BP ಬಂದ ತಕ್ಷಣ ಮಾತ್ರೆಗಳ ಮೊರೆ ಹೋಗುವುದಕ್ಕಿಂತ ಸರಳ ಹಾಗೂ ನೈಸರ್ಗಿಕ ಚಿಕಿತ್ಸೆಗಳ ಕಡೆ ಗಮನ ಕೊಡಿ ಯಾಕೆ ಗೊತ್ತಾ.? ವೈದ್ಯರ ಸಲಹೆ ಇದು

 

ಇತ್ತೀಚಿನ ದಿನಗಳಲ್ಲಿ ಹೈಪರ್ BP (Blood pressure) ಎನ್ನುವುದು ಎಲ್ಲರಿಗೂ ಸರ್ವೇ ಸಾಮಾನ್ಯ ಕಾಯಿಲೆ ಆಗಿದೆ. ಈ ಮೊದಲು ಇದನ್ನು ವಯೋ ಸಹಜ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು ವಯಸ್ಸಾದ ಬಳಿಕ ಬರುವಂತಹ ಸಾಮಾನ್ಯ ಕಾಯಿಲೆ ಇಂದು ಕರೆಯಲಾಗುತ್ತಿತ್ತು ಆದರೆ ಈಗ ಯುವಜನತೆಯನ್ನು ಕೂಡ ಅದರಲ್ಲೂ 30ರ ಆಸು ಪಾಸಿನಲ್ಲಿ ಇರುವವರಿಗೂ ಕೂಡ ಇದು ಶುರುವಾಗುತ್ತಿದೆ.

ಇದಕ್ಕೆ ಮುಖ್ಯವಾದ ಕಾರಣ ಏನು ಎಂದು ನೋಡುವುದಾದರೆ ನಾವು ಬೆಳೆಸಿಕೊಂಡಿರುವ ಆಹಾರ ಕ್ರಮ, ಜೀವನ ಶೈಲಿ. ಇದು ನೇರವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ ಹೇಳಬೇಕು ಎಂದರೆ WHO (world health organization) ಸೂಚಿಸುವ ಪ್ರಕಾರ ಒಬ್ಬ ವ್ಯಕ್ತಿ ಒಂದು ದಿನಕ್ಕೆ 2g ನಷ್ಟು ಮಾತ್ರ ಉಪ್ಪನ್ನು ಸೇವಿಸಬೇಕು.

ಆದರೆ ಇಂದು ನಾವು ಫಾಸ್ಟ್ ಫುಡ್ ಹಾಗೂ ಪ್ಯಾಕೆಟ್ ಫುಡ್ ಗಳನ್ನು (packed food) ಹೆಚ್ಚಾಗಿ ತಿನ್ನುತ್ತಿದ್ದೇವೆ. ಈ ರೀತಿ ಪ್ಯಾಕೆಟ್ ಐಟಂಗಳಾದ ಸ್ನಾಕ್ಸ್, ಚಿಪ್ಸ್ ಇತ್ಯಾದಿಗಳನ್ನು ಹೆಚ್ಚು ದಿನ ಬಾಳಿಕೆ ಬರುವಂತೆ ಇಡಲು ಉಪ್ಪಿನಾಂಶವನ್ನು ಹೆಚ್ಚಿಸಿರುತ್ತಾರೆ. ಜೊತೆಗೆ ದಕ್ಷಿಣ ಭಾರತದ ಆಹಾರ ಪದ್ಧತಿಯಲ್ಲೂ ಪ್ರತಿಯೊಂದು ಆಹಾರಕ್ಕೂ ಕೂಡ ಉಪ್ಪನ್ನು ಸೇರಿಸುತ್ತಾರೆ.

ಉಪ್ಪನ್ನು ಮಾಡದೆ ಮಾಡುವ ಯಾವ ಖಾದ್ಯವೂ ಇಲ್ಲ ಎಂದೇ ಹೇಳಬಹುದುಹೀಗಾಗಿ ಭಾರತದಂತಹ ದೇಶದಲ್ಲಿ ಉಪ್ಪಿನ ಪ್ರಮಾಣ ಸಾಮಾನ್ಯವಾಗಿ ಹೆಚ್ಚಾಗಿಯೇ ಸೇವಿಸುತ್ತಾರೆ. ಇಲ್ಲಿ ಒಬ್ಬ ಮನುಷ್ಯ ಕಡಿಮೆ ಎಂದರು 12ರಿಂದ 15 ಗ್ರಾಂ ಅಷ್ಟು ಉಪ್ಪನ್ನು ಸೇವಿಸುತ್ತಾನೆ. ಇದು WHO ಸೂಚಿಸಿರುವ ಪ್ರಮಾಣಕ್ಕಿಂತ ಹಲವು ಪಟ್ಟು ಹೆಚ್ಚಾಯಿತು. ಇದರಿಂದ ಏನಾಗುತ್ತದೆ ಎಂದು ನೋಡುವುದಾದರೆ ಉಪ್ಪಿನಲ್ಲಿರುವ ಸೋಡಿಯಂ ಕ್ಲೋರೈಡ್ ಅಂಶ ದೇಹಕ್ಕೆ ಹೆಚ್ಚಾಗಿ ಸೇರುತ್ತದೆ.

ಇದರ ಪ್ರಮುಖ ಲಕ್ಷಣ ಏನು ಎಂದರೆ ದೇಹದಲ್ಲಿ ನೀರಿನ ಅಂಶವನ್ನು ಹೆಚ್ಚಾಗಿಸುವುದು. ಈ ರೀತಿ ದೇಹದಲ್ಲಿ ನೀರಿನ ಅಂಶ ಹೆಚ್ಚಾದಾಗ ರಕ್ತದ ಅಂಶವು ಹೆಚ್ಚಾಗುತ್ತದೆ. ಇದು ರಕ್ತವನ್ನು ಶುದ್ಧೀಕರಣ ಮಾಡುವು ವ್ಯವಸ್ಥೆ ಮೇಲೆ ಒತ್ತಡ ತರುತ್ತದೆ, ನಂತರ ಇದು ನೀರವಾಗಿ ಹೃದಯದ ಮೇಲೆ ಒತ್ತಡ ಬೀರುತ್ತದೆ. ಹಾಗೆ ಕಿಡ್ನಿಗಳು ವಾಟರ್ ಡಿಟೆಕ್ಷನ್ ಮಾಡಲು ಹೆಚ್ಚಿನ ಒತ್ತಡ ಅನುಭವಿಸುವುದರಿಂದ ಕಿಡ್ನಿ ಸಮಸ್ಯೆ (kidney problem) ಕೂಡ ಉಂಟಾಗುತ್ತದೆ.

ಮೆಗ್ನೀಷಿಯಂ, ಸಿಂಕ್ ಈ ರೀತಿ ಖನಿಜಗಳ ರೀತಿಯೇ ಸೋಡಿಯಂ ಕೂಡ ದೇಹಕ್ಕೆ ಅವಶ್ಯಕ ಆದರೆ ಎಷ್ಟು ಬೇಕೋ ಅಷ್ಟು ಇರಬೇಕು. ಉಪ್ಪಿನಾಂಶ ಹೆಚ್ಚಾದರೆ ಈ ಮೇಲೆ ತಿಳಿಸಿದಂತೆ ಇನ್ನು ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗೆ ವೈದ್ಯರ ಬಳಿ ಹೋದರೆ ಮಾತ್ರೆ ಕೊಡುತ್ತಾರೆ. ಒಮ್ಮೆ ಮಾತ್ರೆ ಸೇವಿಸಿದರೆ ಜೀವನ ಪೂರ್ತಿ ತೆಗೆದು ಕೊಳ್ಳಬೇಕಲ್ಲ ಎಂದು ಯುವ ಜನತೆ ಭಯ ಬೀಳುತ್ತಾರೆ.

ಇದು ದೇಹದಲ್ಲಿ ಹೆಚ್ಚಾಗಿರುವುದು ನೀರಿನಾಂವನ್ನು ಹೊರಹಾಕುವ ಕೆಲಸ ಮಾಡುತ್ತದೆ ಆದರೆ ಮಾತ್ರೆ ಸೇವನೆ ಒಂದು ದಿನ ನಿಲ್ಲಿಸಿದರು ಅದು ದೇಹದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಹಾಗಾಗಿ ಇವುಗಳನ್ನು ಸೇವನೆ ಮಾಡುವ ಮುನ್ನವೇ ಸರಳ ಹಾಗೂ ನೈಸರ್ಗಿಕ ಚಿಕಿತ್ಸೆಯಿಂದ (Simple and natural treatment) ಇದನ್ನು ಗುಣಪಡಿಸಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಾಗಿ ಕೆಲವು ಟಿಪ್ ಗಳನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.

● ಡೈರೀಟಿಕ್ ಅಂಶಗಳು (diuretic) ಹೆಚ್ಚಾಗಿರುವ ತರಕಾರಿ ಹಾಗೂ ಹಣ್ಣಿನ ಸೇವನೆಯನ್ನು ಮಾಡುವುದರಿಂದ ನ್ಯಾಚುರಲ್ ಆಗಿ ದೇಹದಲ್ಲಿ BP ಕಡಿಮೆ ಆಗುತ್ತದೆ, ಬೂದುಗುಂಬಳಕಾಯಿ ಕಲ್ಲಂಗಡಿ, ಬಾಳೆದಿಂಡು ಇವುಗಳ ಜ್ಯೂಸ್ ಅಥವಾ ಬಾರ್ಲಿ ನೀರು ಮುಂತಾದವುಗಳನ್ನು ನೀರಿನ ಅಂಶ ಹೆಚ್ಚಾಗಿರುತ್ತದೆ. ಪ್ರತಿದಿನವೂ ಕೂಡ ಇವುಗಳಲ್ಲಿ ಒಂದನ್ನು ಉಪ್ಪಿಲ್ಲದೆ ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದ BP ಸಮಸ್ಯೆ ಕಂಟ್ರೋಲಿಗೆ ಬರುತ್ತದೆ.

● ಇನ್ಸುಲಿನ್ ಪ್ರಮಾಣ (Insulin) ದೇಹದಲ್ಲಿ ಹೆಚ್ಚಾದಷ್ಟು ನೈಟ್ರಿಕ್ ಆಸಿಡ್ (Nitric acid) ಪ್ರಮಾಣ ಕಡಿಮೆಯಾಗುತ್ತದೆ. ಇದು ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುವುದಕ್ಕೆ ಪರೋಕ್ಷವಾಗಿ BP ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಸಕ್ಕರೆ ಅಂಶವಿರುವ (Sugar content food control) ಆಹಾರ ಪದಾರ್ಥಗಳ ಸೇವನೆ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

● ಯೂರಿಕ್ ಆಸಿಡ್ (Uric acid) ಪ್ರಮಾಣ ಹೆಚ್ಚಾಗಿದ್ದರೂ ಕೂಡ ನೈಟಿಕ್ ಆಸಿಡ್ ಪ್ರಮಾಣ ಕಡಿಮೆ ಆಗುತ್ತದೆ. ಪ್ರೋಟೀನ್ ಹಾಗೂ ಫ್ಯಾಟ್ ಯುಕ್ತ ಆಹಾರ ಪದಾರ್ಥಗಳಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚುರುತ್ತದೆ. ಇದನ್ನು ಕಡಿಮೆ ಮಾಡಿ ಇದಕ್ಕೆ ವಿರುದ್ಧವಾಗಿ ಬೀಟ್ರೂಟ್ ನಂತರ ತರಕಾರಿಗಳಲ್ಲಿ ನೈಟ್ರಿಕ್ ಆಸಿಡ್ ಅಂಶ ಹೆಚ್ಚಾಗಿರುವುದರಿಂದ ಇವುಗಳ ಸೇವನೆ ಹೆಚ್ಚಾಗಿ ಮಾಡಬೇಕು.

● ಕೊಲೆಸ್ಟ್ರಾಲ್ ಹಾಗೂ ಟ್ರೆ ಗ್ಲಿಸರೈಡ್ ರಕ್ತದಲ್ಲಿ ಹೆಚ್ಚಾಗುವ ಕಾರಣ ರಕ್ತದ ಡೇನ್ಸಿಟಿ (Blood density) ಕೂಡ BP ಹೆಚ್ಚಾಗುತ್ತದೆ ಇವುಗಳ ನಿಯಂತ್ರಣವನ್ನು ಮಾಡಬೇಕು.
● ಪ್ರತಿದಿನವೂ ಸಾಧ್ಯವಷ್ಟು ವ್ಯಾಯಾಮ ಮಾಡುತ್ತಾ ಚಟುವಟಿಕೆಯಿಂದ ಕೂಡಿದ್ದು ಒತ್ತಡ ಕಡಿಮೆ ಮಾಡಿಕೊಂಡರು ಕೂಡ BP ಬರುವುದನ್ನು ತಪ್ಪಿಸಬಹುದು ಹಾಗೂ ಕಂಟ್ರೋಲ್ ಮಾಡಬಹುದು.

Leave a Comment

%d bloggers like this: