60 ವರ್ಷ ವಯೋಮಾನವನ್ನು ಪೂರೈಸುವ ಹಿರಿಯರಿಗೆ ಗೌರವ ಸೂಚಿಸುವುದು ಮಾನವೀಯತೆ. ಆ ಸಮಯದಲ್ಲಿ ಹಿರಿಯರು ತಮ್ಮ ಜೀವನದ ಹಲವು ಹಂತಗಳನ್ನು ಪೂರೈಸಿ ಅಪಾರ ಅನುಭವಗಳೊಂದಿಗೆ ಕುಗ್ಗಿದ್ದ ದೈಹಿಕ ಶಕ್ತಿಯಲ್ಲಿ ಬದುಕುತ್ತಿರುತ್ತಾರೆ. ಈ ಸಮಯದಲ್ಲಿ ಅವರಿಗೆ ಆಸರೆಯಾಗಿರಬೇಕಾದದ್ದು ಮಕ್ಕಳ ಕರ್ತವ್ಯ. ಮಕ್ಕಳು ಮಾತ್ರವಲ್ಲದೇ ಸಮಾಜ ಕೂಡ ಅವರಿಗೆ ಮೃದುವಾಗಿ ಸ್ಪಂದಿಸಬೇಕು.
ಇದನ್ನೆಲ್ಲ ಹೊರತುಪಡಿಸಿ ಸರ್ಕಾರವು ಮತ್ತು ಸರ್ಕಾರೇತರವಾದ ಸಂಸ್ಥೆಗಳು ಕೂಡ ವಿಭಿನ್ನ ರೀತಿಯಲ್ಲಿ ತನ್ನ ಕಾಳಜಿ ಮೆರೆಯುತ್ತಿವೆ. ಹಾಗಾಗಿ ಹಿರಿಯ ನಾಗರಿಕರಿಗೆ ಬಸ್ಸು ರೈಲ್ವೆ ಟಿಕೆಟ್ ರಿಯಾಯಿತಿ, ಮೀಸಲು ಆಸನಗಳು, ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ವ್ಯವಸ್ಥೆ, ಬ್ಯಾಂಕ್ ಉಳಿತಾಯ ಯೋಜನೆಗಳಲ್ಲಿ 0.50% ಹೆಚ್ಚುವರಿ ಬಡ್ಡಿದರ ನೀಡಲಾಗುತ್ತಿದೆ.
ಈ ಸುದ್ದಿ ಓದಿ:- ಬೋರ್ ವೆಲ್ ಕೊರೆಸುವ ಮುನ್ನ ಈ ವಿಷಯ ತಿಳಿದುಕೊಳ್ಳಿ.! ಬೋರ್ವೆಲ್ ಫೇಲ್ ಆಗೋಕ್ಕೆ ಮುಖ್ಯ ಕಾರಣ ಇದು.!
ಈ ಸೌಲಭ್ಯಗಳನ್ನು ಪಡೆಯಲು ಗುರುತಿನ ಚೀಟಿಯಾಗಿ ಹಿರಿಯ ನಾಗರಿಕರ ಕಾರ್ಡ್ (Senior Citizen Card) ಹೊಂದಿದ್ದರೆ ಉತ್ತಮ. ಹಾಗಾಗಿ ಇಂದು ಈ ಅಂಕಣದಲ್ಲಿ ಹಿರಿಯ ನಾಗರಿಕರ ಕಾರ್ಡ್ ಎಲ್ಲಿ ಮಾಡಿಸಬೇಕು? ಹೇಗೆ ಅರ್ಜಿ ಸಲ್ಲಿಸಬೇಕು? ಮತ್ತು ಪೂರೈಸಬೇಕಾದ ಮಾನದಂಡಗಳು ಏನು? ಎನ್ನುವ ಕುರಿತಾದ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಪ್ರಯೋಜನಗಳು:-
* ಹಿರಿಯ ನಾಗರಿಕರು ಗುರುತಿನ ಚೀಟಿ ಪಡೆದವರು ಆ ಮೂಲಕ ಅನೇಕ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಈ ಮೇಲೆ ತಿಳಿಸಿದಂತಹ ಎಲ್ಲಾ ಸವಲತ್ತುಗಳನ್ನು ಪಡೆಯಬಹುದು.
* ಅಕಸ್ಮಾತ್ ಅಪರಿಚಿತ ಸ್ಥಳಕ್ಕೆ ತೊಂದರೆಯಾದರೆ ಈ ಕಾರ್ಡ್ ನಿಮಗೆ ಸಹಾಯ ಮಾಡುತ್ತದೆ.
ಎಲ್ಲಿ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು:-
* ವಿಶೇಷ ಗುರುತಿನ ಚೀಟಿಯಾದ ಈ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಸರ್ಕಾರ ನೀಡುತ್ತದೆ.
* ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ / ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಿರಿಯ ನಾಗರಿಕರ ಗುರುತಿನ ಚೀಟಿಯನ್ನು ಅನುಮೋದನೆ ಮಾಡಿ ವಿತರಣೆ ಮಾಡಲಾಗುತ್ತದೆ.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಮೊಬೈಲ್ ಸಂಖ್ಯೆ
* ಮನೆಯ ದೂರವಾಣಿ ಸಂಖ್ಯೆ ಅಥವಾ ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ಕುಟುಂಬದವರ 2 ಮೊಬೈಲ್ ಸಂಖ್ಯೆ.
* 2 ಭಾವಚಿತ್ರ
* ರಕ್ತದ ಗುಂಪು ಮತ್ತು ಇತರ ವೈಯಕ್ತಿಕ ವಿವರಗಳನ್ನು ಸರಿಯಾಗಿ ನೀಡಬೇಕು.
ಅರ್ಜಿ ಸಲ್ಲಿಸುವುದು ಹೇಗೆ?
* ಮೊದಲಿಗೆ ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿಬೇಕು
ಸೇವಾ ಸಿಂಧು ವೆಬ್ಸೈಟ್ ವಿಳಾಸ: https://sevasindhu.Karnataka.gov.in
* ನಂತರ ಆಧಾರ್ ಕಾರ್ಡ್ ಸಂಖ್ಯೆಯನ್ನು ಕೇಳುತ್ತದೆ ಮತ್ತು OTP ನ್ನು ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.
* ಮುಂದಿನ ಹಂತದಲ್ಲಿ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಸೂಚಿಸುತ್ತದೆ ಇದನ್ನು ಪಾಲಿಸಿ ನಂತರ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಕೊನೆಯಲ್ಲಿ ಮೊಬೈಲ್ ಸಂಖ್ಯೆಯನ್ನು ಹಾಕಿ, ಪಾಸ್ವರ್ಡ್ ನ್ನು ರಚಿಸಬೇಕು.
* ನಂತರ Resend OTP ಎಂದು ಬರಲಿದೆ, ಅದರಲ್ಲಿ OTP ಹಾಕಿದರೆ ನೋಂದಣಿಯಾಗುತ್ತದೆ.
* ಇಷ್ಟೆಲ್ಲಾ ಆದ ನಂತರ ಸೇವಾ ಸಿಂಧು ಲಾಗಿನ್ ಆಗಿ ಪಾಸ್‌ವರ್ಡ್ ನಮೂದಿಸಿದರೆ ನಂತರ ಹಿರಿಯ ನಾಗರಿಕರಿಗೆ ಅರ್ಜಿ ಬರುತ್ತದೆ.
* ಈ ಅಕ್ನೋಲೆಜ್ ಮೆಂಟ್ ಪಡೆದ 2-3 ವಾರಗಳಲ್ಲಿ ಹಿರಿಯ ನಾಗರಿಕರ ಕಾರ್ಡ್ ನಿಮ್ಮ ವಿಳಾಸಕ್ಕೆ ಬರುತ್ತದೆ ಅಥವಾ ಸ್ಟೇಟಸ್ ಟ್ರಾಕ್ ಮಾಡಿ ನೀವೇ ಡೌನ್ಲೋಡ್ ಮಾಡಿಕೊಳ್ಳಬಹುದು.