ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಧರ್ಮಸ್ಥಳ ಕ್ಷೇತ್ರವೂ ಕೂಡ ಒಂದು. ನಾಡಿನಾದ್ಯಂತ ಅಪಾರ ಸಂಖ್ಯೆಯಲ್ಲಿ ಧರ್ಮಸ್ಥಳ ಮಂಜುನಾಥನ ಭಕ್ತಾದಿಗಳು ಇದ್ದಾರೆ. ಆ ಕಾರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದ ಖ್ಯಾತಿಯು ನಾಡಿನ ಹೊರಗೆ ಕೂಡ ಪಸರಿಸುತ್ತಿದೆ. ದರ್ಮಸ್ಥಳ ಕ್ಷೇತ್ರವು ಭಕ್ತಿ ಪ್ರಧಾನ ಕೇಂದ್ರ ಈ ವಿಚಾರವಾಗಿ ಹಾಗೂ ಅಲ್ಲಿನ ಆಚಾರ ವಿಚಾರ ಪದ್ಧತಿಗಳಿಂದ ಕೂಡ ಸುದ್ದಿಯಾಗಿದೆ.
ಇದರ ಜೊತೆಗೆ ಧರ್ಮಸ್ಥಳ ಟ್ರಸ್ಟ್ ನಡೆಸುವ ಜನಸ್ನೇಹಿ ಕೆಲಸಗಳಿಂದ ಕೂಡ ಧರ್ಮಸ್ಥಳ ಕ್ಷೇತ್ರದ ಹೆಸರು ದೇಶದಾದ್ಯಂತ ಪಸರಿಸುತ್ತಿದೆ. ಧರ್ಮಸ್ಥಳ ಟ್ರಸ್ಟ್ ವತಿದಿಂದ ನಾಡಿನ ಅನೇಕ ಸ್ಥಳಗಳಲ್ಲಿ ರೂಟ್ ಝಡ್ ಎನ್ನುವ ತರಬೇತಿ ಕೇಂದ್ರ ಸ್ಥಾಪನೆ ಮಾಡಿ ಗ್ರಾಮೀಣ ಭಾಗದ ಯುವಜನತೆಗೆ ಅವರ ಬದುಕಿಗೆ ಅನುಕೂಲತೆ ಆಗುವ ರೀತಿ ಕಂಪ್ಯೂಟರ್ ಆಪರೇಟಿಂಗ್, ಟೈಲರಿಂಗ್, ಬ್ಯೂಟಿ ಪಾರ್ಲರ್ ಗೆ ಸಂಬಂಧಿಸಿದಂತೆ ತರಬೇತಿಯನ್ನು ಕೊಟ್ಟು ಬದುಕು ಕಟ್ಟಿಕೊಳ್ಳಲು ನೆರವು ನೀಡಲಾಗುತ್ತಿದೆ.
ಅದೇ ರೀತಿಯಲ್ಲಿ ಗ್ರಾಮೀಣ ಭಾಗದಲ್ಲಿ ಇರುವಂತಹ ಜನರಿಗೆ ಧರ್ಮಸ್ಥಳ ಟ್ರಸ್ಟ್ ಧರ್ಮಸ್ಥಳ ಸಂಘದ ಮೂಲಕ ಸಾಲ ನೀಡಿ ಕೃಷಿ ಚಟುವಟಿಕೆಗೆ ಅಥವಾ ಪಶು ಸಂಗೋಪನೆಗೆ ಅಥವಾ ಇನ್ಯಾವುದಾದರೂ ಉದ್ಯಮ ಆರಂಭಿಸುವುದಾದರೆ ಬಂಡವಾಳವಾಗಿ ಹೂಡಿಕೆ ಮಾಡಲು ಅನುಕೂಲ ಮಾಡಿಕೊಟ್ಟಿದೆ.
ಕಡಿಮೆ ಬಡ್ಡಿಯಲ್ಲಿ ಪ್ರತಿ ವಾರವೂ ಕೂಡ ಸಣ್ಣ ಕಂತುಗಳಲ್ಲಿ ತೀರಿಸಬಹುದಾದಂತ ಸಾಲ ಇದಾಗಿದ್ದು ಪಡೆದುಕೊಂಡ ಸಾಲದಿಂದ ಆದಾಯ ಬರುವ ಸಮಯದಲ್ಲಿ ಈ ಸಾಲವನ್ನು ತೀರಿಸಿಕೊಡು ಹೋಗಬಹುದಾದಷ್ಟು ಸರಳವಾಗಿದೆ. ಈ ಯೋಜನೆಗೆ ಹೆಚ್ಚಿನ ಜನರು ಗ್ರಾಮೀಣ ಭಾಗದವರೇ ಆಗಿರುವುದರಿಂದ ಕೃಷಿ ಚಟುವಟಿಕೆಗಾಗಿ ಈ ಸಾಲವನ್ನು ಪಡೆಯುತ್ತಾರೆ.
ಆದರೆ ರಾಜ್ಯದಲ್ಲಿ ಕಳೆದ ವರ್ಷ ಸಕಾಲಕ್ಕೆ ಮಳೆ ಬರದ ಕಾರಣ ರಾಜ್ಯದ ರೈತರು ಕೃಷಿಯಲ್ಲಿ ಹೊಡೆತ ತಿಂದಿದ್ದಾರೆ. ಈ ಕಾರಣದಿಂದ ಪರಶುರಾಮ್ ಎಮ್.ಎಲ್ ಎನ್ನುವ ಧರ್ಮಸ್ಥಳ ಸಂಘದಿಂದ ಸಾಲ ಪಡೆದ ವ್ಯಕ್ತಿಯೊಬ್ಬರು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾಗಿರುವ ವಿರೇಂದ್ರ ಹೆಗ್ಡೆ ಅವರಿಗೆ ಪತ್ರ ಬರೆದು ಸಾಲ ಮನ್ನಾ ಮಾಡುವಂತೆ ವಿನಂತಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಎಲ್ಲ ರೈತರಿಗೂ ಕೂಡ ಕೃಷಿ ಕ್ಷೇತ್ರದಲ್ಲಿ ಕಳೆದ ವರ್ಷ ಆದಾಯ ಕಡಿಮೆ ಆಗಿದೆ. ಹೀಗಾಗಿ ಸಾಲ ಮರುಪಾವತಿ ಮಾಡುವ ಪರಿಸ್ಥಿತಿಯಲ್ಲಿ ಸಾಲ ಪಡೆದವರು ಇಲ್ಲ ಇದನ್ನು ಅರ್ಥ ಮಾಡಿಕೊಂಡು ಧರ್ಮಾಧಿಕಾರಿಗಳು ಒಂದು ಬಾರಿ ಸಾಲ ಮನ್ನಾ ಮಾಡಬೇಕು ಒಂದು ವೇಳೆ ಇದು ಸಾಧ್ಯವಾಗದೆ ಹೋದರೆ ಸಾಲದ ಮೇಲಿರುವ ಬಡ್ಡಿಯನ್ನಾದರೂ ಮನ್ನ ಮಾಡಬೇಕು ಜೊತೆಗೆ ಕಟ್ಟುನಿಟ್ಟಾಗಿ ಪ್ರತಿ ವಾರವು ಕೂಡ ಕಂತುಗಳನ್ನು ಕಟ್ಟಲೇ ಬೇಕಾಗಿರುವ ಕಾರಣ ತೊಂದರೆ ಆಗುತ್ತಿದೆ.
ಆದ್ದರಿಂದ ಕಡೆ ಪಕ್ಷ ಸಾಲ ಮರುಪಾವತಿಗೆ ಒಂದು ವರ್ಷವಾದರೂ ಸಮಯಾವಕಾಶವನ್ನು ಕೊಡಬೇಕು ನನ್ನ ಮನವಿಯನ್ನು ಆಲಿಸಿ, ಕನಿಷ್ಠ ಪಕ್ಷ ಇಷ್ಟಾದರೂ ಕರಣೆ ತೋರಿಸುತ್ತೀರಿ ಎಂದು ಭಾವಿಸತ್ತೇನೆ ಎಂದು ಬರೆದಿದ್ದಾರೆ. ಕರ್ನಾಟಕದ ಎಲ್ಲಾ ರೈತರ ಪರವಾಗಿ ನಾನು ಅವರಿಗೆ ಅಹವಾಲನ್ನು ಸಲ್ಲಿಸಿದ್ದೇನೆ. ಮುಂದಿನದು ಧರ್ಮಾಧಿಕಾರಿಗಳಿಗೆ ಬಿಟ್ಟಿದ್ದು ಎಂದು ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಆದರೆ ಇದರ ಸತ್ಯಾನುಸತ್ಯತೆ ಎಷ್ಟಿದೆ ಎಂದು ತಿಳಿದಿಲ್ಲ. ಈಗಾಗಲೇ ರಾಜ್ಯ ಸರ್ಕಾರ ಹಲವು ಬಾರಿ ರೈತರ ಸಾಲ ಮನ್ನಾ ಮಾಡಿದೆ ಆ ವ್ಯಕ್ತಿ ಮನವಿ ಸಲ್ಲಿಸಿರುವುದು ನಿಜವಾಗಿದ್ದರೆ, ಧರ್ಮಸ್ಥಳ ಸಂಘದ ಸಾಲ ಕೂಡ ಮನ್ನಾ ಆಗಲಿದೆಯಾ ಎಂದು ಸಾಲ ಪಡೆದವರು ನಿರೀಕ್ಷೆಯಲ್ಲಿದ್ದಾರೆ. ಪತ್ರ ಧರ್ಮಾಧಿಕಾರಿಗಳಿಗೆ ಸಿಕ್ಕಿದರೆ ಏನು ನಿರ್ಧಾರ ತೆಗೆದುಕೊಳ್ಳಲ್ಲಿದ್ದಾರೆ ನಾವು ಸಹ ಕಾದು ನೋಡೋಣ.