ವಿಜ್ಞಾನ ಬೆಳೆದಂತೆಲ್ಲಾ ಮನುಷ್ಯನ ಜೀವನ ಶೈಲಿಯೂ ಕೂಡ ಬದಲಾಗುತ್ತಿದೆ. ಮಂಗನಿಂದ ಮಾನವನಾದ ಮನುಷ್ಯ ವರ್ಷದಿಂದ ವರ್ಷಕ್ಕೆ ಪ್ರತಿ ವಿಷಯದಲ್ಲೂ ಇನ್ನೂ ಇಂಪ್ರೂ ಆಗಲು ಹೋಗುತ್ತಿದ್ದಾನೆ. ಇದಕ್ಕೆ ಸ್ಪಷ್ಟ ಉದಾಹರಣೆಯನ್ನು ನಾವು ಹಾಸಿಕೆಯ ಜೊತೆಗೆ ವಿವರಿಸಬಹುದು ಯಾಕೆಂದರೆ ಹಿಂದಿನ ಕಾಲದಲ್ಲಿ ಈ ರೀತಿ ಎಲ್ಲರೂ ಹಾಸಿಗೆಯ ಮೇಲೆ ಮಲಗುವ ಅಭ್ಯಾಸ ಇರಲಿಲ್ಲ.
ಸಾಮಾನ್ಯ ಕುಟುಂಬಗಳಲ್ಲಿ ವಯಸ್ಸಾದವರು ಅಥವಾ ರೋಗಿಗಳು ಮಾತ್ರ ಹೀಗೆ ಮಲಗುತ್ತಿದ್ದ ಉದಾಹರಣೆಯನ್ನು ನಾವು ನೋಡಿದ್ದೇವೆ. ಈಗ ನಮಗೆಲ್ಲರಿಗೂ ಕೂಡ ಕೊಳ್ಳುವ ಶಕ್ತಿ ಚೆನ್ನಾಗಿರುವುದರಿಂದ ಮನೆ ಮಂದಿಗೆಲ್ಲಾ ಪ್ರತ್ಯೇಕ ಬೆಡ್ರೂಮ್, ಪ್ರತ್ಯೇಕವಾದ ಬೆಡ್ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ. ಇದು ತಪ್ಪು ಎಂದು ಸಂಪೂರ್ಣವಾಗಿ ಹೀಗಳೆಯಲು ಬರುವುದಿಲ್ಲ.
ಸೆಪ್ಟೆಂಬರ್ 26ಕ್ಕೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ವರ್ಗಾವಣೆ, ಈ ಮಹಿಳೆಯರಿಗೆ ಮಾತ್ರ.!
ಮೊದಲೆಲ್ಲಾ ಚಾಪೆ ಇತ್ತು, ಚಾಪೆ ಇಂದ ಬೆಡ್, ಬೆಡ್ ಅಲ್ಲಿ ಹತ್ತಿ ಹಾಸಿಗೆಯಿಂದ ನಾರಿನ ಹಾಸಿಗೆ, ನಾರಿನ ಹಾಸಿಗೆಯಿಂದ ಸ್ಪಂಜು-ಸ್ಪ್ರಿಂಗ್ ಹಾಸಿಗೆ, ಹೀಗೆ ಈಗ ಹಾಸಿಗೆಗೆ ಲಕ್ಷ ಹಣ ಕೊಟ್ಟು ತರುತ್ತಿದ್ದೇವೆ. ಈ ಹಾಸಿಗೆಗಳ ಜೊತೆ ದಿಂಬು ಕೂಡ ಗಿಫ್ಟ್ ಆಗಿ ಬರುತ್ತದೆ. ಆದರೆ ಆರೋಗ್ಯಕರವಾಗಿರುವ ಮನುಷ್ಯನಿಗೆ, ಚಟುವಟಿಕೆಯಿಂದ ಕೂಡಿರುವ ವ್ಯಕ್ತಿಗೆ ಇವುಗಳ ಅವಶ್ಯಕತೆಯೇ ಇಲ್ಲ. ಹೇಗೆ ಮಲಗಿದರೂ ಕೂಡ ಆತನಿಗೆ ನಿದ್ದೆ ಬರುತ್ತದೆ.
ನಾವು ಚಿಕ್ಕ ಮಕ್ಕಳನ್ನು ಜೋಕಾಲಿಗೆ ಕಟ್ಟಿ ಮಲಗಿಸುತ್ತೇವೆ. ಐದಾರು ವರ್ಷಗಳವರೆಗೆ ಮಕ್ಕಳಿಗೆ ದಿಂಬು ಹಾಕುವ ಅಭ್ಯಾಸವೇ ಮಾಡಿಸಿರುವುದಿಲ್ಲ ಆದರೆ ಬೆಳೆಯುತ್ತಾ ಬೆಳೆಯುತ್ತಾ ನಾವು ಮಲಗಲು ದಿಂಬು ಬೇಕು, ಅದರಲ್ಲೂ ಒಂದು ಸಾಲುವುದಿಲ್ಲ ಎಂದು ಎರಡೆರಡು ದಿಂಬು ಬೇಕು ಎನ್ನುತ್ತಿದ್ದೇವೆ. ಜೊತೆಗೆ ಕೆಲವರಿಗೆ ಕಾಲಿಗೆ ಕೂಡ ದಿಂಬು ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ.
ನೀರಿನ ಬಾಟಲ್, ಫ್ಲಾಸ್ಕ್, ಕ್ಯಾನ್ ಗಳನ್ನು ಕ್ಲೀನ್ ಮಾಡಲು ಕಷ್ಟ ಪಡುವುದು ಬೇಡ ಇಲ್ಲಿದೆ ನೋಡಿ ಸುಲಭವಾದ ಟ್ರಿಕ್.!
ಮೊದಲೇ ಹೇಳಿದಂತೆ ಇದರಲ್ಲಿ ಯಾವುದು ಸರಿ ಎಂದು ಸ್ಪಷ್ಟವಾಗಿ ಹೇಳುವುದು ಕ’ಷ್ಟ. ಮನುಷ್ಯನಿಗೆ ಯಾವುದು ಅಭ್ಯಾಸವಾಗಿದೆ ಯಾವುದು ಆತನಿಗೆ ಕಂಫರ್ಟ್ ಕೊಡುತ್ತದೆ ಅದೇ ಒಳ್ಳೆಯದು ಎಂದು ಹೇಳಬಹುದು. ದಿಂಬು ಹಾಕಿ ಅಭ್ಯಾಸ ಅಡಿಕ್ಷನ್ ಆಗಿದ್ದಾಗ ತಲೆದಿಂಬು ಇಲ್ಲದಿದ್ದರೆ ತಲೆನೋವು ಬರುತ್ತದೆ, ನಿದ್ರೆ ಬರುವುದಿಲ್ಲ ಎಂದರೆ ಹೇಗೆ ಅಭ್ಯಾಸ ಆಗಿದೆ ಹಾಗೆ ಮಲಗಲು ಬಿಡುವುದು ಒಳ್ಳೆಯದು.
ಆದರೆ ಮುಂದೆ ಅವನಿಗೆ ಸ್ಲೀಪಿಂಗ್ ಪೊಸಿಷನ್ ಸರಿ ಇಲ್ಲದ ಕಾರಣ ಕುತ್ತಿಗೆ ನೋವು, ಭುಜದ ನೋವು ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕೆಲವರು ನಾವೇನೋ ಅಡಿಕ್ಟ್ ಆಗಿದ್ದೇವೆ ಮಕ್ಕಳನ್ನಾದರೂ ತಪ್ಪಿಸೋಣ ಎನ್ನುತ್ತಿರುತ್ತಾರೆ. ಅವರಿಗೆ ಸಲಹೆ ಕೊಡಬೇಕು ಎಂದರೆ ಮಕ್ಕಳನ್ನು ಜೋಕಾಲಿಯಲ್ಲಿ ಮಲಗಿಸುವ ರೂಢಿ ಮಾಡಿಸಿರುತ್ತೇವೆ ಇದು ಗುರುತ್ವಾಕರ್ಷಣೆಗೆ ವಿರುದ್ಧವಾಗಿದ್ದರೂ ಕೂಡ ಮಾನಸಿಕ ಆರೋಗ್ಯಕ್ಕೆ ಬಹಳ ಒಳ್ಳೆಯದು.
ಎಷ್ಟು ವರ್ಷ ಸಾಧ್ಯ ಅಷ್ಟು ವರ್ಷ ಅದೇ ರೀತಿ ಮಲಗಿದರೆ ಒಳ್ಳೆಯದು. ದಿಂಬು ಇಲ್ಲದೇ ಮಲಗುವುದನ್ನು ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು ಅಥವಾ ಸಾಫ್ಟ್ ಆದ ಹೈಟ್ ಕಡಿಮೆ ಇರುವ ದಿಂಬುಗಳನ್ನೇ ಬಳಸುವುದು ಒಳ್ಳೆಯದು. ನಮ್ಮ ದೇಹ ಸಮವಾಗಿರುವಂತೆ, ಒನ್ ಸೈಡ್ ಮಲಗಿದಾಗಲೂ ಅದೇ ಬ್ಯಾಲೆನ್ಸ್ ಇರುವಂತೆ ಆ ಹೈಟ್ ಬರುವಂತೆ ಮಾತ್ರ ದಿಂಬು ಹಾಕಿಕೊಳ್ಳಬೇಕು.
ಈ ರೀತಿ ಸರಿಯಾದ ಪೊಸೆಷನ್ ನಲ್ಲಿ ಮಲಗಿದಾಗ ಮೆದುಳಿನ ಭಾಗದ ರಕ್ತ ಸಂಚಾರ ಅಡಚಣೆ ಇಲ್ಲದೆ ನಡೆಯುತ್ತದೆ, ಇದರಿಂದ ಒಳ್ಳೆಯ ನಿದ್ರೆ ಕೂಡ ಚೆನ್ನಾಗಿ ಬರುತ್ತದೆ. ಮನುಷ್ಯ ಮಾತ್ರ ಈ ರೀತಿ ತಲೆಗೆ ಹೊತ್ತು ಇಟ್ಟುಕೊಂಡು ಮಲಗುವ ರೂಢಿ ಮಾಡಿಕೊಂಡಿರುವುದು, ಉಳಿದ ಯಾವ ಪ್ರಾಣಿಯೂ ಕೂಡ ಈ ರೀತಿ ಮಾಡುವುದಿಲ್ಲ, ಹಾಗಾಗಿ ಇದರ ಅವಶ್ಯಕತೆ ಇಲ್ಲ ಎಂದು ಅಂದುಕೊಳ್ಳಬಹುದು.