ರಾತ್ರಿ ಹೊತ್ತು ಲೈಟ್ ಹಾಕಿ ಮಲಗುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳು ಏನು ಗೊತ್ತಾ.? ತಪ್ಪದೆ ಪ್ರತಿಯೊಬ್ಬರೂ ತಿಳಿಯಿರಿ.

ರಾತ್ರಿ ಎಂದ ತಕ್ಷಣ ಎಲ್ಲರ ಮನದಲ್ಲೂ ಒಂದು ರೀತಿಯ ಭಯ. ಈ ಭಯವೂ ಅದು ಕತ್ತಲೆ ಏನು ಕಾಣುವುದಿಲ್ಲ ಎನ್ನುವುದರಿಂದ ಆಗಿದೆಯೋ ಅಥವಾ ರಾತ್ರಿ ಎನ್ನುವುದನ್ನು ನಾವು ಮನಸ್ಸಿನಲ್ಲಿ ಈಗಾಗಲೇ ಪೂರ್ವಗ್ರಹ ಪೀಡಿತ ಮನೋಭಾವನೆಯಿಂದ ಏನೇನೋ ಕಲ್ಪಿಸಿಕೊಳ್ಳುವುದರಿಂದ ಆಗುತ್ತದೆಯೋ ಗೊತ್ತಿಲ್ಲ ಒಟ್ಟಿನಲ್ಲಿ ರಾತ್ರಿ ಎಂದರೆ ನಮ್ಮಲ್ಲಿ ಈಗಲೂ ಮಕ್ಕಳು ಹಾಗೂ ಕೆಲವು ಯುವತಿಯರಿಗೆ ತುಂಬಾ ಭಯ. ಈಗಿನ ಕಾಲದಲ್ಲಿ ಎಲ್ಲಾ ಕಡೆ ವಿಭಕ್ತ ಕುಟುಂಬಗಳು ಹೆಚ್ಚಾಗಿರುವುದರಿಂದ ಮನೆಯಲ್ಲಿ ಹೆಚ್ಚು ಎಂದರೆ ಎರಡು ಅಥವಾ ಮೂರು ಜನ ಇರುತ್ತಾರೆ ಅಷ್ಟೇ ಹೀಗಾಗಿ ಅಕಸ್ಮಾತ್ ಇದ್ದ ಇಬ್ಬರೂ ಸದಸ್ಯರಲ್ಲಿ ಯಾರಾದರೂ ಒಂದು ದಿನ ಎರಡು ದಿನ ಮನೆಯಿಂದ ಆಚೆ ಇರಬೇಕಾದ ಸಂದರ್ಭ ಬಂದರೆ ಒಬ್ಬರೇ ಮನೆಯಲ್ಲಿ ಉಳಿಯಲು ಇನ್ನೊಬ್ಬರು ಒದ್ದಾಡಿ ಬಿಡುತ್ತಾರೆ ಯಾಕೆಂದರೆ ರಾತ್ರಿ ಎಂದರೆ ಭಯ, ಕತ್ತಲು ಎಂದರೆ ಭಯ.

WhatsApp Group Join Now
Telegram Group Join Now

ಇಂತಹ ಕತ್ತರಿನ ಭಯದ ವಾತಾವರಣದಲ್ಲಿ ನೆಮ್ಮದಿಯಿಂದ ಮಲಗಲು ಸಾಧ್ಯವಿಲ್ಲ ನಾವು ಕಣ್ಮುಚ್ಚಿ ಇದ್ದರೂ ಅಥವಾ ಕಣ್ ಬಿಟ್ಟುಕೊಂಡು ಇದ್ದರೂ ಕೂಡ ನೂರಾರು ನೆ.ಗೆ.ಟಿ.ವ್ ಯೋಚನೆಗಳು ಹಾಗೂ ಏನೇನೋ ಕಲ್ಪನೆಗಳು ನಮ್ಮ ಮನದಲ್ಲಿ ಓಡಾಡುತ್ತಿರುತ್ತದೆ ಹಾಗಾಗಿ ನೆಮ್ಮದಿಯಿಂದ ನಿದ್ರೆ ಮಾಡಲು ಹೆಚ್ಚು ಜನ ಲೈಟ್ ಗಳನ್ನು ಹಾಕಿ ಬೆಳಕು ಮಾಡಿ ಬಿಡುತ್ತಾರೆ. ಇಂತಹ ಮನಸ್ಥಿತಿಯವರು ನಮ್ಮ ಕುಟುಂಬದಲ್ಲಿಯೇ ಹಲವು ಸದಸ್ಯರು ಇರುತ್ತಾರೆ ಹಾಗೂ ನಮ್ಮ ಸ್ನೇಹಿತ ಬಳಗದಲ್ಲೂ ಇರುತ್ತಾರೆ. ಇವರನ್ನು ನೋಡಿ ನಾವು ನಗುತ್ತಿರುತ್ತೇವೆ ಆದರೆ ಅವರ ಪರಿಸ್ಥಿತಿ ಹಾಗೂ ಅವರ ಮಾನಸಿಕ ಸ್ಥಿತಿ ಅವರಿಗೆ ಗೊತ್ತಿರುತ್ತದೆ ಆದರೆ ಈ ರೀತಿ ಅವರು ರಾತ್ರಿ ಹೊತ್ತು ಲೈಟ್ ಹಾಕಿ ಮಲಗುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದಲೂ ಕೂಡ ದುಷ್ಪರಿಣಾಮಗಳು ಬೀರುತ್ತವೆ ಎನ್ನುವುದು ಬಹುತೇಕ ಜನರಿಗೆ ತಿಳಿದೇ ಇರುವುದಿಲ್ಲ.

ಹೌದು ರಾತ್ರಿ ಹೊತ್ತು ಲೈಟ್ ಹಾಕಿ ಮಲಗುವುದರಿಂದ ಲೈಟ್ ಬೆಳಕು ಕಣ್ಣಿನ ಮೇಲೆ ಬೀಳುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ನಮ್ಮ ಆರೋಗ್ಯದ ಗುಟ್ಟೇ ನಿದ್ದೆಯಲ್ಲಿ ಇರುವುದರಿಂದ ಮನುಷ್ಯ ಕನಿಷ್ಠ 8 ಗಂಟೆಗಳು ಆದರೂ ನೆಮ್ಮದಿಯಿಂದ ನಿದ್ರಿಸಲಿಲ್ಲ ಎಂದರೆ ಮರುದಿನದಿಂದಲೇ ಅವನ ಅನಾರೋಗ್ಯದ ಸಮಸ್ಯೆಗಳು ಅವನನ್ನು ಹುಡುಕಿಕೊಂಡು ಬರುತ್ತವೆ ಎನ್ನಬಹುದು. ಈ ರೀತಿ ನಿದ್ರೆ ಇಲ್ಲದೇ ಇರುವುದರಿಂದ ನಿದ್ರಾಹೀನತೆ ತಲೆನೋವು ಮಾನಸಿಕ ಒತ್ತಡ ಹಾಗೂ ಇನ್ನು ಮುಂತಾದ ಅನೇಕ ಸಮಸ್ಯೆಗಳು ಮನುಷ್ಯನಿಗೆ ಕಾಣಿಸಿಕೊಳ್ಳುತ್ತವೆ. ಹಾಗಾಗಿ ನೆಮ್ಮದಿಯಿಂದ ನಿದ್ದೆ ಮಾಡಬೇಕು ಅಂದರೆ ಅಲ್ಲಿ ಕತ್ತಲೆಯ ವಾತಾವರಣ ಇರಬೇಕು ಯಾವುದೇ ಕಾರಣಕ್ಕೂ ಕಣ್ಣಿನ ಮೇಲೆ ಬೆಳಕಿನ ಕಣಗಳು ಓಡಾಡಬಾರದು ಹಾಗಿದ್ದಾಗ ಮಾತ್ರ ಮಲಗಿದ ನಿದ್ದೆ ಪೂರ್ತಿಯಾಗಿ ಆಗುತ್ತದೆ ಇಲ್ಲದಿದ್ದರೆ ಮರುದಿನ ಪೂರ್ತಿ ಒದ್ದಾಡಬೇಕಾಗುತ್ತದೆ ಆದ್ದರಿಂದ ರಾತ್ರಿ ಹೊತ್ತು ಮಲಗುವಾಗ ಲೈಟ್ ಹಾಕಬೇಡಿ.

ಹಾಗೂ ನಾವು ನೆಮ್ಮದಿಯಾಗಿ ಮಲಗಿಸುವಾಗ ನಮ್ಮ ದೇಹದಲ್ಲಿ ಹಲವಾರು ವ್ಯತ್ಯಾಸಗಳು ಆಗುತ್ತಿರುತ್ತವೆ, ಕೆಲವೊಂದು ಹಾರ್ಮೋನ್ ಗಳ ಬಿಡುಗಡೆ ಈ ರೀತಿ ಇನ್ನೂ ಅನೇಕ ಕ್ರಿಯೆಗಳು ದೇಹದ ಒಳಗಡೆ ನಡೆಯುತ್ತಿರುತ್ತವೆ. ನಾವೇನಾದರೂ ನಿದ್ದೆಯನ್ನು ಸರಿಯಾಗಿ ಮಾಡಲಿಲ್ಲ ಅಂದರೆ ದೇಹದಲ್ಲಿ ಹಾರ್ಮೋನ್ ಗಳ ಬೆಳವಣಿಗೆ ಹೆಚ್ಚಾಗಬಹುದು ಅಥವಾ ಅವುಗಳ ಕೊರತೆ ಕೂಡ ಉಂಟಾಗಬಹುದು. ಇಂಥ ಸಮಸ್ಯೆಗಳಲ್ಲಿ ಮೊದಲನೆಯದಾಗಿ ಕಾಣಿಸಿಕೊಳ್ಳುವುದು ಮಧುಮೇಹ ಕಾಯಿಲೆ ಈ ರೀತಿ ನಿದ್ರಾಹೀನತೆಯಿಂದ ಒದ್ದಾಡಿದಾಗ ಅಂತ ಮನುಷ್ಯರಿಗೆ ಮಧುಮೇಹ ಕಾಯಿಲೆ ಬೇಗನೆ ಹುಡುಕಿಕೊಂಡು ಬರುತ್ತದೆ. ಹಾಗಾಗಿ ರಾತ್ರಿ ಹೊತ್ತು ನೆಮ್ಮದಿಯಿಂದ ನಿದ್ರಿಸುವುದು ಕೂಡ ಮಧುಮೇಹ ತಡೆಯಲು ಇರುವ ಒಂದು ಮುಂಜಾಗೃತ ಕ್ರಮ ಎಂದರೆ ತಪ್ಪಾಗಲಾರದು. ಆದ್ದರಿಂದ ನೆಮ್ಮದಿಯ ನಿದ್ದೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.

ಕಣ್ಣುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ ಮೊದಲೇ ಹೇಳಿದಂತೆ ಬೆಳಕು ಕಣ್ಣಿನ ಮೇಲೆ ಹೆಚ್ಚಾಗಿ ಬಿದ್ದಾಗ ರಾತ್ರಿ ಹೊತ್ತು ಅದು ಕಣ್ಣಿನ ಮೇಲೆ ದುಷ್ಪರಿಣಾಮ ಬೀಳುತ್ತದೆ. ಆದರೆ ಹಗಲು ಹೊತ್ತು ಸುತ್ತ ಬೆಳಕು ಇರುವುದರಿಂದ ಇದು ಹೆಚ್ಚಾಗಿ ಸಮಸ್ಯೆ ಆಗುವುದಿಲ್ಲ ಯಾಕೆಂದರೆ ನೈಸರ್ಗಿಕ ಬೆಳಕು ಕಣ್ಣಿಗೆ ಅಷ್ಟೊಂದು ಹಾನಿ ಮಾಡುವುದಿಲ್ಲ ಆದರೆ ರಾತ್ರಿ ಹೊತ್ತು ಬೀಳುವ ಲೈಟ್ ಬೆಳಕು ಕಣ್ಣಿನ ಮೇಲೆ ಬಹಳ ಒತ್ತಡವನ್ನು ಉಂಟು ಮಾಡಿ ಈ ಮೂಲಕ ದೃಷ್ಟಿ ದೋಷ ಹಾಗೂ ತಲೆನೋವಿನ ಸಮಸ್ಯೆ ಅಂತಹ ಸಮಸ್ಯೆಗಳನ್ನು ಮನುಷ್ಯರಿಗೆ ತರುತ್ತದೆ. ಹಾಗಾಗಿ ಲೈಟ್ ಹಾಕಿ ರಾತ್ರಿ ಹೊತ್ತು ನಿದ್ದೆ ಮಾಡುವುದು ತಪ್ಪು ಎನ್ನಬಹುದು. ಆದರೂ ಕೂಡ ನೀವೇನಾದರೂ ಇಂತಹ ಅಭ್ಯಾಸವನ್ನು ಈಗಾಗಲೇ ರೂಢಿಸಿಕೊಂಡಿದ್ದರೆ ಅದನ್ನು ಬಿಡಲು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ ಎನ್ನುವುದಾದರೆ ಈ ರೀತಿ ಮಾಡಬಹುದು.

ಒಂದು ವೇಳೆ ಲೈಟ್ ಹಾಕಿಕೊಂಡೆ ಮಲಗಲೇಬೇಕಾದ ಪರಿಸ್ಥಿತಿ ಇದ್ದಾಗ ಬಿಳಿ ಕೆಂಪು ಹಾಗೂ ನೀಲಿ ಬಣ್ಣದ ಲೈಟ್ಗಳನ್ನು ಬಳಸದೆ ಅದರ ಬದಲಾಗಿ ಹಳದಿ ಅಥವಾ ಹಳದಿ ಮಿಶ್ರಿತ ಕೇಸರಿ ಕಡಿಮೆ ವ್ಯಾಟ್ಸ್ ಇರುವ ಬಲ್ಬ್ ಗಳನ್ನು ಬಳಸಿ ಅವುಗಳನ್ನು ಉರಿಸಿ ನಿದ್ದೆ ಮಾಡಬಹುದು ಅಥವಾ ಬೆಡ್ ಲ್ಯಾಂಪ್ ಗಳು ಈ ರೀತಿ ಅನುಕೂಲತೆಗಳಿಗಾಗಿ ಸಿಗುತ್ತದೆ ಇಂತಹವುಗಳನ್ನು ಅಲಂಕಾರಕ್ಕೂ ಕೂಡ ಬಳಸುತ್ತಾರೆ ಇವುಗಳನ್ನು ಬಳಸಬಹುದು ಅಥವಾ ನೈಸರ್ಗಿಕ ದೀಪದಂತಹ ಮೇಣದಬತ್ತಿ ಅಥವಾ ಎಣ್ಣೆಯ ದೀಪಗಳನ್ನು ಉರಿಸಿ ಕೂಡ ನಿದ್ದೆ ಮಾಡಬಹುದು. ಮತ್ತು ಇನ್ನೂ ಒಂದು ಒಳ್ಳೆಯ ಟಿಪ್ಸ್ ಏನೆಂದರೆ ರಾತ್ರಿ ಹೊತ್ತು ನೀವು ಈ ರೀತಿ ಬೆಳಕಿನಲ್ಲಿ ಮಲಗುವಾಗ ನಿದ್ದೆ ಮಾಡಲು ಸಾಧ್ಯವಾಗದೆ ತುಂಬಾ ಕಿರಿಕಿರಿ ಆಗುತ್ತಿದೆ ಎನ್ನುವುದಾದರೆ ಒಂದು ಕಪ್ಪು ಬಣ್ಣದ ಬಟ್ಟೆಯನ್ನು ನಿಮ್ಮ ಕಣ್ಣಿನ ಸುತ್ತ ಕಟ್ಟಿಕೊಂಡು ಮಲಗುವುದರಿಂದ ಕಣ್ಣಿನ ಮೇಲೆ ಕತ್ತಲೆ ಕವಿದಂತಾಗಿ ಚೆನ್ನಾಗಿ ನಿದ್ರೆ ಬರುತ್ತದೆ. ಮತ್ತು ಈ ಮೂಲಕ ನಿಮ್ಮ ಆರೋಗ್ಯವೂ ಕೂಡ ಸುಧಾರಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now