೈಟ್ ಹಾಕಿದರೆ ಹಾಕಿಯೂ ಕೂಡ ಪ್ರಯೋಜನ ಇರುವುದಿಲ್ಲ ತುಂಬಾ ಕತ್ತಲಾಗಿ ಬಿಡುತ್ತದೆ. ಹಾಗಾಗಿ ಇದೆಲ್ಲ ಐಡಿಯಾ ಕೂಡ ಮುಖ್ಯ ಇದೇ ರೀತಿಯಾಗಿ ಇನ್ಯಾವ ವಿಚಾರಗಳ ಬಗ್ಗೆ ಗಮನ ವಹಿಸಬೇಕು ಎನ್ನುವ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.